“ನಿಮಗೊಂದು ಸಿಹಿಸುದ್ದಿ” ಚಿತ್ರದ ಮೋಷನ್ ಪೋಸ್ಟರ್ ರಿಲೀಸ್
ಸಾಮಾನ್ಯವಾಗಿ ಸಿಹಿ ಹೆಚ್ಚು ತಿಂದರೆ ಸಕ್ಕರೆ ಕಾಯಿಲೆ ಅನ್ನೋ ಮಾತಿದೆ. ಇನ್ನು ಸಿಹಿ ಸುದ್ದಿಯನ್ನ ಕೇಳಿದರೆ ಮನಸ್ಸಿಗೆ ನೆಮ್ಮದಿ , ಸಂತೋಷ ಸಿಗತ್ತೆ. ಆದರೆ ಇಲ್ಲೊಂದು ಯುವ ಪಡೆಗಳ ಬಳಗ ಸೇರಿಕೊಂಡು ವಿಭಿನ್ನ ಪ್ರಯತ್ನದ ಸಲುವಾಗಿ “ನಿಮಗೊಂದು ಸಿಹಿಸುದ್ದಿ” ಎಂಬ ಚಿತ್ರವನ್ನು ಸಿದ್ಧಪಡಿಸಿದೆ. ಇದು ಪುರುಷನೊಬ್ಬ ಗರ್ಭಿಣಿಯಾದ ಕಥೆಯನ್ನು ಒಳಗೊಂಡಿದ್ದು , ಈ ಚಿತ್ರದ ಮೊದಲ ಹಂತವಾಗಿ ಎಸ್. ಆರ್. ವಿ. ಥಿಯೇಟರ್ ನಲ್ಲಿ ಮೋಶನ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಪ್ರಚಾರದ ಕಾರ್ಯವನ್ನು ಆರಂಭಿಸುವುದರ ಜೊತೆಗೆ ಚಿತ್ರದ ಬಗ್ಗೆ ಮಾಹಿತಿ ನೀಡಲು ಪತ್ರಿಕಾಗೋಷ್ಠಿಯಲ್ಲಿ ಇಡೀ ಚಿತ್ರತಂಡ ಹಾಜರಿದ್ದರು.
ಈ ಚಿತ್ರದ ನಟ ಹಾಗೂ ನಿರ್ದೇಶಕ ರಘು ಭಟ್ ಮಾತನಾಡುತ್ತಾ , ನಾನು ಒಬ್ಬ ಸಾಫ್ಟ್ವೇರ್ ಇಂಜಿನಿಯರ್ ಕೆಲಸದಲ್ಲಿ ಇರುವಾಗಲೇ ಸಿನಿಮಾ ಬಗ್ಗೆ ಆಸಕ್ತಿ ಇತ್ತು , ಹಾಗೆ ನಾನು ರಂಗಭೂಮಿ ಕಲಾವಿದ ಜೊತೆಗೆ ಚಿತ್ರಗಳಿಗೆ ಸಂಭಾಷಣೆ ಬರೆಯುತ್ತಾ ಇಂಡಸ್ಟ್ರಿ ಸಂಪರ್ಕ ಬಳಸಿಕೊಂಡೆ. ಈ ಕಥೆ ಬರೆಯಲು ಸ್ಪೂರ್ತಿ ಎಂದರೆ ಮಹಾಭಾರತದ ಅರ್ಜುನನ ಬೃಹನ್ನಳೆ ಸ್ಪೂರ್ತಿ ಎನ್ನಬಹುದು.
ಗಂಡು ಹೆಣ್ಣಾಗಿ ವರ್ತಿಸುವುದು ಅವರ ತಳಮಳಗಳ ಇಟ್ಟುಕೊಂಡು ಮಾಡಿದಂತ ಚಿತ್ರ. ಈ ಕಥೆ ಹಾಸ್ಯ ಮಿಶ್ರಿತ ರಾಮ್ ಕಾಮ್ ಜೊತೆಗೆ ಸೆಂಟಿಮೆಂಟ್ , ಫೀಲಿಂಗ್ಸ್ , ಲವ್ ಎಲ್ಲವೂ ಒಳಗೊಂಡಿದೆ. ಇದು ನನ್ನ ನಿರ್ದೇಶನದ ಮೊದಲ ಚಿತ್ರ ಹಾಗೂ ನಾನೇ ಈ ಚಿತ್ರದ ನಾಯಕನಾಗಿ ಅಭಿನಯಿಸುತ್ತಿದ್ದೇನೆ , ಯಾಕೆಂದರೆ ಈ ಪಾತ್ರ ಹೇಗೆ ಇರಬೇಕೆಂಬ ಕಲ್ಪನೆಗೆ ಬೇರೆ ನಟರ ಮೇಲೆ ಪ್ರಯೋಗ ಮಾಡದೆ ನಾನೇ ಆ ಪಾತ್ರವನ್ನು ನಿರ್ವಹಿಸಲು ಸಿದ್ಧನಾದೆ.
