Cini NewsSandalwood

ಕಾರ್ತಿಕ್ ವೆಂಕಟೇಶ್ ನಿರ್ದೇಶನದ “ಜಸ್ಟಿಸ್ ” ಚಿತ್ರದ ಟೀಸರ್ ಬಿಡುಗಡೆ

ಸ್ಯಾಂಡಲ್ ನಲ್ಲಿ ಮತ್ತೊಂದು ಸಮಾಜಕ್ಕೆ ಸಂದೇಶವನ್ನು ಸಾರುವಂಥ “ಜಸ್ಟಿಸ್” ಎಂಬ ಚಿತ್ರ ಫೆಬ್ರವರಿ 7ರಂದು ಬಿಡುಗಡೆ ಬಿಡುಗಡೆಯಾಗಲು ಸಜ್ಜಾಗಿದೆ. ಬಹುಮುಖ ಪ್ರತಿಭೆ ಆರನ್ ಕಾರ್ತಿಕ್ ವೆಂಕಟೇಶ್ ಕಥೆ , ಚಿತ್ರಕಥೆ , ಸಂಭಾಷಣೆ, ಸಂಗೀತ , ಸಾಹಿತ್ಯ , ಡಬ್ಬಿಂಗ್ ಇಂಜಿನಿಯರ್ , ಹಿನ್ನೆಲೆ ಸಂಗೀತ , ಜೊತೆಗೆ ನಿರ್ದೇಶನ ಮಾಡಿರುವಂತಹ ಈ ಜಸ್ಟಿಸ್ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿ ಬಾರಿ ಸದ್ದನ್ನ ಮಾಡುತ್ತಿದೆ. ನಿರ್ದೇಶಕ ಆರನ್ ಕಾರ್ತಿಕ್ ವೆಂಕಟೇಶ್ ಹೇಳುವ ಪ್ರಕಾರ ಇದೊಂದು ಸಮಾಜಕ್ಕೆ ಸಂದೇಶವನ್ನು ನೀಡುವಂತ ಚಿತ್ರ ಮಾಡಿದ್ದೇನೆ.

ಈ ಭೂಮಿ ಮೇಲೆ ಪ್ರತಿಯೊಬ್ಬರಿಗೂ ಒಳ್ಳೆಯ ರೀತಿ ಬದುಕಲು ಹಕ್ಕಿದೆ. ಆದರೆ ಕೆಲವರು ತಮ್ಮ ದುಷ್ಕೃತ್ಯದ ಮೂಲಕ ಕೊಲೆ , ಸುಲಿಗೆ , ಅತ್ಯಾಚಾರದಂತ ನೀಚ ಕೃತ್ಯಗಳನ್ನು ಮಾಡಿ ಜೈಲು ಸೇರಿದರು, ನಾನಾ ರೀತಿ ಕಸರತ್ತಿನಿಂದ ಹೊರಬಂದು ಮತ್ತೆ ಘೋರ ಅಪರಾಧವನ್ನು ಮಾಡುತ್ತಾ ಆರ್ಭಟಿಸುತ್ತಾರೆ.

ಇಂತಹ ದುಷ್ಟ ವ್ಯಕ್ತಿಗಳು , ಅತ್ಯಾಚಾರಿಗಳನ್ನು ಸದೆ ಬಡಿಯಲು ಅವರನ್ನು ಅಪಹರಿಸಿ ಶಿಕ್ಷಿಸಲು ಒಬ್ಬ ವ್ಯಕ್ತಿ ಮುಂದಾಗುತ್ತಾನೆ. ಅದು ಜನಸಾಮಾನ್ಯರು, ಮಾಧ್ಯಮ, ರಾಜಕೀಯಕ್ಕೂ ಇದು ಯಾರು , ಏಕೆ , ಹೇಗೆ ಎಂಬ ಪ್ರಶ್ನೆ ಕಾಡುತ್ತದೆ. ಇದೆಲ್ಲದಕ್ಕೂ ಒಂದು ಹಿನ್ನೆಲೆ ಇರುತ್ತದೆ. ಅದು ಏನು ಎಂಬುದನ್ನು ನಾವು ಈ ಚಿತ್ರದ ಮೂಲಕ ಹೇಳಿ ಹೊರಟಿದ್ದೇವೆ.

