Cini NewsSandalwood

ಹಗ್ಗ part-1 ಟೀಸರ್ ರಿಲೀಸ್

ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ವಿಭಿನ್ನ ಪ್ರಯತ್ನದ ಕುತೂಹಲ ಮೂಡಿಸುವ ಆಕ್ಷನ್ , ಥ್ರಿಲ್ಲರ್ , ಹಾರರ್ , ಸೂಪರ್ ಪವರ್ ಕಂಟೆಂಟ್ “ಹಗ್ಗ” ಚಿತ್ರದ ಟೀಸರ್ ಬಿಡುಗಡೆ ಸಮಾರಂಭ ಎಂ. ಎಂ .ಬಿ ಲೆಗಿಸಿ ಯಲ್ಲಿ ಆಯೋಜಿಸಲಾಗಿದ್ದು , ಮುಖ್ಯ ಅತಿಥಿಗಳಾಗಿ ಆಗಮಿಸಿದಂತ ನಿರ್ದೇಶಕ , ನಿರ್ಮಾಪಕ ಆರ್. ಚಂದ್ರು ಹಾಗೂ ನಿರ್ಮಾಪಕ ಕೆ. ಮಂಜು ಟೀಸರ್ ಲಾಂಚ್ ಮಾಡಿದರು.

ತದನಂತರ ನಿರ್ದೇಶಕ , ನಿರ್ಮಾಪಕ ಆರ್. ಚಂದ್ರು ಮಾತನಾಡುತ್ತಾ ಈ ಒಂದು ಕಾರ್ಯಕ್ರಮಕ್ಕೆ ಬರಲು ಮುಖ್ಯ ಕಾರಣ ನಿರ್ದೇಶಕ ದಯಾಳ್ ಪದ್ಮನಾಭನ್ ಯಾಕೆಂದರೆ ಅವರು ಈಗ ನನ್ನ ಸಿನಿಮಾಗೆ ಸಹಕಾರಿಯಾಗಿ ಸಾತ್ ನೀಡುತ್ತಿದ್ದಾರೆ. ಇನ್ನು ಈ ಚಿತ್ರದ ಬೆನ್ನೆಲುಬಾಗಿ ನಿಂತಿದ್ದು , ಟೀಸರ್ ಬಹಳ ವಿಭಿನ್ನವಾಗಿದೆ ಅಂದಿದ್ದರು , ಅವರು ಹೇಳಿದ ಹಾಗೆ ಟೀಸರ್ ಕುತೂಹಲವಾಗಿದ್ದು , ಆಕ್ಷನ್ , ಸಸ್ಪೆನ್ಸ್ ಜೊತೆಗೆ ವಿಎಫ್ಎಕ್ಸ್ ಕೆಲಸ ಚೆನ್ನಾಗಿ ಮೂಡಿ ಬಂದಿದೆ.

ಇಂತಹ ವಿಭಿನ್ನ ಕಂಟೆಂಟ್ ಬಂದರೆ ಖಂಡಿತ ಜನರು ಇಷ್ಟ ಪಡ್ತಾರೆ, ಓಟಿಟಿ ಪ್ಲಾಟ್ಫಾರ್ಮ್ ಅಮೆಜಾನ್ ನಲ್ಲೂ ಕೂಡ ಚಿತ್ರವನ್ನು ಕೊಂಡುಕೊಳ್ಳುತ್ತಾರೆ. ಕನ್ನಡ ಚಿತ್ರ ಗೆದ್ದರೆ , ಇಂಡಸ್ಟ್ರಿ ಗೆದ್ದಂತೆ ಎಂದು ಚಿತ್ರತಂಡಕ್ಕೆ ಶುಭವನ್ನು ಹಾರೈಸಿದರು. ಮತ್ತೊಬ್ಬ ಅತಿಥಿ ನಿರ್ಮಾಪಕ ಕೆ. ಮಂಜು ಮಾತನಾಡುತ್ತಾ ಟೀಸರ್ ಬಹಳ ಚೆನ್ನಾಗಿ ಬಂದಿದೆ. ನಿರ್ದೇಶಕರಿಗೆ ಹ್ಯಾಟ್ಸ್ ಆಫ್ ಹೇಳ್ತೀನಿ , ಒಬ್ಬ ನಿರ್ದೇಶಕನಿಗೆ ತನ್ನ ಸಿನಿಮಾ ಮೇಲೆ ಹಿಡಿತ ಇರಬೇಕು. ರಜಾ ಇರುವ ಸಂದರ್ಭ ನೋಡಿ ಚಿತ್ರವನ್ನು ರಿಲೀಸ್ ಮಾಡಿ , ಹಗ್ಗ ಚಿತ್ರಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದರು.

