Cini NewsMovie ReviewSandalwood

ನಂಬಿಕೆ ಮೂಡನಂಬಿಕೆಯ ಸುತ್ತ “ಮಾಂತ್ರಿಕ”ನ ಹುಡುಕಾಟ (ಚಿತ್ರವಿಮರ್ಶೆ-ರೇಟಿಂಗ್ : 3/5)

ರೇಟಿಂಗ್ : 3 /5
ಚಿತ್ರ : ಮಾಂತ್ರಿಕ
ನಿರ್ದೇಶಕ : ವ್ಯಾನವರ್ಣ ಜಮ್ಮುಲ
ನಿರ್ಮಾಪಕರು : ಆಯನ, ವೆಂಕಟೇಶ್ ರಾವ್
ಸಂಗೀತ : ಸ್ಟಾಲಿನ್
ಛಾಯಾಗ್ರಹಣ : ಅನಿಲ್ ಆಂಟೋನಿ , ರಮೇಶ್ ಮರ‍್ರಿಪಲ್ಲಿ
ತಾರಾಗಣ : ವ್ಯಾನ ವರ್ಣ ಜಮ್ಮುಲ, ರಾಧಿಕಾ ಮಾಲಿ ಪಾಟೀಲ, ಮೈಥಿಲಿ ನಾಯಕ್, ಜಗದೀಶ್ ಊರುಕೆರೆ ಹಾಗೂ ಮುಂತಾದವರು…

ಮನುಷ್ಯರ ಮೆದುಳಿನ ಆಲೋಚನೆಯ ಕ್ರಿಯೆ ಊಹೆಗೂ ನಿಲುಕದು, ಯಾವಾಗ , ಹೇಗೆ , ಸಂದರ್ಭಗಳು ಎದುರಾಗುತ್ತವೊ ಅದಕ್ಕೆ ತಕ್ಕಂತೆ ಕಾರ್ಯರೂಪ ವಾಗುತ್ತಾ ಹೋಗುತ್ತದೆ. ಅದು ಮನಸ್ಸಿನ ಮೇಲೆ ಅಗಾಧ ಪರಿಣಾಮವೂ ಬೀರುತ್ತದೆ.

ಆ ನಿಟ್ಟಿನಲ್ಲಿ ಭ್ರಮೆಯನ್ನು ಬಿಟ್ಟು ವಾಸ್ತವಕ್ಕೆ ಬರುವುದು ಬಹಳ ಮುಖ್ಯ ಎನ್ನುತ್ತಾ ನಂಬಿಕೆ ಹಾಗೂ ಮೂಡನಂಬಿಕೆಯ ಸುಳಿಯಲ್ಲಿ ಪ್ರೇತಾತ್ಮಗಳ ಕಾಟ , ಕಟ್ಟಡದ ರಹಸ್ಯ , ಘೋಸ್ಟ್ ಹಂಟರ್ ಕಾರ್ಯ ವೈಖರಿ ನಡುವೆ ವ್ಯಕ್ತಿಯ ಬದುಕು , ಆಸೆ , ಆಸ್ತಿಯ ಸುತ್ತ ಸಾಗುತ್ತಾ ಬಂದು ಪ್ರೇಕ್ಷಕರ ಗಮನ ಸೆಳೆಯಲು ಈ ವಾರ ತೆರೆಯ ಮೇಲೆ ಬಂದಿರುವಂತಹ ಚಿತ್ರವೇ “ಮಾಂತ್ರಿಕ”.

ಮಾರ್ನುಡಿ ಎಂಬ ನಿರ್ಮಾಣ ಹಂತದ ಕಟ್ಟಡದಲ್ಲಿ ಅಗೋಚರ ಶಕ್ತಿಗಳ ಓಡಾಟ , ಸದ್ದು , ವಿಪರೀತ ಕಾಟ ಎಂಬ ಭಯದಿಂದ ಅದನ್ನ ಕೊಂಡುಕೊಂಡಂತಹ ವ್ಯಕ್ತಿ ಚಂದ್ರಶೇಖರ ಒಡೆಯರ್ ಪರಿಹಾರಕ್ಕಾಗಿ ಸಿ.ಟಿ.ಆರ್ (ಕಮ್ ಟು ರಿಯಾಲಿಟಿ) ಎಂಬ ಘೋಸ್ಟ್ ಹಂಟರ್ ತಂಡ ರೂವಾರಿ ಕೃಷ್ಣ ರನ್ನ ಭೇಟಿ ಮಾಡಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಾರೆ.

