ಹೃದಯಸ್ಪರ್ಷಿ ಕಥಾನಕ “ಕರ್ಕಿ” ಚಿತ್ರದ ಟ್ರೇಲರ್ ರಿಲೀಸ್
ಚಂದನವನದಲ್ಲಿ ಮತ್ತೊಂದು ಹೃದಯಸ್ಪರ್ಶಿ ಕಥಾನಕ , ಜಾತಿ ವ್ಯವಸ್ಥೆಯ ಅಸಮಾನತೆಯ ಬಗ್ಗೆ ಹೇಳುವ “ಕರ್ಕಿ” ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ನೆರವೇರಿತು. ಯುವ ನಟ ಜಯಪ್ರಕಾಶ್ ರೆಡ್ಡಿ(ಜೆಪಿ) ಹಾಗೂ ಮೀನಾಕ್ಷಿ ನಾಯಕ , ನಾಯಕಿಯಾಗಿ ಕಾಣಿಸಿಕೊಂಡಿರುವ ಈ ಚಿತ್ರವನ್ನು ತಮಿಳಿನ ಖ್ಯಾತ ನಿರ್ದೇಶಕ ಪವಿತ್ರನ್ ಸಾರಥ್ಯ ವಹಿಸಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಚಿತ್ರದ 6 ಹಾಡುಗಳನ್ನು ರಚಿಸಿದ ಕವಿರಾಜ್ ಮಾತನಾಡುತ್ತ ಈ ಚಿತ್ರದಲ್ಲಿ ಎಕ್ಸೆಕ್ಟಿಂಗ್ ವಿಷಯ ಎಂದರೆ ನಿರ್ದೇಶಕ ಪವಿತ್ರನ್ ಅವರ ಜೊತೆ ಕೆಲಸ ಮಾಡಿದ್ದು, ಮಹತ್ವಾಕಾಂಕ್ಷೆ ಇಟ್ಟುಕೊಂಡು ಸಾಧಿಸಲಿಕ್ಕೆ ಹೋದಾಗ ಏನಾಗುತ್ತೆ , ಪ್ರೀತಿ ಪ್ರೇಮದ ವಿಷಯದಲ್ಲಿ ಜಾತಿ ಬಂದಾಗ ಏನಾಗುತ್ತೆ, ಮನುಷ್ಯ ಮತ್ತು ಪ್ರಾಣಿಯ ಸಂಬಂಧ , ಪ್ರೇಮ ಇದೆಲ್ಲವನ್ನೂ ಇಟ್ಟುಕೊಂಡು ಈ ಕಥೆ ಹೆಣೆಯಲಾಗಿದೆ.
ಚಿತ್ರದಲ್ಲಿ ತುಂಬಾ ಹೃದಯಸ್ಪರ್ಷಿ ಸನ್ನಿವೇಶಗಳಿವೆ , ಎಂಥ ಕಲ್ಲು ಹೃದಯದವರಲ್ಲೂ ಕಣ್ಣೀರು ಬರಿಸುತ್ತದೆ, ಹಾಡುಗಳನ್ನೂ ಅದನ್ನೇ ಬೇಸ್ ಮಾಡಿದ್ದೇವೆ. ಆರು ಹಾಡುಗಳೂ ಒಂದೇ ಶ್ರೇಣಿಯಲ್ಲಿ ಬಂದು ಕೂರುತ್ತವೆ, ಕರ್ಕಿ ಒಂದು ವಿಶೇಷ ಸಿನಿಮಾ. ಪವಿತ್ರನ್ ತಮಿಳಲ್ಲಿ ಹಲವಾರು ಹಿಟ್ ಸಿನಿಮಾಗಳನ್ನು ನಿರ್ದೇಶಿಸಿದವರು ಎಂದು ಹೇಳಿದರು.
