Cini NewsMovie ReviewSandalwood

ಪ್ರೀತಿಯ ಬೆಸುಗೆಯ ಸೆಳೆತ ಕೃಷ್ಣಂ ಪ್ರಣಯ ಸಖಿ (ಚಿತ್ರವಿಮರ್ಶೆ – ರೇಟಿಂಗ್ : 3.5 /5)

ರೇಟಿಂಗ್ : 3.5 /5
ಚಿತ್ರ : ಕೃಷ್ಣಂ ಪ್ರಣಯ ಸಖಿ
ನಿರ್ದೇಶಕ : ಶ್ರೀನಿವಾಸ ರಾಜು ನಿರ್ಮಾಪಕ : ಪ್ರಶಾಂತ್ ಜಿ ರುದ್ರಪ್ಪ
ಸಂಗೀತ : ಅರ್ಜುನ್ ಜನ್ಯ ಛಾಯಾಗ್ರಹಣ : ವೆಂಕಟ್ ರಾಮ್
ತಾರಾಗಣ : ಗೋಲ್ಡನ್ ಸ್ಟಾರ್ ಗಣೇಶ್, ಮಾಳವಿಕ ನಾಯರ್,
ಶರಣ್ಯ ಶೆಟ್ಟಿ, ಸಾಧು ಕೋಕಿಲ, ರಂಗಾಯಣ ರಘು , ಗಿರಿ , ಕುರಿ ಪ್ರತಾಪ್ , ಶಶಿಕುಮಾರ್ , ರಾಮಕೃಷ್ಣ, ಅಶೋಕ್ , ಶೃತಿ, ಭಾವನಾ ರಾಮಣ್ಣ ಹಾಗೂ ಮುಂತಾದವರು…

ಯಾವಾಗ ಯಾರು ಯಾರನ್ನ ನೋಡಿ ಪ್ರೀತಿ ಚಿಗುರು ಒಡೆಯುತ್ತೆ , ಅನ್ನೋದನ್ನ ಹೇಳೋದೆ ಕಷ್ಟ. ಶ್ರೀಮಂತರು ಬಡವರು ಅನ್ನೋ ಭೇದವಿಲ್ಲದ ಈ ನಿಷ್ಕಲ್ಮಶ ಪ್ರೀತಿಯ ಸೆಳೆತದ ನಡುವೆ ಕೂಡು ಕುಟುಂಬದ ಬದುಕಿನಲ್ಲಿ ಎದುರಾಗುವ ಒಂದು ಆಕ್ಸಿಡೆಂಟ್ ಒಂದಷ್ಟು ಗೊಂದಲಗಳ ನಡುವೆ ಪ್ರೀತಿ , ಸ್ನೇಹ , ಬಾಂಧವ್ಯ , ದ್ವೇಷ , ಹಾಸ್ಯದ ನಡುವೆ ಸಾಗುತ್ತಾ ಎಲ್ಲರ ಗಮನ ಸೆಳೆಯಲು ಈ ವಾರ ತೆರೆಯ ಮೇಲೆ ಬಂದಿರುವಂತಹ ಚಿತ್ರ “ಕೃಷ್ಣಂ ಪ್ರಣಯ ಸಖಿ “.

ಕೃಷ್ಣ ಗ್ರೂಪ್ಸ್ ಆಫ್ ಕಂಪನಿ ಮಾಲೀಕ ಕೃಷ್ಣ (ಗಣೇಶ್) ಒಂದು ದೊಡ್ಡ ಕೂಡು ಕುಟುಂಬದ ಮನೆ ಮಗ. ಆತನಿಗಾಗಿ ಮುದ್ದಾದ ಹುಡುಗಿಯನ್ನು ಹುಡುಕುವ ಮನೆಯ ಪ್ರತಿಯೊಬ್ಬರಿಗೂ ಒಪ್ಪಿಗೆ ಆಗಬೇಕು ಎಂಬ ನಿಲುವು. ಕನಸಿನಲ್ಲೂ ಹುಡುಗಿಯರ ದಂಡೆ ಕಾಣುವ ಕೃಷ್ಣನಿಗೆ ಮದುವೆ ಆಗುವ ಆಲೋಚನೆ. ಕೃಷ್ಣನಿಗೆ ಸಾತ್ ನೀಡುವ ಮ್ಯಾನೇಜರ್ (ಸಾಧುಕೋಕಿಲ) ಸಹಾಯಕ (ಗಿರಿ) ಒಂದಷ್ಟು ಐಡಿಯಾಗಳ ಸುರಿಮಳೆಯನ್ನೇ ನೀಡುತ್ತಾರೆ.