ಈಗಾಗಲೇ 03 ಕೊಲೆ 10 ವ್ಯಕ್ತಿಗಳ ಅಪ್ ಸ್ಕ್ಯಾನ್ಡ್ ಆಗಿರುವ ವಿಚಾರ ತಿಳಿಯುವ ಕೃಷ್ಣ ತನ್ನ ತಂಡದೊಂದಿಗೆ ಚರ್ಚೆ ಮಾಡಿ ಅದಕ್ಕೆ ಸೂಕ್ತ ಪರಿಹಾರ ಹುಡುಕಲು ಮುಂದಾಗುತ್ತಾನೆ. ಈ ಹಿಂದೆ ಆ ಸ್ಥಳಕ್ಕೆ ಹೋಗಿ ಬಂದವರಿಂದ ಮಾಹಿತಿ ಕಲೆಹಾಕಿ , ನಕಾರಾತ್ಮಕ ಶಕ್ತಿಗಳ ಸತ್ಯಾಸತ್ಯತೆಯ ಬಗ್ಗೆ ಹುಡುಕಾಟ ನಡೆಸುವ ಘೋಸ್ಟ್ ಹಂಟರ್ ಗೆ ಒಂದಷ್ಟು ಗೊಂದಲಗಳ ನಡುವೆ ಮಾಹಿತಿ ದೊರೆಯುತ್ತದೆ.

ಇದರ ನಡುವೆ ಸೈನಿಶ್ ಎಂಬ ಹುಡುಗ ಬದುಕಿನಲ್ಲಿ ಬಹಳಷ್ಟು ಕನಸನ್ನ ಕಟ್ಟಿಕೊಂಡು ಆಡಿಯೋ ಎಡಿಟಿಂಗ್ ಟೆಕ್ನಿಕಲ್ ವಿಚಾರದಲ್ಲಿ ತಿಳಿದುಕೊಂಡು ಕೆಲಸ ಮಾಡುತ್ತ ವಿದೇಶಕ್ಕೆ ಹೋಗಿ ಜೀವನ ನಡೆಸಬೇಕೆಂಬ ಕನಸು ಕಂಡಿರುತ್ತಾನೆ , ಆದರೆ ಪರಿಸ್ಥಿತಿ ಅವನ ಆಸೆಗೆ ಅಡ್ಡಿಯಾಗಿರುತ್ತದೆ. ಇದರ ನಡುವೆ ತನ್ನ ತಾತನ ಆಸ್ತಿ ಚಿಕ್ಕಪ್ಪನಿಂದ ತನಗೆ ಸಿಕ್ಕಾಗ ಆ ಜಾಗವನ್ನು ಮಾರಿ ಹಣ ಪಡೆದು ಉದ್ದೇಶಕ್ಕೆ ಹೋಗುವ ಆಲೋಚನೆ ಮಾಡುತ್ತಾನೆ.

ಇದರ ನಡುವೆ ಬಿಲ್ಡರ್ ಮಾತಿಗೆ ಸೋತು ಪಾರ್ಟ್ನರ್ ಶಿಪ್ ನಲ್ಲಿ ಮಾರ್ನುಡಿ ಮಾಲ್ ಕಟ್ಟಲು ಮುಂದಾಗುತ್ತಾನೆ. ಪಾರ್ಟ್ನರ್ ಮೋಸದಿಂದ ಭೂಮಿ ಮತ್ತು ಮಾಲ್ ಎರಡು ದೂರವಾಗುತ್ತದೆ. ಇದರಿಂದ ಮುಂದೆ ಎದುರಾಗುವ ಸಮಸ್ಯೆ ,ಪ್ಲಾನ್ ಎಲ್ಲವೂ ನಿಗೂಢವಾಗಿ ಬೇರೆಯದೇ ದಿಕ್ಕನ್ನ ತೆರೆಯುತ್ತಾ ಹೋಗುತ್ತದೆ. ಅದು ಏನು… ಹೇಗೆ… ಯಾಕೆ… ಎಂಬುವುದನ್ನು ಚಿತ್ರ ನೋಡಿದರೆ ಅರ್ಥವಾಗುತ್ತದೆ.

