Cini NewsMovie ReviewSandalwood

ಸ್ನೇಹ , ಪ್ರೀತಿ , ಬದುಕಿನ ತಳಮಳ…’ಇಷ್ಕ್’ ಚಿತ್ರವಿಮರ್ಶೆ (ರೇಟಿಂಗ್ 3.5 /5)

ರೇಟಿಂಗ್ 3.5 /5

ಚಿತ್ರ : ಇಷ್ಕ್
ನಿರ್ದೇಶಕ : ವಿನಯ್ ರಾಘವೇಂದ್ರ
ನಿರ್ಮಾಪಕ : ರಾಜು ತ್ಯಾಗರಾಜು
ಸಂಗೀತ : ಶ್ರೀರಾಮ್ ಗಂಧರ್ವ
ಛಾಯಾಗ್ರಹಣ : ವಿನಯ್
ತಾರಾಗಣ : ರಾಜು ತ್ಯಾಗರಾಜ್ , ಶ್ವೇತಾ ಭಟ್, ಚೇತನ್ ದುರ್ಗಾ , ಶಿಲ್ಪ ಶ್ರೀ , ಸೃಜನ್ , ಶಶಾಂಕ್ , ಶೋಭಾ ಹಾಗೂ ಮುಂತಾದವರು…

‘ಎಕ್ಸ್ಟ್ರಾ ಲಗೇಜ್ ಯಾಕೆ… ಸಿಂಗಲ್ ಲೈಫ್ ಓಕೆ… ‘ ಅನ್ನುವಂತಹ ಸ್ಥಿತಿಗೆ ಇವತ್ತಿನ ಯುವಕ , ಯುವತಿಯರ ಮನಸ್ಥಿತಿ , ಆಲೋಚನೆ , ಜೀವನಶೈಲಿ ಎಲ್ಲವೂ ನೇರ ನೇರ ಎಂಬಂತೆ ಕಾಣದಂತೂ ಸತ್ಯ. ಇಂತಹದ್ದೇ ಒಂದಷ್ಟು ವಿಚಾರಗಳೊಂದಿಗೆ ಗೆಳೆಯ ಗೆಳತಿಯರ ಒಡನಾಟ , ಲವ್ , ಬ್ರೇಕ್ ಅಪ್ , ಫ್ಯಾಮಿಲಿ , ಫೀಲಿಂಗ್ಸ್ , ರಿಲೇಷನ್ಷಿಪ್, ಅಟ್ರಾಕ್ಷನ್ , ರೆಸ್ಪೆಕ್ಟ್ ನಡುವೆ ಪ್ರೀತಿಯ ಶಕ್ತಿ , ತಳಮಳಗಳ ಬೆಸುಗೆಯನ್ನು ಬಹಳ ಸರಳವಾಗಿ ನೈಜಕ್ಕೆ ಹತ್ತಿರ ಎನ್ನುವಂತೆ ತೆರೆಯ ಮೇಲೆ ತಂದಿರುವಂತಹ ಚಿತ್ರ ಇಷ್ಕ್. ತಂದೆ ತಾಯಿಯ ಮುದ್ದಿನ ಮಗ ರಾಮ್ (ರಾಜು ತ್ಯಾಗರಾಜ್) ಪ್ರೀತಿ , ಮದುವೆ ಅಂದರೆ ಭಯಪಡುವಷ್ಟು ದೂರವಿರುತ್ತಾನೆ. ಇನ್ನು ಈತನ ಮೂವರು ಗೆಳೆಯರಲ್ಲಿ ಒಬ್ಬನದು ಲವ್ ಬ್ರೇಕ್ ಅಪ್, ಮತ್ತೊಬ್ಬನದು ಲವ್ ಕಮಿಟ್ಮೆಂಟ್ , ಇನ್ನೊಬ್ಬನದು ಸೋಶಿಯಲ್ ಮೀಡಿಯಾ ರೀಲ್ಸ್ ,ಇನ್ಸ್ಟಾನೇ ಬದುಕು.