ಅಚಾನಕ್ಕಾಗಿ ಮುದ್ದಾದ ಸುಂದರಿ ಪ್ರಣಯ (ಮಾಳವಿಕಾ ನಾಯರ್) ಳನ್ನ ನೋಡುತ್ತಾನೆ. ಆಕೆ ಬೆಳಕು ಆಶ್ರಮದಲ್ಲಿ ವಾಸ ಮಾಡುತ್ತ ಹಿರಿಯರು ಮಕ್ಕಳೊಂದಿಗೆ ಹೂ ಗಿಡಗಳ ನರ್ಸರಿ ನೋಡಿಕೊಳ್ಳುತ್ತಿರುತ್ತಾಳೆ.

ಹೀಗೆ ನ ಪ್ರೀತ್ಸುವ ಸಲುವಾಗಿ ತನ್ನ ಶ್ರೀಮಂತಿಕೆ ವಿಚಾರವನ್ನು ಮುಚ್ಚಿಟ್ಟು , ಆಕೆಯ ಬಳಿ ಕಾರ್ ಡ್ರೈವರ್ ಆಗಿ ಕೆಲಸಕ್ಕೆ ಸೇರುತ್ತಾನೆ. ಇನ್ನು ಮತ್ತೊಂದೆಡೆ ಕೃಷ್ಣನ ಪ್ರೀತಿಸುವ ಜಾನವಿ (ಶರಣ್ಯ ಶೆಟ್ಟಿ) ಕುಟುಂಬಕ್ಕೂ ಹಾಗೂ ಕೃಷ್ಣನ ಕುಟುಂಬಕ್ಕೂ ಹಿಂದಿನ ಒಂದು ಹಳೆಯ ಸಂಬಂಧದ ಗೊಂದಲ. ಕೃಷ್ಣ ಹಾಗೂ ಪ್ರಣಯ ಒಡನಾಟ , ಪ್ರೀತಿ , ಸಲುಗೆ ಮದುವೆಗೆ ದಾರಿ ಮಾಡಿಕೊಟ್ಟು , ಎರಡು ಹೃದಯಗಳ ಬೆಸುಗೆಯ ಸರಳ ವಿವಾಹದ ಕುವೆಂಪು ರವರ ಪರಿಕಲ್ಪನೆಯ ಮಂತ್ರ ಮಾಂಗಲ್ಯ ಹಾದಿಯಲ್ಲಿ ಕುಟುಂಬದವರ ಸಮ್ಮುಖದಲ್ಲಿ ಕೃಷ್ಣ ಹಾಗೂ ಪ್ರಣಯ ಮದುವೆಯಾಗುತ್ತಾರೆ. ಇದರ ನಡುವೆ ಆಶ್ರಮದ ಜಾಗದ ವಿಚಾರವು ಗೊಂದಲ ಮೂಡಿರುತ್ತದೆ.