 

ನಾನು ಈ ಚಿತ್ರದ ಮೂಲಕ ಮಹಿಳಾ ಸಬಲೀಕರಣ , ಮಹಿಳಾ ಭದ್ರತೆ ಮತ್ತು ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಯ ಮೂಲಕ ಹೆಣ್ಣು ಮಕ್ಕಳು ನೆಮ್ಮದಿಯಾಗಿ ಸಮಾಜದಲ್ಲಿ ಬದುಕುವಂತಾಗಬೇಕೆಂಬ ಉದ್ದೇಶದ ಮೂಲಕ ಈ ಚಿತ್ರವನ್ನು ಮಾಡಿದ್ದು , ಈ ಚಿತ್ರ ಒಂದು ಒಳ್ಳೆಯ ಸಂದೇಶ ನೀಡುತ್ತದೆ ಎಂಬ ನಂಬಿಕೆ ನನಗಿದೆ. ಈ ಚಿತ್ರವನ್ನ ಪ್ರತಿಯೊಬ್ಬರು ನೋಡಿ ಪ್ರೋತ್ಸಾಹಿಸಿ ಎಂದು ಕೇಳಿಕೊಂಡರು

ಮ್ಯಾಕ್ಸ್ ಎಂಟರ್ಟೈನ್ಮೆಂಟ್ ಮೂಲಕ ಕೆ .ಸಿ. ವೀರೇಂದ್ರ ಪಪ್ಪಿ ಚಿತ್ರದುರ್ಗ ಎಂ.ಎಲ್.ಎ ಅರ್ಪಿಸಿರುವ ಈ ಚಿತ್ರವನ್ನು ಅಹಮದ್ ಅಲಿ ಖಾನ್ ಹಾಗೂ ಮೊಹಮ್ಮದ್ ಜಾವೇದ್ ನಿರ್ಮಿಸಿದ್ದಾರೆ.

ಈ ಚಿತ್ರದಲ್ಲಿ ಯುವ ಪ್ರತಿಭೆ ಸಾಹಿಲ್ ಖಾನ್ , ಚೇತನ್ ಕೃಷ್ಣ , ರಿವ್ಯೂ ನವಾಜ್ , ಗಣೇಶ್ ರಾವ್ , ಸುರೇಶ್ ಬಾಬು, ಮನಮೋಹನ್ ರಾಯ್ , ಮಾಂತ ಭಾಸ್ಕರ್, ಟಿಕ್ ಟಾಕ್ ನಜೀರ್ , ಕಿನಯ ಕಾಪಾಡಿ ಹಾಗೂ ಮುಂತಾದವರು ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಮೈಸೂರ್ ಸ್ವಾಮಿ ಛಾಯಾಗ್ರಹಣ, ಭಾರ್ಗವ್. ಕೆ. ಎಂ , ವೆಂಕಿ ಯುಡಿವಿ ಸಂಭಾಷಣೆ , ಭಾರ್ಗವ್. ಕೆ.ಎಂ. VFX , ಮುನೀಬ್ ಡಿಟಿಎಸ್ , ಕಂಬಿ ರಾಜು , ಮೈಸೂರ್ ರಾಜು ಮತ್ತು ಸ್ಟಾರ್ ನಾಗಿ ನೃತ್ಯ ಸಂಯೋಜನೆ , ಸುಪ್ರೀಂ ಸುಬ್ಬು ಮತ್ತು ಮಾಗಡಿ ಮಾರುತಿ ಸಾಹಸ ನಿರ್ದೇಶನವಿರುವ ಈ ಚಿತ್ರ ಎಲ್ಲಾ ಅಂದುಕೊಂಡಂತೆ ನಡೆದಿದ್ದು , ಮುಂದಿನ ತಿಂಗಳು ಬಿಳಿ ಪರದೆ ಮೇಲೆ ತರುವ ಪ್ರಯತ್ನ ನಡೆಯುತ್ತಿದೆ.

error: Content is protected !!