Cini NewsMovie ReviewSandalwood

ಗೆಳತಿಯರ ಒಡನಾಟ , ಪ್ರೇಮಿಯ ಪರದಾಟ , ಬದುಕಿನ ಪಾಠ… ‘ ಮನದ ಕಡಲು’ (ಚಿತ್ರವಿಮರ್ಶೆ-ರೇಟಿಂಗ್ : 3.5/5)

ರೇಟಿಂಗ್ : 3.5/5
ಚಿತ್ರ : ಮನದ ಕಡಲು
ನಿರ್ದೇಶಕ : ಯೋಗರಾಜ್ ಭಟ್
ನಿರ್ಮಾಪಕ : ಇ. ಕೃಷ್ಣಪ್ಪ
ಸಂಗೀತ : ವಿ.ಹರಿಕೃಷ್ಣ
ಛಾಯಾಗ್ರಹಣ : ಸಂತೋಷ್ ರೈ ಪಾತಾಜೆ
ತಾರಾಗಣ : ಸುಮುಖ , ರಾಶಿಕಾ ಶೆಟ್ಟಿ , ಅಂಜಲಿ ಅನೀಶ್, ರಂಗಾಯಣ ರಘು, ದತ್ತಣ್ಣ , ಶಿವಧ್ವಜ್ ಹಾಗೂ ಮುಂತಾದವರು…

ಜೀವನದಲ್ಲಿ ಒಂದು ಗುರಿ , ಆಸೆ , ಸ್ನೇಹ , ಪ್ರೀತಿ , ನಂಬಿಕೆ ಸಂಬಂಧ , ವಿಶ್ವಾಸದ ಜೊತೆಗೆ ಬದುಕು ನಡೆಸುವುದು ಸಹಜ. ಹಾಗೆಯೇ ವಾಸ್ತವತೆ ಹಾಗೂ ಕಲ್ಪನೆಯ ಸುತ್ತ ಹಲವು ಕೊಂಡಿಗಳು ಹುಟ್ಟು , ಸಾವಿನ ನಡುವೆ ಬದುಕಿನ ದಾರಿಯನ್ನ ತೋರಿಸುವ ಹಾದಿಯ ತ್ರಿಕೋನ ಪ್ರೇಮ ಕಥೆಯ ಮೂಲಕ ಬೆಳಕು ಚೆಲ್ಲುವ ಪರಿಯಾಗಿ ಈ ವಾರ ತೆರೆಯ ಮೇಲೆ ಬಂದಿರುವಂತಹ ಚಿತ್ರ “ಮನದ ಕಡಲು”.

ಎಂಬಿಬಿಎಸ್ ವಿದ್ಯಾರ್ಥಿ ಸುಮುಖ , ಡಾಕ್ಟರ್ ಆಗಿ ಜನರ ಸೇವೆಗೆ ಸದಾ ಎನ್ನುವನ ಎದುರೆ ವ್ಯಕ್ತಿ ಒಬ್ಬ ಸತ್ತರು ಕಾಪಾಡಿಕೊಳ್ಳಲಾದ ಸ್ಥಿತಿ ಎದುರಾದಾಗ ವೃತ್ತಿಯನ್ನು ಬಿಟ್ಟು ಬರುತ್ತಾನೆ. ಎಲ್ಲವೂ ಶೂನ್ಯ ಎನ್ನುವವನ ಬದುಕಿಗೆ ಮುದ್ದಾದ ಬೆಡಗಿ ರಾಶಿಕಾ ಕಾಣುತ್ತಾಳೆ. ಆಕೆಯನ್ನು ಹಿಂಬಾಲಿಸಿ , ಪ್ರೀತಿ ಮಾಡಲು ಮುಂದಾಗುವ ಸಮುಖ ನಿಗೆ ಆಕೆ ಕ್ರಿಕೆಟ್ ಆಟಗಾರ್ತಿ ಎಂದು ತಿಳಿಯುತ್ತದೆ.

ಒಮ್ಮೆ ದಿಡೀರ್ ನಾಪತ್ತೆಯಾಗುವ ಆಶಿಕಾಳನ್ನು ಹುಡುಕುತ್ತಾ ಹೊರಟ ಸುಮುಖ ನಿಗೆ ಆಕೆಯ ಗೆಳತಿ ಅಂಜಲಿ ಬಳಿ ಹೋಗುತ್ತಾನೆ. ಅಂಜಲಿ ಆರ್ಕಲಾಜಿಕಲ್ ಸ್ಟೂಡೆಂಟ್ , ಪುರಾತತ್ವ ಇಲಾಖೆಯ ಪ್ರಾಚ್ಯ ವಸ್ತುಗಳ ಸಂಶೋಧನೆಗಾಗಿ ದೋಣಿ ದುರ್ಗಾ ಎಂಬ ಕಡಲ ತೀರದ ಆದಿವಾಸಿಗಳ ವಾಸ ಸ್ಥಳದ ಪಶ್ಚಿಮರಾಜನ ಕೋಟೆಯಲ್ಲಿ ಬಿಡಾರ ಹೂಡಿರತ್ತಾಳೆ.

ಇದರ ಹಿಂದೆ ಒಂದು ರಾಜನ ಇತಿಹಾಸವು ತೆರೆದುಕೊಳ್ಳುತ್ತದೆ. ಇದರ ನಡುವೆ ತನ್ನ ಪ್ರೀತಿಯನ್ನು ಹೇಳಿಕೊಳ್ಳಲು ಮುಂದಾಗುವ ಸುಮುಖನಿಗೆ ಆಶಿಕಾಳಿಗೆ ಇರುವ ಕಾಯಿಲೆ ಬಗ್ಗೆ ಅಂಜಲಿ ತಿಳಿಸುತ್ತಾಳೆ. ಆಯುರ್ವೇದದ ಪಂಡಿತರು ತಿಳಿಸುವ ನಾರು , ಬೇರಿನ ಗಿಡಮೂಲಿಕೆ ಔಷಧಿಯ ಹುಡುಕಾಟಕ್ಕೆ ಸಾತ್ ನೀಡುವ ಕಾಡಿನ ಆದಿವಾಸಿ ಮುಖ್ಯಸ್ಥ , ಮುಂದೆ ಎದುರಾಗುವ ಹಲವು ಘಟನೆಗಳು ರೋಚಕ ತಿರುವಿನತ್ತ ಸಾಗಿ ನಿಲ್ಲುತ್ತದೆ.

ಗಿಡಮೂಲಿಕೆ ಔಷಧಿ ಸಿಗುತ್ತಾ.
ಡಾಕ್ಟರ್ , ಕ್ರಿಕೆಟರ್ , ಸಂಶೋಧಕೀಯ ಆಸೆಗಳು ಕೈಗೂಡುತ್ತಾ…
ಬೆಳಕು ಕತ್ತಲಿನ ಬದುಕಿನ ಪಾಠ..?
ಕ್ಲೈಮಾಕ್ಸ್ ಉತ್ತರ ಏನು…
ಇನ್ನಷ್ಟು ವಿಚಾರಗಳ ತಿಳಿಯುವುದಕ್ಕೆ ಒಮ್ಮೆ ಈ ಚಿತ್ರವನ್ನು ನೋಡಬೇಕು.

ಕಡಲು , ಆದಿವಾಸಿಗಳ ನೆಂಟು ಯೋಗರಾಜ್ ಭಟ್ಟರನ್ನ ಬಿಟ್ಟಂತಿಲ್ಲ. ಇದರ ನಡುವೆ “ವೈದ್ಯೋ ನಾರಾಯಣೋ ಹರಿ” ಎಂಬ ಸೂಕ್ಷ್ಮತೆಯನ್ನು ಹೇಳೋದರ ಜೊತೆಗೆ ಹುಟ್ಟು ಸಾವಿನ ನಡುವೆ ಬದುಕುವುದನ್ನು ಜೀವಿಸು ಎಂಬ ವಿಚಾರವನ್ನು ಬಹಳ ಅರ್ಥಪೂರ್ಣವಾಗಿ ಹೇಳಿದ್ದಾರೆ. ರಾಜರ ಕಾಲಘಟ್ಟದ ಬದುಕಿಗೆ ಪೂರಕವಾಗಿ ಪ್ರಸ್ತುತ ಜೀವನದ ಕೊಂಡಿಯನ್ನು ಬೆಸೆದಿರುವ ರೀತಿ ವಿಶೇಷವಾಗಿದೆ. ಆದರೆ ಸಂಭಾಷಣೆ ಅತಿರೇಕ ಎನ್ನುವಂತಿದೆ.

