Cini NewsSandalwood

“ಫೈರ್ ಫ್ಲೈ ” ತಂಡವನ್ನು ಮೆಚ್ಚಿಕೊಂಡ ನಟ ಮೂಗು ಸುರೇಶ್

ಚಂದನವನದಲ್ಲಿ ಬಹಳಷ್ಟು ಚಿತ್ರಗಳಲ್ಲಿ ಅಭಿನಯಿಸಿದಂತ ಹಿರಿಯ ಕಲಾವಿದ ಮೂಗು ಸುರೇಶ್. ಬಹುತೇಕ ಹಾಸ್ಯ ಪಾತ್ರಗಳ ಜೊತೆಗೆ ಸಣ್ಣ ಪುಟ್ಟ ಪಾತ್ರಗಳಲ್ಲೂ ಕೂಡ ಅಭಿನಯಿಸಿ ಪ್ರೇಕ್ಷಕರ ಮೆಚ್ಚುಗೆಯನ್ನು ಪಡೆದಂತ ಈ ಹಿರಿಯ ನಟ ಫೈರ್ ಫ್ಲೈ ಚಿತ್ರತಂಡವನ್ನು ಮೆಚ್ಚಿಕೊಂಡಿದ್ದಾರೆ.

ಶ್ರೀ ಮುತ್ತು ಸಿನಿ ಸರ್ವಿಸ್ ಮೂಲಕ ನಿವೇದಿತಾ ಶಿವರಾಜ್ ಕುಮಾರ್ ನಿರ್ಮಾಣದ ಈ ಚಿತ್ರವನ್ನು ಯುವ ನಿರ್ದೇಶಕ ವಂಶಿ ಸಾರಥ್ಯ ವಹಿಸಿಕೊಂಡಿದ್ದು , ಈ ಚಿತ್ರದ ಚಿತ್ರೀಕರಣ ಸಮಯದಲ್ಲಿ ತಮಗಾದ ಅನುಭವವನ್ನು ಮೂಗು ಸುರೇಶ್ ಮಾತನಾಡುತ್ತಾ ಈ ಸಿನಿಮಾ ಮೇಕಿಂಗ್ ನನಗೆ ಬೇರೆ ತರ ಖುಷಿ ಕೊಡುತ್ತೆ.

ನನ್ನ ಸಿನೆಮಾ ಅನುಭವದಲ್ಲಿ ತುಂಬಾ youngster ಜೊತೆ ಕೆಲಸ ಮಾಡಿದ್ದೇನೆ. ಆದರೆ ಈ ತಂಡದ ಕೆಲಸ , ಪೂರ್ವ ತಯಾರಿ , ಕೆಲಸ ಮಾಡುವ ರೀತಿ ತುಂಬಾ ಚೆನ್ನಾಗಿತ್ತು. ಈ ತಂಡ ನನ್ನ ಮಗು ತರ ನೋಡ್ಕೊಂಡಿದ್ದು ನನಗೆ ತುಂಬಾ ಖುಷಿ ಕೊಟ್ಟಿದ್ದು ಮತ್ತೆ ಮತ್ತೆ ಕೆಲಸ ಮಾಡಬೇಕು ಅನಿಸುತ್ತದೆ.

ಈ  “ಫೈರ್ ಫ್ಲೈ ” ಚಿತ್ರದಲ್ಲಿ ಒಂದು ಮುಖ್ಯ ಪಾತ್ರ ಮಾಡುತ್ತಿದ್ದೇನೆ. ಇದರಲ್ಲಿ ಅಭಿನಯಿಸುವುದಕ್ಕೆ ಬಹಳಷ್ಟು ಅವಕಾಶವಿತ್ತು. ಈ ಪಾತ್ರಕ್ಕಿರುವ ಮಾನವೀಯತೆ , ಸೆಂಟಿಮೆಂಟ್ ಅಂಶಗಳು ಜನರಿಗೆ ಖಂಡಿತ ಇಷ್ಟವಾಗುತ್ತದೆ. ನನ್ನ ಇಷ್ಟು ವರ್ಷದ ವೃತ್ತಿ ಬದುಕಿನಲ್ಲಿ ನನಗೆ ಈ ತರಹದ ಪಾತ್ರ ಸಿಕ್ಕಿದ್ದು ನನಗೆ ಖುಷಿ ಇದೆ.

