Cini NewsSandalwood

“ಯಲಾಕುನ್ನಿ”ಯ ವಜ್ರಮುನಿ ಗೆಟಪ್ ಟೀಸರ್ ವೈರಲ್

ಸೌಂದರ್ಯ ಸಿನಿ ಕಂಬೈನ್ಸ್ ಹಾಗೂ ನರಸಿಂಹ ಸಿನಿಮಾಸ್ ಲಾಂಛನದಲ್ಲಿ ಅನುಸೂಯ ಕೋಮಲ್ ಕುಮಾರ್, ಸಹನ ಮೂರ್ತಿ ರವರು ನಿರ್ಮಿಸಿರುವ, ಹೊಸ ಪ್ರತಿಭೆ N R ಪ್ರದೀಪ್ ಕಥೆ, ಚಿತ್ರಕಥೆ, ಸಾಹಿತ್ಯ,ಸಂಭಾಷಣೆ ಬರೆದು ನಿರ್ದೇಶಿಸಿರುವ ಹಾಗೂ ಕೋಮಲ್ ಕುಮಾರ್ ನಾಯಕರಾಗಿ ನಟಿಸಿರುವ “ಯಲಾಕುನ್ನಿ” ಚಿತ್ರದ ಟೀಸರ್ ಇತ್ತೀಚೆಗೆ ನಡೆದ “ಗಿಚ್ಚಿ ಗಿಲಿಗಿಲಿ” ಫೈನಲ್ ನಲ್ಲಿ ಬಿಡುಗಡೆಯಾಯಿತು.

ಕೋಮಲ್ ಕುಮಾರ್ ಸ್ಟುಡಿಯೋಸ್ ಯೂಟ್ಯೂಬ್ ಚಾನಲ್ ನಲ್ಲಿ ಈ ಚಿತ್ರದ ಟೀಸರ್ ಲಭ್ಯವಿದೆ. ಟೀಸರ್ ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದ್ದು, ಕೋಮಲ್ ಕುಮಾರ್ ಅವರ ವಜ್ರಮುನಿ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಸದ್ಯದಲ್ಲೇ ಈ ಚಿತ್ರ ಬಿಡುಗಡೆ ಯಾಗಲಿದೆ‌. “ಯಲಾಕುನ್ನಿ” ಚಿತ್ರಕ್ಕೆ ‘ಮೇರಾ ನಾಮ್ ವಜ್ರಮುನಿ’ ಎಂಬ ಅಡಿಬರಹವಿದೆ.

error: Content is protected !!