Cini NewsSandalwood

ಪ್ಯಾರಿಸ್ ಫ್ಯಾಷನ್ ವೀಕ್ ನಲ್ಲಿ ಭಾಗಿಯಾದ ಕನ್ನಡದ ನಟಿ ಪ್ರಣಿತಾ ಸುಭಾಷ್.

ಸ್ಯಾಂಡಲ್ ವುಡ್ ಸೇರಿದಂತೆ ಪಂಚ ಭಾಷೆಗಳಲ್ಲಿ ಮಿಂಚಿದಂಥ ನಟಿ ಪ್ರಣಿತಾ ಸುಭಾಷ್ ಸುಭಾಷ್. ಕನ್ನಡದ ಪೊರ್ಕಿ , ಭೀಮಾ ತೀರದಲ್ಲಿ , ಜಗ್ಗು ದಾದಾ , ಮಾಸ್ ಲೀಡರ್ ಸೇರಿದಂತೆ ತೆಲುಗು , ತಮಿಳು , ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ಅಭಿನಯಿಸಿದ ಮುದ್ದಾದ ಬೆಡಗಿ ಪ್ರಣಿತಾ. ಮದುವೆ , ಮಕ್ಕಳಾದ ನಂತರವೂ ಫಿಟ್ ಅಂಡ್ ಫೈನ್ ಆಗಿ ತಮ್ಮ ಲೈಫ್ ಸ್ಟೈಲ್ ಮುಂದುವರಿಸಿಕೊಂಡು ಸಾಗಿದ್ದಾರೆ ಪ್ರಣಿತಾ ಸುಭಾಷ್.

ಈಗ ಈ ಸುಂದರ ಬೆಡಗಿ ಪ್ರಣಿತಾ ಸುಭಾಷ್ ಫ್ಯಾಶನ್ ಸಿಟಿ ಪ್ಯಾರಿಸ್ ಫ್ಯಾಷನ್ ವೀಕ್ ನಲ್ಲಿ ಭಾಗಿಯಾಗಿರುವ ಮೊದಲ ಕನ್ನಡದ ನಟಿಯಾಗಿದ್ದಾರೆ. ಪ್ಯಾರಿಸ್ ಸ್ಟ್ರೀಟ್ ನಲ್ಲಿ ಕ್ಯಾಮರಾಗೆ ಸಖತ್ ಪೋಸ್ ನೀಡಿದ್ದು, ತಾಯಿಯಾದ ನಂತ್ರ ಮತ್ತಷ್ಟು ಅಂದ ಹೆಚ್ಚಿಸಿಕೊಂಡಿ ರುವ ಪ್ರಣೀತಾ ಸುಭಾಷ್ ಕೆಲವೇ ದಿನಗಳಲ್ಲಿ ಮತ್ತೆ ಸಿನಿಮಾರಂಗದಲ್ಲಿ ಬ್ಯುಸಿ ಅಗಲಿದಾರಂತೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅಪ್ಡೇಟ್ಸ್ ಗಳನ್ನು ನಟಿ ಪ್ರೇಣಿತಾ ನೀಡಲಿದ್ದಾರೆ.

error: Content is protected !!