ಈ ಚಿತ್ರದ ನಿರ್ಮಾಪಕ ರಾಜ್ ಭರದ್ವಾಜ್ ಮಾತನಾಡುತ್ತಾ ಬಂದಂತ ಗಣ್ಯರಿಗೆ ಧನ್ಯವಾದ ತಿಳಿಸುತ್ತಾ , ವಸಂತ ಸಿನಿ ಕ್ರಿಯೇಶನ್ಸ್ ಮೂಲಕ ನಿರ್ಮಿಸುತ್ತಿರುವ ನನ್ನ ಮೊದಲ ಚಿತ್ರವಿದು. ನಮ್ಮದು ಜಿಮ್ ಎಕ್ವಿಪ್ಮೆಂಟ್ಸ್ ಬಿಸಿನೆಸ್. ಬಾಲ್ಯದಿಂದಲೂ ಚಿತ್ರಗಳ ಬಗ್ಗೆ ಆಸಕ್ತಿ, ಸಿನಿಮಾ ನಿರ್ಮಾಣ ಮಾಡಬೇಕು ಎಂದಾಗ ಸಿಕ್ಕಿದ್ದೇ ಅವಿನಾಶ್. ಮೊದಲು ಒಂದು ಶಾರ್ಟ್ ಫಿಲಂ ಮಾಡಿ ಈಗ ನಾವು ಹಗ್ಗ ಸಿನಿಮಾ ಮಾಡಿದ್ದೇವೆ. ಚಿತ್ರ ಚೆನ್ನಾಗಿ ಬಂದಿದೆ. ಮುಂದಿನ ತಿಂಗಳು ಬಿಡುಗಡೆ ಮಾಡುವ ಯೋಜನೆ ಇದೆ.

ನಮಗೆ ಎಲ್ಲರ ಸಹಕಾರ ಇರಲಿ ಎಂದು ಕೇಳಿಕೊಂಡರು.ಈ ಚಿತ್ರದ ನಿರ್ದೇಶಕ ಅವಿನಾಶ್.ಎನ್ ಮಾತನಾಡುತ್ತಾ ಇದು ನನ್ನ ಮೊದಲ ನಿರ್ದೇಶನದ ಚಿತ್ರ. ನಾನು ಒಬ್ಬ ಮೆಕ್ಯಾನಿಕಲ್ ಇಂಜಿನಿಯರ್ , ಚಿತ್ರ ನಿರ್ದೇಶನ ಮಾಡಬೇಕೆಂಬ ಮಹಾದಾಸೆ ಇತ್ತು. ಶಾರ್ಟ್ ಫಿಲಂ ಮಾಡಿ ತದನಂತರ ಈಗ ಹಗ್ಗ ಚಿತ್ರ ಮಾಡಿದ್ದೇನೆ. ಇದೊಂದು ಆಕ್ಷನ್ , ಥ್ರಿಲ್ಲರ್, ಹಾರರ್, ಸೂಪರ್ ಪವರ್ ಕಾಂಟೆಂಟ್ ಇರುವ ಚಿತ್ರವಾಗಿದ್ದು , ಸೊಸೈಟಿಗೆ ಒಂದು ಸ್ಟ್ರಾಂಗ್ ಮೆಸೇಜನ್ನು ಕೂಡ ಈ ಚಿತ್ರ ನೀಡಲಿದೆ. ನಮ್ಮ ಚಿತ್ರದಲ್ಲಿ “ಹಗ್ಗ” ನೇ ಹೀರೋ. ಪಾತ್ರಗಳು ಸಪೋರ್ಟಿವ್ ಆಗಿದ್ದು , ಅನು ಪ್ರಭಾಕರ್ ಮೇಡಂ ಪಾತ್ರ ಬಹಳ ವಿಭಿನ್ನವಾಗಿದೆ. ಈ ಚಿತ್ರದಲ್ಲಿ ಭಾಗವು 2 ಮಾಡುವುದಕ್ಕೂ ದಾರಿ ತೋರಿದ್ದೇವೆ. ಈಗ ನಮ್ಮ ಟೀಸರ್ ಹೊರ ಬಂದಿದೆ. ನಿಮ್ಮ ಪ್ರೋತ್ಸಾಹ ನೀಡಿ ಎಂದರು.