ರಾಮ್ ತನ್ನ ಕಾಲೇಜ್ ದಿನಗಳಲ್ಲಿ ಕಂಡಂತಹ ಜೋಡಿಗಳ ಬಹಳ ವರ್ಷದ ಪ್ರೀತಿ , ಬ್ರೇಕ್ ಅಪ್ ನಿಂದ ಬೇಸರಗೊಂಡು ತನ್ನ ಗೆಳೆಯರು ಕೂಡ ಪ್ರೀತಿ ಮಾಡಬಾರದು ಎಂಬ ನಿರ್ಧಾರ ಮಾಡುತ್ತಾನೆ. ಅದಕ್ಕೆ ಗೆಳೆಯರು ಸಾತ್ ನೀಡುತ್ತಾರೆ. ಇದರ ನಡುವೆ ನಡೆದ ಒಂದು ಘಟನೆ ರಾಮ್ ತಂದೆ ತಾಯಿ ಮಗನಿಗೆ ಹೆಣ್ಣು ಹುಡುಕುವ ಕೆಲಸಕ್ಕೆ ಮುಂದಾಗುತ್ತಾರೆ.

ಅದರಂತೆ ಮುದ್ದಾದ ಬೆಡಗಿ ಅಹಲ್ಯ ( ಶ್ವೇತಾ ಭಟ್) ಳನ್ನ ಭೇಟಿ ಮಾಡುವ ರಾಮ್ ಮದುವೆ ಬಗ್ಗೆ ತನಗೆ ಆಸಕ್ತಿ ಇಲ್ಲದ ವಿಚಾರ ತಿಳಿಸುತ್ತಾನೆ. ನಂತರ ಅಹಲ್ಯಗೆ ಮದುವೆ ಇಷ್ಟ ಇಲ್ಲ ಎಂದು ಕೆಲ ದಿನಗಳ ನಂತರ ಹೇಳಿ ಎಂದು ಕೇಳಿಕೊಳ್ಳುತ್ತಾನೆ. ಇದೇ ಸಮಯಕ್ಕೆ ಮದುವೆ ಇವೆಂಟ್ ಮ್ಯಾನೇಜ್ಮೆಂಟ್ ನೋಡಿಕೊಳ್ಳುವ ಅಹಲ್ಯ ತುರ್ತ ಕೆಲಸಕ್ಕೆ ರಾಮ್ ತನ್ನ ಕಾರಿನಲ್ಲಿ ಡ್ರಾಪ್ ನೀಡಲು ಮುಂದಾಗುತ್ತಾನೆ. ಇಲ್ಲಿಂದ ಒಂದಷ್ಟು ಪ್ರೀತಿ , ಗೆಳೆತನ ಬದುಕಿನ ಬಗ್ಗೆ ಚರ್ಚೆ ನಡೆಯುತ್ತಾ ಬೇರೆಯದೆ ತಿರುವನ್ನ ಪಡೆದುಕೊಳ್ಳುತ್ತ ಕೊನೆಯ ಹಂತಕ್ಕೆ ಬಂದು ನಿಲ್ಲುತ್ತದೆ…

ರಾಮ್ ನಿರ್ಧಾರ ಏನು…
ಅಹಲ್ಯ ಮದುವೆ ಆಗುತ್ತಾ… ಇಲ್ವಾ…
ಕ್ಲೈಮಾಕ್ಸ್ ಉತ್ತರ ಏನು…
ಇದಕ್ಕಾಗಿ ನೀವು ಇಷ್ಕ್ ಚಿತ್ರವನ್ನು ನೋಡಲೇಬೇಕು.

