ಯೂತ್ ಫುಲ್ ಚಿತ್ರ “‘ಕಾದಾಡಿ” ಜುಲೈ 05 ರಂದು ಬಿಡುಗಡೆ
ಚಂದನವನದಲ್ಲಿ ಬಹಳಷ್ಟು ವಿಭಿನ್ನ ಪ್ರಯತ್ನದ ಯಂಗ್ ಜನರೇಷನ್ ಗೆ ಒಪ್ಪುವಂತಹ ಲವ್ , ಸ್ಪೋರ್ಟ್ಸ್ ಸಂಬಂಧ ಪಟ್ಟಂತ ಚಿತ್ರಗಳು ಬರುತ್ತಿವೆ. ಆ ನಿಟ್ಟಿನಲ್ಲಿ ತೆಲುಗು ಮೂಲದ ಪ್ರತಿಭೆ ಸತೀಶ್ ಮಾಲೆಂಪಾಟಿ ನಿರ್ದೇಶಿಸಿ , ನಿರ್ಮಾಣ ಮಾಡಿರುವಂತಹ ಚಿತ್ರ “ಕಾದಾಡಿ” ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಈ ಚಿತ್ರದಲ್ಲಿ ಸುಪ್ರೀಂ ಹೀರೋ ಶಶಿಕುಮಾರ್ ಪುತ್ರ ಅಕ್ಷಿತ್ ಶಶಿಕುಮಾರ್ ಈಗ ಆದಿತ್ಯ ಶಶಿಕುಮಾರ್ ಅಂತ ಹೆಸರು ಬದಲಾಯಿಸಿಕೊಂಡಿದ್ದು, ’ಕಾದಾಡಿ’ ಎನ್ನುವ ಚಿತ್ರದಲ್ಲಿ ನಟಿಸಿದ್ದಾರೆ. ಕನ್ನಡ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ಸಿದ್ದಗೊಂಡಿರುವ ಸಿನಿಮಾವನ್ನು ಸತೀಶ್ ಮಾಲೆಂಪಾಟಿ ನಿರ್ದೇಶಿಸಿ, ಅರುಣಂ ಫಿಲಿಂಸ್ ಮುಖಾಂತರ ನಿರ್ಮಾಣ ಮಾಡಿದ್ದಾರೆ.
ಪ್ರಚಾರದ ಕೊನೆ ಹಂತದ ಸಲುವಾಗಿ ಮೊನ್ನೆಯಷ್ಟೇ ನಾಯಕ, ನಿರ್ದೇಶಕ ಹಾಗೂ ವಿಶ್ವ ಫಿಲಂಸ್‌ನ ವಿಶ್ವನಾಥ್ ಮಾಧ್ಯಮದ ಎದುರು ಹಾಜರಾಗಿ ಮಾಹಿತಿ ಹಂಚಿಕೊಂಡರು. ಇದಕ್ಕೂ ಮುನ್ನ ಸಿನಿಮಾದ ನಾಲ್ಕು ಹಾಡುಗಳು ಹಾಗೂ ಟ್ರೇಲರ್ ಅನಾವರಣಗೊಂಡಿತು.
ಸದ್ಯ ನನ್ನ ಹೆಸರನ್ನು ಆದಿತ್ಯಶಶಿಕುಮಾರ್ ಎಂದು ಬದಲಾಯಿಸಿಕೊಂಡಿದ್ದಾನೆ. ಶಾಲಾ ದಾಖಲಾತಿಗಳಲ್ಲಿ ಇದೇ ಹೆಸರಿನಲ್ಲಿ ನಮೂದು ಆಗಿದೆ. ಜ್ಯೋತಿಷವನ್ನು ಹೆಚ್ಚು ನಂಬುವುದರಿಂದ ಈ ರೀತಿ ನಿರ್ಣಯ ತೆಗೆದುಕೊಳ್ಳಲಾಗಿದೆ. ಚಿತ್ರಕ್ಕೆ ಇನ್ನು ಪ್ರಚಾರ ಮಾಡಬೇಕಿತ್ತು. ನಿರ್ಮಾಪಕರು ರೀಲ್ಸ್ ಹೆಚ್ಚು ಮಾಡಿಸಿದ್ದಾರೆ. ಆದರೆ ಇದು ಟಿಕೆಟ್ ರೂಪಕ್ಕೆ ಬದಲಾಗೋಲ್ಲ. ಮೂರನೇ ಸಿನಿಮಾದ ಮೇಲೆ ತುಂಬಾ ಭರವಸೆ ಇಟ್ಟುಕೊಂಡಿದ್ದೇನೆ. ನೀವೆಲ್ಲರೂ ಪ್ರೋತ್ಸಾಹ ಕೊಡಬೇಕೆಂದು ಆದಿತ್ಯ ಶಶಿಕುಮಾರ್ ಕೋರಿಕೊಂಡರು.
