Cini NewsMovie Review

ಗೋಲ್ಡ್ ಡೀಲ್ ಗೋಳು… : ಮಾರಿಗೋಲ್ಡ್ ಚಿತ್ರವಿಮರ್ಶೆ (ರೇಟಿಂಗ್ : 3/5)

ರೇಟಿಂಗ್ : 3/5

ಚಿತ್ರ : ಮಾರಿಗೋಲ್ಡ್
ನಿರ್ದೇಶಕ : ರಾಘವೇಂದ್ರ. ಎಂ
ನಿರ್ಮಾಪಕ : ರಘುವರ್ದನ್
ಸಂಗೀತ : ವೀರ್ ಸಮರ್ಥ್
ಛಾಯಾಗ್ರಹಕ : ಕೆ.ಎಸ್. ಚಂದ್ರಶೇಖರ್
ತಾರಾಗಣ : ದಿಗಂತ್, ಸಂಗೀತ ಶೃಂಗೇರಿ, ಸಂಪತ್ ಮೈತ್ರೇಯ, ಯಶ್ ಶೆಟ್ಟಿ , ಕಾಕ್ರೋಚ್ ಸುಧೀ, ವಜ್ರಾಂಗ್ ಶೆಟ್ಟಿ, ಬಾಲಾ ರಾಜವಾಡಿ, ಮಹಂತೇಶ್, ಸಂದೀಪ್ ಮಲಾನಿ ಹಾಗೂ ಮುಂತಾದವರು…

 

ದುಡ್ಡು , ಚಿನ್ನ , ಆಸ್ತಿ ಎಂತವರನ್ನ ಬೇಕಾದರೂ ಬದಲಿಸುವ ಶಕ್ತಿ ಇರುತ್ತೆ. ರಾಯಲ್ ಜೀವನ , ಮೋಜು ಮಸ್ತಿ , ಕಾರು ಬಂಗ್ಲೆ ಎಲ್ಲವೂ ಬೇಕು , ಆದರೆ ಒಳ್ಳೆ ಮಾರ್ಗದಲ್ಲಿ ಸಂಪಾದಿಸುವುದಕ್ಕಿಂತ ಕೆಟ್ಟ ಮಾರ್ಗದಲ್ಲಿ ಸಾಗಿ ಬೇಗ ಶ್ರೀಮಂತರಾಗುವ ಕನಸು ಕಾಣುವವರೇ ಹೆಚ್ಚು ಎಂಬಂತೆ, ಕಳ್ಳತನ , ದರೋಡೆ , ಗಾಂಜಾ ಮಾರಾಟ , ಚುನಾವಣೆಯಲ್ಲಿ ಹಣ ಸಾಗಾಣಿಕೆ ಹೀಗೆ ಹಲವು ವಾಮ ಮಾರ್ಗದ ಹಣವು ಪೊಲೀಸರ ಕೈವಶ ಸೇರಿ ಎಷ್ಟು ಸತ್ಯ ಹೊರಬರುತ್ತೆ, ಇನ್ನುಳಿದದ್ದು ಏನಾಗುತ್ತೆ , ಚಿನ್ನದ ಬಿಸ್ಕೆಟ್ ಯಾವುದು , ಕಳ್ಳ ಪೋಲಿಸ್ ಆಟದ ಮರ್ವವೇನು , ವಿಧಿ ಕಲಿಸುವ ಪಾಠ ಏನು… ಹೀಗೆ ಹಲವು ವಿಚಾರಗಳ ಸುತ್ತ ಸಸ್ಪೆನ್ಸ್ , ಥ್ರಿಲ್ಲರ್ ಮೂಲಕ ಸಾಗುವ ವಿಭಿನ್ನ ಕಥಾಹಂದರವಾಗಿ ತೆರೆಯ ಮೇಲೆ ಬಂದಿರುವಂತಹ ಚಿತ್ರ “ಮಾರಿಗೋಲ್ಡ್”.

ಬದುಕಿಗಾಗಿ ಸಣ್ಣ ಪುಟ್ಟ ಕಳ್ಳತನ ಮಾಡಿಕೊಂಡು ಜೀವನ ನಡೆಸುವ ಕೃಷ್ಣ (ದಿಗಂತ್). ಇವನ ಕೈ ಕೆಲಸಕ್ಕೆ ಸಾತ್ ಕೊಡುವ ಗೆಳೆಯರು (ಯಶ್ ಶೆಟ್ಟಿ , ಕಾಕ್ರೋಚ್ ಸುದೀ). ಇನ್ನು ಲೈವ್ ಬ್ಯಾಂಡ್ ನಲ್ಲಿ ಡ್ಯಾನ್ಸರ್ ಸೋನು (ಸಂಗೀತ ಶೃಂಗೇರಿ) ಹಣದ ಅವಶ್ಯಕತೆಗೆ ಒಪ್ಪಿಕೊಂಡರು ಸ್ವಾಭಿಮಾನದಿಂದ ಬದುಕು ನಡೆಸುವ ಆಸೆ.

