ನ.17ಕ್ಕೆ ಸಸ್ಪೆನ್ಸ್ , ಥ್ರಿಲ್ಲರ್ “ನೇತ್ರಂ” ಚಿತ್ರ ಬಿಡುಗಡೆ
ಯುವ ಪಡೆಗಳ ಬಳಗ ಸೇರಿಕೊಂಡು ನಿರ್ಮಾಣ ಮಾಡಿರುವಂತಹ ವಿಭಿನ್ನ ಬಗೆಯ ಸಸ್ಪೆನ್ಸ್ , ಥ್ರಿಲ್ಲರ್ ಚಿತ್ರ “ನೇತ್ರಂ”. ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಚಿತ್ರತಂಡ ಹಾಜರಿದ್ದು , ಚಿತ್ರದ ಕುರಿತು ಮಾಹಿತಿಯನ್ನು ಹಂಚಿಕೊಂಡಿತು. ಈ ಚಿತ್ರವನ್ನು ಯುವ ನಿರ್ದೇಶಕ ಬಿಲ್ಲೂರ ಸುರೇಶ್ ಸಾರಥ್ಯವನ್ನು ವಹಿಸಿಕೊಂಡು ಚಿತ್ರವನ್ನು ಪೂರ್ಣಗೊಳಿಸಿದ್ದಾರೆ. ಇವರು ಮೂಲತಃ ಶಿಕ್ಷಕರಾಗಿದ್ದು, ಈ ಹಿಂದೆ ಮಿಸ್ ಕಾಲ್ ಹಾಗೂ ತಮಿಳು, ತೆಲುಗು ಚಿತ್ರರಂಗದಲ್ಲಿ ಕೆಲಸ ಮಾಡಿದ್ದು , ಮೊದಲ ಬಾರಿಗೆ ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಸಿದ್ದಪಡಿಸಿದ್ದಾರೆ.
ಇದೊಂದು ಸಸ್ಪೆನ್ಸ್ , ಥ್ರಿಲ್ಲರ್ ಚಿತ್ರವಾಗಿದ್ದು , ಸ್ನೇಹಿತರು ನಡುವೆ ಬ್ಯಾಡ್ ಇಂಪ್ರೇಸ್ ಆದಾಗ ಏನೆಲ್ಲ ಎದುರಾಗುತ್ತದೆ ಎಂಬುದನ್ನು ಬಹಳ ಸೂಕ್ಷ್ಮವಾಗಿ ಈ ಚಿತ್ರದಲ್ಲಿ ತೋರಿಸಲಿದ್ದು, ಮಡಿಕೇರಿ , ಬೆಂಗಳೂರು , ಚಿಂತಾಮಣಿ ಮುಂತಾದ ಕಡೆ ಶೂಟಿಂಗ್ ಮಾಡಿದ್ದಾರೆ. ಬಹಳಷ್ಟು ಹೊಸಬರು ಈ ಚಿತ್ರದಲ್ಲಿ ಕೆಲಸವನ್ನು ಮಾಡಿದ್ದು, ಚಿತ್ರವನ್ನು ಪೂರ್ಣಗೊಳಿಸಿದ್ದಾರೆ. ಈ ಚಿತ್ರದಲ್ಲಿ ಕೆಲವು ರೋಮ್ಯಾಂಟಿಕ್ ದೃಶ್ಯಗಳು ಇದ್ದು , ಚಿತ್ರಕ್ಕೆ ಸೆನ್ಸಾರ್ ನಿಂದ ‘ಎ’ ಸರ್ಟಿಫಿಕೇಟ್ ಸಿಕ್ಕಿದೆ. ಈ ಚಿತ್ರವನ್ನ ರನ್ನಿಂಗ್ ಹಾರ್ಸ್ ಪ್ರೊಡಕ್ಷನ್ ಮೂಲಕ ಮಕ್ ದುಮ್ ಪಟೇಲ್ ಹಾಗೂ ಶೇಕ್ ಸಬೀರ್ ಜಂಟಿಯಾಗಿ ಈ ಒಂದು ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ.
ಇನ್ನು ಈ ಚಿತ್ರದ ಮೂಲಕ ಯಂಗ್ ಅಂಡ್ ಗುಡ್ ಲುಕಿಂಗ್ ಹೀರೋ ದಕ್ಷ ನಾಯಕನಾಗಿ ಚಂದನವನಕ್ಕೆ ಪಾದರ್ಪಣೆ ಮಾಡುತ್ತಿದ್ದಾರೆ. ಸಿನಿಮಾ ಜರ್ನಿ ಹಾಗೂ ಚಿತ್ರದ ಕುರಿತು ದಕ್ಷ ಮಾತನಾಡುತ್ತಾ ನಾನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಭಿಮಾನಿ , ಅವರಿಂದಲೇ ನನ್ನ ಚಿತ್ರದ ಟೀಸರ್ ಬಿಡುಗಡೆ ಮಾಡಬೇಕೆಂಬ ಆಸೆ ಇತ್ತು. ಆದರೆ ಅದು ಸಾಧ್ಯವಾಗಲಿಲ್ಲ, ಅವರು ನಮ್ಮಿಂದ ದೂರ ಹೋದರು.