ಅರ್ಜುನ್ ಎಂಬ ಪಾತ್ರ ನಿರ್ವಹಿಸಿದ್ದು , ಇವನು ಒಬ್ಬ ಮಾಸ್ಟರ್ ಚೆಫ್, ನಾನಾ ಕಾರಣದಿಂದ ಇವನು ಗರ್ಭಿಣಿ ಆಗುವ ಸ್ಥಿತಿ ಎದುರಾಗುತ್ತದೆ , ಅದು ಯಾಕೆ , ಹೇಗೆ , ಎಂಬುದೇ ಇಡಿ ಚಿತ್ರದ ಕಥೆಯ ತಿರಳು , ಈ ಹಿಂದೆ ಪರಭಾಷೆಯಲ್ಲಿ ಬಂದಂತ ಮಿಸ್ಟರ್ ಪ್ರೆಗ್ನೆಂಟ್ ಚಿತ್ರಕ್ಕೂ ನಮ್ಮ ಚಿತ್ರಕ್ಕೂ ಯಾವುದೇ ರೀತಿ ಸಂಬಂಧವಿಲ್ಲ , ನಮ್ಮ ಕಥೆಯ ಮೂಲ ಬೇರೆ ಇದೆ.
ನಮ್ಮ ಚಿತ್ರ ಇಡೀ ಕುಟುಂಬ ಸಮೇತ ಕುಳಿತು ನೋಡುವಂತಿದೆ. ನಮ್ಮ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು , ಈಗ ಸೆನ್ಸರ್ ಹಂತಕ್ಕೆ ಚಿತ್ರ ಹೋಗಿದೆ. ನಮ್ಮ ಚಿತ್ರದಲ್ಲಿ ನಾಯಕಿಯಾಗಿ ಕಾವ್ಯ ಶೆಟ್ಟಿ ಅಭಿನಯಿಸಿದ್ದು , ಉಳಿದಂತೆ ಹರಿಣಿ ಶ್ರೀಕಾಂತ್ , ಸುಜಯ್ ಶಾಸ್ತ್ರಿ , ಪದ್ಮಿನಿ ನರಸಿಂಹನ್ , ಶಿಲ್ಪ ಶೈಲೇಶ್ , ಪ್ರಜ್ವಲ್ ಮುದ್ದಿ ಹಾಗೂ ವಿಶೇಷ ಪಾತ್ರದಲ್ಲಿ ವಿಜಯ ರಾಘವೇಂದ್ರ ಅಭಿನಯಿಸಿದ್ದಾರೆ. ಈಗ ಮೋಶನ್ ಪೋಸ್ಟರ್ ಬಿಡುಗಡೆ ಮಾಡಿದ್ದೀವಿ , ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಮತ್ತಷ್ಟು ಮಾಹಿತಿಯನ್ನ ನೀಡುತ್ತೇವೆ ನಿಮ್ಮೆಲ್ಲರ ಸಹಕಾರ ಇರಲಿ ಎಂದು ಕೇಳಿಕೊಂಡರು.
ಅವ್ಯಕ್ತ ಸಿನೆಮಾಸ್ ಮೂಲಕ ನೆಲಮಂಗಲ ಮೂಲದ ಬಿಲ್ಡರ್ ಹಾಗೂ ಪವರ್ ಸ್ಟಾರ್ ಅಪ್ಪು ಅಭಿಮಾನಿ ಹರೀಶ್. ಎನ್. ಗೌಡ ನಿರ್ಮಾಣ ಮಾಡ್ತಿದ್ದು , ಈ ಚಿತ್ರದ ಕುರಿತು ಮಾತನಾಡುತ್ತಾ ನಿರ್ದೇಶಕರು ಕಥೆ ಹೇಳಿದ ಕೂಡಲೇ ಇದು ವರ್ಕೌಟ್ ಆಗುತ್ತಾ ಎಂದು ಆಶ್ಚರ್ಯ ಪಟ್ಟೆ , ಈಗ ಸಿನಿಮಾ ನೋಡಿದೆ ಖಂಡಿತ ಇದು ಎಲ್ಲರಿಗೂ ಇಷ್ಟ ಆಗುತ್ತೆ. ನಮ್ಮ ತಂಡಕ್ಕೆ ಬೆಂಬಲ ನೀಡಿ , ಪ್ರೋತ್ಸಾಹಿಸಿ ಎಂದು ಕೇಳಿಕೊಂಡರು.
ಮತ್ತೊಂದು ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ನಟಿ ಹರಣಿ ಶ್ರೀಕಾಂತ್ ಮೋಸ್ಟರ್ ಪೋಸ್ಟರ್ ಲಾಂಚ್ ಮಾತನಾಡುತ್ತಾ ಹೆಣ್ಣನ್ನ ಜನ್ಮದಾತೆ ಎಂದು ಗೌರವಿಸುತ್ತವೆ , ಒಂದು ತಾಯಿ ಮಗುವಿಗೆ ಜನ್ಮ ಕೊಟ್ಟರೆ ಆ ಮಗುವಿನ ಜೊತೆಗೆ ತಾಯಿಗೂ ಪುನರ್ಜನ್ಮ ಸಿಕ್ಕಂತೆ. ಇಂದಿಗೂ ಹೆಣ್ಣನ್ನ ಗೌರಿಸುತ್ತಾ ಬಂದಿದ್ದೇವೆ. ಈ ಚಿತ್ರದಲ್ಲಿ ನನ್ನದು ಪಕ್ಕದ ಮನೆಯ ಆಂಟಿ ಪಾತ್ರ. ನಾಯಕನಿಗೆ ಸಹಕಾರಿಯಾಗಿ ನಿಲ್ಲುವಂತ ಪಾತ್ರ ಇದಾಗಿದೆ.
