Cini NewsMovie ReviewSandalwood

ಸಾವಿನ ಹಿಂದಿನ ಗೇಮ್ ಪ್ಲಾನ್ “ಕಣ್ಣಾ ಮುಚ್ಚೆ ಕಾಡೇ ಗೂಡೇ” (ಚಿತ್ರವಿಮರ್ಶೆ -ರೇಟಿಂಗ್ : 3/5)

ರೇಟಿಂಗ್ : 3/5
ಚಿತ್ರ : ಕಣ್ಣಾ ಮುಚ್ಚೆ ಕಾಡೇ ಗೂಡೇ
ನಿರ್ದೇಶಕ : ನಟರಾಜ್ ಕೃಷ್ಣೇಗೌಡ
ನಿರ್ಮಾಪಕರು : ಅನಿತಾ ವೀರೇಶ್ ಕುಮಾರ್ , ಮೀನಾಕ್ಷಿ ರಾಜಶೇಖರ್
ಸಂಗೀತ : ಶ್ರೀ ಸಸ್ತ
ಛಾಯಾಗ್ರಹಣ : ದೀಪಕ್
ತಾರಾಗಣ : ರಾಘವೇಂದ್ರ ರಾಜ್ ಕುಮಾರ್ , ಅಥರ್ವ ಪ್ರಕಾಶ್ , ಪ್ರಾರ್ಥನಾ, ವೀರೇಶ್ ಕುಮಾರ್ , ಜ್ಯೋತಿಷ್ ಶೆಟ್ಟಿ , ದೀಪಕ್ ರೈ, ಅರವಿಂದ ಬೋಳಾರ್, ರವಿ ರಾಮಕುಂಜ, ಚಂದ್ರಕಲಾ ಹಾಗೂ ಮುಂತಾದವರು…

ಸಾಮಾನ್ಯವಾಗಿ ಸಸ್ಪೆನ್ಸ್ , ಥ್ರಿಲ್ಲರ್ , ಮರ್ಡರ್ ಮಿಸ್ಟ್ರಿ ಚಿತ್ರಗಳು ಪ್ರೇಕ್ಷಕರ ಗಮನ ಬಹಳ ಬೇಗ ಸೆಳೆಯುತ್ತದೆ. ಆ ನಿಟ್ಟಿನಲ್ಲಿ ಸಾವಿನ ಹಿಂದಿನ ರಹಸ್ಯ ಕಂಡುಹಿಡಿಯಲು ಬರುವ ಪೊಲೀಸ್ ಹಾಗೂ ಡಿಟೆಕ್ಟಿವ್ ಏಜೆನ್ಸಿಯ ನಡುವಿನ ತಿಕಾಟದ ನಡುವೆ ಆಸ್ತಿಗಾಗಿ ಕೌಟುಂಬಿಕ ಕಲಹ ಹಾಗೂ ಕೊಲೆ ಬೆರೆಯದೆ ಕಥೆಯನ್ನ ತೆರೆಯುತ್ತಾ ಸಾಗುವ ಚಿತ್ರ “ಕಣ್ಣಾ ಮುಚ್ಚೆ ಕಾಡೇ ಗೂಡೇ” ಪ್ರೇಕ್ಷಕರ ಮುಂದೆ ಬಂದಿದೆ.

ಶ್ರೀಮಂತ ವ್ಯಕ್ತಿ ಒಬ್ಬನ ನಿಗೂಢ ಸಾವು, ಅದೇ ರೀತಿ ಮತ್ತೊಂದು ಹುಡುಗಿಯ ಸಾವು , ಇದರ ಪೋಸ್ಟ್ ಮಾರ್ಟಮ್ ಮಾಡುವ ಡಾಕ್ಟರ್ ಸುಧಾಕರ್ (ರಾಘವೇಂದ್ರ ರಾಜ್ ಕುಮಾರ್). ಅದು ಅವರ ರಿಟೈಡ್ ಜೀವನದ ಕೊನೆಯ ಕೇಸ್ ಆಗಿರುತ್ತದೆ. ಈ ಸಾವಿನ ಹಿಂದೆ ರಹಸ್ಯದ ಜಾಡು ಸಾಗುತ್ತದೆ. ಇನ್ನು ಪೊಲೀಸರಿಗೂ ಮುಂಚೆ ಡಿಟೆಕ್ಟಿವ್ ರಾಮ್(ಅಥರ್ವ ಪ್ರಕಾಶ್) ಗೆ ಸಿಗುವ ಮಾಹಿತಿ.

