ಪ್ಯಾರಾಸೈಕಾಲಜಿಕಲ್ ಥ್ರಿಲ್ಲರ್ ಚಿತ್ರ “ನಿಮಿತ್ತ ಮಾತ್ರ”
“ನಿಮಿತ್ತ ಮಾತ್ರ” ಸಿನಿಮಾ ಪ್ಯಾರಾಸೈಕಾಲಜಿಕಲ್ ಥ್ರಿಲ್ಲರ್ ಚಿತ್ರ ಆಗಿದ್ದು, ಬೆಂಗಳೂರು ಮತ್ತು ಮಂಗಳೂರು ಹಿನ್ನೆಲೆಯೊಂದಿಗೆ ಮೂಡಿ ಬಂದಿದೆ. 15 ವರ್ಷಗಳ ಹಿಂದೆ ಮಂಗಳೂರಿನಲ್ಲಿ ನಡೆದ ಅತೀವ ಭಯಾನಕ ಘಟನೆಯೆ ಈ ಕಥೆಯ ಆಧಾರ.
ತನ್ನ ತಂದೆಯಿಂದ ಬಿಟ್ಟುಹೋಗಿದ್ದ ಸಂಧರ್ಭವನ್ನು ಅರಿಯಲು investigative ಪತ್ರಕರ್ತನೊಬ್ಬ ಈ ಕೇಸ್ ಪರಿಹರಿಸಲು ಹೊರಟಿದ್ದಾನೆ. ಅವನು ಸತ್ಯವನ್ನು ಪತ್ತೆಹಚ್ಚುವನೋ? ಅಪರಾಧಿಯನ್ನು ನ್ಯಾಯದ ಕಟ್ಟೆಗೆ ಸೆಳೆವನೋ? ಈ ಪ್ರಶ್ನೆಗಳು ಚಿತ್ರದಲ್ಲಿ ಮುಂದುವರೆಯುತ್ತ ಹೋಗುತ್ತದೆ. ಚಿತ್ರವನ್ನು ರೋಶನ್ ಡಿ ಸೌಜಾ ಅವರು ಬರೆದಿದ್ದು, ನಿರ್ದೇಶಿಸಿ ನಿರ್ಮಾಣ ಮಾಡಿದ್ದು, ಪೂರ್ಣಚಂದ್ರ ಮೈಸೂರ್, ಸಂಗೀತ ರಾಜೀವ್, ಮತ್ತು ಅರವಿಂದ ಕುಪ್ಲಿಕರ್ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಸಂಗೀತ ರಾಜೀವ್ ಅವರು ಈ ಚಿತ್ರದಲ್ಲಿ ನಟನೆಯ ಜೊತೆಗೆ ತಮ್ಮ ಸಂಗೀತದೊಡನೆ 4 ಅದ್ಭುತ ಹಾಡುಗಳನ್ನು ಕೂಡ ನಿರ್ದೇಶಿಸಿದ್ದಾರೆ. ಅವರು ರೋಶನ್ ಅವರೊಂದಿಗೆ ರಷ್ಯಾ ಮತ್ತು ಚೆನ್ನೈನ ಪ್ರತಿಭಾವಂತ ಸಂಗೀತಗಾರರ ತಂಡದ ಜೊತೆಗೂಡಿ, ವೈವಿಧ್ಯಮಯ ಹಿನ್ನೆಲೆ ಸಂಗೀತವನ್ನು ರೂಪಿಸಿದ್ದಾರೆ.
