Cini NewsMovie ReviewSandalwood

ಕಿಚ್ಚಿನ ಸುಳಿಯಲ್ಲಿ ಸತ್ಯದ ದರ್ಶನ : ಕೆಂಡ ಚಿತ್ರವಿಮರ್ಶೆ (ರೇಟಿಂಗ್ : 3.5 /5)

ರೇಟಿಂಗ್ : 3.5 /5

ಚಿತ್ರ : ಕೆಂಡ
ನಿರ್ದೇಶಕ : ಸಹದೇವ ಕೆಲವಡಿ
ನಿರ್ಮಾಪಕಿ : ರೂಪಾ ರಾವ್
ಸಂಗೀತ : ರಿತ್ವಿಕ್ ಕಾಯ್ಕಿಣಿ
ಛಾಯಾಗ್ರಹಣ : ಸಹದೇವ
ತಾರಾಗಣ : ಬಿ.ವಿ.ಭರತ್, ಪ್ರಣವ್ ಶ್ರೀಧರ್, ವಿನೋದ್ ರವೀಂದ್ರನ್, ಗೋಪಾಲಕೃಷ್ಣ ದೇಶಪಾಂಡೆ, ಸಚಿನ್ ಶ್ರೀನಾಥ್, ಬಿಂದು ರಕ್ಷಿದಿ, ಶರತ್ ಗೌಡ, ಸತೀಶ್ ಕುಮಾರ್, ಅರ್ಚನ ಶ್ಯಾಮ್, ಪೃಥ್ವಿ ಬನವಾಸಿ, ದೀಪ್ತಿ ನಾಗೇಂದ್ರ, ರೇಖಾ ಕೂಡ್ಲಿಗಿ, ಪ್ರಭಾಕರ್ ಜೋಶಿ ಹಾಗೂ ಮುಂತಾದವರು…

ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ಒಂದಷ್ಟು ನೈಜ ಘಟನೆಗಳನ್ನು ಕುತೂಹಲಕಾರಿಯಾಗಿ ಕಥೆಯನ್ನು ಬೆಸೆದುಕೊಂಡು ಮಧ್ಯಮ ವರ್ಗದವರ ಬದುಕು , ಬವಣೆ , ಪುಡಿ ರೌಡಿಗಳ ಕೈಚಳಕ , ಬುದ್ಧಿಜೀವಿಗಳ ಕೂಗು, ಪತ್ರಿಕೆಯ ಸಂಪಾದಕರು , ರಾಜಕೀಯ, ರೈತರ ನೋವು ,
ಕುಗ್ಗಿದ ಮನಸುಗಳ ತಳಮಳ , ಭವಿಷ್ಯದ ದಿಕ್ಕು ಹೀಗೆ ಹಲವು ವಿಚಾರಗಳನ್ನು ಸೆರಿಗಿನಲ್ಲಿ ಕಟ್ಟಿಕೊಂಡು ಈ ವಾರ ತೆರೆಯ ಮೇಲೆ ಬಂದಿರುವಂತಹ ಚಿತ್ರ “ಕೆಂಡ”. ದುಡಿದರೆ ಜೀವನ ಎಂಬಂತೆ ಸ್ಟೀಲ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ಕೇಶವ ( ಬಿ. ವಿ. ಭರತ್) ಬೆಂಕಿಯ ಜೊತೆ ಜೀವನ.

