ಒಲವಿನ ಪ್ರೀತಿಯ ಸಾಕ್ಷಾತ್ಕಾರ ಒಲವೇ ಮಂದಾರ-2 (ಚಿತ್ರವಿಮರ್ಶೆ ರೇಟಿಂಗ್ : 3/5)
ರೇಟಿಂಗ್ : 3/5
ಚಿತ್ರ : ಒಲವೇ ಮಂದಾರ 2
ನಿರ್ದೇಶಕ : ಎಸ್.ಆರ್ . ಪಾಟೀಲ್
ನಿರ್ಮಾಪಕರು : ರಮೇಶ್ ಮರಗೋಳ, ಟಿ.ಎಂ.ಸತೀಶ್
ಸಂಗೀತ : ಡಾ. ಕಿರಣ್
ತೋಟಂಬೈಲ್
ತಾರಾಗಣ : ಸನತ್, ಪ್ರಜ್ಞಾ ಭಟ್, ಅನುಪಾ ಸತೀಶ್, ಭವ್ಯ , ಡಿಂಗ್ರಿ ನಾಗರಾಜ್, ಮಡೆನೂರ ಮನು , ಶಿವಾನಂದ ಸಿಂದಗಿ ಹಾಗೂ ಮುಂತಾದವರು…
ಬಹುತೇಕ ಪ್ರೀತಿ , ಪ್ರೇಮದ ಕಥಾನಕ ಚಿತ್ರಗಳು ಪ್ರೇಕ್ಷಕರ ಗಮನವನ್ನು ಬಹಳ ಬೇಗ ಸೆಳೆಯುತ್ತದೆ. ಅಂತಹದ್ದೇ ಒಂದು ಪರಿಶುದ್ಧ ಪ್ರೇಮಕಥೆಯಲ್ಲಿ ಪ್ರೀತಿ , ಸ್ನೇಹ , ವಾತ್ಸಲ್ಯದ ಸೆಳೆತ , ರಾಜಕೀಯ ನೀತಿ , ನೋವು , ನಲಿವು , ತ್ಯಾಗ ಎಲ್ಲವನ್ನು ಬೆಸೆದುಕೊಂಡು ಸುಂದರ ಪರಿಸರದ ನಡುವೆ ಪ್ರೀತಿ , ಪ್ರೇಮದ ನಿಷ್ಕಲ್ಮಶ ಸೆಳೆತವನ್ನು ತೆರೆಯ ಮೇಲೆ ಈ ವಾರ ತಂದಿರುವಂತಹ ಚಿತ್ರ “ಒಲವೇ ಮಂದಾರ 2”.
ನೋಡಲು ಸುರದ್ರೂಪಿ ಆರ್ಯ (ಸನತ್) ತಾನಾಯಿತು ತನ್ನ ಕೆಲಸವಾಯಿತು ಎನ್ನುವ ಹುಡುಗ. ಅವನನ್ನು ಸೆಳೆಯಲು ಹುಡುಗಿಯರ ಗುಂಪು. ಅದರಲ್ಲೂ ಸುಂದರ ಚೆಲುವೆ ದೃತಿ (ಅನುಪ ಸತೀಶ್) ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತ ಆರ್ಯ ನನ್ನ ಇಷ್ಟಪಡುತ್ತಾಳೆ. ಒಮ್ಮೆ ಸಹೋದ್ಯೋಗಿ ಗೆಳೆಯ (ಮನು) ಜೊತೆ ತನ್ನ ಪ್ರೀತಿಯ ನಿವೇದನೆಯನ್ನ ಆರ್ಯ ಹೇಳಲು ಹೋದಾಗ ನಾಯಕನ ತನ್ನ ಫ್ಲ್ಯಾಶ್ ಬ್ಯಾಕ್ ಹೇಳುತ್ತಾನೆ.