ಒಮ್ಮೆ ಜೋಡಿಗಳು ಕಾರಿನಲ್ಲಿ ಹೋಗುವಾಗ ಆಕ್ಸಿಡೆಂಟ್ ಮಾಡಿ ಹೊಡೆದಾಟದಲ್ಲಿ ಇಬ್ಬರಿಗೂ ಬಲವಾದ ಹೊಡೆತ ಬೀಳುತ್ತದೆ. ಇದರಿಂದ ಪ್ರಣಯ ಹುಷಾರಾದರು , ಕೃಷ್ಣ ತನ್ನ ಆರು ತಿಂಗಳ ಹಿಂದೆ ನಡೆದ ನೆನಪಿನ ಶಕ್ತಿಯನ್ನು ಕಳೆದುಕೊಂಡಿರುತ್ತಾನೆ. ಮನೆ ಮನೆಯವರನ್ನೆಲ್ಲ ಗುರುತಿಸುವ ಕೃಷ್ಣ ತನ್ನ ಮದುವೆ ಹಾಗೂ ಹೆಂಡತಿ ಬಗ್ಗೆ ಮೆಮೊರಿ ಲಾಸ್ ಆಗಿರುತ್ತೆ. ಒಂದಷ್ಟು ಫ್ಲಾಶ್ ಬ್ಯಾಕ್ ವಿಚಾರಗಳು ತೆರೆಯುತ್ತಾ ಹೋಗುತ್ತದೆ. ಇಲ್ಲಿಂದ ಚಿತ್ರದ ತಿರುಳೆ ಮತ್ತೊಂದು ರೂಪವನ್ನು ಪಡೆಯುತ್ತಾ ಕ್ಲೈಮ್ಯಾಕ್ಸ್ ಅಂತಕ್ಕೆ ಬಂದು ನಿಲ್ಲುತ್ತದೆ.

ಕೃಷ್ಣನಿಗೆ ನೆನಪಿನ ಶಕ್ತಿ ಬರುತ್ತಾ…
ಆಕ್ಸಿಡೆಂಟ್ ಮಾಡಿಸಿದ್ದು ಯಾರು…
ಮತ್ತೆ ಇಬ್ಬರು ಒಂದಾಗ್ತಾರಾ ಅಥವಾ ಬೇರೆ ಆಗುತ್ತಾರಾ…
ಕ್ಲೈಮಾಕ್ಸ್ ಟ್ವಿಸ್ಟ್ ಏನು ಅನ್ನೋದಕ್ಕಾಗಿ ಒಮ್ಮೆ ಈ ಚಿತ್ರವನ್ನು ನೋಡಲೇಬೇಕು.

ಇಡೀ ಚಿತ್ರದ ಕೇಂದ್ರ ಬಿಂದುವಾಗಿ ಗೋಲ್ಡನ್ ಸ್ಟಾರ್ ಗಣೇಶ್ ಅದ್ಭುತವಾಗಿ ನಟಿಸಿದ್ದಾರೆ. ತಮ್ಮ ಮಾತಿನ ವರ್ಚಸ್ , ಹವಾ ಭಾವದ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ. ಒಬ್ಬ ಪ್ರೇಮಿಯಾಗಿ ಪ್ರೀತಿಯನ್ನ ಪಡೆಯುವ ನಿಟ್ಟಿನಲ್ಲಿ ಮಾಡುವ ಹರಸಾಹಸ ಗಮನ ಸೆಳೆಯುತ್ತದೆ. ನೋಡಲು ಮುದ್ದು ಮುದ್ದಾಗಿ ಕಾಣುವ ಮಾಳವಿಕಾ ಅಯ್ಯರ್ ತಮಗೆ ಸಿಕ್ಕ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ , ಎಲ್ಲರ ಮನಸ್ಸನ್ನು ಗೆಲ್ಲುವಂತೆ ಅಭಿನಯಿಸಿದ್ದಾರೆ.ಇನ್ನು ಪ್ರಮುಖವಾಗಿ ರಂಗಾಯಣ ರಘು ಕೋಲಾರ ಭಾಗದ ಮಾತಿನ ಶೈಲಿಯಲ್ಲಿ ಭೂ ಮಾಲೀಕನಾಗಿ ಅದ್ಭುತವಾಗಿ ನಟಿಸಿದ್ದಾರೆ.

