Cini NewsMovie ReviewSandalwood

ಗರ್ಭದ ಹಿಂದಿರುವ ಸಸ್ಪೆನ್ಸ್, ಪ್ರೀತಿಯ ಸೆಳೆತ ‘ನಿಮಗೊಂದು ಸಿಹಿಸುದ್ದಿ’ (ಚಿತ್ರವಿಮರ್ಶೆ-ರೇಟಿಂಗ್ : 3.5 /5)

ರೇಟಿಂಗ್ : 3.5 /5

ಚಿತ್ರ : ನಿಮಗೊಂದು ಸಿಹಿಸುದ್ದಿ
ನಿರ್ದೇಶಕರು : ರಘು ಭಟ್ , ಸುಧೀಂದ್ರ
ನಿರ್ಮಾಪಕ : ಹರೀಶ್. ಎನ್. ಗೌಡ
ಸಂಗೀತ : ಅಶ್ವಿನ್‍ ಹೇಮಂತ್‍
ಛಾಯಾಗ್ರಹಣ : ಆನಂದ್ ಸುಂದರೇಶ್
ತಾರಾಗಣ : ರಘು ಭಟ್ , ಕಾವ್ಯ ಶೆಟ್ಟಿ , ಹರಿಣಿ ಶ್ರೀಕಾಂತ್, ಪದ್ಮಿನಿ ನರಸಿಂಹನ್, ಸುಜಯ್ ಶಾಸ್ತ್ರಿ , ಶಿಲ್ಪಾ ಶೈಲೇಶ್, ಪ್ರಜ್ವಲ್ , ವಿಜಯ್ ರಾಘವೇಂದ್ರ ಹಾಗೂ ಮುಂತಾದವರು…

ಜೀವನವೇ ಒಂದು ಪಾಠವಿದ್ದಂತೆ. ಬದುಕಿನಲ್ಲಿ ಸ್ವಚ್ಛಂದವಾಗಿ ಹಕ್ಕಿಯಂತೆ ಹಾರಾಡುತ್ತಾ ಯಾವುದೇ ಗೋಜು , ಗೊಂದಲವಿಲ್ಲದೆ , ತನ್ನಿಷ್ಟದ ಕೆಲಸ ಮಾಡುತ್ತಾ ಹಣ , ಆಸ್ತಿ, ಹೆಸರು ಗಳಿಸಿಕೊಂಡು ಜೀವನ ನಡೆಸಬೇಕೆಂಬ ಆಸೆ ಸರ್ವೇಸಾಮಾನ್ಯ. ಆದರೆ ಬದುಕಿಗೊಂದು ಅರ್ಥ ಬೇಕೆಂದಾಗ ಸ್ನೇಹ , ಪ್ರೀತಿ , ಸಂಬಂಧ , ವಂಶದ ಕುಡಿ ಹೀಗೆ ಒಂದಕ್ಕೊಂದು ಕೊಂಡಿಯಂತೆ ಬೆಸೆದುಕೊಂಡಾಗ ಮಾತ್ರ ಅದು ಪರಿಪೂರ್ಣ ಎನ್ನುವಂತೆ, ಕುತೂಹಲಕಾರಿಯಾಗಿ ಸಾಗುವ ಹುಡುಗನೊಬ್ಬ ಗರ್ಭ ಧರಿಸಿದಾಗ ಆಗುವ ಏರುಪೇರುಗಳ ಸುತ್ತ ಹಾಸ್ಯ ಮಿಶ್ರಿತವಾಗಿಸಿ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ನಿಮಗೊಂದು ಸಿಹಿ ಸುದ್ದಿ”.

ತನ್ನ ಅಡಿಗೆಯ ಮೂಲಕವೇ ದೇಶದ ಪ್ರಸಿದ್ಧ ಮಾಸ್ಟರ್ ಚೆಫ್ ಎಂಬ ಹೆಗ್ಗಳಿಕೆ ಪಡೆದ ವ್ಯಕ್ತಿ ಅರ್ಜುನ್ ಹೆಬ್ಬಾರ್ ( ರಘು ಭಟ್). ವೆರೈಟಿಸ್ ಆಫ್ ಫುಡ್ ಪ್ರಾಡಕ್ಟ್ ಗಳ ಟೆಸ್ಟ್ ಕಂಡು ಹಿಡಿಯುವುದರಲ್ಲಿ ನಿಸ್ಸಿಮಾ.