ಸುಂದರ ಪರಿಸರದ ಊರಿನಲ್ಲಿ ಬೆಳೆಯುವ ಆರ್ಯ ತನ್ನ ತಾಯಿ (ಭವ್ಯ) ತಾತ ,ತಂಗಿ ಹಾಗೂ ತನ್ನ ಸ್ನೇಹಿತರೊಂದಿಗೆ ತನ್ನಿಷ್ಟದಂತೆ ಸತ್ಯ,ನ್ಯಾಯದ ಪರ ಮಾತನಾಡುತ್ತಾ ಊರಿನಲ್ಲಿ ಇದ್ದುಕೊಂಡು ತನ್ನ ಭವಿಷ್ಯ ಕಟ್ಟಿಕೊಳ್ಳುವ ಕನಸನ್ನು ಹೊಂದಿರುತ್ತಾನೆ. ಒಮ್ಮೆ ಅಚಾನಕ್ಕಾಗಿ ಕಾಣುವ ಸುಂದರ ಬೆಡಗಿ ಭೂಮಿ (ಪ್ರಜ್ಞಾ ಭಟ್). ಅವಳ ಸೌಂದರ್ಯಕ್ಕೆ ಸೋತು ಅವಳನ್ನು ಇಷ್ಟ ಪಡುತ್ತಾನೆ. ಇವನ ಪ್ರೇಮಕ್ಕೆ ಗೆಳೆಯರು ಸಹಕಾರ ನೀಡುತ್ತಾರೆ.
ಭಾವೈಕ್ಯತೆಯ ಪಯಣದಲ್ಲಿ ಕೋಟಿಗಳ ಕರಾಮತ್ತು : 13 ಚಿತ್ರದ ವಿಮರ್ಶೆ -ರೇಟಿಂಗ್ : 3.5/5
ಇತ್ತ ಭೂಮಿ ಒಬ್ಬ ರಾಜಕೀಯ ಮುಖಂಡನ ಮಗಳಾಗಿದ್ದು , ಅವಳಿಗೂ ಆರ್ಯನ ಮೇಲೆ ಇಷ್ಟವಿದ್ದು, ತನ್ನ ಪ್ರೀತಿಯನ್ನು ವ್ಯಕ್ತಪಡಿಸಲು ಚಳಪಡಿಸುತ್ತಿರುತ್ತಾಳೆ. ಆರ್ಯನ ಮನೆಯಲ್ಲಿ ಯಾವ ಅಡೆತಡೆ ಇಲ್ಲದಿದ್ದರೂ , ಭೂಮಿಯ ಮನೆಯಲ್ಲಿ ತಂದೆ ವಿರೋಧ ಎದುರಾಗುತ್ತದೆ. ಇದರಿಂದ ಬೇಸತ್ತ ಭೂಮಿ ಆರ್ಯ ನನ್ನ ಒಪ್ಪಿಸಿ ಮನೆಯಿಂದ ಹೊರ ನಡೆದು ಮದುವೆಯಾಗುತ್ತಾಳೆ. ಮುಂದೆ ಅವಳ ಬದುಕಿನಲ್ಲಿ ದುರಂತ ಒಂದು ನಡೆಯುತ್ತದೆ. ಅದು ನಾಯಕನ ಬದುಕಿಗೂ ಅನುಭವಿಸಲಾದ ನೋವುಂಟಾಗುತ್ತದೆ.
ಏನದು ದುರಂತ…
ನಾಯಕ ಏನಾಗುತ್ತಾನೆ…
ಕುಟುಂಬಗಳು ಏನಾಗುತ್ತೆ…
ದೃತಿ ಮದುವೆ ಯಾರ ಜೊತೆ… ಕ್ಲೈಮ್ಯಾಕ್ಸ್ ಉತ್ತರ ಏನು…
ಈ ಎಲ್ಲಾ ಪ್ರಶ್ನೆಗೆ ಉತ್ತರ ಬೇಕಾದರೆ ಒಮ್ಮೆ ಈ ಚಿತ್ರ ನೋಡಬೇಕು.
ಇದೊಂದು ರೀತಿ ತ್ರಿಕೋನ ಪ್ರೇಮ ಚಿತ್ರ ಅನಿಸಿದರೂ ನಿಷ್ಕಲ್ಮಶವಾದ ಪ್ರೀತಿಗೆ ಒಂದು ಅರ್ಥವನ್ನು ಕಟ್ಟಿಕೊಡುವ ಪ್ರಯತ್ನವನ್ನು ಮಾಡಿದಂತಿದೆ.ಈ ಚಿತ್ರದ ನಾಯಕನಾಗಿ ಅಭಿನಯಿಸಿರುವ ಸನತ್ ನೋಡಲು ಸ್ಮಾರ್ಟ್ ಕಾಣುತ್ತಾರೆ. ಒಬ್ಬ ಪ್ರೇಮಿಯಾಗಿ ತನ್ನ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಪ್ರಯತ್ನ ಮಾಡಿದ್ದಾರೆ.
