“ನೈಸ್ ರೋಡ್”ಗೆ ನೋಟಿಸ್
ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ ಒಂದಷ್ಟು ಚಿತ್ರಗಳು ತಮ್ಮ ಸಿನಿಮಾದ ಟೈಟಲ್ ವಿವಾದಗಳಲ್ಲೇ ಸದ್ದನ್ನ ಮಾಡಿ ಚಿತ್ರಮಂದಿರಗಳಲ್ಲಿ ಬಿಡುಗಡೆನ್ನೂ ಆಗಿದೆ , ಇನ್ನೊಂದಷ್ಟು ಶೀರ್ಷಿಕೆಗೆ ಮತ್ತೊಂದು ಹೆಸರಿನ್ನ ಸೇರ್ಪಡಿಸಿ ತೆರೆಯ ಮೇಲೆ ಬಂದಿದೆ.
ಇದೀಗ ಅಂತದ್ದೇ ಸಮಸ್ಯೆಯನ್ನು ಎದುರಿಸುತ್ತಿದೆ “ನೈಸ್ ರೋಡ್” ಚಿತ್ರತಂಡ. ಈ ಕನ್ನಡ ಸಿನಿಮಾಕ್ಕೆ ನೈಸ್ ರೋಡ್ ಕಂಪನಿಯಿಂದಲೇ ನೋಟಿಸ್ ಬಂದಿದೆ. ಈ ನೈಸ್ ರೋಡ್ ಎಂಬ ಹೆಸರನ್ನು ಬದಲಾಯಿಸದೆ ಇದ್ದರೆ ಕಂಪ್ಲೇಂಟ್ ಕೊಡುವುದಾಗಿ ಈ ಸಿನಿಮಾದ ನಿರ್ಮಾಪಕರಾದ ಗೋಪಾಲ್ ಹಳೆಪಾಳ್ಯ ಅವರಿಗೆ ನೋಟಿಸ್ ನೀಡಿದ್ದಾರೆ.
ಸಿನಿಮಾ ಈಗ ರಿಲೀಸ್ ಹಂತಕ್ಕೆ ಬಂದಿದ್ದು ಏಲ್ಲಾ ಕಡೆ ನೈಸ್ ರೋಡ್ ಎಂಬ ಹೆಸರಿನಿಂದನೆ ಪ್ರಚಾರವಾಗಿದೆ. ಈ ಹಂತದಲ್ಲಿ ಹೆಸರು ಬದಲಾಯಿಸಲು ತುಂಬಾ ಖರ್ಚು ವೆಚ್ಚಗಳಾಗುವುದು ಅಲ್ಲದೆ ತುಂಬಾ ಸಮಯವು ಬೇಕಾಗುತ್ತದೆ. ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೈಸ್ ರೋಡ್ ಎಂಬ ಟೈಟಲ್ ರಿಜಿಸ್ಟರ್ ಆಗಿದ್ದು , ಸಿನಿಮಾ ಚಿತ್ರೀಕರಣ ಮುಗಿಸಿ ಈಗಾಗಲೇ ಸಿನಿಮಾ ಸೆನ್ಸಾರ್ ಆಗಿದ್ದು ಸೆನ್ಸಾರ್ ಮಂಡಳಿಯು ಕೂಡ ಸಿನಿಮಾ ನೋಡಿ ನೈಸ್ ರೋಡಿಗೂ ಈ ಸಿನಿಮಾಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ನಿರ್ಧರಿಸಿ U/A ಪ್ರಮಾಣ ಪತ್ರ ಕೊಟ್ಟಿದಾರೆ.
ಆದರೆ ಈಗ ನೈಸ್ ರೋಡ್ ಕಂಪನಿಯವರು ಏಕಏಕಿ ಬಂದು ಹೆಸರು ಬದಲಾಯಿಸಲೇ ಬೇಕೆಂದು ನೋಟೀಸ್ ನೀಡಿದ್ದಾರೆ.ಈ ವಿಷಯಕ್ಕೆ ಸಂಬಂಧ ಪಟ್ಟಂತೆ ನಿರ್ಮಾಪಕ ಗೋಪಾಲ್ ಹಳೆಪಾಳ್ಯ ಅವರು ಈ ಸಿನಿಮಾಕ್ಕೆ ಫೈನಾನ್ಸ್ ಮಾಡಿರುವ ಏನ್ ರಾಜೂಗೌಡ ಮತ್ತು ಈ ಸಿನಿಮಾದ ನಟರಾದ ಧರ್ಮ ಅವರ ಜೊತೆ ಮಾತಾಡಿ ಒಂದು ನಿರ್ಧಾರಕ್ಕೆ ಬರುತ್ತೇನೆ ಎನ್ನುತ್ತಿದ್ದಾರೆ. ಮುಂದೆ ಸಿನಿಮಾ ತಂಡದವರು ಹೆಸರು ಬದಲಾಯಿಸುತ್ತಾರೋ ಇಲ್ಲ ಇದೆ ಹೆಸರಿನಲ್ಲೆ ಸಿನಿಮಾ ಬಿಡುಗಡೆ ಮಾಡೊತರೋ ಕಾದು ನೋಡಬೇಕಿದೆ