ಅದೇ ರೀತಿ ಹುಡುಗಿಯರ ವಿಚಾರದಲ್ಲೂ ಕೂಡ. ಒಮ್ಮೆ ಅಡ್ಡ್ ಶೂಟ್ ವಿಚಾರದ ಗೊಂದಲದ ನಡುವೆ ಅಮೋರ್ ಫುಡ್ ಪ್ರಾಡಕ್ಟ್ ನ ಸಿಇಒ ಅನುಷಾ (ಕಾವ್ಯಶೆಟ್ಟಿ) ಳನ್ನ ಭೇಟಿ ಮಾಡುವ ಮೂಲಕ ಸ್ನೇಹ , ಸಲುಗೆ , ಪ್ರೀತಿ ಮೂಡುತ್ತದೆ. ಆದರೆ ಇವರಿಬ್ಬರ ಆಲೋಚನೆ , ದೃಷ್ಟಿಕೋನ ಒಂದುಗೂಡದೆ ಬೇರೆಯಾಗುವ ಸ್ಥಿತಿ ಎದುರಾಗುತ್ತದೆ.

ಒಂದಷ್ಟು ಫ್ಲಾಶ್ ಬ್ಯಾಕ್ ಬೇರೆದೇ ಕಥೆಯನ್ನ ಹೇಳುತ್ತಾ ಹೋಗುತ್ತದೆ. ಪ್ರಸವ ವೇದನೆಯಿಂದ ನರಳುವ ಅರ್ಜುನ್ ಆಸ್ಪತ್ರೆ ಸೇರುತ್ತಾನೆ. ಮುದ್ದಾದ ಮಗು ಜನನವಾಗುತ್ತೆ. ತನ್ನ ಜೀವನದಲ್ಲಿ ಏನಾಗುತ್ತಿದೆ ಎಂಬ ಗೊಂದಲದಲ್ಲೇ ಗೆಳೆಯ ಡಿಡಿ ತನ್ನ ಮನೆಗೆ ಕರೆದು ಮಗುವಿನ ಬಗ್ಗೆ ತಿಳಿಸುತ್ತಾನೆ. ಮಗು ಯಾರದ್ದು ಎಂಬ ಗೊಂದಲದಲ್ಲಿ ಪೊಲೀಸ್ ಸ್ಟೇಷನ್ಗೆ ಇನ್ಫಾರ್ಮ್ ಮಾಡಲು ಹೋಗಿ ಇಕ್ಕಟ್ಟಿಗೆ ಸಿಲುಕುವ ಗೆಳೆಯರು ಮತ್ತೆ ಮನೆಗೆ ಮಗುವನ್ನು ಕರೆತರುತ್ತಾರೆ.

ಇನ್ನು ಪಕ್ಕದ ಮನೆಯ ಶೀಲಾ ಆಂಟಿ (ಹರಿಣಿ ಶ್ರೀಕಾಂತ್) ಕೂಡ ಇವರ ಪರದಾಟ ಕಂಡು ಸಾತ್ ನೀಡುತ್ತಾರೆ. ಒಂದಷ್ಟು ಕನ್ಫ್ಯೂಷನ್ ನಡುವೆ ಮುಂದೇನು ಎನ್ನುವಷ್ಟರಲ್ಲಿ ಡಾಕ್ಟರ್ ವಿಕಾಸ್ (ವಿಜಯ್ ರಾಘವೇಂದ್ರ) ಮನುಷ್ಯನ ಮೇಲಿನ ಡ್ರಗ್ಸ್ ಪ್ರಯೋಗದ ಗುಟ್ಟನ ಹೇಳುತ್ತಾರೆ. ಮುಂದೆ ಈ ಪಯಣ ರೋಚಕ ತಿರುವಿಗೆ ಬಂದು ನಿಲ್ಲುತ್ತದೆ.
ಈ ಮಗುವಿಗೆ ತಂದೆ , ತಾಯಿ ಯಾರು…
ಗರ್ಭದ ಹಿಂದಿರುವ ರಹಸ್ಯ…?
ಪ್ರೇಮಿಗಳು ದೂರ ಆಗಲು ಕಾರಣ…
ಕ್ಲೈಮ್ಯಾಕ್ಸ್ ನೀಡುವ ಸಂದೇಶ ಏನು…
ಇದೆಲ್ಲದರ ಗುಟ್ಟು ಒಮ್ಮೆ ಈ ಚಿತ್ರ ನೋಡಿದರೆ ರಟ್ ಆಗುತ್ತೆ.

