Cini NewsMovie ReviewSandalwood

ಡಾರ್ಕ್ ನೆಟ್ ಸುಳಿಯ ರೋಚಕ ಥ್ರಿಲ್ಲರ್ ‘ಕಪಟಿ ‘ (ಚಿತ್ರವಿಮರ್ಶೆ-ರೇಟಿಂಗ್ : 3.5 /5)

ರೇಟಿಂಗ್ : 3.5 /5
ಚಿತ್ರ : ಕಪಟಿ
ನಿರ್ದೇಶಕರು : ರವಿಕಿರಣ್, ಚೇತನ್.ಎಸ್. ಪಿ
ನಿರ್ಮಾಪಕ : ದಯಾಳ್ ಪದ್ಮನಾಭನ್
ಸಂಗೀತ : ಜೋಹನ್
ಛಾಯಾಗ್ರಹಣ : ಸತೀಶ್
ತಾರಗಣ : ಸುಕೃತ ವಾಗ್ಲೆ , ದೇವ್ ದೇವಯ್ಯ , ಸಾತ್ವಿಕ್ ಕೃಷ್ಣನ್ , ಪವನ್ ವೇಣು ಗೋಪಾಲ್ , ಶಂಕರ್ ನಾರಾಯಣ್ , ಅಜಿತ್ ಕುಮಾರ್, ನಂದಗೋಪಾಲ್ ಹಾಗೂ ಮುಂತಾದವರು…

ಆಧುನಿಕತೆಗೆ ತಕ್ಕಂತೆ ತಂತ್ರಜ್ಞಾನ ಬೆಳೆದಷ್ಟು ಅದರ ಪ್ರಯೋಜನ ಎಷ್ಟು ಉಪಯೋಗವೊ ಅಷ್ಟೇ ಮಾರಕವು ಆಗುತ್ತಾ ಹೋಗಿದೆ. ಅಂತರ್ಜಾಲದ ಕಾರ್ಯವೈಖರಿ ಪ್ರಪಂಚದ ಸುತ್ತ ಆವರಿಸಿದ್ದು, ಇನ್ನೂ ಅದರೊಳಗಿರುವ ಕಾಣದ ಕೈಗಳ ಕತ್ತಲ ಪ್ರಪಂಚದ ಜಾಲ ಹಲವಾರು ಬದುಕಿನಲ್ಲಿ ಆಟವಾಡುತ್ತಿದೆ.

ಅಂತದ್ದೇ ಒಂದು ಎಳೆ ಒಳಗೆ ಮಾನಸಿಕ ತಳಮಳ , ಆತಂಕ , ಸಂಬಂಧ, ಹಣದ ಸುತ್ತ ಟ್ರಾಪ್ ನಲ್ಲಿ ಸಿಕ್ಕಿಹಾಕಿಕೊಳ್ಳುವವರು ಯಾರು ಎಂಬ ಸನ್ನಿವೇಶವನ್ನು ಹೊಸ ಶೈಲಿಯಲ್ಲಿ ಹಾಲಿವುಡ್ ಚಿತ್ರಗಳ ಮಾದರಿಯ ಲೈಟಿಂಗ್ , ಸೌಂಡ್ ಎಫಕ್ಟ್ ಮೂಲಕ ಸೈಕಲಾಜಿಕಲ್ , ಸಸ್ಪೆನ್ಸ್ ಕಥನಾಕವಾಗಿ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ಕಪಟಿ”.

ತನ್ನ ಕಾಸ್ಟ್ಯೂಮ್ ಡಿಸೈನಿಂಗ್ ಮೂಲಕ ಹಣ , ಕೀರ್ತಿಯನ್ನ ಗಳಿಸಿದಂತಹ ಪ್ರಿಯ (ಸುಕೃತ ವಾಗ್ಲೆ) ತನ್ನ ತಮ್ಮ ಅಮಿತ್ ಕ್ರಿಕೆಟ್ ನಲ್ಲಿ ಉತ್ತುಂಗಕ್ಕೆ ಏರಲಾಗದಂತಹ ಸ್ಥಿತಿ ಗತಿಯ ನಡುವೆ, ತಂದೆಯ ನೋವು ಆಲೋಚನೆಯ ಜೊತೆ ತನ್ನ ಮನಸ್ಥಿತಿಯ ತಳಮಳವು ಯಾರೋ ತನ್ನ ಸುತ್ತಮುತ್ತ ಇದ್ದ ಹಾಗೆ , ಗಲಿಬಿಲಿಯ ನಡುವೆ ಬದುಕನ್ನ ಕಳೆಯುತ್ತಾ , ಡಾಕ್ಟರ್ ಸಲಹೆಯಂತೆ ಸಾಗುತ್ತಾಳೆ.