ಇನ್ನು ಸಾದು ಕೋಕಿಲ ಹಾಗೂ ಗಿರಿ ಕಾಂಬಿನೇಷನ್ ಕಾಮಿಡಿ ಇಷ್ಟವಾಗುತ್ತದೆ. ಮತ್ತೊಬ್ಬ ನಟಿ ಶರಣ್ಯ ಶೆಟ್ಟಿ ಬೋಲ್ಡ್ ಅಂಡ್ ಬ್ಯೂಟಿಫುಲ್ ಎನ್ನುವಂತೆ ಸಿಕ್ಕ ಅವಕಾಶಕ್ಕೆ ಜೀವ ತುಂಬಿದ್ದಾರೆ. ಕುರಿ ಪ್ರತಾಪ್ ಪಾತ್ರವೂ ಕೂಡ ಮಜವಾಗಿದೆ. ಹಿರಿಯ ಕಲಾವಿದರಗಗಳು ತಮಗೆ ಕೊಟ್ಟ ಪಾತ್ರವನ್ನು ಅಚ್ಚು ಕಟ್ಟಾಗಿ ನಿರ್ವಹಿಸಿದ್ದಾರೆ. ಉಳಿದಂತೆ ಅಭಿನಯಿಸಿರುವ ಎಲ್ಲಾ ಪಾತ್ರಧಾರಿಗಳು ಚಿತ್ರದ ಓಟಕ್ಕೆ ಸಾತ್ ನೀಡಿದ್ದಾರೆ. ನಿರ್ದೇಶಕ ಶ್ರೀನಿವಾಸ್ ರಾಜು ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ವಿಭಿನ್ನವಾಗಿದ್ದು , ಇದು ನಟ ಗಣೇಶ್ ಸೂಕ್ತವಾಗಿದೆ. ಚಿತ್ರದ ಓಟ ಇನ್ನಷ್ಟು ಕಡಿತಗೊಳಿಸಿದ್ದರೆ ಚೆನ್ನಾಗಿರುತ್ತಿತ್ತು, ರಿವರ್ಸ್ ಸ್ಕ್ರೀನ್ ಪ್ಲೇ ಗಮನ ಸೆಳೆಯುವಂತಿದೆ. ಫ್ಯಾಮಿಲಿ , ಕಾಮಿಡಿ ಹಾಗೂ ಲವ್ ಸೀನ್ ಅಚ್ಚುಕಟ್ಟಾಗಿದ್ದು , ಹಿರಿಯ ಕಲಾವಿದರ ಪಾತ್ರಗಳನ್ನು ಇನ್ನಷ್ಟು ಚೆನ್ನಾಗಿ ಬಳಸಿಕೊಳ್ಳಬಹುದಿತ್ತು.

ನಿರ್ಮಾಪಕರು ಹಾಕಿರುವ ಬಂಡವಾಳ ತೆರೆಯ ಮೇಲೆ ಎದ್ದು ಕಾಣುತ್ತದೆ. ಇನ್ನು ಚಿತ್ರದ ಹೈಲೈಟ್ ಆಗಿ ಅರ್ಜುನ್ ಜನ್ಯರ ಸಂಗೀತದ ಮೂಡಿ ಉತ್ತಮವಾಗಿದ್ದು , ಹಾಡುಗಳನ್ನು ಬರೆದಿರುವ ಚಿತ್ರ ಸಾಹಿತಿಗಳ ಪದಗಳು ಗುಣುಗುಂತಿದೆ. ಛಾಯಾಗ್ರಹಾಕರ ಕೈಚಳಕವು ಅದ್ಭುತವಾಗಿದ್ದು , ದೃಶ್ಯಗಳು ಮನಮೋಹಕವಾಗಿದೆ. ಒಟ್ಟರೆ ಒಂದು ಮನೋರಂಜನಾತ್ಮಕ ಚಿತ್ರವಾಗಿ ಎಲ್ಲರ ಗಮನ ಸೆಳೆಯುವ ಹಾದಿಯಲ್ಲಿ ಬಂದಿರುವ ಕೃಷ್ಣಂ ಪ್ರಣಯ ಸಖಿ ಚಿತ್ರವನ್ನು ಎಲ್ಲರೂ ನೋಡುವಂತಿದೆ.

error: Content is protected !!