ನಟಿ ಅನುಪ್ರಭಾಕರ್ ಮಾತನಾಡುತ್ತಾ ಈ ಚಿತ್ರದ ಕಥೆ ಕೇಳಿ ನನಗೆ ಬಹಳ ವಿಭಿನ್ನ ಎನಿಸಿತು. ಹಾಗಾಗಿ ಒಪ್ಪಿಕೊಂಡೆ ಮಾಮೂಲಿ , ಹಾಗೂ ದೇವಿ ಪಾತ್ರಗಳನ್ನು ಮಾಡಿದ್ದೆ , ಆದರೆ ಈ ರೀತಿಯ ಪಾತ್ರ ನಾನು ಎಂದ ಮಾಡಿರಲಿಲ್ಲ. ನಾನು ಕೆಲಸ ಮಾಡಿರುವ ಬಹಳ ಕ್ಲಾರಿಟಿ ಇರುವಂತ ನಿರ್ದೇಶಕರ ಸಾಲಿಗೆ ಈ ನಿರ್ದೇಶಕರು ಸೇರುತ್ತಾರೆ. ಪ್ರತಿಯೊಂದು ಹೀಗೆ ಅಭಿನಯಿಸಿ , ಇಷ್ಟೇ ಎಕ್ಸ್ಪ್ರೆಶನ್ ಕೊಡಿ ಎಂದು ಹೇಳಿಕೊಡುತ್ತಿದ್ದಿದ್ದರಿಂದ ನನಗೆ ತುಂಬಾ ಸುಲಭವಾಗಿ ಆಯ್ತು , ಕೆಲವೊಮ್ಮೆ ಏನಪ್ಪ ಈ ರೀತಿ ಅಂತ ಅಂದುಕೊಂಡೆ. ಆದರೆ ಫೈನಲ್ ಸಿನಿಮಾ ಚೆನ್ನಾಗಿ ಬಂದಿದೆ.

ನಮಗೆ ದಯಾಳ್ ಪದ್ಮನಾಭನ್ ಸಾತ್ ಸಿಕ್ಕಿದ್ದು ತುಂಬಾ ಸಹಾಯವಾಗಿದೆ. ಟೀಸರ್ ನೋಡಿ ಬಹಳ ಖುಷಿಯಾಗಿದೆ. ನನ್ನ ಆರಂಭದ ಚಿತ್ರದಿಂದ ಇಲ್ಲಿವರೆಗೂ ಬೆಳೆಸಿಕೊಂಡು ಬಂದಿದ್ದೀರಿ, ಈ ಚಿತ್ರಕ್ಕೂ ನಿಮ್ಮ ಸಪೋರ್ಟ್ ನೀಡಿ ಎಂದು ಕೇಳಿಕೊಂಡರು. ಇನ್ನು ಚಿತ್ರದ ನಾಯಕನಾಗಿ ಅಭಿನಯಿಸಿರುವ ವೇಣು ಮಾತನಾಡುತ್ತಾ ಇದು ನನ್ನ ಮೊದಲ ಚಿತ್ರ. ನಾನು ಕೆಲವೊಂದು ಇನ್ಸ್ಟಿಟ್ಯೂಟ್ ನಲ್ಲಿ ತರಬೇತಿಯನ್ನು ಪಡೆದುಕೊಂಡು ಬಂದಿದ್ದೀನಿ. ಬಹಳ ಆಸಕ್ತಿಯಿಂದ ಕಷ್ಟಪಟ್ಟು ಮಾಡಿದ್ದೇನೆ. ನಿಮ್ಮೆಲ್ಲರ ಪ್ರೀತಿ ವಿಶ್ವಾಸ ನನ್ನ ಮೇಲೆ ಇರಲಿ ಎಂದು ಕೇಳಿಕೊಂಡರು.

