ಜಾತಿ, ವೈಷಮ್ಯದ ನಡುವೆ ಬದುಕಿನ ಹೋರಾಟ ಕರ್ಕಿ (ಚಿತ್ರವಿಮರ್ಶೆ -ರೇಟಿಂಗ್ : 3.5 /5)
ರೇಟಿಂಗ್ : 3.5 /5
ಚಿತ್ರ : ಕರ್ಕಿ
ನಿರ್ದೇಶಕ : ಪವಿತ್ರನ್
ನಿರ್ಮಾಪಕ : ಪ್ರಕಾಶ್ ಪಳನಿ
ಸಂಗೀತ : ಅರ್ಜುನ್ ಜನ್ಯ
ಛಾಯಾಗ್ರಹಣ : ಹೃಷಿಕೇಶ
ತಾರಾಗಣ : ಜಯಪ್ರಕಾಶ್ (ಜೆ.ಪಿ) ರೆಡ್ಡಿ , ಮೀನಾಕ್ಷಿ ದಿನೇಶ್, ಸಾಧು ಕೋಕಿಲ, ಬಲ ರಾಜವಾಡಿ, ಮಿಮಿಕ್ರಿ ಗೋಪಿ, ಸ್ವಾತಿ, ಸವಿತಾ ಹಾಗೂ ಮುಂತಾದವರು…
ಸಮಾಜದಲ್ಲಿ ಬದುಕು ನಡೆಸಲು ಎಲ್ಲರಿಗೂ ಹಕ್ಕಿದೆ. ಮೇಲು , ಕೀಳು , ಜಾತಿ , ಸಂಘರ್ಷಗಳ ತಾರತಮ್ಯ ನಿರಂತರವಾಗಿ ನಡೆಯುತ್ತಲೇ ಇದೆ. ಅಂತದ್ದೇ ಒಂದು ಕಥಾನಕದಲ್ಲಿ ದಲಿತರ ಧ್ವನಿಗಾಗಿ ಲಾಯರ್ ಆಗಲು ಮುಂದಾಗುವ ಹುಡುಗನಿಗೆ ಕಾಲೇಜಿನಲ್ಲಿ ಎದುರಾಗುವ ಕೀಟಲೆ , ತೊಂದರೆಗಳ ಜೊತೆ ಪ್ರೀತಿಯ ಲೇಪನದ ಸುಳಿಯಲ್ಲಿ ತನ್ನ ಗುರಿ ಮುಟ್ಟಲು ಹೊರಡುವವನ ಸುತ್ತ ನಡೆಯುವ ವಿಚಾರವನ್ನು ಹೇಳುವ ಪ್ರಯತ್ನವಾಗಿ ಈ ವಾರ ತೆರೆಯ ಮೇಲೆ ಬಂದಿರುವಂತಹ ಚಿತ್ರ “ಕರ್ಕಿ”.
ತನ್ನೂರಿನ ಗೆಳೆಯರ ಜೊತೆ ನಾಯಿಗಳೊಂದಿಗೆ ಬೇಟೆ ಆಡುತ್ತಾ ಕಾಲ ಕಳೆಯುವ ಮತ್ತು. ಮೇಲ್ವರ್ಗದವರ ಜಾತಿ ನಿಂದನೆಗೆ ಎದುರಾಗಿ ಶೋಷಿತ ವರ್ಗದವರ ಪರ ಧ್ವನಿ ಎತ್ತುಲು ಕಾಲೇಜುಗೆ ಸೇರಿ ಲಾಯರಾಗುವ ಕನಸು ಕಾಣುವ ಮುತ್ತತ್ತಿ ಮುತ್ತುರಾಜ್ (ಜೆ.ಪಿ). ಗೆ ಆತ್ಮೀಯ ಗೆಳೆಯನಾಗುವ ಆನಂದ (ಸಾಧುಕೋಕಿಲ). ಕನ್ನಡದಲ್ಲಿ ಉತ್ತಮ ಅಂಕ ಗಳಿಸುವ ಮತ್ತು ಇಂಗ್ಲೀಷ್ ನಲ್ಲಿ ಸೊನ್ನೆ.