ತಂದೆ ತಾಯಿ ಇದ್ದರೂ ತನ್ನ ಬದುಕೆ ನಿಷ್ಪ್ರಯೋಜಕ ಎನ್ನುವಂತಿರುತ್ತಾನೆ. ಇದರ ನಡುವೆ ಮರು ಧ್ವನಿ ಸಂಪಾದಕ ನರಸಿಂಹ ಶಾಸ್ತ್ರಿ ಭಾಷಣದಲ್ಲಿ ಆಕರ್ಷಣೆ ಮತ್ತು ತಿರಸ್ಕಾರ ನಮ್ಮ ಶತ್ರು , ನಮ್ಮ ಅಗತ್ಯತೆ , ಬೇಡಿಕೆಗೆ ಧ್ವನಿ ಎತ್ತಬೇಕು , ಅನ್ಯಾಯದ ವಿರುದ್ಧ ಹೋರಾಡಬೇಕೆಂಬ ತತ್ವ ಸಿದ್ಧಾಂತಗಳನ್ನ ಗಮನಿಸಿ , ನಂತರ ಗೆಳೆಯ ವಿನಯ್ ಮೂಲಕ ಸಂಪಾದಕರನ್ನು ಭೇಟಿ ಮಾಡುತ್ತಾನೆ. ಜೀವನಕ್ಕೆ ಹಣವೇ ಮೂಲ ಎನ್ನುತ್ತಾ ಗೆಳೆಯರೊಂದಿಗೆ ಸೇರಿ ಸಮಾರಂಭದಲ್ಲಿ ಗಲಾಟೆ , ಮದ್ದು ಗುಂಡಿನ ಸದ್ದು, ದಾಂಧಲೆ , ಚಿತ್ರಮಂದಿರದ ಮುಂದೆ ಅಶಾಂತಿಯ ಮೂಡಿಸುತ್ತಾ ಸಾಗುವ ಕೇಶವ.

ಇನ್ನು ಸಂಪಾದಕರ ವರ್ಚಸ್ಸು , ನುಡಿಗಳನ್ನು ಅರ್ಥೈಸಿಕೊಳ್ಳುವುದಕ್ಕೆ ಕಷ್ಟ ಎನಿಸಿದರು , ಅವರ ಮನಸ್ಥಿತಿ , ಆಲೋಚನೆಯ ದೃಷ್ಟಿಕೋನವನ್ನು ಗಾಢವಾಗಿ ಗಮನಿಸುತ್ತಾ ಬರುತ್ತಾನೆ. ಇನ್ನು ನರಸಿಂಹ ಶಾಸ್ತ್ರೀ(ವಿನೋದ್ ರವೀಂದ್ರನ್) ಜೊತೆಗಿರುವ ಶಂಕರ್(ಗೋಪಾಲಕೃಷ್ಣ ದೇಶಪಾಂಡೆ) ಮತ್ತು ಸಹಚರರ ಕಾರ್ಯವೈಖರಿ ಸರಿ,ತಪ್ಪುಗಳ ನಡುವೆ ಯಾರಿಗಾಗಿ ಹೋರಾಟ , ಬದುಕು, ಅಗತ್ಯತೆ , ವಿಚಾರ , ನೆಲೆ , ಅಸ್ತಿತ್ವ, ಪರಿಸ್ಥಿತಿಗಳ ಸುಳಿಯಲ್ಲಿ ಸಿಕ್ಕಿ ಹಾಕಿಕೊಳ್ಳುವ ಕೇಶವನ ರೋಚಕ ಬದುಕಿನ ಪಯಣದಲ್ಲಿ ಕಟು ಸತ್ಯಗಳ ದರ್ಶನವನ್ನು ಮಾಡಿಸುತ್ತದೆ. ಕೆಂಡ ಏನು…ಯಾವೆಲ್ಲ ವಿಚಾರ ತಿಳಿಯುತ್ತೆ… ಯಾವುದು ಸರಿ.. ತಪ್ಪು..
ಕ್ಲೈಮ್ಯಾಕ್ಸ್ ಹೇಳುವುದು ಏನು..