ಈ ಚಿತ್ರದಲ್ಲಿ ಅಭಿನಯಿಸಿರುವ ತಬ್ಲಾ ನಾಣಿ ಮಾತನಾಡುತ್ತಾ ನಿರ್ದೇಶಕರು ನಮ್ಮನ್ನ ಚೆನ್ನಾಗಿ ರುಬ್ಬಿದ್ದಾರೆ. ನಿರ್ದೇಶಕರು ಮಜ್ಜಿಗೆ ಕುಡಿದುಕೊಂಡೆ ಚಿತ್ರವನ್ನು ಮುಗಿಸಿದ್ದಾರೆ ಎನ್ನಬಹುದು. ಇನ್ನು ನಾಯಕ ಕೂಡ ಅಭಿನಯಿಸುವಾಗ ನಾನು ಎದುರು ಇರಲೇಬೇಕಿತ್ತು. ಅವರಿಗೆ ಧೈರ್ಯ ಬರುತ್ತಿತ್ತೋ ಏನೋ, ಡೈಲಾಗ್ ಡೆಲಿವರಿ ಸರಾಗವಾಗಿ ಮಾಡುತ್ತಿದ್ದರು. ಒಟ್ಟಾರೆ ಕಥಾ ವಸ್ತು ಹಾಗೂ ತಾಂತ್ರಿಕವಾಗಿ ಚಿತ್ರ ಚೆನ್ನಾಗಿ ಮೂಡಿಬಂದಿದೆ. ನಿಮ್ಮ ಬೆಂಬಲವಿರಲಿ ಎಂದರು.

ಮತ್ತೊಬ್ಬ ನಟಿ ಹರ್ಷಿಕಾ ಪೊನ್ನಚ್ಚ ಮಾತನಾಡುತ್ತಾ ನನ್ನದು ನಿಮ್ಮ ಹಾಗೆ ಜರ್ನಲಿಸ್ಟ್ ಪಾತ್ರ. ಒಂದು ಹಳ್ಳಿಯಲ್ಲಿ ನಡೆಯುವ ಘಟನೆಗಳು ಅದು ಯಾಕೆ , ಹೇಗೆ , ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿರುತ್ತದೆ. ಅದು ಏನು ಎಂಬುದನ್ನು ಹುಡುಕುವ ನಿಟ್ಟಿನಲ್ಲಿ ನನ್ನ ಪಾತ್ರ ಸಾಗುತ್ತದೆ. ಇಡೀ ತಂಡ ನಮ್ಮಿಂದ ಚೆನ್ನಾಗಿ ಕೆಲಸ ತೆಗೆದುಕೊಂಡಿದೆ . ಚಿತ್ರ ಯಶಸ್ವಿಯಾಗಲಿ ಎನ್ನುತ್ತಾ , ಸದ್ಯ ತಮ್ಮ ವೈಯಕ್ತಿಕ ಬದುಕಿನ ಸಂಭ್ರಮದ ಕ್ಷಣದಲ್ಲಿದ್ದು , ತಾಯಿ ಆಗುತ್ತಿರುವ ಬಗ್ಗೆ ತಮ್ಮ ಮನದ ಮಾತನ್ನು ಹಂಚಿಕೊಂಡರು.