ಇನ್ನು ಡಾರ್ಕ್ ನೆಟ್ ಮೂಲಕ ಹಣ ಸಂಪಾದನೆ ಮಾಡಲು ಸಂಚುರೂಪಿಸುವ ಬೇಬಿ ಸುಮನ್ (ದೇವು ದೇವಯ್ಯ) , ಜುಟ್ಟು ಚಕ್ರಿ (ಸಾತ್ವಿಕ್ ಕೃಷ್ಣನ್) ಇಬ್ಬರು ಪ್ರಿಯ ಬಂಗಲೆ ಸೇರಿ ಮನೆಯಲ್ಲಿ ಕ್ಯಾಮೆರಾಗಳನ್ನ ಅಳವಡಿಸುತ್ತಾರೆ. ಈ ಜಾಲದ ಅಡ್ಮಿನ್ ಮಾರ್ಗದಂತೆ ನಾಲ್ಕು ಹಂತಗಳಿರುವ ಡಾರ್ಕ್ ನೆಟ್ ಕೈಚಳಕದ ಆರಂಭಿಸಿವ ವಂಚಕರ ಜಾಲ ರೋಚಕವಾಗಿ ಸಾಗುತ್ತಿರುವಾಗಲೇ ಒಂದಷ್ಟು ಅನುಮಾನಗಳು ಮೂಡುತ್ತ ನಿಜವಾಗಿಯೂ ಟ್ರಾಪ್ ಆದವರು ಯಾರು… ಕಾರಣ ಏನು… ಕ್ಲೈಮಾಕ್ಸ್ ಉತ್ತರ..? ಈ ಎಲ್ಲಾ ಪ್ರಶ್ನೆಗೆ ಒಮ್ಮೆ ಈ ಚಿತ್ರ ನೋಡಬೇಕು.

ಪ್ರಸ್ತುತ ನಡೆಯುತ್ತಿರುವ ಅಂತರ್ಜಾಲದ ಕರಾಳ ಸತ್ಯದ ಮುಖವಾಡವನ್ನು ತೆರೆದಿಡುವ ಪ್ರಯತ್ನವಾಗಿ ನಿರ್ಮಾಣ ಮಾಡಿರುವ ನಿರ್ಮಾಪಕ ದಯಾಳ್ ಪದ್ಮನಾಭನ್ ರವರ ಆಲೋಚನೆ ಮೆಚ್ಚುವಂತಿದೆ. ಇನ್ನು ನಿರ್ದೇಶಕದ್ವಯರು ಈಗಿನ ಟೆಕ್ನಾಲಜಿಯ ಕಾರ್ಯವೈಖರಿ ಮೂಲಕ ಟ್ರಾಫಿಂಗ್ , ಟಾರ್ಚರ್ ಹೇಗೆಲ್ಲಾ ನಡೆಯುತ್ತೆ ಎಂಬುದರ ಜೊತೆಗೆ ಮಾನಸಿಕ ಸ್ಥಿರತೆ , ಆತಂಕ , ಗೊಂದಲದ ಬದುಕು ಹೇಗೆಲ್ಲಾ ಸಾಗುತ್ತದೆ ಎಂಬುದನ್ನು ಹಾಲಿವುಡ್ ಸ್ಟೈಲ್ ನಲ್ಲಿ ಹೇಳಿದ್ದರೂ , ಚಿತ್ರಕಥೆಯಲ್ಲಿ ಹಿಡಿತ ಬೇಕಿತ್ತು ಎನಿಸುತ್ತದೆ. ಸಂಗೀತವು ಚಿತ್ರದ ಓಟಕ್ಕೆ ಪೂರಕವಾಗಿದ್ದು , ಹಿನ್ನೆಲೆ ಸಂಗೀತ , ಛಾಯಾಗ್ರಾಹಕರ ಕೈಚಳಕ ಅದ್ಭುತವಾಗಿದೆ.

ಇನ್ನು ನಟಿ ಸುಕೃತ ವಾಗ್ಲೆ ಇಡೀ ಚಿತ್ರದ ಕೇಂದ್ರಬಿಂದುವಾಗಿ ಆವರಿಸಿಕೊಂಡು ಉತ್ತಮ ಅಭಿನಯನವನ್ನು ನೀಡಿದ್ದಾರೆ. ಇನ್ನು ನಟ ದೇವ್ ದೇವಯ್ಯ ಗಂಭೀರವಾಗಿ ಪಾತ್ರದಲ್ಲಿ ಜೀವಿಸಿದ್ದಾರೆ. ಮತ್ತೊಬ್ಬ ನಟ ಸಾತ್ವಿಕ್ ಕೃಷ್ಣನ್ ಇಡೀ ಚಿತ್ರದ ಹೈಲೈಟ್ ಆಗಿ ಅದ್ಭುತವಾಗಿ ಮಿಂಚಿದ್ದಾರೆ. ಉಳಿದಂತೆ ಬರುವ ಎಲ್ಲಾ ಪಾತ್ರಧಾರಿಗಳು ಕಥೆಗೆ ಪೂರಕವಾಗಿ ಜೀವ ತುಂಬಿದ್ದು , ಸೈಕಲಾಜಿಕಲ್ , ಥ್ರಿಲ್ಲರ್ ಕಥಾಹಂದರದ ತೀರ ಅಪರೂಪ ಎನ್ನುವ ಡಾರ್ಕ್ ವೆಬ್ ಜಾನರ್ ನ ಈ ಚಿತ್ರದಲ್ಲಿ ಆನ್‌ಲೈನ್ ಶೋಷಣೆಯ , ಶ್ರೀಮಂತರ ಟಾರ್ಗೆಟ್ ಸುತ್ತ ಸಾಗುವ ಈ ಸಿನಿಮಾವನ್ನು ಎಲ್ಲರೂ ಒಮ್ಮೆ ನೋಡಬಹುದು.

error: Content is protected !!