Cini NewsMovie ReviewSandalwood

ಭ್ರಮೆಯ ಲೋಕದ ತಳಮಳದ ‘ಕೇದಾರ್ ನಾಥ್ ಕುರಿಫಾರಂ” (ಚಿತ್ರವಿಮರ್ಶೆ -ರೇಟಿಂಗ್ : 3 /5)

ರೇಟಿಂಗ್ : 3 /5
ಚಿತ್ರ : ಕೇದಾರ್ ನಾಥ್ ಕುರಿಫಾರಂ
ನಿರ್ದೇಶಕ : ಶೀನು ಸಾಗರ್
ನಿರ್ಮಾಪಕ : ಕೆ.ಎಂ ನಟರಾಜ್
ಸಂಗೀತ : ಸನ್ನಿ
ಛಾಯಾಗ್ರಹಣ : ರಾಕೇಶ್ ತಿಲಕ್
ತಾರಾಗಣ : ಮಡೆನೂರ್ ಮನು , ಶಿವಾನಿ ಅಮರ್, ಕರಿಸುಬ್ಬು, ಟೆನ್ನಿಸ್ ಕೃಷ್ಣ , ಸುನಂದ , ಸಿದ್ದು, ನಿಂಗರಾಜು, ಮುತ್ತುರಾಜ್ ಹಾಗೂ ಮುಂತಾದವರು…

ಸಾಮಾನ್ಯವಾಗಿ ಗ್ರಾಮೀಣ ಭಾಗದ ಸೊಗಡು, ನಡೆ-ನುಡಿ,
ಮಾತಿನ ಶೈಲಿ ತನ್ನದೇ ಒಂದು ಹಿಡಿತವನ್ನು ಕೊಂಡು ಕೊಂಡಿರುತ್ತದೆ. ಅಂತದ್ದೇ ಒಂದು ಊರಿನಲ್ಲಿ ಕೇದಾರ್ ನಾಥ್ ಎಂಬುವರ ಕುರಿಫಾರಂನಲ್ಲಿ ನಡೆಯುವ ಪ್ರೀತಿ , ಸಲ್ಲಾಪ , ಗೆಳೆತನ , ವ್ಯಾಮೋಹ , ಅನೈತಿಕ ಸಂಬಂಧ, ಕೊಲೆ ಹೀಗೆ ಹಲವು ಘಟನೆಗಳ ಸುತ್ತ ನಿರೀಕ್ಷಿಸಲಾಗದಂತ ಕ್ಲೈಮ್ಯಾಕ್ಸ್ ತೋರುವ ಪ್ರಯತ್ನವಾಗಿ ತೆರೆಯ ಮೇಲೆ ಬಂದಿರುವಂತಹ ಚಿತ್ರ “ಕೇದಾರನಾಥ್ ಕುರಿಫಾರಂ”.

ಕುರಿ ಸಾಗಣೆಯ ಮಾಲೀಕ ಕೇದಾರನಾಥ್ (ಕರಿಸುಬು) ಫಾರಂ ಹೌಸ್ ನೋಡಿಕೊಳ್ಳಲು ಮಂಜ ( ಮಡೆನೂರು ಮನು) ನನ್ನ ನೇಮಕ ಮಾಡಿರುತ್ತಾನೆ. ಆದರೆ ಮಂಜ ತನ್ನ ಐನಾತಿ ಮಾತಿನ ಮೂಲಕ ಹೆಣ್ ಹೈಕ್ಳನ್ನ ಪಟಾಯಿಸಿ ದೇಹ ಥಣಿಸಿಕೊಳ್ಳುವ ಕಿಲಾಡಿ. ಇವನೊಟ್ಟಿಗೆ ಎಣ್ಣೆ , ಗಾಂಜಾ ನಿಶೆಯ ಗೆಳೆಯರ ಪಟಾಲಮ್.

ಇವರ ಅಸಡ್ಡೆ ಗಮನಿಸಿ ಗಂಡ , ಹೆಂಡತಿ , ಮಗಳು ಇರುವ ಒಂದು ಬಡ ಕುಟುಂಬವನ್ನ ಕುರಿ ಫಾರಂ ಕೆಲಸಕ್ಕೆ ಸೇರಿಸುವ ಕೇದಾರನಾಥ್. ಟಗರು ಬಳಿ ಕುರಿ ಬಂದಂತೆ , ಮಂಜನ ಅಡ್ಡಕ್ಕೆ ವಸಂತಿ (ಶಿವಾನಿ) ಸಿಕ್ಕಿ ಅವನ ಕಿಟಲೆ , ತುಂಟಾಟಕ್ಕೆ ಸೆಡ್ಡು ಹೊಡೆಯುತ್ತಾಳೆ. ಆದರೂ ಮನಸಾರೆ ಪ್ರೀತಿಸಲು ಮುಂದಾಗುವ ಮಂಜ. ಇನ್ನೂ ಗಂಡನಿಗೆ ಎಣ್ಣೆಯೇ ಬದುಕು , ಹೆಂಡತಿಗೆ ಪರಪುರುಷನ ಮೋಹ. ಇದರ ನಡುವೆ ಅಜಾತುರ್ಯವಾಗಿ ನಡೆಯುವ ಕೊಲೆ ಒಂದು ಹಲವು ಪ್ರಕರಣಕ್ಕೆ ದಾರಿ ಮಾಡುತ್ತದೆ. ಅದು ಏನು… ಕೊಲೆ ಮಾಡಿದ್ದು ಯಾರು…
ಕೊಲೆಯಾದವನು ಯಾರು…
ಏನಿದು ಭ್ರಮೆಯ ಲೋಕವೇ…
ಇದಕ್ಕಾಗಿ ನೀವು ಕೇದಾರನಾಥ್ ಕುರಿಫಾರಂ ಚಿತ್ರ ನೋಡಬೇಕು.

