ರೌಡಿಸಂ , ಡ್ರಗ್ಸ್ ಸುಳಿಯಲ್ಲಿ ಹೂಗಳ ತಳಮಳ : ಗನ್ಸ್ ಅಂಡ್ ರೋಸಸ್ ಚಿತ್ರವಿಮರ್ಶೆ (ರೇಟಿಂಗ್ : 3/5)
ರೇಟಿಂಗ್ : 3/5
ಚಿತ್ರ : ಗನ್ಸ್ ಅಂಡ್ ರೋಸಸ್
ನಿರ್ದೇಶಕ : ಶ್ರೀನಿವಾಸ್ ಕುಮಾರ್
ನಿರ್ಮಾಪಕ : ಹೆಚ್. ಆರ್. ನಟರಾಜ್
ಸಂಗೀತ : ಶಶಿಕುಮಾರ್
ಛಾಯಾಗ್ರಾಹಣ : ಜನಾರ್ದನ್ ಬಾಬು
ತಾರಾಗಣ : ಅರ್ಜುನ್, ಯಶ್ವಿಕ ನಿಷ್ಕಲ, ಕಿಶೋರ್, ಅವಿನಾಶ್, ಶೋಭ್ ರಾಜ್, ನೀನಾಸಂ ಅಶ್ವಥ್, ಜೀವನ್ ರಿಚಿ ಹಾಗೂ ಮುಂತಾದವರು…
ಭೂಗತ ಲೋಕದ ಕರಾಳ ಸತ್ಯದ ದರ್ಶನಗಳು ಬಹಳಷ್ಟು ಚಿತ್ರಗಳಲ್ಲಿ ಬಂದು ಹೋಗಿವೆ. ಅದರಲ್ಲೂ ಒಂದಷ್ಟು ಮಚ್ಚು , ಲಾಂಗು , ಗನ್ ಗಳ ಸದ್ದಿನ ನಡುವೆ ಪ್ರೀತಿಯ ಹೂಗಳ ಕಥೆಯು ಗಮನ ಸೆಳೆದಿದೆ. ಆ ನಿಟ್ಟಿನಲ್ಲಿ ಈ ವಾರ ತೆರೆಯ ಮೇಲೆ “ಗನ್ಸ್ ಅಂಡ್ ರೋಸಸ್” ಎಂಬ ಚಿತ್ರವು ವರ್ಷದ ಮೊದಲ ಚಿತ್ರವಾಗಿ ತೆರೆಯ ಮೇಲೆ ಬಂದಿದೆ.
ರಕ್ತದ ಕಲೆ ಒಮ್ಮೆ ಕೈಗೆ ಅಂಟಿದರೆ ಮುಗಿಯಿತು. ಅದು ಹೇಗೆ ಆರಂಭವಾಗುತ್ತೋ ಅದೇ ರೀತಿ ಮುಕ್ತಾಯು ಕಾಣುತ್ತೆ. ದಶಕಗಳ ಹಿಂದೆ ಕೊಲೆ , ಸುಲಿಗೆ , ದರೋಡೆ ಮಾಡುತ್ತಾ ಬೆಂಗಳೂರು ಡಾನ್ ಪಟಕ್ಕೆ ಪರದಾಡುವ ರಾಜೇಂದ್ರ , ಆದರೆ ಮುಂಬೈ ಮೂಲದ ಡ್ರಗ್ ಪೆಡ್ಲರ್ ನಾಯಕ್ ತಲೆಮರಿಸಿಕೊಂಡು ರಾಜೇಂದ್ರನ ಸಾತ್ ಬೇಡುತ್ತಾನೆ. ಡ್ರಗ್ ದಂಧೆಯಲ್ಲಿ ವೈಮನಸ್ಯ ಶುರುವಾಗಿ ಇಬ್ಬರೂ ದುಶ್ಮನಿಗಳಾಗುತ್ತಾರೆ.
ಮುಂದೆ ಜೇಲಿನಲ್ಲಿ ರಾಜೇಂದ್ರನ ಹುಡುಗರಿಂದ ಸತ್ಯನನ್ನ ಕಾಪಾಡುವ ಸೂರ್ಯ (ಅರ್ಜುನ್) ನಾಯಕ್ ಗ್ಯಾಂಗ್ ಸೇರಿಕೊಳ್ಳುತ್ತಾನೆ.ಇದರ ನಡುವೆ ಡ್ರಗ್ಸ್ ಹಾವಳಿ ಹೆಚ್ಚಾಗಿ ಪೊಲೀಸ್ ಇಲಾಖೆಗೆ ಏನ್ ಕೌಂಟರ್ ಸ್ಪೆಷಲಿಸ್ಟ್ ಶಂಕರ್ ಎಂಟ್ರಿ ಆಗುತ್ತೆ. ಇಬ್ಬರು ರೌಡಿಗಳಿಗೂ ವಾರ್ನಿಂಗ್ ಕೊಟ್ಟರು ದಂದೆ ನಿಲ್ಲುವುದಿಲ್ಲ. ಇನ್ನು ನಾಯಕ್ ಹುಡುಗ ಸೂರ್ಯನ ಲುಕ್ , ಸ್ಟೈಲ್ ಮೆಚ್ಚುವ ರಾಜೇಂದ್ರನ ಮಗಳು ರಮ್ಯಾ( ಯಶ್ವಿಕ ನಿಷ್ಕಲ) ಪ್ರೀತಿಗೆ ಮನ ಸೋಲುತ್ತಾಳೆ.
