90ರ ಕಾಲಘಟ್ಟದ ಪ್ರೇಮ ಕಥೆಗೆ ಗಾಯಕಿ ಕೆ.ಎಸ್.ಚಿತ್ರ ರವರ ಇಂಪಾದ ಗೀತೆ.
ಮನಸ್ಸು ಮಲ್ಲಿಗೆ ಕಂಬೈನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ, ನಂದಕುಮಾರ್ C M ನಿರ್ದೇಶಿಸಿರುವ ಹಾಗೂ ಅರುಣ್ – ರಾಣಿ ವರದ್ ನಾಯಕ, ನಾಯಕಿಯಾಗಿ ನಟಿಸಿರುವ “1990s” ಚಿತ್ರಕ್ಕಾಗಿ ಮೋಹಿನಿ ಹಾಗೂ ಮಂಜು ಅವರು ಬರೆದಿರುವ “ಮಳೆ ಹನಿಯೆ” ಎಂಬ ಹಾಡು ಇತ್ತೀಚಿಗೆ ಬಿಡಯಾಗಿದೆ.
ಹಿರಿಯ ಕಲಾ ನಿರ್ದೇಶಕ ಕನಕರಾಜ್ ಈ ಹಾಡನ್ನು ಅನಾವರಣ ಮಾಡಿದರು. ಭಾರತದ ಜನಪ್ರಿಯ ಗಾಯಕಿ ಕೆ.ಎಸ್ ಚಿತ್ರ ಅವರ ಗಾಯನದಲ್ಲಿ ಮೂಡಿಬಂದಿರುವ ಈ ಸುಮಧುರ ಗೀತೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಮಹಾರಾಜ ಅವರು ಈ ಮನಮೋಹಕ ಹಾಡಿಗೆ ಸಂಗೀತ ನೀಡಿದ್ದಾರೆ. ಹಾಡು ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
“1990”s ಚಿತ್ರ ಮೊದಲೆ ಹೇಳಿದಂತೆ 90 ರ ಕಾಲಘಟ್ಟದ ಪ್ರೇಮ ಕಥಾನಕ. ಈ ಚಿತ್ರದಲ್ಲಿ ಮಹಾರಾಜ ಅವರು ಸಂಗೀತ ನೀಡಿರುವ ಎಲ್ಲಾ ಹಾಡುಗಳು ಅದ್ಭುತವಾಗಿದೆ. ಇಂದು ಬಿಡುಗಡೆಯಾಗಿರುವ ” ಮಳೆ ಹನಿಯೆ” ಹಾಡನ್ನು ಚಿತ್ರ ಅವರ ಧ್ವನಿಯಲ್ಲಿ ಕೇಳುವುದೆ ಸೊಗಸು. ಹಾಡು ಬಿಡುಗಡೆಯಾಗಿರುವುದರಿಂದ ಸಂಗೀತ ನಿರ್ದೇಶಕರೆ ಹೆಚ್ಚು ಮಾತನಾಡಲಿ ಎಂದರು ನಿರ್ದೇಶಕ ಸಿ.ಎಂ.ನಂದಕುಮಾರ್.
ಮನಸ್ಸು ಮಲ್ಲಿಗೆ ಕ್ರಿಯೇಷನ್ಸ್ ಸಂಸ್ಥೆಯ ಮೂಲಕ ನಿರ್ಮಾಣ ಮಾಡಿರುವ ನವಿರಾದ ಪ್ರೇಮಕಥೆ “1990”s ಚಿತ್ರದಿಂದ ಮಲ್ಲಿಗೆಯಂತಹ ಹಾಡೊಂದು ಬಿಡುಗಡೆಯಾಗಿದೆ. ನಮ್ಮ ಚಿತ್ರವನ್ನು ನೋಡಿ. ಪ್ರೋತ್ಸಾಹ ನೀಡಿ. ನಾನು ಈ ಚಿತ್ರದ ನಿರ್ಮಾಪಕರಲ್ಲೊಬ್ಬ ಹಾಗೂ ನಾಯಕಿಯ ತಂದೆಯ ಪಾತ್ರಧಾರಿಯೂ ಹೌದು. ಎಂದರು ಅರುಣ್ ಕುಮಾರ್.
ಇಂದು ಲಹರಿ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿರುವ “ಮಳೆ ಹನಿಯೇ” ಹಾಡು, ಗಾಯಕಿ ಚಿತ್ರ ಅವರು ಕೇವಲ ಮೂರು ಗಂಟೆಗಳ ಕಾಲದಲ್ಲಿ ಹಾಡಿ ಮುಗಿಸಿರುವ ಹಾಡು ಎಂದು ಹಾಡಿನ ಬಗ್ಗೆ ಸಂಗೀತ ನಿರ್ದೇಶಕ ಮಹಾರಾಜ ಮಾಹಿತಿ ನೀಡಿದರು. ನಾಯಕ ಅರುಣ್, ನಾಯಕಿ ರಾಣಿ ವರದ್, ಛಾಯಾಗ್ರಾಹಕ ಹಾಲೇಶ್,
ಸಾಹಸ ನಿರ್ದೇಶಕ ಅಶೋಕ್, ನೃತ್ಯ ನಿರ್ದೇಶಕ ಸಾದಿಕ್ ಸರ್ದಾರ್, ಸಂಕಲನಕಾರ ಕೃಷ್ಣ ಹಾಗೂ ವಿತರಕ ರಮೇಶ್ 1990″ s ಬಗ್ಗೆ ಮಾತನಾಡಿದರು.