Cini NewsSandalwood

ಜುಲೈ 19 ರಂದು ”ಕಡಲೂರ ಕಣ್ಮಣಿ ” ರಿಲೀಸ್… ಈಗ ಚಿತ್ರದ ಟ್ರೇಲರ್ ಸದ್ದು.

 

ಈ ವಾರ ಬೆಳ್ಳಿ ಪರದೆ ಮೇಲೆ ಸಾಲು ಸಾಲು ಚಿತ್ರಗಳ ದರ್ಶನವಾಗಲಿದೆ. ಆ ನಿಟ್ಟಿನಲ್ಲಿ ನಮ್ಮದು ಕಡಲ ಕಿನಾರೆಯ ಪ್ರೇಮಕಥೆಯ ಚಿತ್ರ ಎನ್ನುತ್ತಾ ಬಂದಿದೆ ರಾಮ್ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣವಾಗಿರುವ “ಕಡಲೂರ ಕಣ್ಮಣಿ”. ಇದೇ 19ರಂದು ಬಿಡುಗಡೆಗೊಳ್ಳುತ್ತಿ ರುವ ಈ ಚಿತ್ರದ ಟ್ರೈಲರ್ ಅನ್ನ ಮೊನ್ನೆಯಷ್ಟೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷರಾದ ಟೈಗರ್ ವೆಂಕಟೇಶ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.‌

ಇನ್ನು ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನವನ್ನು ಮಾಡಿರುವ ರಾಮ್ ಪ್ರಸನ್ನ ಹುಣಸೂರು ಮಾತನಾಡುತ್ತಾ ನನಗೆ ನನ್ನ ನಾಯಕ ಒಂದು ಕಣ್ಣಾದರೆ ನಾಯಕಿ ಮತ್ತೊಂದು ಕಣ್ಣು, ಇಂದು ನನ್ನ ನಾಯಕನಿಗೆ ಒಂದು ಉಡುಗೊರೆಯನ್ನು ನೀಡುತ್ತೇನೆ ಎಂದು “ಕಡಲೂರ ಕಣ್ಮಣಿ” ಭಾಗ ಎರಡು ಚಿತ್ರದ ಪೋಸ್ಟರ್ ಅನಾವರಣ ಮಾಡುವ ಮೂಲಕ ನಾಯಕ ಅರ್ಜುನ್ ಗೆ ಗಿಫ್ಟ್ ನೀಡಿದರು.

ಜೀವನದಲ್ಲಿ ತಾನು ಅನುಭವಿಸಿದ ನೋವುಗಳ ಬಗ್ಗೆ ಹೇಳಿಕೊಳ್ಳುತ್ತಲೇ , ಈ ಚಿತ್ರ ಒಂದು ಮನಮುಟ್ಟುವ ಪ್ರೇಮಕಥಾಹಂದರ. ಈವರೆಗೂ ಸಾಕಷ್ಟು ಪ್ರೇಮಕಥೆಗಳು ಬಂದಿವೆಯಾದರೂ ಇದು ವಿಭಿನ್ನ ಪ್ರೇಮಕಥೆ ಎನ್ನಬಹುದು. ಕಡಲಿನಲ್ಲಿ ಮುತ್ತು ಸಿಗುವುದು ಎಲ್ಲರಿಗೂ ತಿಳಿದ ಸಂಗತಿ ನನಗೂ ಸಹ ಈ ಈ ಚಿತ್ರದಲ್ಲಿ ಮೂರು ಮುತ್ತುಗಳು ಸಿಕ್ಕಿದೆ. ಅದು ನಮ್ಮ ಚಿತ್ರದ ನಾಯಕ, ನಾಯಕಿ ಹಾಗೂ ನಿರ್ಮಾಪಕರು.

