Cini NewsSandalwood

“ಕೋಟಿ” ಚಿತ್ರ ಯಶಸ್ವಿ ಪ್ರದರ್ಶನ

ಪ್ರೇಕ್ಷಕರಿಂದ ಮೆಚ್ಚುಗೆಯನ್ನು ಪಡೆದು ಯಶಸ್ವಿ ಎರಡನೇ ವಾರದಲ್ಲಿ ರಾಜ್ಯಾದ್ಯಂತ ಅದ್ದೂರಿಯಾಗಿ ಪ್ರದರ್ಶನ ಕಾಣುತ್ತಿರುವಂತಹ ಚಿತ್ರ “ಕೋಟಿ”. ಒಬ್ಬ ಮಧ್ಯಮ ವರ್ಗದ ಕುಟುಂಬದ ಕಾಮನ್ ಮ್ಯಾನ್ ಪಾತ್ರದಲ್ಲಿ ನಟರಾಕ್ಷಸ ಡಾಲಿ ಧನಂಜಯ ಚಿತ್ರ ಪ್ರೇಮಿಗಳ ಮನಸ್ಸನ್ನು ಗೆದ್ದಿದ್ದಾರೆ.

ಇನ್ನೂ ಕೊಡಗಿನ ಬೆಡಗಿ ಮೋಕ್ಷ ಕುಶಾಲ್ ಕೂಡ ಸುಂದರವಾಗಿ ತೆರೆಯ ಮೇಲೆ ಮಿಂಚಿದ್ದಾರೆ. ಇನ್ನು ಈ ಚಿತ್ರದ ಹೈಲೈಟ್ , ಖಳನಾಯಕ ರಮೇಶ್ ಇಂದಿರಾ ಅಭಿನಯವನ್ನು ಚಿತ್ರ ಪ್ರೇಮಿಗಳು ಸೇರಿದಂತೆ ಸಿನಿಮಾ ಸೆಲೆಬ್ರಿಟಿಸ್ ಕೂಡ ಕೊಂಡಾಡಿದ್ದಾರೆ. ಹಾಗೆಯೇ ರಂಗಾಯಣ ರಘು, ತಾರಾ ನಟನೆ, ರೋಚಕ ಕ್ಲೈಮ್ಯಾಕ್ಸ್ ‌ಮತ್ತು ದುನಿಯಾ ವಿಜಯ್ ವಿಶೇಷ ಪಾತ್ರದ ಮೂಲಕ ಪ್ರೇಕ್ಷಕರಿಗೆ ಕಿಕ್ ಕೊಡುತ್ತದೆ.

ಈಗಾಗಲೇ ಈ ಚಿತ್ರವನ್ನ ಚಿತ್ರೋದ್ಯಮದ ತಾರೆಯರು ಹಾಗೂ ರಾಜಕೀಯದ ಗಣ್ಯರು ಸೇರಿದಂತೆ ಹಲವಾರು ನೋಡಿ ಈ ಚಿತ್ರ ಎಲ್ಲಾ ವರ್ಗದವರಿಗೂ ಇಷ್ಟವಾಗಲಿದೆ ಎಂದು ಮೆಚ್ಚಿಕೊಂಡಿದ್ದಾರೆ.

ತಮ್ಮ ಪ್ರಥಮ ಪ್ರಯತ್ನದಲ್ಲೇ ಪರಮ್ ಯಶಸ್ವಿ ನಿರ್ದೇಶಕ ಎಂಬ ಪ್ರಶಂಸೆಯನ್ನು ಪಡೆಯುತ್ತಾ ಎಲ್ಲರಿಂದ ಮೆಚ್ಚುಗೆಯನ್ನು ಗಳಿಸಿದ್ದಾರೆ. ಇದೊಂದು ಫ್ಯಾಮಿಲಿ ಆಡಿಯನ್ಸ್ ಇಷ್ಟವಾಗುವಂತ ಸಿನಿಮಾವನ್ನು ನೀಡಿದ್ದು , ಈ ಚಿತ್ರಕ್ಕಾಗಿ ಬಹಳಷ್ಟು ಪೂರ್ವ ತಯಾರಿಯನ್ನ ಮಾಡಿಕೊಂಡು ಬಂದಿದ್ದಕ್ಕೂ ಸಾರ್ಥಕ ಎನ್ನುವಂತಿದೆ.

ಈ ಕೋಟಿ ಚಿತ್ರದಲ್ಲಿ ಐದು ಹಾಡುಗಳಿದ್ದು, ವಾಸುಕಿ ವೈಭವ್‌ ಸಂಗೀತ ಹಾಗೂ ಹಿನ್ನೆಲೆ ಸಂಗೀತ ನೊಬಿನ್‌ ಪೌಲ್‌ ಕೆಲಸ ಗಮನ ಸೆಳೆಯುತ್ತದೆ. ಪ್ರತೀಕ್‌ ಶೆಟ್ಟಿ ಸಂಕಲನ , ಅರುಣ್ ಛಾಯಾಗ್ರಾಹಣ ಉತ್ತಮವಾಗಿ ಮೂಡಿ ಬಂದಿದೆ. ಈ ಒಂದು ಚಿತ್ರವನ್ನು ಅದ್ದೂರಿಯಾಗಿ ಜಿಯೋ ಸ್ಟುಡಿಯೋಸ್ ನಿರ್ಮಾಣ ಮಾಡಿದೆ. ಒಟ್ನಲ್ಲಿ ಈ ಕೋಟಿ ಚಿತ್ರ ಬಿಡುಗಡೆಗೊಂಡ ಎಲ್ಲಾ ಕೇಂದ್ರಗಳಲ್ಲೂ ಉತ್ತಮ ಪ್ರದರ್ಶನವನ್ನು ಕಾಣುತ್ತಿದ್ದು , ರಾಜ್ಯದ್ಯಂತ ಯಶಸ್ವಿ 25ನೇ ದಿನದತ್ತ ಮುನ್ನುಗುತಿದೆ.

error: Content is protected !!