ಏಕಕಾಲಕ್ಕೆ ಮೂರು ಭಾಷೆಗಳಲ್ಲಿ ಚಿತ್ರವನ್ನು ಸಿದ್ದಪಡಿಸಲಾಗಿದೆ. ಕಿರುಚಿತ್ರ, ತೆಲುಗುದಲ್ಲಿ ಕಮರ್ಷಿಯಲ್ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದೇನೆ. ಕನ್ನಡದಲ್ಲಿ ಹೊಸ ಅನುಭವ. ಮೊದಲು ಇಲ್ಲಿ ಬಿಡುಗಡೆ ಮಾಡಿ, ಆಗಸ್ಟ್‌ಗೆ ತೆಲುಗು, ತಮಿಳಿನಲ್ಲಿ ರಿಲೀಸ್ ಮಾಡಲಾಗುವುದೆಂದು ನಿರ್ದೇಶಕರ ಸತೀಶ್ ಮಾಲೆಂಪಾಟಿ ಹೇಳಿಕೊಂಡರು.
ತ್ಯಾಗಮಯವಾಗುತ್ತಿರುವ ಜನರ ಜೀವನವು ದಿನದ ಅಂತ್ಯದಲ್ಲಿ ಪ್ರತಿಯೊಬ್ಬರು ತ್ಯಾಗಮಯಿರಾಗುತ್ತಾರೆ. ನಾವೆಲ್ಲರೂ ಕಾದಾಡುತ್ತಾ ಒಂದು ದಿನ ಸಾಯುತ್ತೇವೆ. ಆದರೆ ನಮ್ಮ ಜೀವನವನ್ನು ತ್ಯಾಗ ಮಾಡುವ ಮೂಲಕ ಸಮಾಜಕ್ಕೆ ಏನನ್ನಾದರೂ ಕೊಡಬೇಕು. ಮಕ್ಕಳಿಗೆ ಏನಾದರೂ ಆಗಬೇಕು. ನಾವು ದಿನದಿಂದ ದಿನಕ್ಕೆ ಹೋರಾಟ ನಡೆಸುತ್ತಿದ್ದೆವೆ. ಇಂತಹ ಅಂಶಗಳನ್ನು ಥ್ರಿಲ್ಲರ್ ಮೂಲಕ ತೋರಿಸುವ ಪ್ರಯತ್ನ ಮಾಡಲಾಗಿದೆ.
ಲಾವಣ್ಯ ಸಾಹುಕಾರ, ಚಾಂದಿನಿ ತಮಿಳರಸನ್ ನಾಯಕಿಯರು. ಉಳಿದಂತೆ ಪೋಸಾನಿ, ರವಿಕಾಳೆ, ಮಾರಿಮುತ್ತು, ಪ್ರೇಮ್ ಮನೋಹರ್, ಶ್ರವಣ್ ರಾಘವೇಂದ್ರ ಮುಂತಾದವರು ನಟಿಸಿದ್ದಾರೆ. ಆರು ಹಾಡುಗಳಿಗೆ ಭೀಮ್ಸ್ ಸಿಸಿರಿಲಿಯೋ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಡಿ.ಯೋಗಿಪ್ರಸಾದ್, ಕಲೆ ಅರ್ಜುನ್‌ಸೂರಿಸೆಟ್ಟಿ, ಸಂಕಲನ ಪ್ರಕಾಶ್‌ತೋಟ, ನೃತ್ಯ ರಾಜ್‌ಪಿಡಿ-ರಾಜ್‌ಕೃಷ್ಣ, ಸಾಹಸ ಬಿ.ಎಲ್. ಸತೀಶ್ – ವಿನ್‌ಚೇನ್ ಆಂಜಿ-ಬಿಂಬಸಾರ -ರಾಮಕೃಷ್ಣ-ರಾಮಸುಂಕರ ಅವರದಾಗಿದೆ. ಗೋವಾ, ಚಿಕ್ಕಮಗಳೂರು, ಹೈದರಬಾದ್, ಚೆನ್ನೈ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಅಂದಹಾಗೆ ಸಿನಿಮಾವು ಜುಲೈ 05 ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ.