ಯುವ ಪ್ರತಿಭೆಗಳ “ನಾನ್ ಪೋಲಿ” ಚಿತ್ರದ ಸಾಂಗ್ ಬಿಡುಗಡೆ.
ಸ್ನೇಹ, ಪ್ರೀತಿ ಹಾಗೂ ತಾಯಿ ಸೆಂಟಿಮಂಟ್ ಸುತ್ತ ನಡೆಯುವ ಕಥಾಹಂದರ ಒಳಗೊಂಡ ಚಿತ್ರ ನಾನ್ ಪೋಲಿ. ಯಶವಂತ್, ಹರೀಶ್, ನಾಯಕಿ ದಿಶಾ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರಕ್ಕೆ ನಾಯಕ ಯಶವಂತ್ ಎಂ. ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿಕೊಂಡು ಬಿಡುಗಡೆಗೆ ಸಿದ್ದವಾಗುತ್ತಿರುವ ಈ ಚಿತ್ರದ ಲಿರಿಕಲ್ ಹಾಡಿನ ಬಿಡುಗಡೆ ಸಮಾರಂಭ ಬಸವೇಶ್ವರ ನಗರದ ಡಾ.ರಾಜ್‌ಕುಮಾರ್ ಕಲಾಭವನದಲ್ಲಿ ನೆರವೇರಿತು, ಚೇತನ್ ಅವರ ಸಾಹಿತ್ಯ ಹಾಗೂ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ‘ಯಾರೇ ನೀ ಯಾರೇ’ ಎಂದು ಪ್ರಾರಂಭವಾಗುವ ಈ ಹಾಡಿಗೆ ಚೇತನ್ ಮತ್ತು ಅಂಜನಾ ಪಿ.ರಾವ್ ದನಿಯಾಗಿದ್ದಾರೆ. ಈ. ಹಾಡಲ್ಲಿ ನಾಯಕ ಹರೀಶ್, ದಿಶಾ ಶೆಟ್ಟಿ ಅಭಿನಯಿಸಿದ್ದಾರೆ. ಯುವ ಸಂಘಟಕ ಚಿ.ನಾ. ರಾಮು ಸೇರಿದಂತೆ ಹಲವಾರು ಮುಖಂಡರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಚಿತ್ರತಂಡಕ್ಕೆ ಶುಭ ಹಾರೈಸಿದರು. ವೇದಿಕೆಯಲ್ಲಿ ಚಿನಾ ರಾಮು ಮಾತನಾಡುತ್ತ ಸೋದರ ಮೂರ್ತಿ ಬಂದು ನನ್ನ ಮಗ ಒಂದು ಸಿನಿಮಾ ಮಾಡ್ತಿದಾನೆ, ನೀವು ಬರಬೇಕು ಎಂದರು. ಹೊಸ ಪ್ರತಿಭೆಗಳ ಈ ಪ್ರಯತ್ನಕ್ಕೆ ಶುಭ ಹಾರೈಸಲು ನಾನಿಲ್ಲಿ ಬಂದಿದ್ದೇನೆ ಎಂದರು.
ನಾಯಕ ಕಂ ನಿರ್ದೇಶಕ ಯಶವಂತ್ ಮಾತನಾಡುತ್ತ ಆರಂಭದಲ್ಲಿ ಶಾರ್ಟ್ ಮೂವೀ ಮಾಡಬೇಕೆಂದು ಹೊರಟಿದ್ದೆವು. ನಂತರ ಚಲನಚಿತ್ರವನ್ನೇ ಮಾಡುವಂತಾಯಿತು, ನನಗೆ ಕೀರ್ತಿವರ್ಧನ್ ಅವರೇ ಈ ಟೀಮ್ ಪರಿಚಯ ಮಾಡಿಕೊಟ್ಟರು, ಅಲ್ಲದೆ ಮೇಕಿಂಗ್ ಬಗ್ಗೆ ಸಾಕಷ್ಟು ಹೇಳಿಕೊಟ್ಟರು, ನಾನ್ ಪೋಲಿ ಇಬ್ಬರು ಸ್ನೇಹಿತರ ಕಥೆ, ಒಬ್ಬ ಶ್ರೀಮಂತ. ಮತ್ತೊಬ್ಬ ಮಿಡಲ್‌ಕ್ಲಾಸ್ ಹುಡುಗ, ತಾಯಿ ಇಲ್ಲದವನಿಗೇ ತಾಯಿಯ ಬೆಲೆ ಏನೆಂದು ಗೊತ್ತಿರುತ್ತೆ, ಈ ನಡುವೆ ಒಂದು ಪ್ರೀತಿಯೂ ಇರುತ್ತೆ, ನಾಯಕ ಬಾಲ್ಯದ ಗೆಳೆತನವನ್ನು ಉಳಿಸಿಕೊಳ್ಳಲು ಏನೇನೆಲ್ಲ ಹೋರಾಟ ಮಾಡುತ್ತಾನೆ, ಕಾಲೇಜಿಗೆ ಅಂತ ಹೋಗೋ ಹುಡುಗರು ಏನೆಲ್ಲ ಮಾಡ್ತಾರೆ ಅದೆಲ್ಲವನ್ನೂ ಈ ಚಿತ್ರದ ಮೂಲಕ ಹೇಳೋ ಪ್ರಯತ್ನ ಮಾಡಿದ್ದೇವೆ, ಮದರ್ ಸೆಂಟಿಮೆಂಟ್. ಸ್ನೇಹ ಸಂಬಂಧದ ಜತೆಗೆ ಒಂದು ಲವ್ ಸ್ಟೋರಿನೂ ಚಿತ್ರದಲ್ಲಿದೆ, ಇಡೀ ಫ್ಯಾಮಿಲಿ ಕೂತು ನೋಡುವಂಥ ಎಂಟರ್ ಟೈನರ್ ಇದು ಎಂದು ಹೇಳಿದರು.