ಸಮಾಜದಲ್ಲಿ ನಡೆಯುವ ಒಂದಷ್ಟು ರೋಚಕ ಘಟನೆಗಳ ಸುತ್ತ ಬೆಸೆದುಕೊಂಡು, ಬದುಕು , ದಿಕ್ಕು ಎಲ್ಲಿಗೆ ಮುಟ್ಟಿದೆ ಎಂಬುವುದರ ಜೊತೆಗೆ ಪುಡಿ ರೌಡಿಗಳ ಆರ್ಭಟ , ಸಾತ್ ಕೊಡುವವರ ಕೈಚಳಕ , ದಿಕ್ಕು ತಪ್ಪಿಸುತ್ತಿರುವವರ ನಡುವೆ ಜೀವನ ಎಷ್ಟು ಗೊಂದಲ ಎಂಬುದನ್ನ ಸೂಕ್ಷ್ಮವಾಗಿ ತೆರೆಯ ಮೇಲೆ ತಂದಿದ್ದಾರೆ ನಿರ್ದೇಶಕ ಸಹದೇವ ಕೆಲವಡಿ . ನಿಧಾನ ಗತಿಯಲ್ಲಿ ಸಾಗುವ ಚಿತ್ರಕಥೆ ಹಿಡಿತ ತಪ್ಪಿದಂತಿದೆ.

ಜಾಗೃತಿ ಮೂಡಿಸುವಂತಹ ಚಿತ್ರವನ್ನ ನಿರ್ಮಿಸಿರುವ ನಿರ್ಮಾಪಕರ ಆಲೋಚನೆ ಮೆಚ್ಚುವಂಥದ್ದು, ಸಂಗೀತ ಜೀವ ನೀಡಿದ್ದು , ಛಾಯಾಗ್ರಾಹಕರ ಕೆಲಸವು ಗಮನ ಸೆಳೆಯುತ್ತದೆ. ಇನ್ನೂ ಪ್ರಮುಖ ಪಾತ್ರದಲ್ಲಿ ಮಾಡಿರುವ ಬಿ.ವಿ. ಭರತ್ ನೈಜಕ್ಕೆ ಒತ್ತು ಕೊಟ್ಟು ಅಭಿನಯಿಸಲು ಬಹಳ ಶ್ರಮಪಟ್ಟಿದ್ದಾರೆ. ಇನ್ನಷ್ಟು ತಾಲಿಮು ಅಗತ್ಯ ಅನಿಸುತ್ತದೆ. ವಿಶೇಷವಾಗಿ ಪತ್ರಿಕಾ ಸಂಪಾದಕರ ಪಾತ್ರ ಮಾಡಿರುವ ವಿನೋದ್ ರವೀಂದ್ರನ್ ಅದ್ಭುತವಾಗಿ ನಟಿಸಿದ್ದು , ತಮ್ಮ ಪಾತ್ರಕ್ಕೆ ನ್ಯಾಯವನ್ನು ನೀಡಿದ್ದಾರೆ.

ಎಂದಿನಂತೆ ಗೋಪಾಲಕೃಷ್ಣ ದೇಶಪಾಂಡೆ ಕೂಡ ತಮ್ಮ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಇನ್ನುಳಿದಂತೆ ಅಭಿನಯಿಸಿರುವ ಎಲ್ಲಾ ಪಾತ್ರದಾರಿಗಳು ಕೂಡ ಚಿತ್ರದ ಓಟಕ್ಕೆ ಸಾತ್ ನೀಡಿದ್ದಾರೆ. ಇದೊಂದು ವಿಭಿನ್ನ ಸಿನಿಮಾವಾಗಿದ್ದು , ಸಿದ್ಧ ಸೂತ್ರಗಳನ್ನ ಬಿಟ್ಟು ಪ್ರಸ್ತುತ ಸಮಾಜಕ್ಕೆ ಕಾಡುವಂತ ಕನ್ನಡಿ ಎಂಬಂತೆ ಹೊರ ಬಂದಿದೆ. ಸೂಕ್ಷ್ಮ ಹಾಗೂ ಶಾಂತ ಚಿತ್ತದಿಂದ ನೋಡುವವರಿಗೆ ಇಷ್ಟವಾಗುವ ಈ ಚಿತ್ರವನ್ನು ಎಲ್ಲರೂ ಒಮ್ಮೆ ನೋಡಬಹುದು

error: Content is protected !!