Cini NewsSandalwood

ಇದೇ 19ರಂದು “ನಾಟ್ ಔಟ್” ರಿಲೀಸ್.. ಈಗ ಟ್ರೇಲರ್ ಸದ್ದು

ಸಿನಿಮಾ ಪ್ರೇಮಿಗಳಿಗೆ ಹೊಸ ಆಫರ್. ಚಿತ್ರಮಂದಿರಕ್ಕೆ ಬನ್ನಿ ಸಿನಿಮಾ ನೋಡಿ ಫಸ್ಟ್ ಆಫ್ ಫ್ರೀ… ಇಷ್ಟವಾದರೆ ಸೆಕೆಂಡ್ ಆಫ್ ಟಿಕೆಟ್… ಪಡೆದುಕೊಳ್ಳಿ ಎಂದಿದೆ ಡಾರ್ಕ್ ಹ್ಯೂಮರ್ ಕಾಮಿಡಿ ಜಾನರ್ ನ “ನಾಟ್ ಔಟ್” ಚಿತ್ರತಂಡ. ಈ ಚಿತ್ರವು ಜುಲೈ 19 ರಂದು ರಾಜ್ಯಾದ್ಯಂತ ಬಿಡುಗಡೆಗೊಳ್ಳುತ್ತಿದೆ. ರಾಷ್ಟ್ರಕೂಟ ಪಿಕ್ಚರ್ಸ್ ಲಾಂಛನದಲ್ಲಿ ವಿ. ರವಿಕುಮಾರ್ ಹಾಗೂ ಶಂಶುದ್ದೀನ್.ಎ ನಿರ್ಮಿಸಿರುವ ಈ ಚಿತ್ರವನ್ನು ಅಂಬರೀಶ್ ಎಂ ನಿರ್ದೇಶನ ಮಾಡಿದ್ದು , ಯುವ ಪ್ರತಿಭೆಗಳಾದ ಅಜಯ್ ಪೃಥ್ವಿ , ರಚನಾ ಇಂದರ್ ನಾಯಕ, ನಾಯಕಿಯಾಗಿ ನಟಿಸಿರುವ ಈ ಚಿತ್ರದ ಟ್ರೇಲರ್ ಅನ್ನು ನಟ ಶ್ರೀನಗರ ಕಿಟ್ಟಿ , ನಿರ್ದೇಶಕ ಸಿಂಪಲ್ ಸುನಿ ಹಾಗೂ ಮಂಗಳೂರಿನಿಂದ ಬೆಂಗಳೂರಿಗೆ ಕೇವಲ ನಾಲ್ಕು ಗಂಟೆಗಳಲ್ಲಿ ಮಗುವನ್ನು ಆಂಬುಲೆನ್ಸ್ ನಲ್ಲಿ ಕರೆತಂದ ಚಾಲಕ ಹನೀಫ್ ಮೂವರು ಸೇರಿ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭವನ್ನು ಹಾರೈಸಿದರು.

ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕ ಅಂಬರೀಶ್ .ಎಂ ಮಾತನಾಡುತ್ತಾ ನಾನು ಈ”ನಾಟ್ ಔಟ್” ಕಥೆಯನ್ನು ಲಾಕ್ ಡೌನ್ ಸಂದರ್ಭದಲ್ಲಿ ಬರೆದಿದ್ದು, ನಾನು ಈ ಹಿಂದೆ ಹೋಪ್ ಚಿತ್ರ ನಿರ್ದೇಶನ ಮಾಡಿದ್ದೆ. ನನ್ನ ಸಿನಿಮಾಗಳನ್ನ ನೋಡಿ ಆತ್ಮೀಯ ನಿರ್ಮಾಪಕ ಕುಮಾರ್ ಈ ತಂಡಕ್ಕೆ ಪರಿಚಯ ಮಾಡಿಸಿದರು.

ನನ್ನ ಕಥೆಯನ್ನು ಮೆಚ್ಚಿ ರಾಷ್ಟ್ರಕೂಟ ಪಿಕ್ಚರ್ಸ್ ಅವರು ನಿರ್ಮಾಣಕ್ಕೆ ಮುಂದಾದರು. ಮೊದಲಿಗೆ ನಿರ್ಮಾಪಕರ ಪುತ್ರ ಹೀರೋ ಎಂದು ಗೊತ್ತಿರಲಿಲ್ಲ. ತದನಂತರ ತಿಳಿಯಿತು ಅವರು ಟೊರೊಂಟೊದಲ್ಲಿ ಅಭಿನಯ ಕಲಿತು ಬಂದಿರುವ ಪ್ರತಿಭೆ ಎಂದು, ನಮ್ಮ ಪಾತ್ರಕ್ಕೆ ಯಾವ ಹೈಟ್, ವೈಟ್, ಹೀರೋಯಿಸಂ ಬೇಕಿಲ್ಲ, ಅದವೆಲ್ಲವನ್ನು ಮೀರಿಸುವಂತಹ ಉತ್ತಮ ಪ್ರತಿಭೆ ಅಜಯ್ ಪೃಥ್ವಿ ಸಿಕ್ಕರು.