ಖಂಡಿತ ಇಡೀ ಕಥೆಯೇ ಈ ಚಿತ್ರದ ಕೇಂದ್ರ ಬಿಂದು, ಈ ಸಿನಿಮಾ ಎಲ್ಲರಿಗೂ ಇಷ್ಟವಾಗುತ್ತದೆ , ಖಂಡಿತ ನಿಮ್ಮ ಪ್ರೋತ್ಸಾಹ ನೀಡಿ ಎಂದರು. ಇನ್ನು ಈ ಚಿತ್ರದಲ್ಲಿ ಡಾಕ್ಟರ್ ಪಾತ್ರ ಮಾಡಿರುವ ರಿಯಲ್ ಡಾಕ್ಟರ್ ಪದ್ಮಿನಿ ನರಸಿಂಹನ್ ಈ ಕಥೆ ಕೇಳಿದ ಕ್ಷಣ ಎಸ್ಕ್ಯೂಸ್ಮಿ… ಎಂದು ಶಾಕ್ ಆದೆ ಎನ್ನುತ್ತಾ , ಇದೊಂದು ವಿಭಿನ್ನ ಚಿತ್ರ ನಿಮ್ಮೆಲ್ಲರ ಪ್ರೋತ್ಸಾಹ ನೀಡಿ ಎಂದರು.
ಇನ್ನು ಈ ಚಿತ್ರಕ್ಕೆ ಸಾಹಿತ್ಯ ಬರೆದಿರುವ ಪ್ರಮೋದ್ ಮರುವಂತೆ ಮಾತನಾಡುತ್ತಾ ನಿರ್ದೇಶಕರು ಹೇಳಿದ ಕಥೆ ಬಹಳ ವಿಭಿನ್ನವಾಗಿದೆ. ಒಂದು ಡ್ಯುಯೆಟ್ ಸಾಂಗ್ ಹಾಗೂ ತಂದೆ ಮಗುವಿನ ಸಂಬಂಧದ ಹಾಡನ್ನು ಬರೆದಿದ್ದೇನೆ. ಚಿತ್ರ ತಂಡದ ಶ್ರಮಕ್ಕೆ ಯಶಸ್ಸು ಸಿಗಬೇಕು , ನಿಮ್ಮೆಲ್ಲರ ಸಹಕಾರ ನೀಡಿ ಎಂದು ಕೇಳಿಕೊಂಡರು.
ಅವ್ಯಕ್ತ ಸಿನ್ಮಾಸ್ ಸಿನಿಮಾಸ್ ಮೂಲಕ ಹರೀಶ್. ಎನ್. ಗೌಡ ನಿರ್ಮಾಣದ ಈ ಚಿತ್ರವನ್ನು ರಘು ಭಟ್ ಕಥೆ , ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದು , ಸುಧೀಂದ್ರ ನಿರ್ದೇಶನದಲ್ಲಿ ಸಾತ್ ನೀಡಿದ್ದಾರೆ. ಈ ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ಅಶ್ವಿನ್ ಹೇಮಂತ್ ಸಂಗೀತ ನೀಡುತ್ತಿದ್ದಾರೆ.
ಪ್ರಕಾಶ್ ಎಸ್ .ಆರ್. ಸಂಭಾಷಣೆ , (ಆಂಡಿ) ಆನಂದ್ ಸುಂದರೇಶ್ ಛಾಯಾಗ್ರಹಣ , ನವೀನ್ ತೇಜು , ರಘುನಾಥ್ .ಎಲ್ ಸಂಕಲನ , ಸುಮಂತ್ ಕನ್ನಡ ಪಿಚ್ಚರ್ ಪಿ .ಆರ್. ಓ. , ಪ್ರವೀಣ್ ಏಕಾಂತ್ ಮೀಡಿಯಾ ಹಾಗೂ ಮಾರ್ಕೆಟಿಂಗ್ ಜವಾಬ್ದಾರಿಯನ್ನ ನಿರ್ವಹಿಸುತ್ತಿದ್ದಾರೆ. ಈಗ ಚಿತ್ರದ ಮೋಶನ್ ಪೋಸ್ಟರ್ ಹೊರಬಂದಿದ್ದು , ಎಲ್ಲಾ ಅಂದುಕೊಂಡಂತೆ ನಡೆದಿದ್ದು , ಶಿವರಾತ್ರಿಗೆ ಚಿತ್ರವನ್ನು ರಿಲೀಸ್ ಮಾಡುವ ಪ್ಲಾನ್ ಹಾಕಿಕೊಂಡಿದೆ.