N-1 ಕ್ರಿಕೆಟ್ ಅಕಾಡೆಮಿ ಪ್ರೆಸೆಂಟ್ಸ್ WWCL- ಟ್ರೋಪಿಗೆ ಮುತ್ತಿಟ್ಟ ಮಂಜು 11 ತಂಡ.
ಟಿಪಿಎಲ್, IPT12ಯಂತಹ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಿ ಸಕ್ಸಸ್ ಕಂಡಿರುವ N1 ಕ್ರಿಕೆಟ್ ಅಕಾಡೆಮಿಯ ಸುನೀಲ್ ಕುಮಾರ್ ಬಿ ಆರ್ ರವರು ಹೆಣ್ಣು ಮಕ್ಕಳಿಗಾಗಿ ಮೊದಲ ಬಾರಿಗೆ ಆಯೋಜಿಸಿದ್ದ WWCL-ವುಮೇನ್ಸ್ ವಿಂಡ್ ಬಾಲ್ ಕ್ರಿಕೆಟ್ ಗೆ ತೆರೆಬಿದ್ದಿದೆ. ಬೆಂಗಳೂರಿನ ಚಿಕ್ಕನಹಳ್ಳಿಯಲ್ಲಿರುವ ಗ್ರೀನ್ ಸ್ಪೋರ್ಟ್ ವಿಲೇಜ್ ಸ್ಟೇಡಿಯಂನಲ್ಲಿ ಇದೇ ತಿಂಗಳ 20, 21 ಹಾಗೂ 22 ಈ ಮೂರು ದಿನಗಳಲ್ಲಿ ಕ್ರಿಕೆಟ್ ಟೂರ್ನಮೆಂಟ್ ನಡೆಯಿತು.
ಈ ಟೂರ್ನಮೆಂಟ್ ನಲ್ಲಿ 7 ತಂಡಗಳು ಭಾಗಿಯಾಗಿದ್ದು, ಒಟ್ಟು 98 ನಟಿಯರು WWCL-ವುಮೇನ್ಸ್ ವಿಂಡ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆಟವಾಡಿದ್ದಾರೆ. ಮಂಜುನಾಥ್-ನಾಗಯ್ಯ ಒಡೆತನದ, ನಟಿ ಯಶ ಶಿವಕುಮಾರ್ ನಾಯಕತ್ವದ ಮಂಜು 11 ತಂಡ ವುಮೇನ್ಸ್ ವಿಂಡ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಟ್ರೋಫಿಗೆ ಮುತ್ತಿಟ್ಟಿದೆ. ಮಿಥುನ್ ರೆಡ್ಡಿ ಒಡೆತನದ ದಿವ್ಯಾ ಉರುಡುಗ ನಾಯಕತ್ವದ ಎಂಆರ್ ಫ್ಯಾಂಥರ್ಸ್ಸ್ ಟೀಂ ರನ್ನರ್ ಅಪ್ ಆಗಿ ಹೊರಹೊಮ್ಮಿದೆ.
WWCL-ವುಮೇನ್ಸ್ ವಿಂಡ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮಂಜು 11 ತಂಡದ ಹೇಮಾ ತಿಮ್ಮಯ್ಯ ಪರ್ಪಲ್ ಕ್ಯಾಪ್ ಪಡೆದುಕೊಳ್ಳುವುದರ ಜೊತೆಗೆ ವುಮೇನ್ ಆಫ್ ದಿ ಸೀರೀಸ್ ಆಗಿ ಹೊರಹೊಮ್ಮಿದ್ದಾರೆ. ಬುಲ್ ಸ್ಕ್ಯಾಡ್ ತಂಡದ ಕವಿತಾ ಗೌಡ ಆರೇಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ. ವಿನ್ನರ್ ತಂಡಕ್ಕೆ 2 ಲಕ್ಷ ರೂಪಾಯಿ ಕ್ಯಾಶ್ ಹಾಗೂ ರನ್ನರ್ ಅಪ್ ತಂಡಕ್ಕೆ 1 ಲಕ್ಷ ರೂ ನೀಡಲಾಗಿದೆ. ಆರೆಂಜ್ ಹಾಗೂ ಪರ್ಪಲ್ ಕ್ಯಾಪ್ ಪಡೆದುಕೊಂಡವರಿಗೆ 50 ಸಾವಿರ ನೀಡಲಾಗಿದ್ದು, ವುಮೇನ್ ಆಫ್ ದಿ ಸೀರೀಸ್ ಗೆ 1 ಲಕ್ಷ ರೂ ಕೊಡಲಾಗಿದೆ.
ಟೂರ್ನಮೆಂಟ್ ನಲ್ಲಿ ಭಾಗಿಯಾದ ತಂಡಗಳು, ಓನರ್ ಹಾಗೂ ಕ್ಯಾಪ್ಟನ್
1.AVR ಟಸ್ಕರ್ಸ್-ಅರವಿಂದ್-ವೆಂಕಟೇಶ್ ರೆಡ್ಡಿ-ದಿವ್ಯಾ ಸುರೇಶ್
2.ಎಂಆರ್ ಫ್ಯಾಂಥರ್ಸ್ಸ್-ಮಿಥುನ್ ರೆಡ್ಡಿ-ದಿವ್ಯಾ ಉರುಡುಗ
3.ಬುಲ್ ಸ್ಕ್ಯಾಡ್-ಮೋನಿಷ್-ಶಾನ್ವಿ ಶ್ರೀವಾಸ್ತವ
4.ವಿನ್ ಟೈಮ್ ರಾಕರ್ಸ್ಸ್-ಅನಿಲ್ ಕುಮಾರ್ ಬಿ.ಆರ್-ಆಶಾ ಭಟ್
5.ಮಂಜು 11-ಮಂಜುನಾಥ್-ನಾಗಯ್ಯ-ಯಶ ಶಿವಕುಮಾರ್
6.ಬಯೋಟಾಪ್ ಲೈಫ್ ಸೇವಿಯರ್ಸ್-ಪ್ರಸನ್ನ-ವಿನು ಜೋಸ್-ಅಪೂರ್ವ
7.ಖುಷಿ X1- ಭೂಮಿ ಶೆಟ್ಟಿ