Cini NewsSandalwood

ದುಬೈಯಲ್ಲಿ ಡಾ.ವಿ. ನಾಗೇಂದ್ರ ಪ್ರಸಾದ್ ಅವರಿಗೆ ಅಂತರ್ ರಾಷ್ಟ್ರೀಯ ಶಾಂತಿ ಪ್ರಶಸ್ತಿ

ಚಿತ್ರೋದ್ಯಮದ ಸಿನಿಮಾ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಒಂದು ವಿಶಿಷ್ಟ ಛಾಪನ್ನ ಮೂಡಿಸಿದಂತ ಸಾಹಿತಿ , ಸಂಗೀತಗಾರ , ನಿರ್ದೇಶಕ ಡಾ. ವಿ .ನಾಗೇಂದ್ರ ಪ್ರಸಾದ್ ರವರಿಗೆ ಖ್ಯಾತ ಅಂತರ್ ರಾಷ್ಟ್ರೀಯ ಸಂಘಟನೆ ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಯುನೈಟೆಡ್ ಇದರ ಹದಿನೈದನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ನಡೆದ ಅಂತರ್ ರಾಷ್ಟ್ರೀಯ ಶಾಂತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಾ. ವಿ . ನಾಗೇಂದ್ರ ಪ್ರಸಾದ್ ರವರಿಗೆ ಅಂತರ್ ರಾಷ್ಟ್ರೀಯ ಶಾಂತಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು .

ದುಬೈ ಯ ಕರಾಮಾದಲ್ಲಿನ ಪಂಚತಾರಾ ಹೋಟೆಲ್ ಪಾರ್ಕ್ ರೆಜಿಸ್ ನಲ್ಲಿ ಜರಗಿದ ವರ್ಣರಂಜಿತ ಸಮಾರಂಭದಲ್ಲಿ ಇಪ್ಪತ್ತೆರಡು ದೇಶಗಳ ವಿವಿಧ ಪ್ರತಿನಿಧಿಗಳೊಂದಿಗೆ ಭಾರತದ ನಾಲ್ವರಿಗೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಹಲವಾರು ಯಶಸ್ವಿ ಹಾಡುಗಳನ್ನು ನೀಡಿದಂತಹ ಡಾ. ವಿ. ನಾಗೇಂದ್ರ ಪ್ರಸಾದ್ ರವರ ಮುಕುಂದ ಮುರಾರಿ ಚಿತ್ರದ ‘ನೀನೆ ರಾಮ ನೀನೆ ಶಾಮ’… ಹಾಡು ಕೂಡ ಪ್ರಮುಖವಾಗಿ ಈ ಸಂಘಟನೆಗೆ ಇಷ್ಟವಾಗಿದ್ದು, ಈ ಪ್ರಶಸ್ತಿ ನೀಡಿ ಗೌರವಿಸುವುದಕ್ಕೂ ಇದು ಕಾರಣವಾಗಿದೆಯಂತೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ದುಬೈ ದೇಶದ ರಾಜಮನೆತನದ ಹಿಸ್ ಎಕ್ಸೆಲೆನ್ಸಿ ಮುಹಮ್ಮದ್ ಬಿನ್ ಅಬ್ದುಲ್ಲಾ ಅಲ್ ಮಝರೂಕಿ , ಹಿಸ್ ಎಕ್ಸೆಲೆನ್ಸಿ ಜುಮಾ ಅಲ್ ಮದನಿ , ಹರ್ ಎಕ್ಸೆಲೆನ್ಸಿ ಮುನೀರಾ ಅಲ್ ಬಲೂಷಿ , ಇವರೊಂದಿಗೆ ವಿವಿಧ* ಗಣ್ಯರು ಪಾಲ್ಗೊಂಡಿದ್ದರು .

ಸಂಘಟನೆಯ ಸ್ಥಾಪಕರು ಹಾಗೂ ಅಂತರ್ ರಾಷ್ಟ್ರೀಯ ಅಧ್ಯಕ್ಷರಾದ ಜನಾಬ್ ಶಕೀಲ್ ಹಸನ್ ಪ್ರಾಸ್ತಾವಿಕವಾಗಿ ಮಾತನಾಡಿ ಸಂಘಟನೆಯನ್ನು ಹದಿನೈದು ವರ್ಷಗಳ ಹಿಂದೆ ಸ್ಥಾಪಿಸಿದ ಬಗ್ಗೆ ವಿಶ್ಲೇಷಣೆ ನೀಡಿದರು . ಹಿಂದೂ ಮುಸ್ಲಿಂ ಕ್ರೈಸ್ತರೆಲ್ಲರೂ ಒಂದೇ ತಾಯಿಯ ಮಕ್ಕಳಾಗಿದ್ದು ಶಾಂತಿ ಸೌಹಾರ್ದತೆಯಿಂದ ಜೀವನ ನಡೆಸಿ ಸಮಾಜಕ್ಕೆ ಉತ್ತಮ ಸಂದೇಶ ನೀಡಬೇಕಾಗಿದ್ದು ಇಂದಿನ ಆದ್ಯ ಕರ್ತವ್ಯಗಳಲ್ಲೊಂದು ಎಂದು ತಿಳಿಹೇಳಿದರು .

ಕಾರ್ಯಕ್ರಮದಲ್ಲಿ ಸಂಘಟನೆಯ ಮುಖಂಡರಾದ ದಾನಿಶ್ ಮುಹಮ್ಮದ್ , ಹಮೀದ್ ಸಾಗರ , ಸಯ್ಯದ್ ಅಹಮದ್ ಬಸ್ರುರು ಉಪಸ್ಥಿತರಿದ್ದು , ಈ ಕಾರ್ಯಕ್ರಮದಲ್ಲಿ ಹಗಲಿರುಳು ದುಡಿದರನ್ನು ಕೂಡ ಸನ್ಮಾನಿಸಲಾಯಿತು.

 

 

error: Content is protected !!