ಆತ್ಮದ ಪ್ರೀತಿ, ನೋವಿನ ತಳಮಳ ‘ನಾ ನಿನ್ನ ಬಿಡಲಾರೆ’ (ಚಿತ್ರವಿಮರ್ಶೆ – ರೇಟಿಂಗ್ : 3.5/5)
ರೇಟಿಂಗ್ : 3.5/5
ಚಿತ್ರ : ನಾ ನಿನ್ನ ಬಿಡಲಾರೆ
ನಿರ್ದೇಶಕ : ನವೀನ್.ಜಿ. ಎಸ್
ನಿರ್ಮಾಪಕಿ : ಭಾರತಿ ಬಾಲಿ
ಸಂಗೀತ : ತ್ಯಾಗರಾಜ್
ಛಾಯಾಗ್ರಹಣ : ವೀರೇಶ್
ತಾರಾಗಣ : ಅಂಬಾಲಿ ಭಾರತಿ, ಪಂಚಿ , ಕೆ. ಎಸ್. ಶ್ರೀಧರ್, ಶ್ರೀನಿವಾಸ್ ಪ್ರಭು, ಹರಿಣಿ ಶ್ರೀಕಾಂತ್, ಸೇರುಂಡೆ ರಘು, ಮಹಾಂತೇಶ್ ಹಾಗೂ ಮುಂತಾದವರು…
ಹಾರರ್ ,ಸಸ್ಪೆನ್ಸ್ , ಥ್ರಿಲ್ಲರ್ , ಮರ್ಡರ್ ಮಿಸ್ತ್ರಿ ಕಥಾನಕಗಳು ಪ್ರೇಕ್ಷಕರನ್ನ ಸೆಳೆಯುವುದರಲ್ಲಿ ಒಂದು ಹೆಜ್ಜೆ ಮುಂದೆ ಎನ್ನಬಹುದು. ಅಂತದ್ದೇ ಒಂದಷ್ಟು ವಿಷಯಗಳ ಮೂಲಕ ಪ್ರೀತಿ , ಸ್ನೇಹ , ಸಂಬಂಧ , ಕಾಯಿಲೆ , ಸೇಡು , ಅನುಕಂಪದ ಸುತ್ತ ರೋಚಕ ತಿರುವುಗಳನ್ನ ಬೆಸೆದುಕೊಂಡು ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ ” ನಾ ನಿನ್ನ ಬಿಡಲಾರೆ”. ಮಡಿಕೇರಿಯ ಸಮೀಪ ದಟ್ಟ ಅರಣ್ಯದ ನಡುವೆ ಇರುವ ಗೆರುಗಡ್ಡ ಎಸ್ಟೇಟ್ ಪ್ರಧಾನ ಸ್ಥಳ. ಆತ್ಮದ ಚಲನವಲನಗಳ ತಿಳಿದುಕೊಳ್ಳಲು ಹೋಗುವ ಘೋಸ್ಟ್ ಆಂಟರಗಳ ಸುಳಿವು ಕೂಡ ಆ ಸ್ಥಳದಲ್ಲಿ ನಾಪತ್ತೆಯಾಗುತ್ತದೆ. ಇವೆಂಟ್ ಮ್ಯಾನೇಜ್ಮೆಂಟ್ ನಡೆಸುವ ರಿಷಿ (ಪಚ್ಚಿ) ಕಾರ್ಯಕ್ರಮ ಮುಗಿಸಿ ಇರುವಾಗ ಮಾರ್ಗ ಮದ್ಯ ರಕ್ತ ಸಿಕ್ತದಲ್ಲಿ ಸಿಗುವ ಅಂಜಲಿ (ಅಂಬಾಲಿ ಭಾರತಿ).
ಟ್ರೀಟ್ಮೆಂಟ್ ನೀಡಿದರು , ಹಿಂದಿನ ವಿಚಾರಗಳೆಲ್ಲ ಮೆಮೊರಿ ಲಾಸ್ ಆಗಿರುತ್ತದೆ.