ಇದು ನಮ್ಮ ಇಡೀ ತಂಡಕ್ಕೆ ನೋವನ್ನುಂಟು ಮಾಡಿತು. ಅಲ್ಲಿಂದ ಇಲ್ಲಿಯವರೆಗೂ ನಾವು ಚಿತ್ರದ ಕುರಿತು ಯಾವುದೇ ಪ್ರಚಾರವನ್ನು ಮಾಡಿರಲಿಲ್ಲ. ಇದು ನನ್ನ ಮೊದಲ ಚಿತ್ರ ನಾನು ಮೂಲತಃ ಗದಗ ನವನು. ನಾನು ನಿರ್ದೇಶಕರು ಹಳೆಯ ಗೆಳೆಯರು , ಒಂದೇ ಚಿತ್ರದಲ್ಲಿ ಕೆಲಸ ಮಾಡಿದೆವು , ಒಳ್ಳೆಯ ಸಮಯ ಕೂಡಿಬಂದು , ನನ್ನ ಗೆಳೆಯನ ನಿರ್ದೇಶನದಲ್ಲಿ ನಾನು ನಾಯಕನಾಗಿ ಚಿತ್ರರಂಗಕ್ಕೆ ಪಾದರ್ಪಣೆ ಮಾಡುತ್ತಿದ್ದೇನೆ. ನಾನು ಈ ಕಾರ್ಯಕ್ರಮಕ್ಕೆ ಬರುವ ಮಾರ್ಗ ಮಧ್ಯೆ ತಳ್ಳುವ ಗಾಡಿಯಲ್ಲಿ ತಿಂಡಿ ಮಾಡುವಾಗ ಪುನೀತ್ ಅವರ ಫೋಟೋ ನೋಡಿದೆ. ಅವರ ಸಿಂಪ್ಲಿ ಸಿಟಿ ಇಷ್ಟವಾಯ್ತು.
ಈ ಒಂದು ಕಾರ್ಯಕ್ರಮಕ್ಕೆ ಬರುವಾಗ ನನಗೆ ಅವರು ಆಶೀರ್ವಾದ ಮಾಡಿದಂತೆ ಆಗಿದೆ. ಹಾಗೆಯೇ ನನಗೆ ಈ ಚಿತ್ರದ ಮೂಲಕ ನಮ್ಮ ನಿರ್ಮಾಪಕರು, ಸಂಗೀತ ನಿರ್ದೇಶಕರು ರೈಸಿಂಗ್ ಸ್ಟಾರ್ ಅಂತ ಬಿರುದು ಕೊಟ್ಟಿದ್ದಾರೆ. ನಾನು ಬೇಡ ಎಂದೇ, ಆದರೂ ಅವರ ಆಸೆಪಟ್ಟು ಕೊಟ್ಟಿದ್ದಾರೆ. ನಾನು ಸಿನಿಮಾಗೆ ಬರುವ ಮುಂಚೆ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆ. ಈ ಚಿತ್ರದಲ್ಲಿ ಲವ್, ಆಕ್ಷನ್, ಸಸ್ಪೆನ್ಸ್ , ಎಲ್ಲವೂ ಇದೆ. ಖಂಡಿತ ಇದು ಪ್ರೇಕ್ಷಕರಿಗೆ ಇಷ್ಟವಾಗುತ್ತದೆ. ಇದು ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಸಿದ್ಧವಾಗಿದೆ. ನೀವೆಲ್ಲರೂ ನನ್ನನ್ನು ನೋಡಿ ಪ್ರೋತ್ಸಾಹಿಸಿಬೇಕೆಂದು ಕೇಳಿಕೊಳ್ಳುತ್ತೇನೆ ಎಂದು ಹೇಳಿದರು.
ಈ ಚಿತ್ರದಲ್ಲಿ ಮೂವರು ನಾಯಕಿಯರಿದ್ದು , ಗದಗ ಮೂಲದ ಧನುಶ್ರೀ ಎಂಬ ಪ್ರತಿಭೆ ಹಾಜರಿದ್ದು , ನಾಯಕ ನಟರ ಮೂಲಕ ಈ ಚಿತ್ರದಲ್ಲಿ ಅವಕಾಶ ಸಿಕ್ಕಿತ್ತು , ನಾನು ಆಕ್ಟಿಂಗ್ ಎಲ್ಲಿಯೂ ಕಲಿತಿಲ್ಲ, ನಿರ್ದೇಶಕರು ಹೇಳಿಕೊಟ್ಟಂತೆ ಅಭಿನಯಿಸಿದ್ದೇನೆ. ನಿಮ್ಮೆಲ್ಲರ ಪ್ರೀತಿಯ ಸಹಕಾರ ಇರಲಿ ಎಂದು ಕೇಳಿಕೊಂಡರು.
ಇನ್ನು ಈ ಚಿತ್ರದಲ್ಲಿ ಮೂರು ಹಾಡುಗಳಿದ್ದು, ಒಂದು ಹಾಡಿಗೆ ವೈ.ಜೆ.ಕೆ ಸಂಗೀತ ಹಾಗೂ ಹಿನ್ನೆಲೆ ಸಂಗೀತ ನೀಡಿದ್ದು, ಎರಡು ಹಾಡುಗಳಿಗೆ ಚೈತನ್ಯ ರಾಜ್ ಸಂಗೀತ ಒದಗಿಸಿದ್ದಾರೆ. ಒಟ್ಟಾರೆ ಬಹಳಷ್ಟು ಯುವ ಪ್ರತಿಭೆಗಳು ಸೇರಿ ನಿರ್ಮಿಸಿರುವ ಈ ನೇತ್ರಂ ಚಿತ್ರ ನವೆಂಬರ್ 17ಕ್ಕೆ ಅದ್ದೂರಿಯಾಗಿ ಬಿಡುಗಡೆ ಮಾಡಲು ಚಿತ್ರತಂಡ ತಯಾರಿಯನ್ನು ಮಾಡಿಕೊಳ್ಳುತ್ತಿದೆ.