ಇದರ ನಡುವೆ ಕೆಲವು ಪೋಲಿಸ್ ಅಧಿಕಾರಿಗಳ ವಶದಲ್ಲಿರುವ ಚಿನ್ನದ ಬಿಸ್ಕೆಟ್ ಕದಿಯುವ ಸಂಚನ್ನ ರೂಪಿಸುವ ವ್ಯಕ್ತಿ ಕ್ರಿಮಿನಲ್ಲ್ಸ್ ತಂಡಕ್ಕೆ ಸುಪಾರಿ ನೀಡುತ್ತಾನೆ. ಇದರ ಹಿಂದೆ ಬೀಳುವ ಕೃಷ್ಣ ಅಂಡ್ ಗ್ಯಾಂಗ್ ಸೋನು ಸಹಾಯ ಮೂಲಕ ಮಾಹಿತಿ ಪಡೆದು ಮತ್ತೊಂದು ಸಂಚನ ರೂಪಿಸಿ ಹಣವನ್ನು ಕದಿಯುವ ಸಮಯದಲ್ಲಿ ಕೃಷ್ಣ ಗುಂಡೇಟಿನಿಂದ ಪೊಲೀಸರ ಕೈಗೆ ಸಿಕ್ಕಿಬಿಡುತ್ತಾನೆ.

ತಾವು ಪ್ಲಾನ್ ಮಾಡಿದಂತೆ ತನ್ನ ಭಾಗದ ಹಣವನ್ನು ಒಂದು ಸ್ಥಳದಲ್ಲಿ ಇಡುವಂತೆ ತಿಳಿಸಿರುತ್ತಾನೆ. ಪೊಲೀಸರ ಟ್ರೀಟ್ಮೆಂಟ್ ಗೆ ಬಾಯ್ ಬಿಡದ ಕೃಷ್ಣ ಜೈಲಿನಿಂದ ಹೊರಬಂದು ಚಿನ್ನ ಇರುವ ಬ್ಯಾಗ್ ಹುಡುಕಿದರು ಸಿಗುವುದಿಲ್ಲ. ಮುಂದೆ ಅವನಿಗೆ ಕಾಣುವ ಕಠೋರ ಸತ್ಯ ಅರಿತು ಮತ್ತೊಂದು ರಣತಂತ್ರ ಮಾಡುತ್ತಾನೆ. ಅದು ಹಲವು ರೋಚಕ ತಿರುವುಗಳ ಸುಳಿಯಲ್ಲಿ ಸಾಗಿ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ನಿಲ್ಲುತ್ತದೆ.
ಕೃಷ್ಣ ಕಾಣುವ ಸತ್ಯ ಏನು…
ಚಿನ್ನದ ಬಿಸ್ಕೆಟ್ ಏನಾಯಿತು…
ಇದರ ಕಿಂಗ್ ಪಿನ್ ಯಾರು…
ಸೋನು ಎಲ್ಲಿ…
ಈ ಎಲ್ಲಾ ಅಂಶ ತಿಳಿಯಬೇಕಾದರೆ ನೀವು ಮಾರಿಗೋಲ್ಡ್ ನೋಡಬೇಕು.

ನಿರ್ದೇಶಕ ರಾಘವೇಂದ್ರ .ಎಂ. ನಾಯ್ಕ ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ವಿಭಿನ್ನವಾಗಿದ್ದು , ಸಸ್ಪೆನ್ಸ್ , ಥ್ರಿಲ್ಲರ್ ಮೂಲಕ ಕಳ್ಳ ಪೋಲಿಸ್ ಆಟದ ಮೇಲೆ ಬೆಳಕು ಚೆಲುವುದರ ಜೊತೆಗೆ ಕೆಲವು ಪೋಲಿಸ್ ಅಧಿಕಾರಿಗಳ ಕ್ರಿಮಿನಲ್ ಮೈಂಡನ ರಣತಂತ್ರವನ್ನು ಎತ್ತಿ ಹಿಡಿದಿದ್ದಾರೆ.

