Cini NewsSandalwood

ಕುತೂಹಲ ಮೂಡಿಸಿದ “ಹಗ್ಗ” ಮೋಷನ್ ಪೋಸ್ಟರ್

ಚಂದನವನದಲ್ಲಿ ವಿಭಿನ್ನ ಪ್ರಯತ್ನದ ಚಿತ್ರಗಳು ಸಾಲು ಸಾಲು ಆಗಿ ಬರುತ್ತಿವೆ. ಅದರಲ್ಲೂ ವಿಶೇಷವಾಗಿ ಕುತೂಹಲ ಭರಿತ “ಹಗ್ಗ” ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಗೊಂಡು ನೋಡುಗರನ್ನ ರೋಮಾಂಚನಗೊಳಿಸಿದೆ. ಈ ಮೋಷನ್ ಪೋಸ್ಟರ್ ಈ ರೀತಿ ಬಂದಿದೆ ಎಂದರೆ, ತಾಂತ್ರಿಕವಾಗಿ ಚಿತ್ರ ಯಾವ ರೀತಿ ಬಂದಿರಬಹುದು ಎಂಬ ಕುತೂಹಲ ಪ್ರೇಕ್ಷಕರಲ್ಲಿ ಮೂಡಿದೆ. ಈ ಒಂದು ಚಿತ್ರವನ್ನು ಯುವ ನಿರ್ದೇಶಕ ಅವಿನಾಶ್. ಎನ್. ಸಾರಥ್ಯ ವಹಿಸಿಕೊಂಡಿದ್ದು, ಸಸ್ಪೆನ್ಸ್ ಥ್ರಿಲ್ಲರ್ ಕಥಾನಕವನ್ನು ಪ್ರೇಕ್ಷಕರ ಮುಂದೆ ತರಲು ಸಿದ್ಧತೆ ಮಾಡಿಕೊಂಡಿದ್ದಾರಂತೆ. ಈ ಒಂದು ಚಿತ್ರವನ್ನು ಬಹಳ ಅದ್ದೂರಿಯಾಗಿ ರಾಜ್ ಭಾರದ್ವಾಜ್ ನಿರ್ಮಿಸುತ್ತಿದ್ದಾರೆ.

ಬೆಳ್ಳಿ ಪರದೆ ಮೇಲೆ ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರ ಮನಸ್ಸನ್ನು ಗೆದ್ದಂತ ನಟಿ ಅನುಪ್ರಭಾಕರ್ ಯಶಸ್ವಿ ನಟಿಯಾಗಿ ಮಿಂಚಿದ್ದಾರೆ. ಸಿನಿಮಾ ಕ್ಷೇತ್ರ ಸೇರಿದಂತೆ ಕಿರುತೆರೆಯ ರಿಯಾಲಿಟಿ ಶೋ ಗಳಲ್ಲೂ ಕೂಡ ತಮ್ಮ ಸಾಮರ್ಥ್ಯವನ್ನು ತೋರಿಸಿರುವ ಈ ನಟಿ , ವಿಭಿನ್ನ ಪಾತ್ರ ಗಳಿಗಾಗಿ ಕಾಯುತ್ತಿದ್ದರು. ಈಗ ಆ ಸಮಯ ಕೂಡಿ ಬಂದಂತಿದೆ. ಒಂದು ವಿಭಿನ್ನ ಮುಖ್ಯ ಪಾತ್ರದ ಮೂಲಕ “ಹಗ್ಗ” ಚಿತ್ರದಲ್ಲಿ ಅಭಿನಯಿಸಿದ್ದಾರೆ. ಸದ್ಯ ಬಿಡುಗಡೆಯಾಗಿರುವ ಈ ಮೋಷನ್ ಪೋಸ್ಟರ್ ಬಾರಿ ವೈರಲ್ ಆಗಿದ್ದು , ಪ್ರೇಕ್ಷಕರಲ್ಲಿ ಕುತೂಹಲವನ್ನು ಹೆಚ್ಚಿಸಿದೆ.

ಇನ್ನು ಈ ಚಿತ್ರದಲ್ಲಿ ಹರ್ಷಿಕಾ ಪೂಣಚ್ಚ, ತಬಲಾ ನಾಣಿ, ಭವಾನಿ ಪ್ರಕಾಶ್, ಸಂಜು ಬಸಯ್ಯ ಮುಂತಾದವರ ತಾರಾ ಬಳಗದ ದಂಡೆ ಕಾಣಿಸಿಕೊಂಡಿದೆ. ಎಲ್ಲವೂ ಅಂದುಕೊಂಡಂತೆ ನಡೆಯುತ್ತಿದ್ದು , ನಿರ್ಮಾಪಕರು ಈ ಹಗ್ಗ ಚಿತ್ರವನ್ನು ಅದ್ದೂರಿ ಪ್ರಚಾರದ ಮೂಲಕ ತೆರೆಯ ಮೇಲೆ ತರಲು ಸಕಲ ಸಿದ್ಧತೆಯನ್ನು ಮಾಡಿಕೊಂಡಿದ್ದು , ಅತಿ ಶೀಘ್ರದಲ್ಲಿ ಬಿಡುಗಡೆ ದಿನಾಂಕವನ್ನು ಚಿತ್ರತಂಡ ತಿಳಿಸಲಿದೆಯಂತೆ

error: Content is protected !!