ಈ ಚಿತ್ರದ ಮೂಲಕ ನಿರ್ದೇಶಕ ಮೋಸ ಮಾಡುವವರ ಮನಸ್ಸು ಮೋಸವೇ ಆಗಿರುತ್ತದೆ. ನಂಬಿಕೆ, ಅಪನಂಬಿಕೆ ಕೂಡ ಕೆಲವೊಮ್ಮೆ ಬದುಕಿನ ದಿಕ್ಕನ್ನ ಬದಲಿಸುತ್ತದೆ. ಭ್ರಮೆಯ ಬಿಟ್ಟು ವಾಸ್ತವಕ್ಕೆ ಬರಬೇಕು, ಅಗೋಚರ ಶಕ್ತಿ ಇದೆಯೋ.. ಇಲ್ಲವೋ.. ಯಾವುದು ಸತ್ಯ ಯಾವುದು ಮಿಥ್ಯ ಎಂದು ಹೇಳಲು ಬಹಳ ಸಾಹಸ ಪಟ್ಟಂತಿದೆ.

ಇದೊಂದು ಸಿನಿಮಾಟಿಕ್ ರೂಪಕ್ಕಿಂತ ಕಲಿಕೆಯ ರೂಪವಾಗಿ ಹೊರಬಂದಿದೆ. ಬರೀ ಸದ್ದುಗಳದೇ ಅಬ್ಬರವಾಗಿದ್ದು , ಮಾತುಗಳು ಅಸ್ಪಷ್ಟವಾಗಿ ಕೇಳಿಸುತ್ತದೆ. ಬಹಳಷ್ಟು ವಿಭಾಗದಲ್ಲಿ ನಿರ್ದೇಶಕರೇ ತಮ್ಮನ್ನ ತೊಡಗಿಸಿ ಕೊಂಡಿರುವುದು ಇದಕ್ಕೆ ಕಾರಣವಾಗಿರಬಹುದು, ತಾಂತ್ರಿಕವಾಗಿ ಒಂದಷ್ಟು ಗಮನ ಸೆಳೆದರು , ಪಾತ್ರಧಾರಿಗಳು ಪರಿಪೂರ್ಣ ತರಬೇತಿ ಪಡೆದು ಬರಬೇಕಾಗಿತ್ತು.

ನಿರ್ದೇಶಕರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದು , ಇಡೀ ಕಥೆಯ ಓಟವನ್ನ ಅವರೇ ನಡೆಸಿಕೊಂಡು ಸಾಗಿರುವುದು ವಿಶೇಷ. ನಿರ್ಮಾಣದಲ್ಲಿ ನಿರ್ದೇಶಕರ ಪತ್ನಿ ಕೈಜೋಡಿಸಿದ್ದು , ಬಹಳಷ್ಟು ಯುವ ಪ್ರತಿಭೆಗಳಿಗೆ ಅವಕಾಶವನ್ನು ನೀಡಿದ್ದಾರೆ.

ಇದೆಲ್ಲದರ ನಡುವೆ ದೆವ್ವ ಅನ್ನೋದು ಇದೆಯೋ, ಇಲ್ಲವೋ ಅಥವಾ ಅದೆಲ್ಲಾ ನಮ್ಮ ಭ್ರಮೆಯೋ ಎನ್ನುವುದರ ಸುತ್ತ ಒಂದು ಜಾಗೃತಿ ಸಂದೇಶವನ್ನ ನೀಡಿರುವ ಈ ಚಿತ್ರವು ಸಸ್ಪೆನ್ಸ್ , ಹಾರರ್ ಪ್ರಿಯರಿಗೆ ಬಹಳ ಬೇಗ ಇಷ್ಟವಾಗಲಿದೆ.

error: Content is protected !!