ನಿರ್ದೇಶಕರು ಹಳ್ಳಿ ಸೊಗಡಿನ ವಾತಾವರಣವನ್ನು ನೈಜ್ಯವಾಗಿ ಕಟ್ಟಿ ಕೊಡುವ ಪ್ರಯತ್ನವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಬದುಕು , ಮೋಹ , ಕಾಮ, ಪ್ರೀತಿ , ಗೆಳೆತನ , ಕೊಲೆಯ ಸುತ್ತ ಕಾಣುವ ನಿಜವಾದ ಬದುಕು ಏನು ಎನ್ನುವುದರ ಜೊತೆಗೆ ಕ್ಲೈಮ್ಯಾಕ್ಸ್ ಯೋಚಿಸುವಂತೆ ಮಾಡಿದ್ದಾರೆ. ಚಿತ್ರಕಥೆಯ ಓಟ ಇದ್ದಲ್ಲೇ ಗಿರಿಕಿ ಹೊಡೆದಂತಿದೆ.

ಇನ್ನು ಚಿತ್ರದ ಕೇಂದ್ರ ಬಿಂದು ರಾಜೇಶ್ ಸಾಲುಂಡಿ ಸಂಭಾಷಣೆ , ಚುರುಕು ಹಾಗೂ ಸೂಕ್ಷ್ಮ ಮಾತಿನ ಬಂಡಾರವೇ ತುಂಬಿಹೋಗಿದೆ. ಸಂಗೀತ ಹಾಗೂ ಛಾಯಾಗ್ರಹಣದ ಕೆಲಸ ಉತ್ತಮವಾಗಿದ್ದು , ಗ್ರಾಮೀಣ ಸೊಗಡಿನಲ್ಲಿ ರೋಚಕ ಘಟನೆಗಳ ಚಿತ್ರ ನೀಡಿರುವ ನಿರ್ಮಾಪಕ ಕೆ. ಎಂ . ನಟರಾಜ್ ಧೈರ್ಯ ಮೆಚ್ಚುವಂಥದ್ದು , ಹಾಗೆ ನಟನೆ ಮೂಲಕ ಗಮನ ಸೆಳೆದಿದ್ದಾರೆ.

ಇನ್ನು ನಾಯಕನಾಗಿ ಅಭಿನಯಿಸಿರುವ ಮಡೆನೂರ್ ಮನು ತಮಗೆ ಸಿಕ್ಕ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದರ ಜೊತೆಗೆ ಕಾಮಿಡಿ ಕಿಲಾಡಿಗಳು ಗುಂಗಿನಿಂದ ಹೊರಬಂದಂತೆ ಕಾಣುತ್ತಿಲ್ಲ. ನಟಿ ಶಿವಾನಿ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇನ್ನು ಹಿರಿಯ ನಟ ಕರಿಸುಬ್ಬು ಪಾತ್ರ ಇಡೀ ಚಿತ್ರದ ಹೈಲೈಟ್.

ಎಣ್ಣೆ ಗಿರಾಕಿ ಪಾತ್ರದಲ್ಲಿ ಟೆನಿಸ್ ಕೃಷ್ಣ, ದುಡ್ಡು , ವ್ಯಾಮೋಹದ ಗುಂಗಿನ ಪಾತ್ರದಲ್ಲಿ ಸುನಂದ ಹೊಸಪೇಟೆ, ಗೆಳೆಯರ ಪಟಾಲಮ್ಮ ನಲ್ಲಿ ಮುತ್ತುರಾಜ್ ಗಡ್ಡಪ್ಪ , ನಿಂಗರಾಜು ಮಜಾ ಭಾರತ, ಸಿದ್ದು ಮಂಡ್ಯ ಸೇರಿದಂತೆ ಎಲ್ಲಾ ಕಲಾವಿದರು ಚಿತ್ರದ ಓಟಕ್ಕೆ ಸಾತ್ ನೀಡಿದ್ದಾರೆ. ಗ್ರಾಮೀಣ ಕಥಾನಕದ ರೋಚಕ ತಿರುವಿನ ಈ ಚಿತ್ರವನ್ನು ಒಮ್ಮೆ ನೋಡಬಹುದು.

error: Content is protected !!