ಇಡೀ ಚಿತ್ರತಂಡದ ತಂಡಕ್ಕೆ ಬೆನ್ನೆಲುಬಾಗಿ ನಿಂತಿರುವ ದಯಾಳ್ ಪದ್ಮನಾಭನ್ ಮಾತನಾಡುತ್ತಾ ಈ ಚಿತ್ರದ ಜೊತೆ ಸಹಕರಿಸಲು ನಟಿ ಅನು ಪ್ರಭಾಕರ್ ಹೇಳಿದ್ದರಿಂದ ಒಪ್ಪಿಕೊಂಡೆ. ಚಿತ್ರೀಕರಣ ಮಾಡಿಕೊಂಡಿದ್ದರು , ಒಂದಷ್ಟು ಬದಲಾವಣೆ ಜೊತೆಗೆ ಫೈನಲ್ ಟಚ್ ಮಾಡಿದೆ. ರೀ- ರೆಕಾರ್ಡಿಂಗ್ ಮುಗಿದ ಮೇಲೆ ಚಿತ್ರ ಇನ್ನು ಉತ್ತಮವಾಗಿ ಬಂದಿದೆ. ಚಿತ್ರದ ಮೊದಲ ಭಾಗ ಉತ್ತಮವಾಗಿದ್ದು, ಸೆಕೆಂಡ್ ಹಾಫ್ ಅದ್ಭುತವಾಗಿ ಮೂಡಿ ಬಂದಿದೆ. ಅದರಲ್ಲೂ ಅನು ಪ್ರಭಾಕರ್ ನಟನೆಯ ಆ ಮುಖ್ಯ ಸಂದರ್ಭ ಒಂದು ಗಟ್ಟಿ ಅಂಶವನ್ನು ಒಳಗೊಂಡಿದೆ. ಖಂಡಿತ ಎಲ್ಲರಿಗೂ ಇಷ್ಟವಾಗುತ್ತೆ. ನಾನು ಹಗ್ಗದ ಕೊನೆ ಎಂಬ ಚಿತ್ರ ಮಾಡಿದ್ದೆ ಅದಕ್ಕೆ ಸ್ಟೇಟ್ ಅವಾರ್ಡ್ ಬಂದಿತ್ತು , ಈಗ ಹಗ್ಗ ಚಿತ್ರಕ್ಕೆ ಸಾತ್ ನೀಡುತ್ತಿದ್ದೇನೆ. ಇದು ಯಶಸ್ಸನ್ನ ಕಾಣಲಿ ಎಂದು ಹೇಳಿದರು.

ಈ ವಿಭಿನ್ನ ಕಥಾನಕದಲ್ಲಿ ಭವಾನಿ ಪ್ರಕಾಶ್, ಸುಧಾ ಬೆಳವಾಡಿ, ಪ್ರಿಯಾ ಹೆಗಡೆ, ಮೈಕೋ ಮಂಜು ,ಸಂಜು ಬಸಯ್ಯ ಮುಂತಾದವರ ತಾರಾ ಬಳಗದ ದಂಡೆ ಕಾಣಿಸಿಕೊಂಡಿದೆ. ಈ ಚಿತ್ರದಲ್ಲಿ ಮ್ಯಾಥ್ಯೂಸ್ ಮನು ಸಂಗೀತ , ಸಿನಿಟೆಕ್ ಸೂರಿ ಛಾಯಾಗ್ರಹಣ , ಮನೋಹರ್ ಸಂಭಾಷಣೆ ಹಾಗೂ ಎನ್ . ಎಂ. ವಿಶ್ವ ಸಂಕಲನವಿದೆ. ಎಲ್ಲವೂ ಅಂದುಕೊಂಡಂತೆ ನಡೆಯುತ್ತಿದ್ದು ಈ ಹಗ್ಗ ಚಿತ್ರವನ್ನು ಅದ್ದೂರಿ ಪ್ರಚಾರದ ಮೂಲಕ ತೆರೆಯ ಮೇಲೆ ಮುಂದಿನ ತಿಂಗಳು ತರುವ ಪ್ಲಾನ್ ಮಾಡಿಕೊಂಡಿದೆ.

error: Content is protected !!