ಗೆಳತಿಯರ ಒಡನಾಟ , ಪ್ರೇಮಿಯ ಪರದಾಟ , ಬದುಕಿನ ಪಾಠ ಎಲ್ಲರನ್ನು ಸೆಳೆಯುವಂತಿದೆ. ನಿರ್ಮಾಪಕರ ಖರ್ಚು ತೆರೆಯ ಮೇಲೆ ಕಂಡುಬಂದಿದ್ದು , ಒಂದು ವಿಭಿನ್ನ ಚಿತ್ರವನ್ನು ಪ್ರೇಕ್ಷಕರಿಗೆ ನೀಡಿದ್ದಾರೆ. ಇನ್ನು ಸಂತೋಷ್ ರೈ ಪಾತಾಜೆ ಕ್ಯಾಮೆರಾ ಕೈಚಳಕ , ಶಿವಕುಮಾರ್ ಕಲೆ , ಕೆ.ಎಂ. ಪ್ರಕಾಶ್ ಸಂಕಲನ , ವಿ. ಹರಿಕೃಷ್ಣ ಸಂಗೀತ ಅದ್ಭುತವಾಗಿ ಮೂಡಿ ಬಂದಿದೆ. ತಾಂತ್ರಿಕವಾಗಿ ತಂಡ ಬಹಳ ಶ್ರಮ ಪಟ್ಟಿರುವುದು ಕಂಡುಬರುತ್ತದೆ.

ಇನ್ನು ನಾಯಕನಾಗಿ ಅಭಿನಯಿಸಿರುವ ಸುಮುಖ ಬಹಳ ಲವಲವಿಕೆಯಿಂದ ತನ್ನ ಪಾತ್ರಕ್ಕೆ ಜೀವ ತುಂಬಿದ್ದಾನೆ. ಮತ್ತೊಬ್ಬ ಯುವ ನಟ ಚಿತ್ರರಂಗಕ್ಕೆ ಸಿಕ್ಕಂತಾಗಿದೆ. ಇನ್ನು ರಾಶಿಕಾ ಶೆಟ್ಟಿ ತನ್ನ ಕಣ್ಣೋಟ , ಮೌನದಲ್ಲೇ ಹೆಚ್ಚು ಮಾತನಾಡಿ ಗಮನ ಸೆಳೆಯುತ್ತಾರೆ. ಇನ್ನು ಮತ್ತೊಬ್ಬ ನಟಿ ಅಂಜಲಿ ಅನೀಶ್ ಚಿನಕುರಳಿಯಂತೆ ಸಿಡಿಯುತ್ತಾ ಎಲ್ಲರನ್ನ ಆಕರ್ಷಿಸುತ್ತಾರೆ.

ಹಾಗೆಯೇ ಆದಿವಾಸಿಯ ಮುಖಂಡನ ಪಾತ್ರದಲ್ಲಿ ರಂಗಾಯಣ ರಘು ಜೀವಿಸಿದ್ದರೂ , ಸಂಭಾಷಣೆಯನ್ನ ಅರ್ಥಮಾಡಿಕೊಳ್ಳುವುದು ಕಷ್ಟವಾಗುತ್ತದೆ. ಇನ್ನು ಹಿರಿಯ ನಟ ದತ್ತಣ್ಣ ನಾಟಿ ವೈದ್ಯ ಪಂಡಿತರಾಗಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಉಳಿದಂತೆ ಬರುವ ಎಲ್ಲಾ ಪಾತ್ರಧಾರಿಗಳು ಚಿತ್ರದ ಓಟಕ್ಕೆ ಸಾತ್ ನೀಡಿದ್ದು, ಗಮನ ಸೆಳೆಯುವಂತಿದೆ. ಒಟ್ಟಲ್ಲಿ ವಿಭಿನ್ನ ಪ್ರಯತ್ನದ ಈ ಚಿತ್ರವನ್ನು ಎಲ್ಲರೂ ಒಮ್ಮೆ ನೋಡುವಂತಿದೆ.

error: Content is protected !!