ಒಬ್ಬ ಆಂಬುಲೆನ್ಸ್ ಡ್ರೈವರ್ ಪಾತ್ರ ವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಹಾಗೆಯೇ ನಾಯಕಿಯಾಗಿ ರಚನಾ ಇಂದರ್ ನರ್ಸ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ ರವಿಶಂಕರ್, ಕಾಕ್ರೋಜ್ ಸುಧೀ ಮುಖ್ಯಪಾತ್ರಗಳಲ್ಲಿ ನಟಿಸಿರುವ ಈ ಚಿತ್ರ ಡಾರ್ಕ್ ಹ್ಯೂಮರ್ ಕಾಮಿಡಿ ಜಾನರ್ ನ ಚಿತ್ರವಾಗಿದೆ. ಇದೆ 19 ರಂದು ಚಿತ್ರಮಂದಿರಕ್ಕೆ ಬನ್ನಿ ಫಸ್ಟ್ ಆಫ್ ಫ್ರೀ ಸಿನಿಮಾ ಚೆನ್ನಾಗಿದೆ ಅನಿಸಿದರೆ ಸೆಕೆಂಡ್ ಹಾಫ್ ಟಿಕೆಟ್ ಪಡೆದು ನೋಡಿ ಇದು ನಮ್ಮ ತಂಡದ ಆಫರ್ ಈಗಾಗಲೇ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಮಾತುಕತೆ ನಡೆದಿದೆ ಎಂದು ಹೇಳಿದರು.

ಇನ್ನು ನಾಯಕ ನಟ ಅಜಯ್ ಪೃಥ್ವಿ ಮಾತನಾಡುತ್ತಾ ನನ್ನದು ಈ ಚಿತ್ರದಲ್ಲಿ ಆಂಬುಲೆನ್ಸ್ ಚಾಲಕನ ಪಾತ್ರ. ಇದು ನನ್ನ ಹಿಂದಿನ ಚಿತ್ರಕ್ಕಿಂತ ಬೇರೆದೇ ರೂಪ ಕೊಡುವ ಪಾತ್ರವಿದು. ನಮ್ಮ ನಿರ್ದೇಶಕರಿಂದ ಬಹಳಷ್ಟು ಕಲ್ತಿದ್ದೇನೆ. ಈ ಚಿತ್ರವನ್ನು ನೀಡಿದ ನಿರ್ಮಾಪಕಗಳಿಗೆ ಧನ್ಯವಾದ ತಿಳಿಸುತ್ತೇನೆ. ಹಾಗೆಯೇ ನಮ್ಮ ಟ್ರೈಲರ್ ಬಿಡುಗಡೆ ಮಾಡಿದ ಅತಿಥಿಗಳಿಗೂ ಥ್ಯಾಂಕ್ಸ್. ನಮ್ಮ ಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ. ನಮ್ಮ ಸಿನಿಮಾ ನೋಡಿ ಹರಸಿ, ಬೆಳೆಸಿ ಎಂದರು.

ಇನ್ನು ನಾಯಕಿಯಾಗಿ ಅಭಿನಯಿಸಿರುವ ರಚನಾ ಇಂದರ್ ಮಾತನಾಡುತ್ತನನ್ನದು ಈ “ನಾಟ್ ಔಟ್” ನಲ್ಲಿ ನರ್ಸ್ ಪಾತ್ರ. ಕಥೆ ತುಂಬಾ ಚೆನ್ನಾಗಿದೆ ಹಾಗಾಗಿ ಒಪ್ಪಿಕೊಂಡೆ. ಇದೆ 19ಕ್ಕೆ ಬನ್ನಿ ಚಿತ್ರ ನೋಡಿ ಎಂದರು. ಉಳಿದಂತೆ ಕಾಕ್ರೋಜ್ ಸುಧೀ, ಅಶ್ವಿನ್ ಹಾಸನ್, ಪ್ರಶಾಂತ್ ಸಿದ್ದಿ, ಸಲ್ಮಾನ್ ಮುಂತಾದ ಕಲಾವಿದರು ಹಾಗೂ ಕಾರ್ಯಕಾರಿ ನಿರ್ಮಾಪಕ ಕುಮಾರ್ ಚಿತ್ರದ ಕುರಿತು ತಮ್ಮ ತಮ್ಮ ಅನುಭವಗಳನ್ನು ಹಂಚಿಕೊಂಡರು

error: Content is protected !!