ಯುವ ಪ್ರತಿಭೆಗಳ “ಖಾಲಿ ಡಬ್ಬ“ ಟೈಟಲ್ ಸಾಂಗ್ ರಿಲೀಸ್
ಖಾಲಿ ಡಬ್ಬ ಹೀಗೊಂದು ಟೈಟಲ್ ನಡಿ ಸಿನಿಮಾ ಬರ್ತಿದೆ. ಒಂದಷ್ಟು ವರ್ಷಗಳ ಕಾಲ ಅಸಿಸ್ಟೆಂಟ್ ಹಾಗೂ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿ ಅನುಭವವಿರುವ ಪ್ರಕಾಶ್ ಕೆ ಅಂಬ್ಳೆ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಮೂಲಕ ಪೂರ್ಣ ಪ್ರಮಾಣ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ಪ್ರಕಾಶ್ ಮೊದಲ ಕನಸಿಗೆ ಮಂಜು ಗುರಪ್ಪ ಹಣ ಹಾಕಿದ್ದು, ರಾಮ್ ಗುಡಿ ನಾಯಕನಾಗಿ ನಟಿಸಿದ್ದು, ಆದ್ಯಾ ಪ್ರಿಯಾ ಹರಿತಾ ನಾಯಕಿಯರಾಗಿ ಬಣ್ಣ ಹಚ್ಚಿದ್ದಾರೆ. ಈ ಚಿತ್ರದ ಟೈಟಲ್ ಸಾಂಗ್ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನ ಎಸ್ ಆರ್ ವಿ ಥಿಯೇಟರ್ ನಲ್ಲಿ ನಿನ್ನೆ ಹಮ್ಮಿಕೊಳ್ಳಲಾಗಿತ್ತು. ಚಿತ್ರತಂಡ ತಂಡ ಭಾಗಿಯಾಗಿ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದೆ.
ಈ ವೇಳೆ ಮಾತನಾಡಿದ ನಿರ್ದೇಶಕ ಪ್ರಕಾಶ್ ಕೆ (ಅಂಬ್ಳೆ), ಈ ಸಿನಿಮಾದಲ್ಲಿ ಖಾಲಿ ಡಬ್ಬ ಕೂಡ ಒಂದು ಪಾತ್ರ. ವಯಸ್ಸು ಸಮಯ ಮೀರಿದೆ ಪ್ರತಿಯೊಬ್ಬರ ಲೈಫು ಖಾಲಿ. ಹೀಗಾಗಿ ಚಿತ್ರಕ್ಕೆ ಖಾಲಿ ಡಬ್ಬ ಎಂದು ಹೆಸರು ಇಡಲಾಗಿದೆ. ಈ ಹಿಂದೆ ಹತ್ತು ಸಿನಿಮಾಗಳಲ್ಲಿ ಅಸಿಸ್ಟೆಂಟ್ ಹಾಗೂ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದೇನೆ. ಈ ಅನುಭವದಿಂದ ಈಗ ನಿರ್ದೇಶನಕ್ಕಿಳಿದಿದ್ದೇನೆ. ಚಿತ್ರಕಥೆ, ಸಂಭಾಷಣೆ ಬರೆದು ಸಿನಿಮಾ ನಿರ್ದೇಶನ ಮಾಡುತ್ತಿದ್ದೇನೆ,. ಐದು ಹಾಡುಗಳಿಗೆ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದು ಸಂಗೀತ ನಿರ್ದೇಶನ ಮಾಡಿದ್ದಾರೆ. ಇಡೀ ತಂಡಕ್ಕೆ ನಾಗೇಂದ್ರ ಪ್ರಸಾದ್ ಬೆನ್ನೆಲುಬಾಗಿ ನಿಂತಿದ್ದಾರೆ ಎಂದರು,
ನಟ ರಾಮ್ ಗುಡಿ ಮಾತನಾಡಿ, ಖಾಲಿ ಡಬ್ಬ ಟೈಟಲ್ ಇಟ್ಟಾಗ್ಲೇ ನೆಗೆಟಿವ್ ಟಾಕ್ ಆಗಿತ್ತು. ಇನ್ನೂ ಕೆಲವರು ಚೆನ್ನಾಗಿದೆ ಎಂದರು. ಮೂಲ ಕಥೆಗಾರರು ಜೀವನವೊಂದು ಖಾಲಿ ಡಬ್ಬಾ ಅಂತಾ ಇಡೀ ಎಂದರು. ಇದು ಕೇವಲ ಸಿನಿಮಾವಲ್ಲ. ತೇರು ಇದ್ದಂಗೆ. ಎಲ್ಲರೂ ಕೈ ಜೋಡಿಸಿದರು. ಸರಿಯಾದ ಸಮಯಲ್ಲಿ ಸರಿಯಾದ ನಿರ್ಧಾರ ತೆಗೆದುಕೊಂಡರೆ ಮಾತ್ರ ಜೀವನವೆಂಬ ಡಬ್ಬ ತುಂಬುತ್ತದೆ, ಇಲ್ಲ ಎಂದರೆ ಜೀವನೇ ಖಾಲಿ ಡಬ್ಬವಾಗುತ್ತದೆ ಎಂದರು.