ಮತ್ತೊಬ್ಬ ನಾಯಕ ಹರೀಶ್ ಮಾತನಾಡುತ್ತ ಸ್ನೇಹಕ್ಕೆ ಹೆಚ್ಚು ಬೆಲೆ ಕೊಡುವಂಥ, ನೇಟ ಮಾತಿನ ಹುಡುಗನ ಪಾತ್ರ ನನ್ನದು ಎಂದು ಹೇಳುತ್ತ, ನನ್ನ ಮಗ ಬೆಳೆಯಬೇಕೆಂಬ ಉದ್ದೇಶದಿಂದ ಈ ಚಿತ್ರಕ್ಕೆ ನನ್ನ ತಂದೆ ತುಂಬಾ ಸಹಕಾರ ನೀಡಿದ್ದಾರೆ ಎನ್ನುತ್ತ ತಂದೆ ವೆಂಕಟೇಶ್ ಅವರನ್ನು ವೇದಿಕೆಗೆ ಕರೆತಂದು ಪರಿಚಯಿಸಿದರು.
ಛಾಯಾಗ್ರಾಹಕ ಕೀರ್ತಿವರ್ಧನ್ ಮಾತನಾಡಿ ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ, ಕ್ಲೈಮ್ಯಾಕ್ಸ್ ಫೈಟ್ ಚಿತ್ರದ ಹೈಲೈಟ್. ಆಚಾರ್ಯ ಕಾಲೇಜ್ ಹತ್ತಿರದ ಫಾರೆಸ್ಟ್ ಏರಿಯಾದಲ್ಲಿ ಅದನ್ನು ಶೂಟ್ ಮಾಡಿದೆವು, ಭಾರ್ಗವ್ ಒಳ್ಳೇ ಟೆಕ್ನೀಷಿಯನ್, ವಿಲನ್ ಪಾತ್ರದಲ್ಲಿ ದೇವರಾಜ್ ವಿಭಿನ್ನವಾದ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ ಎಂದರು. ಸಂಗೀತ ನಿರ್ದೇಶಕ ಚೇತನ್ ಮಾತನಾಡುತ್ತ ನನ್ನ ಸಂಗೀತ ನುರ್ದೇಶನದ ಮೊದಲ ಚಿತ್ರವಿದು, ಚಿಕ್ಕದಾಗಿ ಆರಂಭವಾದ ಸಿನಿಮಾ ಬರ‍್ತಾ ಬರ‍್ತಾ ದೊಡ್ಡದಾಗುತ್ತಾ ಹೋಯ್ತು ಎಂದರು.
ನಿರ್ಮಾಪಕ ಮೂರ್ತಿ ಮಾತನಾಡುತ್ತ ಆರಂಭದಲ್ಲಿ ಈ ಹುಡುಗರೆಲ್ಲ ಸೇರಿ ಏನೋ ಒಂದು ಸಿನಿಮಾ ಮಾಡ್ತಿದಾರೆ ಅಂದ್ಕೊಂಡಿದ್ದೆ, ಆದರೆ ಸಿನಿಮಾ ಅರ್ಧದಲ್ಲೇ ನಿಂತೋಯ್ತು. ಹೇಗಾದರೂ ಮಾಡಿ ಇವರನ್ನು ದಡ ಸೇರಿಸಬೇಕೆಂದು ಪ್ರಯತ್ನಿಸಿ, ಇಲ್ಲಿವರೆಗೆ ಕರೆತಂದಿದ್ದೇನೆ, ಮುಂದೆ ಅವರೇ ನೋಡಿಕೊಳ್ತಾರೆ ಎಂದು ಹೇಳಿದರು, ಸದ್ಯ ಚಿತ್ರದ ಒಂದು ರೊಮ್ಯಾಂಟಿಕ್ ಸಾಂಗ್ ಬಿಡುಗಡೆಯಾಗಿದ್ದು ಉಳಿದ ಸಾಂಗ್ ಹಾಗೂ ಟ್ರೈಲರನ್ನು ಆದಷ್ಟು ಬೇಗನೇ ಚಿತ್ರತಂಡ ರಿಲೀಸ್ ಮಾಡಲಿದೆ, ಮತ್ತೊಬ್ಬ ಖಳನಾಯಕ ಮೋಹನ್ ಗಿರಿ. ಎಡಿಟರ್ ಬಾರ್ಗವ್, ಬಿಜಿಎಂ ಮಾಡಿರುವ ಸೂರಜ್ ಚಿತ್ರದ ಕುರಿತಂತೆ ಚಿಕ್ಕದಾಗಿ ಮಾತನಾಡಿದರು,