ಇನ್ಸ್ಪೆಕ್ಟರ್ ದಶಮುಖ (ಜ್ಯೋತಿಷ್ ಶೆಟ್ಟಿ) ಮೂಲಕ ಕೊಲೆ ಕೇಸ್ ಗಳ ವಿಚಾರವಾಗಿ ರಾಮ್ ಗೆ ವಾರ್ನಿಂಗ್. ಡಿಟೆಕ್ಟಿವ್ ಟೀಮ್ ಸೇರಲು ಬರುವ ಜಾನವಿ (ಪ್ರಾರ್ಥನಾ) ರಾಮ್ ಜೊತೆಯ ಸ್ನೇಹ , ಪ್ರೀತಿ , ಮದುವೆ ಹಂತಕ್ಕೆ ಬರುತ್ತದೆ. ಮತ್ತೊಂದೆಡೆ ಪೋಲಿಸ್ ಇನ್ಸ್ಪೆಕ್ಟರ್ ನೀಡುವ ಚಾಲೆಂಜ್ ಗೆ ಮುಂದಾಗುವ ರಾಮ್ ಬದುಕಲ್ಲಿ ಪ್ರೇಯಸಿ ಜಾನು ಸಾವಿನ ವಿಡಿಯೋ ಬೇರೆಯದೇ ಗೊಂದಲವನ್ನ ಸೃಷ್ಟಿ ಮಾಡುತ್ತದೆ.

ಆರು ತಿಂಗಳ ಹಿಂದೆ ಸತ್ತ ಜಾನವಿ , ಎರಡು ದಿನಗಳ ಹಿಂದೆ ರಾಮ್ ಜೊತೆ ಮದುವೆಗೆ ಸಿದ್ದಳಾಗುವುದು ಹೇಗೆ ಸಾಧ್ಯ ಎಂಬ ಪ್ರಶ್ನೆ ಗೊಂದಲ ಮೂಡಿಸುತ್ತದೆ. ಇದೆಲ್ಲದಕ್ಕೂ ಒಂದು ನಿಗೂಢ ಕಥೆ ತೆರೆದುಕೊಳ್ಳುತ್ತದೆ. ಶ್ರೀಮಂತ ವ್ಯಕ್ತಿಯ ಇಬ್ಬರ ಹೆಂಡತಿಯರು , ಅವರ ಮಕ್ಕಳು , ಆಸ್ತಿಯ ವಿಚಾರವಾಗಿ ಮಗ ವಿದ್ಯುತ್ (ವೀರೇಶ್) ಆಕ್ರೋಶ , ಹೀಗೆ ಒಂದಕ್ಕೊಂದು ಕೊಂಡಿಯಂತೆ ಬೆಸೆದುಕೊಂಡು, ಕುತೂಹಲಕಾರಿಯಾಗಿ ಕೊನೆಯ ಹಂತಕ್ಕೆ ಬಂದು ನಿಲ್ಲುತ್ತದೆ.

ಕೊಲೆ ಮಾಡಿದ್ದು ಯಾರು…
ಸತ್ತಿದ್ದು ಯಾರು…
ಗೊಂದಲ ಯಾರಿಗೆ…
ಪ್ಲಾನ್ ಮಾಡಿದ್ದು ಏನು… ಇದಕ್ಕೆಲ್ಲ ಉತ್ತರ ನೀವು ಚಿತ್ರ ನೋಡಬೇಕು.

ಇನ್ನು ನಿರ್ದೇಶಕ ಆಯ್ಕೆ ಮಾಡಿಕೊಂಡು ಕಥಾವಸ್ತು ಕುತೂಹಲಕಾರಿ ಆಗಿದ್ದು
ಕೌಟುಂಬಿಕ ಕಲಹ , ಆಸ್ತಿ , ಮೋಸ , ಕೊಲೆ , ಪತ್ತೆದಾರಿ, ಪೊಲೀಸ್ ಪ್ರವೇಶದಿಂದ ತಪ್ಪಿಸಿಕೊಳ್ಳಲು ಮಾಡುವ ಗೇಮ್ ಪ್ಲಾನ್ ಕಟ್ಟಿಕೊಳ್ಳುವ ರೀತಿ ಗಮನ ಸೆಳೆಯುವಂತೆ ಮಾಡಿದ್ದಾರೆ. ಚಿತ್ರಕಥೆ ಬಿಗಿ ಮಾಡಬಹುದಿತ್ತು , ಇನ್ನು ಕೆಲವು ಪಾತ್ರಗಳ ಪರಿಪಕ್ವತೆ ಜೊತೆ ಭಾಷೆಗಳ ಹೊಂದಾಣಿಕೆ ಅಗತ್ಯ ಅನಿಸುತ್ತದೆ.