ವಿ.ನಾಗೇಂದ್ರ ಪ್ರಸಾದ್ ಮಾತನಾಡಿ, ಡೈರೆಕ್ಟರ್ ಹೇಳಿದಂತೆ ಸಿನಿಮಾದಲ್ಲಿ ಖಾಲಿ ಡಬ್ಬಾ ಅಕ್ಷಶರಃ ಪಾತ್ರ. ಡಬ್ಬವನ್ನು ಸಂಕೇತವಾಗಿ ಇಟ್ಟುಕೊಂಡು ಕಥೆ ಹೇಳಲಾಗಿದೆ. ಎಮೋಷನಲ್, ಲವ್, ಫ್ಯಾಮಿಲಿ ಎಲ್ಲಾ ಇರುವಂತಹ ಕಥೆ,. ಕಾಲ್ಪನಿಕ ಅನಿಸಿದ್ರೂ ವಾಸ್ತವ ಅನಿಸುವ ಕಥೆ ಚಿತ್ರದಲ್ಲಿದೆ. ಈ ಸಿನಿಮಾದಲ್ಲಿನಟ ಅದ್ಭುತವಾಗಿ ನಟಿಸಿದ್ದಾರೆ. ನಾಯಕಿಯರು ಇಬ್ಬರು ಚೆನ್ನಾಗಿ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಒಳ್ಳೆ ಹಾಡುಗಳು ಬಿದ್ದಿವೆ ಎಂದು ತಿಳಿಸಿದರು.
ಖಾಲಿ ಡಬ್ಬ ಸಿನಿಮಾದ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಬೆಂಗಳೂರು ಮಂಡ್ಯ ಮೈಸೂರು ಸುತ್ತಮುತ್ತ ಶೂಟಿಂಗ್ ನಡೆಸಲಾಗಿದೆ. ಕುರಿ ಪ್ರತಾಪ್, ಮಜಾಭಾರತ ಸೀತಾರಾಮ್, ಸುಧಾ, ಹನುಮಕ್ಕ ಹಾಗೂ ವಿ ನಾಗೇಂದ್ರ ಪ್ರಸಾದ್ ತಾರಾಬಳಗದಲ್ಲಿದ್ದಾರೆ. ವಿಶೇಷ ಪಾತ್ರದ ಜೊತೆಗೆ ಈ ಚಿತ್ರಕ್ಕೆ ಸಾಹಿತ್ಯ ಬರೆದು ಹಾಡುಗಳಿಗೆ ಸಂಗೀತವನ್ನು ನಾಗೇಂದ್ರ ಪ್ರಸಾದ್ ಒದಗಿಸಿದ್ದಾರೆ. ಎಸ್ ಯು ಎ ಎಂಟರ್ ಟೈನ್ಮೆಂಟ್ ನಡಿ ಮಂಜು ಗುರಪ್ಪ ನಿರ್ಮಾಣ ಮಾಡಿದ್ದು, ಅಪ್ಪಾಜಿ, ಸೌಮ್ಯಾ ರಾಮ್, ಲಕ್ಷ್ಮೀ ಮಹೇಂದ್ರ, ಚಿಕ್ಕೇಗೌಡ ನಿರ್ಮಾಣದಲ್ಲಿ ಸಾಥ್ ಕೊಟ್ಟಿದ್ದಾರೆ.
ಲಕ್ಕಿ ಕ್ಯಾಮೆರಾ ಹಿಡಿದಿದ್ದು, ವೆಂಕಟ್ ಯುಡಿವಿ ಸಂಕಲನ, ಗಿರೀಶ್ ನೃತ್ಯ ಸಂಯೋಜನೆ ಖಾಲಿ ಡಬ್ಬಾ ಚಿತ್ರಕ್ಕಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿ ಸೆನ್ಸಾರ್ ಅಂಗಳದಲ್ಲಿರುವ ಚಿತ್ರ ಆದಷ್ಟು ಬೇಗ ನಿಮ್ಮ ಮುಂದೆ ಬರಲಿದೆ.