ಚಿತ್ರಕಲೆಯನ್ನು ವಿಜಯ್ ಮೊಂಟೇರಿಯವರು ಚಿತ್ರಿಸಿದ್ದಾರೆ. ಸಂಭಾಷಣೆಯನ್ನು ರೋಷನ್ ಡಿಸೋಜಾ ಹಾಗು ಪ್ರದ್ಯುಮ್ನ ನರಹಳ್ಳಿ ಅವರು ಬರೆದಿದ್ದಾರೆ. ಸದ್ಯ, “ನಿಮಿತ್ತ ಮಾತ್ರ” ಚಿತ್ರವು ಪ್ರಸ್ತುತ ಪ್ರೇಕ್ಷಕರಿಗೆ ಅದ್ಧೂರಿಯಾಗಿ ತಲುಪಿಸಲು ಮತ್ತು ಸೂಕ್ತ ಪರಿಚಯ ಪಡೆಯಲು ಪ್ರಸ್ತುತಪಡಿಸುವವರಿಗೆ pitching ಮಾಡಲಾಗುತ್ತಿದೆ.
ಧೀರಜ್ ಎಂ.ವಿ. ಅವರು ಕನ್ನಡಫಿಲ್ಮಿಕ್ಲಬ್ ಮೂಲಕ ಚಿತ್ರದ ಮಾರ್ಕೆಟಿಂಗ್, ವಿತರಣಾ ಮತ್ತು ಪ್ರಸ್ತುತಗೊಳಿಸುವ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆ. ಕನ್ನಡಫಿಲ್ಮಿಕ್ಲಬ್ ಈ ಚಿತ್ರದ ಬ್ರ್ಯಾಂಡಿಂಗ್ ಪಾಲುದಾರರಾಗಿ ಪಾಲ್ಗೊಳ್ಳುತ್ತಿದೆ, ಹಾಗೂ ಪ್ರಮುಖ ಸಿನೆಮಾ ನಿರ್ಮಾಪಕರೊಂದಿಗೆ 50ಕ್ಕೂ ಹೆಚ್ಚು ಮೀಟ್ & ಗ್ರೀಟ್ sessionಗಳಲ್ಲಿ ಭಾಗವಹಿಸಿದ್ದ club ಮೊದಲ ಬಾರಿ ಸಿನಿಮಾ ಬಿಡುಗಡೆಗೆ ಬೆಂಬಲ ನೀಡಲು ಮುಂದಾಗಿದೆ.
5000 ಕ್ಕೂ ಹೆಚ್ಚು ಸದಸ್ಯರ ಬಲದಿಂದ “ನಿಮಿತ್ತ ಮಾತ್ರ” ಗೆ ಪ್ರಾರಂಭಿಕ ಹಂಗಾಮಿಯನ್ನು ರಚಿಸುವಲ್ಲಿ ತೊಡಗಿಕೊಂಡಿದೆ ಹಾಗೂ ಬೃಹತ್ ಪ್ರಚಾರ, ಬ್ರ್ಯಾಂಡಿಂಗ್, ಮತ್ತು ಪ್ರಸ್ತುತಗೊಳಿಸುವ ಕಾರ್ಯಗಳಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ನಿರ್ದೇಶಕ ರೋಷನ್ ಡಿ’ಸೋಜಾ ಪ್ರಕಾರ “ನಿಮಿತ್ತ ಮಾತ್ರ ಒಂದು ರೋಮಾಂಚಕಾರಿ-ಥ್ರಿಲ್ಲರ್ ಚಿತ್ರವಾಗಿದ್ದು, ಇದು ಸರಿಯಾದ ಪ್ರೇಕ್ಷಕರಿಗೆ ತಲುಪಿದರೆ ಮುಂದಿನ ದಶಕಕ್ಕೂ ಹೆಚ್ಚು ಕಾಲ ಜನರ ಮನಸ್ಸಿನಲ್ಲಿ ಉಳಿಯುವ ಸಾಮರ್ಥ್ಯವನ್ನು ಹೊಂದಿದೆ. ಮೊದಲ ಕ್ಷಣದಿಂದ ಹಿಡಿದು ಶೀರ್ಷಿಕೆಯ ವರೆಗೂ ನಿಮ್ಮನ್ನು ಹಿಡಿದುಕೊಂಡೇ ಇರಿಸುವ ಚಿತ್ರ ಇದಾಗಲಿದೆಯಂತೆ.