ನಾಯಕ ಜೆಪಿ ಮಾತನಾಡುತ್ತ ಒಂದು ಹಳ್ಳಿಯಲ್ಲಿ ಬಡವರು, ಶ್ರೀಮಂತರು ಹೀಗೆ ಎಲ್ಲ ವರ್ಗದವರೂರ‍್ತಾರೆ. ಅದರಲ್ಲಿ ಒಬ್ಬ ಯುವಕ ನಮ್ಮ ಊರಿಗೆ ಏನಾದರೂ ಒಳ್ಳೆಯದು ಮಾಡಬೇಕು ಎಂದು ಸಿಟಿಗೆ ಬರುತ್ತಾನೆ. ಅಲ್ಲಿ ಈತನನ್ನು ಒಬ್ಬ ಶ್ರೀಮಂತ ಯುವತಿ ಲವ್ ಮಾಡುತ್ತಾಳೆ, ಮುಂದೆ ಇವರಿಬ್ಬರ ನಡುವೆ ಜಾತಿ ಅಡ್ಡ ಬರುತ್ತದೆ, ಹೀಗೆ ಚಿತ್ರಕಥೆ ಜಾತಿ ವ್ಯವಸ್ಥೆ, ತಾರತಮ್ಯದ ಸುತ್ತ ಸಾಗುತ್ತದೆ, ಒಬ್ಬ ಹುಡುಗ ಹುಡುಗಿ ಸ್ನೇಹಿತರಾಗಿ ಇರಬಾರದೇ ಎಂಬ ಪ್ರಶ್ನೆಯನ್ನು ಈ ಚಿತ್ರ ಹುಟ್ಟು ಹಾಕುತ್ತದೆ ಎಂದು ಹೇಳಿದರು.
ಈ ಹಿಂದೆ ವಾಟ್ಸಾಪ್ ಲವ್ ಹಾಗೂ ರಾಜ ರಾಣಿ ಸಿನಿಮಾಗಳಲ್ಲಿ ಅಭಿನಯಿಸಿದ್ದ ಜಯಪ್ರಕಾಶ್ ರೆಡ್ಡಿ “ಕರ್ಕಿ” ಚಿತ್ರದಲ್ಲಿ ಮೇಲ್ವರ್ಗದ ಜನರ ತುಳಿತಕ್ಕೆ ಒಳಗಾಗಿ ಸಿಡಿದು ನಿಲ್ಲುವ ಯುವಕನಾಗಿ ಕಾಣಿಸಿಕೊಂಡಿದ್ದಾರೆ, ಈ ಚಿತ್ರ ಸೆಪ್ಟೆಂಬರ್ ತಿಂಗಳಲ್ಲಿ ತೆರೆಗೆ ಬರಲಿದೆ.
ತಮಿಳಿನ ಖ್ಯಾತ ನಿರ್ದೇಶಕ ಪವಿತ್ರನ್ ಕನ್ನಡದಲ್ಲಿ ಮಾತನಾಡಲು ಪೇಪರ್ ನಲ್ಲಿ ಬರೆದುಕೊಂಡು ಬಂದು ಮಾಧ್ಯಮ ಮಿತ್ರರಿಗೆ ಸುಸ್ವಾಗತ ಎನ್ನುತ್ತಾ ಮಾತನ್ನು ಆರಂಭಿಸಿ ಈ ಒಂದು ಚಿತ್ರ ಸಮಾನತೆಯ ಸಂದೇಶ ಸಾರುವ ಹಾಗೂ ಜಾತಿ ವ್ಯವಸ್ಥೆಯಿಂದ ಕೆಲವೆಡೆ ನಡೀತಿರುವ ಶೋಷಣೆಯ ಸುತ್ತ ಸಾಗುವ ಕಥೆ ಈ ಚಿತ್ರದಲ್ಲಿದೆ.