ನಾನು ನಿರ್ಮಾಪಕರನ್ನು ಭೇಟಿಯಾಗಿಲ್ಲ , ಶೂಟಿಂಗ್‌ ಸೆಟ್‌ ನಲ್ಲಿ ನೋಡುತ್ತಿದ್ದೆ. ಸಿನೆಮಾ ತಂಡಕ್ಕೆ ಮತ್ತು ನಿರ್ದೇಶಕರಿಗೆ ಕೊಟ್ಟಿರುವ ಸ್ವತಂತ್ರ ನನಗೆ ಬಹಳ ಖುಷಿಯಾಯಿತು. ಒಳ್ಳೆ ಚಿತ್ರ ಮೂಡಿಬರಲು ನಿರ್ಮಾಪಕರು ಸ್ವತಂತ್ರ ನೀಡುವುದು ಬಹಳ ಮುಖ್ಯ. ದೊಡ್ಮನೆ ಕುಟುಂಬದ ಕುಡಿ ಶಿವರಾಜ್ ಕುಮಾರ್ ಅವರ ಸುಪುತ್ರಿ ನಿವೇದಿತಾ ಅವರು ಮುಂದಿನ ತಲೆಮಾರಿನವರಿಗೆ ಕೆಲಸ ಕೊಟ್ಟಿದ್ದು ತುಂಬಾ ಖುಷಿ ಕೊಟ್ಟದೆ.

ಫೈರ್ ಫ್ಲೈ ಚಿತ್ರ ಒಂದು ಹೊಸ ಯುವ ತಂಡ ಎಲ್ಲೆರಲ್ಲೂ ಬೇಳಿಬೇಕು ಅನ್ನೋ ಉತ್ಸಾಹ ಇದೆ. ತುಂಬಾ ಶ್ರಧ್ಧೆ ಇಟ್ಟು ಕೆಲಸ ಮಾಡ್ತಾರೆ. ಅವರಲ್ಲಿ ಇದ್ದ ಹೊಂದಾಣಿಕೆ ಹಾಗೂ ಅವರ ಕೆಲಸದ ಕ್ರಮ ನನಗೆ ತುಂಬಾ ಇಷ್ಟ ಆಯಿತು. ನಾವು ಮೈಸೂರು ಮತ್ತು ಕನಕಪುರದ ಹೊರಾಂಗಣದಲ್ಲಿ ಶೂಟಿಂಗ್‌ ಮಾಡಿದ್ವಿ ಕನಕಪುರದಲ್ಲಿ ಒಂದು ಹೂ ತೋಟದಲ್ಲಿ ರಾತ್ರಿ ಶೂಟ್‌ ಮಾಡ್ಬೇಕಾದ್ರೆ ತುಂಬಾ ಚಳಿ ಇತ್ತು ಮತ್ತು ನನಗೆ ನಿದ್ದೆ ಬರ್ತಾ ಇತ್ತು. ಆದರೆ ನಿರ್ದೇಶಕರು ಯಾವಾಗ ಲೈಟ್ಸ್ ಆನ್ ಅನ್ನೋರೋ ಅಲ್ಲಿ ಒಂದು ಹೊಸ ಲೋಕ ಸೃಷ್ಟಿ ಆಗ್ತಿತ್ತು.

ನಾವು ತುಂಬಾ ಹುರುಪಿನಿಂದ ಕೆಲಸ ಮಾಡುತ್ತಿದ್ದು , ನಿರ್ದೇಶಕ ವಂಶಿ ಕೂಡ ಕಲಾವಿದರಾಗಿದ್ದರಿಂದ ಇಷ್ಟೇ ಬೇಕು , ಹೀಗೆ ಬರಬೇಕು ಅಂತ ತುಂಬಾ ಪ್ಲಾನ್‌ ಮಾಡಿಕೊಂಡು ಬರುತ್ತಿದ್ದರು. ನಿರ್ದೇಶಕರು ಬಹಳ ನ್ಯಾಚುರಲ್ ಆಗಿ ಪಾತ್ರವನ್ನು ತೆಗೆಸುತ್ತಿದ್ದರು. ಚಿತ್ರೀಕರಣ ಮುಗಿದು , ಡಬ್ಬಿಂಗ್ ಸಮಯದಲ್ಲಿ ನನ್ನ ಸನ್ನಿವೇಶಗಳನ್ನು ನೋಡಿದಾಗ ತುಂಬಾ ಅದ್ಭುತವಾಗಿ ಮನಮುಟ್ಟುವಂತೆ ಚಿತ್ರ ಬಂದಿದೆ. ಈ ಒಂದು ಚಿತ್ರ ಖಂಡಿತ ಪ್ರೇಕ್ಷಕರನ್ನ ಸೆಳೆಯುತ್ತದೆ. ಬಹಳ ವಿಭಿನ್ನವಾಗಿ ಮೂಡಿ ಬಂದಿರುವ ಈ ಚಿತ್ರ ಯುವತಂಡ ಶ್ರಮಕ್ಕೆ ಕನ್ನಡಿಯಂತೆ ಮೂಡಿ ಬಂದಿದೆಯಂತೆ

error: Content is protected !!