Cini NewsSandalwood

“ಮಾನ್ ಸ್ಟರ್” ಚಿತ್ರ ಬಿಡುಗಡೆಗೆ ಸಿದ್ದ.

ಬಹುಮುಖ ಪ್ರತಿಭೆ ಆರನ್ ಕಾರ್ತಿಕ್ ವೆಂಕಟೇಶ್ ಕಥೆ, ಚಿತ್ರಕಥೆ , ಸಂಭಾಷಣೆ, ಸಂಗೀತ , ಸಾಹಿತ್ಯ , ನೃತ್ಯ ನಿರ್ದೇಶನ , ಡಬ್ಬಿಂಗ್ ಇಂಜಿನಿಯರ್ , ಹಿನ್ನೆಲೆ ಸಂಗೀತ , ವಿ.ಎಫ್. ಎಕ್ಸ್ ಜೊತೆಗೆ ನಿರ್ದೇಶನ ಮಾಡಿರುವಂತಹ ಚಿತ್ರ “ಮಾನ್ ಸ್ಟರ್”. ಇದು ಆರನ್ ಕಾರ್ತಿಕ್ ವೆಂಕಟೇಶ್ ನಿರ್ದೇಶನದ ಐದನೇ ಚಿತ್ರವಾಗಿದ್ದು , ಸಂಗೀತ ನಿರ್ದೇಶನದ 57ನೇ ಚಿತ್ರವಾಗಿದೆ.

ಎಸ್. ಪಿ .ಎಸ್ ರೆಡ್ಡಿ ಪ್ರೊಡಕ್ಷನ್ ಮೂಲಕ ಪುಟ್ಟರಾಜ ರೆಡ್ಡಿ ನಿರ್ಮಾಣದ ‌ “ಮಾನ್ ಸ್ಟರ್” ಚಿತ್ರ ಈಗ ಬಿಡುಗಡೆ ಹಂತವನ್ನು ತಲುಪಿದೆ. ಈ ಚಿತ್ರದಲ್ಲಿ ನಾಲ್ಕು ತಲೆಮಾರುಗಳ ಕಥೆ ತೋರಿಸಲಾಗಿದ್ದು, ಆಕ್ಷನ್ ಥ್ರಿಲ್ಲರ್ ಜಾನರ್ ನ ಈ ಚಿತ್ರದಲ್ಲಿ ಡ್ರಗ್ಸ್ ಮಾಫಿಯಾ ವಿರುದ್ಧ ಹೋರಾಡುವ ಸಾಮಾಜಿಕ ಕಳಕಳಿಯುಳ್ಳ ಅಂಶವು ಒಳಗೊಂಡಿದೆ. ಈ ಚಿತ್ರದಲ್ಲಿ ಮೂರು ನಾಯಕರಾಗಿ ಥ್ರಿಲ್ಲರ್ ಮಂಜು, ಧರ್ಮ ಕೀರ್ತಿರಾಜ್ ಹಾಗೂ ಪವನ್. ಎಸ್. ನಾರಾಯಣ್ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ನಿರ್ಮಾಪಕರ ಪುತ್ರ ಸಂತೋಷ್ ರೆಡ್ಡಿ ಸೂಪರ್ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ.

ವಿಶೇಷವಾಗಿ ಈ ಚಿತ್ರದಲ್ಲಿ ರಜನಿಕಾಂತ್ ಆಪ್ತಮಿತ್ರ ರಾಜ್ ಬಹದ್ದೂರ್, ಸಂಗೀತ ಯತಿರಾಜ್, ಕುರಿ ಬಾಂಡ್ ರಂಗ, ಯಶ್ವಿಕ , ವಿಕ್ಟರಿ ವಾಸು, ಗಣೇಶ್ ರಾವ್, ದುಬೈ ರಫಿಕ್, ರಾಬರ್ಟ್ , ನವಾಜ್ ಮುಂತಾದವರು ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ವಿನಯ್ ಮೂರ್ತಿ ಸಂಭಾಷಣೆ , ಸಂಕಲನ ಆಯುರ್ ಸ್ವಾಮಿ , ಛಾಯಾಗ್ರಹಣ ಸೂರ್ಯೋದಯ , ಸಾಹಸ ಡ್ಯಾನಿ ಹಾಗೂ ಥ್ರಿಲ್ಲರ್ ಮಂಜು , ಆಕಾಶ್ ನೃತ್ಯ ನಿರ್ದೇಶನವಿದೆ.

ಎಲ್ಲಾ ಅಂದುಕೊಂಡಂತೆ ಚಿತ್ರೀಕರಣ ಮುಗ್ದಿದ್ದು , ಸರಿಸುಮಾರು 35 ಕನ್ನಡ ಪ್ರತಿಭೆಗಳು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈಗಾಗಲೇ ಚಿತ್ರ ಸೆನ್ಸರ್ ಮಂಡಳಿಯಿಂದ ‘ ಎ ‘ ಸರ್ಟಿಫಿಕೇಟ್ ಪಡೆದುಕೊಂಡಿದೆ. ಕಲಾವಿದರು ಹಾಗೂ ತಂತ್ರಜ್ಞಾನರ ಸಹಕಾರದೊಂದಿಗೆ ಚಿತ್ರ ಉತ್ತಮವಾಗಿ ಮೂಡಿಬಂದಿದೆ ಎನ್ನುತ್ತಾರೆ ನಿರ್ದೇಶಕ ಆರನ್ ಕಾರ್ತಿಕ್ ವೆಂಕಟೇಶ್. ಸಸ್ಪೆನ್ಸ್ , ಥ್ರಿಲ್ಲರ್ ಜೊತೆಗೆ ಸಮಾಜಕ್ಕೆ ಒಂದು ಸಂದೇಶ ನೀಡುವ ಚಿತ್ರ ಇದಾಗಿದ್ದು , ಅತಿ ಶೀಘ್ರದಲ್ಲಿ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.

error: Content is protected !!