ಮನರಂಜನೆಯ ಕ್ಷೇತ್ರಕ್ಕೆ ಹೊಸದೊಂದು ಒಟಿಟಿ “Glopixs” ಲೋಗೊ ಅನಾವರಣ.
ಡಿಜಿಟಲ್ ಒಟಿಟಿ ವೇದಿಕೆಗೆ ಇದೀಗ ಹೊಸದೊಂದು ಒಟಿಟಿಯ ಆಗಮನವಾಗುತ್ತಿದೆ. ಅದುದೇ Global Pix Incನ ಗ್ಲೋಪಿಕ್ಸ್ (Glopixs). ಈ ಹೊಸ ಒಟಿಟಿ ವೇದಿಕೆ ಇದೀಗ ಅಧಿಕೃತವಾಗಿ ಅನಾವರಣಗೊಂಡಿದೆ. ಇತ್ತೀಚೆಗೆ “ಗ್ಲೋಪಿಕ್ಸ್”ನ ಲೋಗೋ ಅನಾವರಣವಾಗಿದೆ. ಕರ್ನಾಟಕ, ಕೇರಳ ಹಾಗೂ ಹೈದರಾಬಾದ್ ನಲ್ಲಿ ಏಕಕಾಲಕ್ಕೆ ಲೋಗೊ ಬಿಡುಗಡೆಯಾಗಿದ್ದು ವಿಶೇಷ.
ಬೆಂಗಳೂರಿನಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ನರಸಿಂಹಲು, ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಉಮೇಶ್ ಬಣಕಾರ್ ಹಾಗೂ ಹಿರಿಯ ಛಾಯಾಗ್ರಾಹಕ, ಸೆನ್ಸಾರ್ ಬೋರ್ಡ್ ಸದಸ್ಯರಾದ ಶ್ರೀವತ್ಸ ಶಾಂಡಿಲ್ಯ ಲೋಗೊ ಅನಾವರಣ ಮಾಡಿ ನೂತನ ಓಟಿಟಿ ಗೆ ಶುಭ ಕೋರಿದರು. ಕನ್ನಡ ವಿಭಾದ ಕ್ರಿಯೇಟಿವ್ ಹೆಡ್ ಪ್ರತಿಭಾ ಪಟವರ್ಧನ್ ಹಾಗೂ ಫೈನಾನ್ಸ್ ಚೀಫ್ ಅಡ್ವೈಸರ್ ಮಂಜುನಾಥ್ ಪಟವರ್ಧನ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಕನ್ನಡ ವಿಭಾಗದ ಕ್ರಿಯೇಟಿವ್ ಹೆಡ್ ಪ್ರತಿಭಾ ಪಟವರ್ಧನ್, ಫೌಂಡರ್ ವಿನ್ಸಿ ಹಾಗೂ ಕೋ ಫೌಂಡರ್ ಅನಿತಾ ಅವರ ಮಾರ್ಗದರ್ಶನ ಹೊಸದೊಂದು ಭಾಷ್ಯವನ್ನು ಬರೆಯಲು ಇಂದಿನಿಂದ ಪ್ರಯಾಣ ಆರಂಭವಾಗಿದೆ. ಈಗ ಲೋಗೋ ಬಿಡುಗಡೆ ಆಗಿದ್ದು, ಇದೇ ವರ್ಷದ ಮೇ ತಿಂಗಳಿಂದ ಅಧಿಕೃತವಾಗಿ ಲಾಂಚ್ ಆಗಲಿದೆ.
Glopixs ಒಟಿಟಿಯಲ್ಲಿ 360-ಡಿಗ್ರಿ ಮನರಂಜನೆ ನೀಡಲು ಉದ್ದೇಶಿಸಲಾಗಿದೆ. ಸಿನಿಮಾ, ವೆಬ್‌ಸಿರೀಸ್‌ಗಳು, ಸುದ್ದಿಗಳು, ಶೋಗಳು. ಹೀಗೆ ಇನ್ನೂ ಹಲವು ಆಯಾಮಗಳಲ್ಲಿ ನೋಡುಗರಿಗೆ ಮನರಂಜನೆಯ ಹೂರಣ ಬಡಿಸಲಿದೆ. Glopixs ಒಟಿಟಿಯ ಲೋಗೋ ಇಂದು ಕರ್ನಾಟಕ, ಕೇರಳ ಹಾಗೂ ಹೈದರಾಬಾದ್ ನಲ್ಲಿ ಏಕಕಾಲಕ್ಕೆ ಲಾಂಚ್ ಆಗಿದೆ. Glopixs ಇದೀಗ ಸುಧಾರಿತ ತಂತ್ರಜ್ಞಾನವನ್ನು ಬಳಸಿಕೊಂಡು ಭಾರತದ ಬಹುಮುಖ್ಯ OTT ವೇದಿಕೆ ಆಗಲು ಸಿದ್ಧವಾಗಿದೆ.