ಕಳ್ಳತನದ ಹಣದ ಹಿಂದೆ ಹೋದವರ ಬದುಕು ಮಣ್ಣು ಎನ್ನುವ ಜೊತೆಗೆ ಗೆಳೆತನ , ನಂಬಿಕೆ , ಪ್ರೀತಿ ಎಷ್ಟು ಜೀವಂತ ಎಂಬುವುದನ್ನು ಬಹಳ ಸೂಕ್ಷ್ಮವಾಗಿ ತೆರೆದಿಟ್ಟಿದ್ದಾರೆ. ಗೋಲ್ಡ್ ಸುತ್ತ ಸುತ್ತಲೇ ಹೆಚ್ಚು ತಿರುಗುವ ಮಾರ್ಗ ಸುಸ್ತಾಗಿಸುತ್ತದೆ. ಇನ್ನು ಸಂಭಾಷಣೆ ಬರೆದವರು ಸ್ವಲ್ಪ ಯೋಚಿಸಬೇಕಿತ್ತು ಅನಿಸುತ್ತೆ. ಕೆಲವೊಂದಷ್ಟು ಸುಷ್ಮವಾಗಿ ಗಮನ ಸೆಳೆದರೆ , ಮತ್ತೊಂದಷ್ಟು ಅಸಹ್ಯವಾಗಿ ಕೇಳುವುದಕ್ಕೆ ಮುಜುಗರ ಅನ್ನಿಸುತ್ತದೆ.

ಅತಿಯಾದರೆ ಅಮೃತವೂ ವಿಷ ಎನ್ನುವಂತಿದೆ. ಇಂತಹ ವಿಭಿನ್ನ ಚಿತ್ರ ನಿರ್ಮಿಸಿರುವ ನಿರ್ಮಾಪಕರ ರಘುವರ್ಧನ್ ಧೈರ್ಯವನ್ನು ಮೆಚ್ಚಲೇಬೇಕು. ಹಾಗೆಯೇ ಚಿತ್ರದ ಮೇಲು ಕೂಡ ಗಮನವಿರಬೇಕು. ಇನ್ನು ವೀರ್ ಸಮರ್ಥ ಸಂಗೀತ ಹಾಗೂ ಹಿನ್ನೆಲೆ ಸಂಗೀತ ಗಮನ ಸೆಳೆಯುತ್ತದೆ. ಅದೇ ರೀತಿ ಛಾಯಾಗ್ರಹಕ ಕೆ .ಎಸ್. ಚಂದ್ರಶೇಖರ್ ಕೈಚಳಕವೂ ಕೂಡ ಉತ್ತಮವಾಗಿದೆ.

Marigold

ಇನ್ನು ನಟ ದಿಗಂತ ಒಬ್ಬ ಕಳ್ಳನ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಮಾತಿನಲ್ಲಿ ಸುಳ್ಳಿನ ಸುರಿಮಳೆಯನ್ನ ಹರಿಸಿದ್ದಾರೆ. ಲವರ್ ಬಾಯ್ ಗೂ ಜೈ , ಕಳ್ಳನಿಗೂ ಸೈ ಎನ್ನುವಂತೆ ಪಾತ್ರಕ್ಕೆ ನ್ಯಾಯವನ್ನು ಕೊಟ್ಟಿದ್ದಾರೆ. ಇನ್ನು ನಟಿ ಸಂಗೀತ ಶೃಂಗೇರಿ ಕ್ಲಬ್ ಡಾನ್ಸರ್ ಪಾತ್ರವನ್ನು ಬಹಳ ಅಚ್ಚುಕಟ್ಟಾಗಿ ಸಿಕ್ಕ ಅವಕಾಶವನ್ನು ಉತ್ತಮವಾಗಿ ನಿಭಾಯಿಸಿದ್ದಾರೆ. ಇನ್ನು ಗೆಳೆಯರಾಗಿ ಯಶ್ ಶೆಟ್ಟಿ , ಕಾಕ್ರೋಚ್ ಸುದೀ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ.

ವಿಲನ್ ಪಾತ್ರದಾರಿ ವಜ್ರಾಂಗ್ ಶೆಟ್ಟಿ ಕೂಡ ಗಮನ ಸೆಳೆದಿದ್ದಾರೆ. ಇನ್ನು ಇಡೀ ಚಿತ್ರದ ಹೈಲೈಟ್ ಪಾತ್ರ ಎಂದರೆ ಸಂಪತ್ ಮೈತ್ರೇಯ, ಒಬ್ಬ ಪೊಲೀಸ್ ಪೇದೆಯಾಗಿ ಕಾಣಿಸಿಕೊಂಡರು , ಬಹುಮುಖ ಪ್ರತಿಭೆ ಎಂಬುದನ್ನ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಉಳಿದಂತೆ ಅಭಿನಯಿಸಿರುವ ಬಾಲಾ ರಾಜವಾಡಿ, ಮಹಂತೇಶ್, ಸಂದೀಪ್ ಮಲಾನಿ ಮತ್ತಿತರರು ಚಿತ್ರದ ಓಟಕ್ಕೆ ಉತ್ತಮ ಸಾತ್ ನೀಡಿದ್ದಾರೆ. ಇದೊಂದು ಸಸ್ಪೆನ್ಸ್ , ಥ್ರಿಲ್ಲರ್ , ಡ್ರಾಮಾ , ಆಕ್ಷನ್ ಚಿತ್ರವಾಗಿದ್ದು , ಒಮ್ಮೆ ನೋಡುವಂತಿದೆ.

error: Content is protected !!