ನಿರ್ದೇಶಕ ವಿನಯ್ ರಾಘವೇಂದ್ರ ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ಪ್ರಸ್ತುತ ಯುವ ಮನಸುಗಳ ಆಲೋಚನೆ , ತಳಮಳಗಳ ಬಗ್ಗೆ ಪೂರಕವಾಗಿ ಕಾಣುತ್ತದೆ. ಚಿತ್ರಕಥೆಯಲ್ಲಿ ಒಂದಷ್ಟು ಏರಿಳಿತಗಳು ಅಗತ್ಯ ಎನಿಸುತ್ತದೆ. ಬಹಳಷ್ಟು ವಿಭಾಗಗಳಲ್ಲಿ ತಮ್ಮನ್ನ ತೊಡಗಿಸಿಕೊಂಡು ಒಂದು ನೇರ ಕತೆಯನ್ನು ನಿಧಾನವಾಗಿ ದಡಮುಟ್ಟಿಸಿದ್ದಾರೆ.

ಇನ್ನು ಈ ಚಿತ್ರದ ನಿರ್ಮಾಪಕರೇ ನಾಯಕರು ಆಗಿರುವ ರಾಜು ತ್ಯಾಗರಾಜು ನೋಡಲು ಸುಂದರವಾಗಿ ತೆರೆಯ ಮೇಲೆ ಕಾಣುವ ಈ ಪ್ರತಿಭೆ ಪಾತ್ರಕ್ಕೆ ನ್ಯಾಯ ಒದಗಿಸಲು ಬಹಳ ಶ್ರಮಪಟ್ಟಿದ್ದಾರೆ. ಮಾತಿನ ಶೈಲಿ , ಹವಭಾವ ಇನ್ನಷ್ಟು ಪರಿಪಕ್ವತೆ ಮಾಡಿಕೊಂಡರೆ ಉತ್ತಮ ಭವಿಷ್ಯವಿದೆ. ಇನ್ನು ನಾಯಕಿಯಾಗಿ ಶ್ವೇತಾ ಭಟ್ ಮುದ್ದು ಮುದ್ದಾಗಿ ಸಿಕ್ಕ ಅವಕಾಶಕ್ಕೆ ನ್ಯಾಯವನ್ನು ಒದಗಿಸಿದ್ದಾರೆ.

ಅದೇ ರೀತಿ ಚೇತನ್ ದುರ್ಗಾ ನೊಂದ ಪ್ರೇಮಿಯಾಗಿ ಎಣ್ಣೆ ಹೊಡೆಯುತ್ತಾ ಗೆಳೆಯನ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ. ಉಳಿದಂತೆ ಸೃಜನ್, ಶಶಾಂಕ್ ಕೂಡ ಉತ್ತಮ ಸಾತ್ ನೀಡಿದ್ದಾರೆ. ತಂದೆ ತಾಯಿ ಪಾತ್ರಧಾರಿಗಳು ಸೇರಿದಂತೆ ಎಲ್ಲರೂ ಚಿತ್ರದ ಓಟಕ್ಕೆ ಪೂರಕವಾಗಿ ಅಭಿನಯಿಸಿದ್ದಾರೆ. ಇನ್ನು ಈ ಚಿತ್ರದ ಹೈಲೈಟ್ ಎಂದರೆ ಶ್ರೀರಾಮ್ ಗಂಧರ್ವ ಸಂಗೀತ ಉತ್ತಮವಾಗಿ ಮೂಡಿ ಬಂದಿದೆ.

ಛಾಯಾಗ್ರಹಕ ವಿನಯ್ ಕೆಲಸವು ಸೊಗಸಾಗಿದೆ. ತಾಂತ್ರಿಕವಾಗಿ ಇನ್ನಷ್ಟು ಚಿತ್ರ ಉತ್ತಮವಾಗಿ ಮಾಡಬಹುದಿತ್ತು. ಪ್ರಸ್ತುತ ಯುವ ಮನಸುಗಳಿಗೆ ಒಪ್ಪುವಂತಹ ಕಥಾಹಂದರ ಒಳಗೊಂಡಿರುವ ಈ ಚಿತ್ರವನ್ನು ಫ್ಯಾಮಿಲಿ , ಯೂತ್ ಸೇರದಂತೆ ಎಲ್ಲರೂ ಒಮ್ಮೆ ನೋಡುವಂತಿದೆ.

error: Content is protected !!