ತನ್ನ ತಾಯಿ , ಗೆಳೆಯರೊಟ್ಟಿಗೆ ಅಂಜಲಿ ಯಾರು… ಏನು… ಎಂಬ ಹುಡುಕಾಟಕ್ಕೆ ಮುಂದಾಗುವ ರಿಷಿ. ಪೊಲೀಸ್ ಇನ್ಸ್ಪೆಕ್ಟರ್ ಸಹಾಯದಿಂದ ಅಂಜಲಿ
ಇದ್ದ ಗೆರೆಗಡ್ಡ ಎಸ್ಟೇಟ್ ಗೆ ಬಂದರು ಯಾವುದೇ ಸುಳಿವು ಸಿಗುವುದಿಲ್ಲ , ಆದರೆ ಅಗೋಚರ ಶಕ್ತಿಯ ಕಾಟಕ್ಕೆ ಬೆಚ್ಚಿ ಬೀಳುತ್ತಾರೆ.
ನಿಜವಾದ ಸತ್ಯ ಏನು ಎಂದು ತಿಳಿಯಲು ಹೊರಟಾಗ ಬಹಳ ವರ್ಷಗಳ ನಂತರ ಮತ್ತೆ ತಂದೆ , ತಾಯಿ , ಮುದ್ದಾದ ಮಗಳು ಎಸ್ಟೇಟ್ ಗೆ ಮರಳಿ ವಾಸ ಮಾಡುತ್ತಾರೆ. ಒಮ್ಮೆ ಆ ಮನೆಯ ಕೆಲಸಗಾರರ ಮೂಲಕ ಹೆಣ್ಣು ಮಗಳು ಸೇರಿಕೊಳ್ಳುತ್ತಾಳೆ. ಆಕೆಯ ಕಣ್ಣು ಅಂಜಲಿ ಮೇಲೆ ಇರುತ್ತೆ. ಇದರ ನಡುವೆ ಅಂಜಲಿ ತನ್ನ ಶಾಲಾ ದಿನದ ಗೆಳೆಯರನ್ನೆಲ್ಲ ಭೇಟಿ ಮಾಡುತ್ತಾಳೆ.
ಅದರಲ್ಲೊಬ್ಬ ಬಾಲ್ಯದ ಗೆಳೆಯ ಪ್ರವೀಣನಿಗೆ ಗ್ರೋಥ್ ಹಾರ್ಮೋನ್ ಡಿಫೀಶಿಯನ್ಸಿ ಕಾಯಿಲೆಯಿಂದ ಬಳಲುತ್ತಿದ್ದರು ಅಂಜಲಿಯನ್ನ ಇಷ್ಟಪಡುತ್ತಿರುತ್ತಾನೆ. ಇನ್ನು ಮನೆಯಲ್ಲಿರುವ ಮಾತು ಬಾರದ ಹುಡುಗಿಯಿಂದ ಆಗುವ ಅನಾಹುತಕ್ಕೆ ಕೋಪಗೊಳ್ಳುವ ಅಂಜಲಿ ತಂದೆ ಆ ಕ್ರೂರಿಯನ್ನ ಸುಟ್ಟು ಹಾಕುತ್ತಾನೆ. ಮುಂದೆ ಎದುರಾಗುವ ರೋಚಕ ಘಟನೆಗಳು ಹಲವು ಸತ್ಯಗಳನ್ನ ಹೊರಹಾಕುತ್ತಾ ಹೋಗುತ್ತದೆ.
ಎಸ್ಟೇಟ್ನಲ್ಲಿ ಸತ್ತಿದ್ದು ಯಾರು..
ಅಂಜಲಿ ಬದುಕು ಏನಾಗುತ್ತೆ…
ರಿಷಿಗೆ ಸಿಗುವ ಸತ್ಯ ಏನು…
ಆತ್ಮ ಇದಿಯೋ… ಇಲ್ಲವೋ…
ಕ್ಲೈಮಾಕ್ಸ್ ಉತ್ತರ ಏನು…
ಈ ಎಲ್ಲಾ ವಿಚಾರ ತಿಳಿದುಕೊಳ್ಳಕ್ಕೆ ಒಮ್ಮೆ ಈ ಚಿತ್ರ ನೋಡಬೇಕು.