ಇದೇ ತಂಡದೊಂದಿಗೆ “ಕಡಲೂರ ಕಣ್ಮಣಿ” ಎರಡನೇ ಭಾಗದಲ್ಲಿ ತರುವ ಸಿದ್ದತೆ ನಡೆಯುತ್ತಿದೆ. ನಮ್ಮ ಈ ಚಿತ್ರದಲ್ಲಿ ಪ್ರೀತಿ , ಬದುಕು , ಸಂಬಂಧದ ಜೊತೆಗೆ ಕಡಲ ಒಡಲಲ್ಲಿ ನಡೆಯುವ ಕೆಲವು ಘಟನೆಗಳನ್ನು ತೋರಿಸಲಾಗಿದೆ. ಇದೇ 19ರಂದು ನಮ್ಮ ಚಿತ್ರ ಬಿಡುಗಡೆ ಆಗುತ್ತಿದೆ. ನಿಮ್ಮೆಲ್ಲರ ಪ್ರೀತಿ ಸಹಕಾರ ಇರಲಿ ಎಂದು ಕೇಳಿಕೊಂಡರು.  ಇನ್ನು ಚಿತ್ರದ ನಾಯಕ ಅರ್ಜುನ್ ನಗರ ಕರ್ ಮಾತನಾಡುತ್ತಾ ನಿರ್ದೇಶಕರು ಕೊಟ್ಟ ಗಿಫ್ಟ್ ನನ್ನ ಜೀವನದಲ್ಲಿ ಮರಿಯೋದಿಲ್ಲ. ಈ ಚಿತ್ರಕ್ಕಾಗಿ ಬಹಳಷ್ಟು ಶ್ರಮವಟ್ಟು ಕೆಲಸ ಮಾಡಿದ್ದೇವೆ. ನಾನು ಈ ಹಿಂದೆ

ವರ್ಣಪಟಲ ಸೇರಿದಂತೆ ಕೆಲವು ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೆ. ಇದು ನನ್ನ ಪೂರ್ಣ ಪ್ರಮಾಣದ ನಾಯಕನಾಗಿ ಅಭಿನಯಿಸಿರುವ ಚಿತ್ರ. ಅವಕಾಶ ನೀಡಿದ ನಿರ್ದೇಶಕ ಹಾಗು ನಿರ್ಮಾಪಕರಿಗೆ ಧನ್ಯವಾದ ಎಂದರು‌.

ನಿರ್ಮಾಪಕರಾದ ಕೊಳ ಶೈಲೇಶ್ ಆರ್ ಪೂಜಾರಿ ಮಾತನಾಡುತ್ತಾ ನಿರ್ದೇಶಕರು ನಮ್ಮ ಆತ್ಮೀಯರು ಅವರಿಗಾಗಿ ಈ ಚಿತ್ರವನ್ನು ನಿರ್ಮಿಸಿದ್ದೇವೆ. ನಾವು ಮೂಲತಃ ಬ್ಯಾಂಕ್ ಉದ್ಯೋಗಿಗಳು. ರಾಮ್ ಪ್ರಸನ್ನ ಹೇಳಿದ ಕಥೆ ಇಷ್ಟವಾಯಿತು. ನಿರ್ಮಾಣಕ್ಕೆ ಮುಂದಾದೆವು ಎಂದರು. ಮತ್ತೊಬ್ಬ ನಿರ್ಮಾಪಕ ಬಸವರಾಜ್ ಗಚ್ಚಿ ಮಾತನಾಡುತ್ತಾ ನಮ್ಮ ಈ ಕಡಲೂರ ಕಣ್ಮಣಿ ಚಿತ್ರವನ್ನು ಕರ್ನಾಟಕದ ಕಣ್ಮಣಿ ಮಾಡಿ, ಚಿತ್ರವನ್ನು ನೋಡಿ ಹರೆಸಿ ಎಂದು ಕೇಳಿಕೊಂಡರು.

ಸಹ ನಿರ್ಮಾಪಕ ಮಹೇಶ್ ಕುಮಾರ್ ಎಂ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಚಿತ್ರದ ಆಕ್ಷನ್ ಸನ್ನಿವೇಶಗಳ ಬಗ್ಗೆ ಚಂದ್ರು ಬಂಡೆ ಮಾಹಿತಿ ನೀಡಿದರು. ಈ ಚಿತ್ರವನ್ನು 50ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಡಿ.ಎಸ್‌.ಕೆ ಸಿನಿಮಾಸ್ ಸಂಸ್ಥೆಯ Dr ಸುನೀಲ್ ಕುಂಬಾರ್ ಬಿಡುಗಡೆ ಮಾಡುತ್ತಿದ್ದಾರೆ.

error: Content is protected !!