“ಮರಳಿ ಮನಸಾಗಿದೆ” ಚಿತ್ರದ ಎರಡನೇ ಹಾಡು ಬಿಡುಗಡೆ.
ಬೆನಕ ಟಾಕೀಸ್ ಲಾಂಛನದಲ್ಲಿ ಮುದೇಗೌಡ್ರು ನವೀನ್ ಕುಮಾರ್ ಆರ್ ಓ ಹಾಗೂ ತೆಲಿಗಿ ಮಲ್ಲಿಕಾರ್ಜುನಪ್ಪ ನಿರ್ಮಿಸಿರುವ, ನಾಗರಾಜ್ ಶಂಕರ್ ನಿರ್ದೇಶನದಲ್ಲಿ ಅರ್ಜುನ್ ವೇದಾಂತ್ ನಾಯಕರಾಗಿ ನಟಿಸಿರುವ “ಮರಳಿ ಮನಸಾಗಿದೆ” ಚಿತ್ರದ ಎರಡನೇ ಹಾಡನ್ನು ಸಾರಂಗಧರ ದೇಶಿಕೇಂದ್ರ ಮಹಾಸ್ವಾಮೀಜಿಗಳು ಸುಲಫಲ ಮಠ ಇವರು ಮಾರ್ಚ್ 23 ರಂದು ಕಲ್ಬುರ್ಗಿ ನಗರದ ಸಂಗಮ ಥಿಯೇಟರ್ ನಲ್ಲಿ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ವಿನು ಮನಸು ಸಂಗೀತ ನೀಡಿರುವ ಈ ಚಿತ್ರದ ಹಾಡುಗಳು A2 MUSIC ಮೂಲಕ ಬಿಡುಗಡೆಯಾಗಿದೆ. ಹಾಡು ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮತನಾಡಿದರು.
ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ತಿಪ್ಪಣಪ್ಪ ಕಮಕನೂರ, ದಾವಲಸಾಬ ಕಮತಗಿ ಗುತ್ತೆದಾರ, ಪ್ರಕಾಶ ಯಂಕಂಚಿ ಉದ್ದಿಮೆದಾರರು, ಬಸವರಾಜ ಬೂದಿಹಾಳ, ಬಸವರಾಜ ಗುಂಡಲಗೆರಿ, ಕಲಬುರ್ಗಿಅವ್ವಣ್ಣ ಮ್ಯಾಕೇರಿ.ನೀಲಕಂಠ ಮುಲಗೆ, ಶಿವಾನಂದ ಹೊನ್ನಗುಂಟಿ, ಸಿದ್ದು ನಾಗೂರು ಹಾಗೂ ಮರಳಿ ಮನಸಾಗಿದೆ ಚಿತ್ರ ತಂಡ ಉಪಸ್ಥಿತರಿದ್ದರು.
ಇದೊಂದು ಸಂಗೀತ ಪ್ರಧಾನ ಚಿತ್ರ. ವಿನು ಮನಸು ಸಂಗೀತ ನೀಡಿರುವ ಸುಮಧುರ ಹಾಡುಗಳು ಈ ಚಿತ್ರದಲ್ಲಿದೆ. ಆ ಪೈಕಿ “ಸುಳಿಮಿಂಚು ಕಣ್ಣ ಒಳಗೆ” ಎಂಬ ಚಿತ್ರದ ಎರಡನೇ ಹಾಡು ಇಂದು ಬಿಡುಗಡೆಯಾಗಿದೆ. ಹರೀಶ್ ಎಸ್. ಎಂ ಅವರು ಬರೆದಿರುವ ಈ ಹಾಡನ್ನು ಶಶಾಂಕ್ ಶೇಷಾಗಿರಿ ಹಾಗೂ ಈಶ ಸುಚಿ ಹಾಡಿದ್ದಾರೆ. ಇನ್ನು ಇದೊಂದು ಯುವಜನತೆಗೆ ಹತ್ತಿರವಾದ ಚಿತ್ರದ ಜೊತೆಗೆ ಸಂಬಂಧಗಳ ಮೌಲ್ಯಗಳನ್ನು ತಿಳಿಸುವ ಚಿತ್ರವೂ ಹೌದು ಎಂದು ನಿರ್ದೇಶಕ ನಾಗರಾಜ್ ಶಂಕರ್ ತಿಳಿಸಿದರು.
ನಿರ್ಮಾಪಕರಾದ ಮುದೇಗೌಡ ನವೀನ್ ಕುಮಾರ್ ಆರ್. ಓ ಅವರು ಮಾತನಾಡಿ, ನಾನು ಮೂಲತಃ ಮಧ್ಯಕರ್ನಾಟಕದವನು ಹಾಗೂ ಈ ಚಿತ್ರದ ಚಿತ್ರೀಕರಣ ದಾವಣಗೆಯಿಂದ ಆರಂಭವಾಗಿ ಕರ್ನಾಟಕದ ವಿವಿಧ ಭಾಗಗಳಲ್ಲಿ ಚಿತ್ರೀಕರಣ ನಡೆದಿದೆ. ಈ ಸಂದರ್ಭದಲ್ಲಿ ಸಹಕಾರ ನೀಡಿದ ಕಲ್ಬುರ್ಗಿ ಜನತೆಗೆ ಶುಭ ಕೋರಿದರು. ಮುಂದೆ ಏಪ್ರಿಲ್ 12 ರಂದು ಉಡುಪಿಯಲ್ಲಿ ಮೂರನೇ ಹಾಡಿನ ಅನಾವರಣವಾಗಲಿದೆ ಎಂದು ತಿಳಿಸಿದರು.
ಈ ಚಿತ್ರದಲ್ಲಿ ಇಬ್ಬರು ನಾಯಕಿಯರು ನಿರೀಕ್ಷಾ ಶೆಟ್ಟಿ ಹಾಗೂ ಸ್ಮೃತಿ ವೆಂಕಟೇಶ್. ಆ ಪೈಕಿ ಸಮಾರಂಭ ಉಪಸ್ಥಿತರಿದ್ದ ಸ್ಮೃತಿ ತಮ್ಮ ಪಾತ್ರದ ಬಗ್ಗೆ ಹೇಳಿದರು. ತಂಡದ ವಿಜಯ್ ಕುಮಾರ್, ಆಶಿತ್ ಸುಬ್ರಮಣ್ಯ, ಸಂಜಯ್ ಉಮ್ರಾನಿ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.