ಇನ್ನೂ ಈ ಚಿತ್ರದ ನಿರ್ದೇಶಕ ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ಬಹಳ ಕುತೂಹಲಕಾರಿಯಾಗಿ ಸಾಗಿತ್ತದೆ. ಬಾಲ್ಯದ ಸ್ನೇಹ , ಪ್ರೀತಿ , ತಂದೆ-ತಾಯಿಯ ಮಮಕಾರ , ವಿಚಿತ್ರ ಕಾಯಿಲೆಗಳ ನೋವು , ಬದುಕಿನ ಏರುಪೇರುಗಳನ್ನು ಬಹಳ ಅಚ್ಚುಕಟ್ಟಾಗಿ ತೆರೆಯ ಮೇಲೆ ತೆರೆದಿಟ್ಟಿದ್ದಾರೆ. ಚಿತ್ರಕಥೆ ಕುತೂಹಲಕಾರಿಯಾಗಿದ್ದು , ದ್ವಿತೀಯ ಭಾಗ ಗಮನ ಸೆಳೆಯುತ್ತದೆ. ಚಿತ್ರದ ಓಟ ಇನ್ನಷ್ಟು ಹಿಡಿತ ಗೊಳಿಸಿದರೆ ಚೆನ್ನಾಗಿರುತ್ತಿತ್ತು. ತಾಂತ್ರಿಕವಾಗಿ ಎಫೆಕ್ಟ್ಸ್ , ರೀ-ರೇಕಾರ್ಡಿಂಗ್ ಹೆಚ್ಚು ಆಕರ್ಷಕವಾಗಿದೆ. ರಾಯರ ಹಾಡು ಸೊಗಸಾಗಿದ್ದು , ಉಳಿದ ಹಾಡುಗಳ ಸಂಗೀತಕ್ಕೂ ಹೆಚ್ಚು ಹೊತ್ತು ಕೊಡಬಹುದಿತ್ತು. ಛಾಯಾಗ್ರಾಹಕರ ಕೈಚಳಕ ಅಚ್ಚುಕಟ್ಟಾಗಿದೆ. ಸಂಕಲನ , ಸಾಹಸ ಉತ್ತಮವಾಗಿದೆ.
ಇನ್ನು ಪ್ರಧಾನ ಪಾತ್ರದಲ್ಲಿ ನಾಯಕಿಯಾಗಿ ಅಭಿನಯಿಸಿರುವ ಅಂಬಾಲಿ ಭಾರತಿ ಮುದ್ದಿನ ಮಗಳಾಗಿ , ಆತ್ಮವನ್ನು ಆವರಿಸಿಕೊಂಡಿರುವ ರೀತಿಯಲ್ಲಿ ಸಿಕ್ಕ ಅವಕಾಶಕ್ಕೆ ಶ್ರಮಪಟ್ಟುದ್ದು , ಆಕ್ಷನ್ ದೃಶ್ಯಗಳಲ್ಲಿ ಸೈ ಎನ್ನುವಂತೆ ಹೊಡೆದಾಡಿದ್ದು , ನಟನೆ ವಿಚಾರದಲ್ಲಿ ಇನ್ನಷ್ಟು ತಾಲಿಮು ಅಗತ್ಯ ಎನಿಸುತ್ತದೆ.
ನಾಯಕನಿಗೆ ಅಭಿನಯಿಸಿರುವ ಪಚ್ಚಿ. ಎಸ್ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ವಿಶೇಷವಾಗಿ ಗುರುವಿನ ಪಾತ್ರದಲ್ಲಿ ಕೆ. ಎಸ್. ಶ್ರೀಧರ್ ಗಮನ ಸೆಳೆದಿದ್ದು , ಸೀರುಂಡೆ ರಘು ನಾಯಕನ ಗೆಳೆಯನಾಗಿ ನಗಿಸುವ ಜೊತೆ ಪರದಾಡುವ ಸ್ಥಿತಿಯನ್ನು ಎದುರಿಸಿದ್ದಾರೆ. ಒಂದಷ್ಟು ಪಾತ್ರಗಳನ್ನ ಇನ್ನು ಹೆಚ್ಚು ಬಳಸಿಕೊಳ್ಳಬಹುದಿತ್ತು. ಉಳಿದಂತೆ ಬರುವ ಎಲ್ಲಾ ಪಾತ್ರಧಾರಿಗಳು ಚಿತ್ರದ ಓಟಕ್ಕೆ ಸಾತ್ ನೀಡಿದ್ದಾರೆ. ದೈವದ ಶಕ್ತಿ , ದೆವ್ವದ ಕಾಟದ ನಡುವೆ ಜನಸಾಮಾನ್ಯರು ಎದುರಿಸುವ ಕಷ್ಟಗಳನ್ನ ಕುತೂಹಲಕಾರಿಯಾಗಿ ಸಿರಿಯಾ ಮೇಲೆ ತಂದಿರುವ ಈ ಚಿತ್ರವನ್ನು ಒಮ್ಮೆ ನೋಡುವಂತಿದೆ.