Cini NewsSandalwood

ಮದನಾರಿ ಮೇಲೆ “ವಿದ್ಯಾಪತಿ”ಗೆ ಲವ್…ನಾಗಭೂಷಣ್ – ಮಲೈಕಾ ಮೋಡಿ.

ಇಶಾಂ ಮತ್ತು ಹಸೀಂ ಖಾನ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ವಿದ್ಯಾಪತಿ’ ಸಿನಿಮಾ ಸ್ಯಾಂಪಲ್ ಗಳಿಂದಲೇ ಸುದ್ದಿ ಮಾಡುತ್ತಿದೆ. ಧನಂಜಯ ಅವರ ಡಾಲಿ ಪಿಕ್ಚರ್ಸ್‌ನಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾದಲ್ಲಿ ನಾಗಭೂಷಣ್ ಕರಾಟೆ‌ ಕಿಂಗ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರದಲ್ಲಿ ನಾಯಕಿ ಸೂಪರ್ ಸ್ಟಾರ್ ವಿದ್ಯಾಳಾಗಿ ಮಲೈಕಾ ವಸುಪಾಲ್ ನಟಿಸುತ್ತಿದ್ದಾರೆ. ನಾಗಭೂಷಣ್ ಹಾಗೂ ಮಲೈಕಾ ಜೋಡಿಯ ಪ್ರೇಮಗೀತೆ ಡಾಲಿ ಪಿಕ್ಚರ್ಸ್ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ.

ವಿದ್ಯಾ ಪ್ರೀತಿಯಲ್ಲಿ ಬೀಳುವ ವಿದ್ಯಾಪತಿ ಲವ್ ನಂಬರ್ ಗೆ ಸುಜಿತ್ ವೆಂಕಟರಾಮಯ್ಯ ಸಾಹಿತ್ಯ ಒದಗಿಸಿದ್ದು, ಡಾಸ್ಮೋಡ್ ಟ್ಯೂನ್ ಹಾಕಿದ್ದು, ವಾಸುಕಿ ವೈಭವ್ ಹಾಗೂ ಸುಪ್ರಿಯಾ ರಾಮ್ ಧ್ವನಿಯಾಗಿದ್ದಾರೆ.

‘ವಿದ್ಯಾಪತಿ’ ಚಿತ್ರಕ್ಕೆ ಇಶಾಂ ಹಾಗೂ ಹಸೀಂ ಖಾನ್ ಅವರು ನಿರ್ದೇಶನ ಮಾಡಿದ್ದಾರೆ. ಕಥೆ ಬರೆದು, ಸಂಕಲನವನ್ನೂ ಅವರೇ ಮಾಡುತ್ತಿದ್ದಾರೆ. ಲವಿತ್ ಅವರ ಛಾಯಾಗ್ರಹಣ, ಡಾಸ್ಮೋಡ್ ಅವರ ಸಂಗೀತ ನಿರ್ದೇಶನ, ಮುರಳಿ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಸುಜಿತ್ ವೆಂಕಟರಾಮಯ್ಯ ಅವರು ಸಾಹಿತ್ಯ ಬರೆದಿದ್ದಾರೆ.

ಅರ್ಜುನ್ ಮಾಸ್ಟರ್ ಅವರು ಸಾಹಸ ನಿರ್ದೇಶನ ಮಾಡಿದ್ದಾರೆ. ಆಕ್ಷನ್ ಕಾಮಿಡಿ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ರಂಗಾಯಣ ರಘು ಕರಾಟೆ ಮಾಸ್ಟರ್ ಆಗಿ ಅಭಿನಯಿಸಿದ್ದಾರೆ. ವಿದ್ಯಾಪತಿ ಚಿತ್ರವನ್ನ ಇದೇ ವರ್ಷ ಏಪ್ರಿಲ್-10 ರಂದು ರಿಲೀಸ್ ಮಾಡಲಾಗುತ್ತಿದೆ. ಈ ಸಿನಿಮಾದ ಪಾತ್ರವರ್ಗದಲ್ಲಿ ಇನ್ನೂ ಅನೇಕ ಕಲಾವಿದರು ನಟಿಸಿದ್ದು, ಆ ಬಗ್ಗೆ ಸದ್ಯದಲ್ಲೇ ಚಿತ್ರತಂಡ ಹೆಚ್ಚಿನ ಮಾಹಿತಿ ನೀಡಲಿದೆ.

error: Content is protected !!