ವೈವಿಧ್ಯಮಯ ಕಂಟೆಂಟ್‌ಗಳನ್ನೂ ಇದು ನೀಡಲಿದೆ. ಈ ಒಟಿಟಿ ವೇದಿಕೆಯಲ್ಲಿ ಸಿನಿಮಾಗಳು, ವೆಬ್ ಸರಣಿಗಳು, ಸಾಕ್ಷ್ಯಚಿತ್ರಗಳು, ಸುದ್ದಿಗಳು ಮತ್ತು ರಿಯಾಲಿಟಿ ಶೋಗಳ ಕಂಟೆಂಟ್‌ಗಳು ಸಿಗಲಿದೆ. ಪ್ರಾದೇಶಿಕತೆಗೂ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದ್ದು, ಭೋಜ್‌ಪುರಿ, ತಮಿಳು, ಇಂಗ್ಲಿಷ್, ಕನ್ನಡ, ಗುಜರಾತಿ, ಬಂಗಾಳಿ ಮತ್ತು ಮಲಯಾಳಂ ಕಂಟೆಂಟ್‌ಗಳು ವೀಕ್ಷಣೆಗೆ ಸಿಗಲಿವೆ. ವೆಬ್, ಮೊಬೈಲ್ ಮತ್ತು ಟ್ಯಾಬ್ಲೆಟ್ ಬಳಕೆದಾರರಿಗೆ ಇದು ಯೂಸರ್ ಫ್ರೆಂಡ್ಲಿ ವೇದಿಕೆ ಆಗಿರಲಿದೆ.
ಇದಕ್ಕೂ ಮೊದಲು ಜನವರಿ 23ರಂದು ದೆಹಲಿಯಲ್ಲಿ ವಿಶೇಷ ಪತ್ರಿಕಾಗೋಷ್ಠಿ ನಡೆಯಲಿದೆ. Glopixs ಕೇವಲ ಮತ್ತೊಂದು OTT ಪ್ಲಾಟ್‌ಫಾರ್ಮ್ ಅಲ್ಲ. ಇದು ಡಿಜಿಟಲ್ ಮನರಂಜನೆಯ ಹೊಸ ದೃಷ್ಟಿ. ಎಲ್ಲೆಡೆಯ ಪ್ರೇಕ್ಷಕರಿಗೆ ಜಾಗತಿಕವಾಗಿ ಇಷ್ಟವಾಗುವ ಕಂಟೆಂಟ್‌ಗಳನ್ನು ನೀಡುತ್ತದೆ. ಲೋಗೊ ಬಿಡುಗಡೆ ಮಾಡಿಕೊಟ್ಟ ಗಣ್ಯರಿಗೆ ಧನ್ಯವಾದ ಎಂದರು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ನರಸಿಂಹಲು, ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಹಾಗೂ ಛಾಯಾಗ್ರಾಹಕ ಶ್ರೀವತ್ಸ ಲೋಗೊ ಬಿಡುಗಡೆ ಮಾಡಿ “ಗ್ಲೋಪಿಕ್ಸ್” ಓಟಿಟಿಯ ಉದ್ದೇಶ ಚೆನ್ನಾಗಿದೆ. ಈ ಓಟಿಟಿ ದೊಡ್ಡಮಟ್ಟದಲ್ಲಿ ಹೆಸರು ಮಾಡಲಿ. “ಗ್ಲೋಪಿಕ್ಸ್” ನಿಂದ ನಿರ್ಮಾಪಕರಿಗೆ ಅನುಕೂಲವಾಗಲಿ ಎಂದು ಹೇಳಿದರು.