ಲೆಕ್ಚರರ್ , ಸ್ಟೂಡೆಂಟ್ಸ್ ಗಳ ಬೈಗಳ , ತೊಂದರೆಗಳ ನಡುವೆ ಕಾಲೇಜಿನ ವಿದ್ಯಾರ್ಥಿನಿ ಜ್ಯೋತಿ ಮಹಾಲಕ್ಷ್ಮಿ (ಮೀನಾಕ್ಷಿ ದಿನೇಶ್) ಸ್ನೇಹ , ವಿಶ್ವಾಸ ಗಳಿಸುವ ಮತ್ತು. ಲಾಯರ್ ಆಗುವ ಕನಸಿಗೆ ಇಂಗ್ಲಿಷ್ ಹೇಳಿಕೊಡುವುದರ ಜೊತೆಗೆ ಜೋ ಸಪೋರ್ಟ್ ಮಾಡುತ್ತಾ ಮುತ್ತು ನನ್ನ ಪ್ರೀತಿಸಲು ಮುಂದಾಗುತ್ತಾಳೆ.
ಇದರ ನಡುವೆ ಮುತ್ತು ಮೇಲೆ ದ್ವೇಷ ಸಾಧಿಸುವ ಕಾಲೇಜು ಗ್ಯಾಂಗ್ನ ಪಡೆ. ಮಗಳ ಪ್ರೀತಿ ವಿಚಾರ ತಿಳಿಯುವ ಮೇಲ್ಜಾತಿಯ ತಂದೆ ಬುದ್ಧಿ ಹೇಳುವ ನಿಟ್ಟಿನಲ್ಲಿ ಬೇರೆ ಪಾಠವನ್ನು ಕಲಿಸಲು ಮುಂದಾಗುತ್ತಾನೆ. ಮುಂದೆ ಒಂದಕ್ಕೊಂದು ಕುಂಡಿಯಂತೆ ಮುತ್ತುಗೆ ಅವಮಾನ , ತೊಂದರೆ , ಕೀಳಾಗಿ ಕಾಣುವವರ ನಡುವೆ ಬದುಕು ನಡೆಸಲು ಪರದಾಡುತ್ತ ಹಲವಾರು ಸಮಸ್ಯೆಗಳನ್ನ ಹೇಗೆ ಎದುರಿಸುತ್ತಾನೆ ಎಂಬುದನ್ನು ನೋಡಬೇಕಾದರೆ ಒಮ್ಮೆ ನೀವು ಈ ಕರ್ಕಿ ಚಿತ್ರವನ್ನು ವೀಕ್ಷಿಸಬೇಕು.
ಹೆಸರಾಂತ ನಿರ್ದೇಶಕ ಪವಿತ್ರನ್ ತಮಿಳು ಚಿತ್ರದ ರಿಮೇಕ್ ಅನ್ನ ಕನ್ನಡದಲ್ಲಿ ಮಾಡುವ ಪ್ರಯತ್ನ ಮಾಡಿರುವುದು ವಿಶೇಷ. ಜಾತಿ ಸಂಘರ್ಷಗಳ ನಡುವೆ ಸ್ನೇಹ , ಪ್ರೀತಿ ಸುಳಿಯಲ್ಲಿ ಬದುಕು ಎಷ್ಟು ಕಷ್ಟಕರ ಎಂಬುದನ್ನ ತೆರೆಯ ಮೇಲೆ ಅಚ್ಚುಕಟ್ಟಾಗಿ ತೆರೆದಿಟ್ಟಿದ್ದಾರೆ. ನಾಯಕನ ಪ್ರೀತಿಯ ನಾಯಿ ಕರ್ಕಿ. ಅದು ಈ ಚಿತ್ರದ ಭಾಗವಾಗುವುದು ಹೇಗೆ ಎನ್ನುವುದೇ ಕುತೂಹಲ. ಮೇಲು-ಕೀಳು ಏನೆಲ್ಲಾ ಎಡವಟ್ಟುಗಳನ್ನು ಮಾಡುತ್ತದೆ ಎಂಬ ನಿದರ್ಶನ ಈ ಚಿತ್ರದಲ್ಲಿದ್ದು, ಕಥೆಯಲ್ಲಿ ಹೊಸತನವಿಲ್ಲದಿದ್ದರೂ ಹೇಳಿರುವ ರೀತಿ ಭಿನ್ನವಾಗಿದೆ.