ತಾಂತ್ರಿಕವಾಗಿ ಮತ್ತಷ್ಟು ಸೂಕ್ಷ್ಮಗಿ ಮಾಡಬಹುದಿತ್ತು , ನಿರ್ದೇಶಕರ ಈ ಪ್ರಯತ್ನಕ್ಕೆ ನಿರ್ಮಾಪಕರ ಸಾತ್ ಮೆಚ್ಚುವಂತಿದೆ. ಸಂಗೀತ ಸೊಗಸಾಗಿದ್ದು , ಛಾಯಾಗ್ರಾಹಕರ ಕೈಚಳಕ ಉತ್ತಮವಾಗಿದೆ. ಇನ್ನು ಕಲಾವಿದರ ವಿಚಾರವಾಗಿ ಪೋಸ್ಟ್ಮಾರ್ಟಮ್ ಮಾಡುವ ಡಾಕ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಾಘವೇಂದ್ರ ರಾಜ್ ಕುಮಾರ್ ಪಾತ್ರಕ್ಕೆ ನ್ಯಾಯವನ್ನು ನೀಡಿದ್ದು, ಆರಂಭ ಹಾಗೂ ಅಂತ್ಯಕ್ಕೆ ಕೊಂಡಿಯಂತೆ ಸಾಗಿದ್ದಾರೆ.

ನಾಯಕ ಅಥರ್ವ ಪ್ರಕಾಶ್ ಒಬ್ಬ ಡಿಸ್ಟ್ರಿಕ್ಟಿವ್ ಯಾಗಿ ಜೀವ ತುಂಬುವ ಪ್ರಯತ್ನ ಮಾಡಿದ್ದಾರೆ. ನಟಿ ಪ್ರಾರ್ಥನಾ ಸುವರ್ಣ ಕೂಡ ಎರಡು ಶೇಡ್ ಗಳಲ್ಲಿ ಗಮನ ಸೆಳೆದಿದ್ದು , ಚಿತ್ರದ ಕೇಂದ್ರ ಬಿಂದುವಾಗಿ ಮಿಂಚಿದ್ದಾರೆ. ಇನ್ಸ್ಪೆಕ್ಟರ್ ಪಾತ್ರದಲ್ಲಿ ಜ್ಯೋತಿಷ್ಯ ಶೆಟ್ಟಿ ಗಮನ ಸೆಳೆದಿದ್ದಾರೆ.

ಇನ್ನು ನೆಗೆಟಿವ್ ಷೇಡ್ನಲ್ಲಿ ವೀರೇಶ್ ಕುಮಾರ್ ಅಬ್ಬರಿಸಲು ಶ್ರಮಪಟ್ಟಿದ್ದಾರೆ. ಇನ್ನು ಲಾಯರ್ ಪಾತ್ರದಲ್ಲಿ ದೀಪಕ್ ರೈ ಪಾಣಾಜೆ , ಪೊಲೀಸ್ ಪಾತ್ರದಲ್ಲಿ ಅರವಿಂದ್ ಬೋಳಾರ್ , ಅಸಿಸ್ಟೆಂಟ್ ಡಿಟೆಕ್ಟಿವ್ ಆಗಿ ರವಿ ಸೇರಿದಂತೆ ಎಲ್ಲಾ ಪಾತ್ರಗಳು ಚಿತ್ರದ ಓಟಕ್ಕೆ ಸಾತ್ ನೀಡಿದೆ. ಒಮ್ಮೆ ಮನೋರಂಜನೆಯ ದೃಷ್ಟಿಯಿಂದ ಈ ಚಿತ್ರವನ್ನು ನೋಡುವಂತಿದೆ.

error: Content is protected !!