ಈ ಚಿತ್ರದ ಕಥಾವಸ್ತುವನ್ನು ಆಯ್ಕೆ ಮಾಡಿಕೊಂಡಿರುವ ನಿರ್ದೇಶಕರ ಆಲೋಚನೆ ಭಿನ್ನವಾಗಿದೆ. ಹೋಟೆಲ್ ಊಟಕ್ಕಿಂತ ಮನೆ ಊಟಕ್ಕೆ ಗಮನ ಕೊಡಿ ಎನ್ನುವಂತೆ , ಪ್ರಸ್ತುತ ಯುವ ಮನಸುಗಳ ಆಲೋಚನೆ , ಬದುಕಿನ ಶೈಲಿ , ತಪ್ಪು ನಿರ್ಧಾರದ ಬಗ್ಗೆ ಎಚ್ಚರಿಸುವ ಅಂಶವನ್ನು ತೆರೆಯ ಮೇಲೆ ತಂದಿದ್ದಾರೆ. ಸ್ನೇಹ , ಪ್ರೀತಿ , ರಕ್ತ ಸಂಬಂಧ , ಬದುಕಿನ ನಿಲುವಿನ ಬಗ್ಗೆ ಕಥನಕವಾಗಿದ್ದು , ಚಿತ್ರಕಥೆ ಇನ್ನಷ್ಟು ಬಿಗಿ ಮಾಡಬಹುದಿತ್ತು , ದ್ವಿತೀಯ ಭಾಗದ ಗಮನ ಸೆಳೆಯುತ್ತದೆ.

ಸಂಗೀತ ಗುನುಗುವಂತಿದ್ದು , ಛಾಯಾಗ್ರಹಣ , ಸಂಕಲನ ಸೇರಿದಂತೆ ತಾಂತ್ರಿಕವಾಗಿ ತಂಡ ಶ್ರಮ ಪಟ್ಟಿದೆ. ಇನ್ನು ಕಥಾ ನಾಯಕನಾಗಿ ರಘು ಭಟ್ ತನ್ನ ಹಾವ ಭಾವ ಮೂಲಕ ಪಾತ್ರಕ್ಕೆ ಜೀವ ತುಂಬಿದ್ದು, ನಿರ್ದೇಶನದ ಜೊತೆಗೆ ನಟನೆಯಲ್ಲೂ ತನ್ನ ಸಾಮರ್ಥ್ಯವನ್ನು ಹೊರಹಾಕಿದ್ದಾರೆ. ಇನ್ನು ನಟಿ ಕಾವ್ಯ ಶೆಟ್ಟಿ ಕೂಡ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.

ಅದೇ ರೀತಿ ಗೆಳೆಯನ ಪಾತ್ರಧಾರಿ ಕೂಡ ಪಂಚಿಂಗ್ ಡೈಲಾಗ್ ಮೂಲಕ ಚಿತ್ರದ ಓಟದಲ್ಲಿ ಮಿಂಚಿದ್ದಾರೆ.ಹಾಗೆಯೇ ಶೀಲಾ ಆಂಟಿ ಪಾತ್ರದಲ್ಲಿ ನಟಿ ಹರಿಣಿ ಶ್ರೀಕಾಂತ್ ಅದ್ಭುತವಾಗಿ ಪಾತ್ರಕ್ಕೆ ಜೀವ ತುಂಬಿದ್ದು , ಎಲ್ಲರ ಗಮನ ಸೆಳೆಯುತ್ತಾರೆ. ಪೊಲೀಸ್ ಇನ್ಸ್ಪೆಕ್ಟರ್ ಪಾತ್ರದಲ್ಲಿ ಸುಜಯ್ ಶಾಸ್ತ್ರಿ ಹಾಗೂ ಕಾನ್ಸ್ಟೇಬಲ್ ಪಾತ್ರದಲ್ಲಿ ಶಿಲ್ಪ ಶೈಲೇಶ್ ಪಾತ್ರಗಳು ಅತಿರೇಖ ಅನಿಸುವಂತಿತ್ತು. ವಿಶೇಷ ಪಾತ್ರದಲ್ಲಿ ಬರುವ ವಿಜಯ್ ರಾಘವೇಂದ್ರ ಆಕ್ಟಿವ್ ಡೋಸೇಜ್ ನೀಡಿದ್ದು , ಕಥೆಗೆ ಪೂರಕವಾಗಿದೆ. ಒಟ್ಟಾರೆ ಮನೋರಂಜನೆ ದೃಷ್ಟಿಯ ಜೊತೆಗೆ ಒಂದು ಸಂದೇಶವನ್ನು ನೀಡಿರುವ ಈ ಚಿತ್ರವನ್ನು ಎಲ್ಲರೂ ನೋಡಬಹುದು.

error: Content is protected !!