ಆದರೆ ಪ್ರೀತಿ ನಿರಾಕರಿಸುವ ಸೂರ್ಯ ತನ್ನ ಫ್ಲಾಶ್ ಬ್ಯಾಕ್ ಹೇಳುತ್ತಾನೆ. ಇದರ ನಡುವೆ ಈ ಡ್ರಗ್ಸ್ ಪೆಡ್ಲಿಂಗ್ ನ ಗ್ಯಾಂಗ್ವಾರ್ಗೆ ಪೋಲಿಸ್ ಅಧಿಕಾರಿಯ ಸಾಥ್ ವಿಚಾರ ಕ್ರೈಂ ರಿಪೋರ್ಟರ್ ಗೆ ಮಾಹಿತಿ ಸಿಗುತ್ತದೆ. ಮುಂದೆ ಒಂದುಕ್ಕೊಂದು ಕೊಂಡಿಯಂತೆ ಬೆಸೆದುಕೊಂಡು ಈ ದಂಧೆಯನ್ನು ಬುಡ ಸಮೇತ ಬಗ್ಗು ಪಡೆಯಲು ಪ್ಲಾನ್ ರೂಪವಾಗುತ್ತದೆ. ಅದು ಹೇಗೆ… ಏನು… ಎಂಬುದರ ಜೊತೆಗೆ “ಗನ್ಸ್ ಅಂಡ್ ರೋಸಸ್” ಎದುರಿಸುವ ಪರಿಣಾಮ ಏನು ಎಂಬುದನ್ನು ನೀವು ತೆರೆಯ ಮೇಲೆ ನೋಡಬೇಕು.
ಬಹಳಷ್ಟು ಚಿತ್ರಗಳಿಗೆ ಕಥೆಯನ್ನು ಒದಗಿಸಿರುವ ನಟ , ನಿರ್ದೇಶಕ ಅಜಯ್ ಕುಮಾರ್ ತಮ್ಮ ಪುತ್ರ ಅರ್ಜುನ್ ಗಾಗಿ ಭೂಗತ ಲೋಕದಲ್ಲಿ ಅರಳಿದ ಒಂದು ಪ್ರೇಮ ಕಥೆಯ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಕಥೆ ವಿಶೇಷ ಅನಿಸದಿದ್ದರೂ ಚಿತ್ರಕಥೆ ಗಮನ ಸೆಳೆಯುವಂತಿದೆ. ನಾಯಕನಾಗಿ ಅರ್ಜುನ್ ತನ್ನ ಮೊದಲ ಪ್ರಯತ್ನದಲ್ಲೇ ಬಹಳ ಶ್ರಮಪಟ್ಟು ಅಭಿನಯಿಸಿ ತನ್ನ ಪಾತ್ರಕ್ಕೆ ಜೀವ ತುಂಬಿದ್ದಾರೆ.
ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಅವಕಾಶ ಸಿಗುವಂತಾಗಲಿ. ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಿಶೋರ್ ಖಡಕ್ಕಾಗಿ ಮಿಂಚಿದ್ದು , ಎನ್ ಕೌಂಟರ್ ಸ್ಪೆಷಲ್ ಆಫೀಸರ್ ಆಗಿ ನೀನಾಸಂ ಅಶ್ವತ್ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ನಾಯಕಿಯಾಗಿ ಯಶ್ವಿಕ ನಿಷ್ಕಲ ಸಿಕ್ಕ ಅವಕಾಶಕ್ಕೆ ನ್ಯಾಯ ಒದಗಿಸಯುವ ಪ್ರಯತ್ನ ಮಾಡಿದ್ದಾರೆ. ಉಳಿದಂತೆ ಅಭಿನಯಿಸಿರುವ ಎಲ್ಲಾ ಪಾತ್ರಗಳು ಚಿತ್ರದ ಓಟಕ್ಕೆ ಪೂರಕವಾಗಿ ಸಾಗಿದ್ದಾರೆ.
ಈ ಚಿತ್ರದಲ್ಲಿ ಸಾಹಸ ಸನ್ನಿವೇಶಗಳು ಚಿತ್ರದುದ್ದಕ್ಕೂ ಅಬ್ಬರಿಸಿದೆ. ಸಂಗೀತ , ಛಾಯಾಗ್ರಹಣ ಸೇರಿದಂತೆ ತಾಂತ್ರಿಕ ವರ್ಗ ಸಿಕ್ಕ ಅವಕಾಶವನ್ನು ಅಚ್ಚುಕಟ್ಟಗೆ ನಿರ್ವಹಿಸಿದಂತಿದೆ. ಒಟ್ನಲ್ಲಿ ಭೂಗತ ಜಗತ್ತಿನ ರೌಡಿಗಳ ಅಟ್ಟಹಾಸ , ಡ್ರಗ್ಸ್ ಮಾಫಿಯಾ , ದಂದೆ ಕೋರರ ಪ್ಲಾನ್ , ಅಲ್ಲೊಂದು ನಿಷ್ಕಲ್ಮಶ ಪ್ರೀತಿ ಸೇರಿದಂತೆ ಹಲವು ವಿಚಾರಗಳನ್ನು ಬೆಸೆದುಕೊಂಡು ಬಂದಿರುವ ಈ ಚಿತ್ರ ಒಮ್ಮೆ ನೋಡಬಹುದು.