ಕೆಲವೊಂದು ಸನ್ನಿವೇಶಗಳಲ್ಲಿ ಇನ್ನಷ್ಟು ಇನ್ವಾಲ್ವ್ಮೆಂಟ್ ಮಾಡಬಹುದಿತ್ತು. ಉಜ್ವಲ ಭವಿಷ್ಯದ ಹಾದಿಗೆ ಈ ಚಿತ್ರ ದಾರಿ ಮಾಡಿಕೊಟ್ಟಂತಿದೆ. ಇನ್ನು ನಾಯಕಿ ಪಾತ್ರ ಮಾಡಿರುವ ಪ್ರಜ್ಞಾ ಭಟ್ ಕೂಡ ಲೀಲಾಜಾಲವಾಗಿ ತನ್ನ ಪಾತ್ರವನ್ನು ನಿರ್ವಹಿಸುವ ಮೂಲಕ ಗಮನ ಸೆಳೆಯುತ್ತಾರೆ. ಅದೇ ರೀತಿ ಅನುಪ ಸತೀಶ್ ಕೂಡ ಸಿಕ್ಕ ಅವಕಾಶವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ.
ನಾಯಕನ ತಾಯಿಯಾಗಿ ಭವ್ಯ ಹಾಗೂ ನಾಯಕಿಯ ತಂದೆಯ ಪಾತ್ರದಲ್ಲಿ ನಿರ್ಮಾಪಕ ರಮೇಶ್ ಮರ್ಗೋಳ್ ಮತ್ತು ಸೆಲ್ಫಿ ಲಿಂಗಣ್ಣನಾಗಿ ಡಿಗ್ರಿ ನಾಗರಾಜ್ ಸೇರಿದಂತೆ ಎಲ್ಲಾ ಪಾತ್ರಧಾರಿಗಳು ಚಿತ್ರದ ಓಟಕ್ಕೆ ಸಾತ್ ನೀಡಿದ್ದಾರೆ. ಇನ್ನು ನಿರ್ಮಾಪಕ ರಮೇಶ್ ಮರ್ಗೊಳ್ ಈ ಚಿತ್ರವನ್ನು ನಿರ್ಮಿಸುವುದರ ಜೊತೆಗೆ ನಾಯಕಿಯ ತಂದೆಯಾಗಿ ಪ್ರೇಮಿಗಳ ಪ್ರೀತಿಯ ವಿರೋಧಿಯ ಪಾತ್ರವನ್ನು ನಿರ್ವಹಿಸುವ ಮೂಲಕ ತಮ್ಮ ಆಸೆಯನ್ನು ಈಡೇರಿಸಿಕೊಂಡಂತಿದೆ.
ಈ ಚಿತ್ರವನ್ನ ನಿರ್ದೇಶನ ಮಾಡಿರುವ ಎಸ್. ಆರ್. ಪಾಟೀಲ್ ಒಂದು ಪರಿಶುದ್ಧ ಪ್ರೇಮಕಥೆಯನ್ನು ತೆರೆ ಮೇಲೆ ತರುವ ಪ್ರಯತ್ನ ಮಾಡಿರುವುದು ಮೆಚ್ಚುವಂಥದ್ದು , ಇನ್ನು ಚಿತ್ರಕಥೆಯ ಇನ್ನಷ್ಟು ಬಿಗಿ ಮಾಡಬಹುದಿತ್ತು , ಸಂಭಾಷಣೆಗಳು ವರದಿ ಒಪ್ಪಿಸಿದಂತಿದೆ. ಇನ್ನು ಚಿತ್ರದ ದ್ವಿತೀಯ ಭಾಗ ಗಮನ ಸೆಳೆಯುವಂತೆ ಮೂಡಿ ಬಂದಿದೆ.
ಇನ್ನು ಸಂಗೀತ ಉತ್ತಮವಾಗಿದ್ದು , ಹಿನ್ನೆಲೆ ಸಂಗೀತದ ಕಡೆ ಹೆಚ್ಚು ಗಮನ ಹರಿಸಬೇಕಿತ್ತು. ಛಾಯಾಗ್ರಾಹಕರ ಕೆಲಸವೂ ಉತ್ತಮವಾಗಿದೆ. ಒಟ್ಟಾರೆ ಪ್ರೇಮಿಗಳು , ಪ್ರೀತಿಸುವ ಮನಸ್ಸುಗಳು ಸೇರಿದಂತೆ ಕುಟುಂಬವು ಕುಳಿತು ಒಮ್ಮೆ ನೋಡುವಂತಹ ಚಿತ್ರ ಇದಾಗಿದೆ.
#OlaveMandara2, #KanandaFilm, #MovieReview,