ಕೆಳವರ್ಗದ ಯುವಕನೊಬ್ಬ ತನ್ನ ಊರಲ್ಲಿ ಹಾಗೂ ಓದುವ ಕಾಲೇಜಿನಲ್ಲಿ ಇದೇ ಕಾರಣದಿಂದ ಹೇಗೆ ಅವಮಾನ ಅನುಭವಿಸುತ್ತಾನೆ, ಮುಂದೆ ಅದನ್ನೆಲ್ಲ ಎದುರಿಸಿ ಹೇಗೆ ಗೆಲ್ಲುತ್ತಾನೆ ಎಂಬುದನ್ನು ಕರ್ಕಿ ಚಿತ್ರದ ಮೂಲಕ ತೆರೆಮೇಲೆ ಹೇಳಲು ಪ್ರಯತ್ನಿಸಲಾಗಿದೆ. ಇದಲ್ಲದೆ ಸಾಕಷ್ಟು ಸೂಕ್ಷ್ಮ ಅಂಶಗಳು ಈ ಚಿತ್ರದಲ್ಲಿದೆ ಎಂದರು.
ಇನ್ನು ಥರ್ಡ್ ಹೈ ಮೀಡಿಯಾ ಮೂಲಕ ಪ್ರಕಾಶ್ ಪಳನಿ ನಿರ್ಮಾಣದ ಮೊದಲ ಕನ್ನಡ ಚಿತ್ರ ಇದಾಗಿದೆ. ಇವರು ಪಕ್ಕ ಡಾ. ರಾಜಕುಮಾರ್ ಅವರ ಅಭಿಮಾನಿ ಆಗಿದ್ದು , ಕನ್ನಡ ಸೇರಿದಂತೆ ಹಲವು ಭಾಷೆಗಳ ಚಲನಚಿತ್ರ ವಿತರಣೆಯನ್ನು ಮಾಡಿದ್ದು , ಕನ್ನಡದಲ್ಲಿ ಮೊದಲ ನಿರ್ಮಾಣ ಮಾಡಬೇಕೆಂಬ ಆಸೆಯಿಂದ ಈ ಚಿತ್ರವನ್ನು ಸಿದ್ಧಪಡಿಸಿದ್ದು, ನಾನು ಪ್ರಾಣಿ ಪ್ರಿಯ , ಹಾಗೆಯೇ ಈ ಚಿತ್ರದಲ್ಲೂ ಅಂತದ್ದೇ ಕಥೆ ಒಳಗೊಂಡಿದೆ.
ಹಾಗಾಗಿ ಈ ಸಿನಿಮಾ ಮಾಡಿದ್ದೇನೆ ನಿಮ್ಮೆಲ್ಲರ ಸಹಕಾರ ಇರಲಿ ಎಂದು ಕೇಳಿಕೊಂಡರು. ಈಗಾಗಲೇ ಕರ್ಕಿ ಸಿನಿಮಾ ಸೆನ್ಸಾರ್‌ನಿಂದ ಯು/ಎ ಪ್ರಮಾಣ ಪತ್ರ ಪಡೆದಿದೆ. ಬೇರೆ ಬೇರೆ ಜಾತಿಯ ಹುಡುಗ, ಹುಡುಗಿ ಸ್ನೇಹಿತರಾಗಿಯೂ ಇರಬಹುದು, ಅವರ ಮಧ್ಯೆ ಪ್ರೀತಿಯೇ ಇರಬೇಕೆಂಬ ನಿಯಮವಿಲ್ಲ, ಗೆಳೆತನಕ್ಕೆ ಜಾತಿ ಧರ್ಮದ ಬೇದವಿಲ್ಲ ಎಂದು ಈ ಚಿತ್ರ ಹೇಳುತ್ತದೆ. ಅರ್ಜುನ್ ಜನ್ಯ ಸಂಗೀತ, ರಿಷಿಕೇಶ್ ಛಾಯಾಗ್ರಹಣ ಈ ಚಿತ್ರಕ್ಕಿದೆ. ಸದ್ಯದಲ್ಲೇ ಚಿತ್ರ ಬೆಳ್ಳಿ ಪರದೆಯ ಮೇಲೆ ಬರಲಿದೆ.