ಚಿತ್ರದ ಓಟ ಇನ್ನಷ್ಟು ವೇಗ ಮಾಡಬಹುದಿತ್ತು. ನಿರ್ಮಾಪಕ ಪ್ರಕಾಶ್ ಪಳನಿ ಪ್ರಾಣಿ ಪ್ರಿಯರಾಗಿದ್ದು , ಒಂದು ಸಂದೇಶ ನೀಡುವ ಚಿತ್ರವನ್ನು ಮಾಡಿದ್ದಾರೆ. ಇನ್ನು ಅರ್ಜುನ್ ಜನ್ಯ ಸಂಗೀತ ಗಮನ ಸೆಳೆಯುತ್ತದೆ. ಅದೇ ರೀತಿ ಛಾಯಾಗ್ರಹಣ , ಸಾಹಿತ್ಯ , ಸಂಕಲನ ಕೆಲಸ ಉತ್ತಮವಾಗಿ ಮೂಡಿ ಬಂದಿದೆ. ನಾಯಕನಾಗಿ ಅಭಿನಯಿಸಿರುವ ಜಯ ಪ್ರಕಾಶ್ ರೆಡ್ಡಿ ತಮ್ಮ ಪಾತ್ರಕ್ಕೆ ಜೀವ ತುಂಬಿ ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ.ಮುಗ್ಧನಾಗಿ ತನ್ನ ಹವಾ ಭಾವ ಮೂಲಕ ಗಮನ ಸೆಳೆಯುವಂತೆ ಮಾಡಿದ್ದಾರೆ.
ಅದೇ ರೀತಿ ನಟಿಯಾಗಿ ಅಭಿನಯಿಸಿರುವ ಮೀನಾಕ್ಷಿ ದಿನೇಶ್ ಕೂಡ ಬಹಳ ನ್ಯಾಚುರಲ್ ಆಗಿ ಅಭಿನಯಿಸಿದ್ದಾರೆ. ಇನ್ನು ಚಿತ್ರದುದ್ದಕ್ಕೂ ಸಾಧುಕೋಕಿಲ ಸಾಗಿದ್ದು ಹಾಸ್ಯದ ಜೊತೆಗೆ ಕೆಲವು ಮನಮುಟ್ಟುವ ಸನ್ನಿವೇಶಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ನಾಯಕಿಯ ತಂದೆಯಾಗಿ ಬಾಲ ರಾಜವಾಡಿ ಸೇರಿದಂತೆ ಜೋ ಸೈಮನ್, ಮಿಮಿಕ್ರಿ ಗೋಪಿ , ಯತಿರಾಜ್ , ಸ್ವಾತಿ ಗುರುದತ್ , ವಾಲೆ ಮಂಜುನಾಥ್, ಆರ್. ಜಗದೀಶ್ ಸೇರಿದಂತೆ ಹಲವಾರು ಕಲಾವಿದರು ಚಿತ್ರದ ಓಟಕ್ಕೆ ಉತ್ತಮ ಸಾಥ್ ನೀಡಿದ್ದಾರೆ. ಒಟ್ಟಾರೆ ಪ್ರೇಕ್ಷಕರ ಗಮನ ಸೆಳೆಯುವಂತ ಅಂಶ ಒಳಗೊಂಡಿರುವ ಈ ಚಿತ್ರವನ್ನು ಒಮ್ಮೆ ನೋಡಬಹುದು.