Cini NewsSandalwood

ಯಶಸ್ವಿ 25 ದಿನ ಪೂರೈಸಿದ ‘ಇಂಟರ್‌ ವಲ್’ ಚಿತ್ರತಂಡದ ಸಂಭ್ರಮಕ್ಕೆ ಪವನ್ ಒಡೆಯರ್ ಸಾಥ್

ಒಂದೇ ಹೆಸರಿನ ಮೂವರು ಸ್ನೇಹಿತರು ಶಾಲೆಯಲ್ಲಿ ಮಾಡುವ ಕಿತಾಪತಿ, ಇಂಜಿನಿಯರಿಂಗ್ ಓದುವಾಗ, ನಂತರ ಕೆಲಸ ಹುಡುಕುವಾಗ ನಡೆಯುವ ಘಟನೆಗಳನ್ನು ಹಾಸ್ಯಮಿಶ್ರಿತವಾಗಿ ಹೇಳಿರುವ ಚಿತ್ರ “ಇಂಟರ್ ವಲ್ ” ಭರತವರ್ಷ್ ಪಿಚ್ಚರ್ಸ್ ಅಡಿಯಲ್ಲಿ ಸುಖೇಶ್ ಹಾಗೂ ಭರತ್ ವರ್ಷ ಸೇರಿ ನಿರ್ಮಿಸಿರುವ ಹಾಗೂ ಭರತ್ ವರ್ಷ ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಯೂಥ್ ಫುಲ್ ಎಂಟರ್ ಟೈನರ್ ಚಿತ್ರಕ್ಕೆ ರಾಜ್ಯದಾದ್ಯಂತ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇದೀಗ ಯಶಸ್ವಿಯಾಗಿ 25 ದಿನಗಳನ್ನು ಪೂರೈಸಿದೆ.

ಪ್ರತಿಯೊಬ್ಬರ ಜೀವನದಲ್ಲೂ ಒಂದು ಇಂಟರ್‌ವಲ್ ಅನ್ನೋದು ಬಂದೇ ಬರುತ್ತದೆ. ಅದೇ ರೀತಿ ನಾಯಕನ ಜೀವನದಲ್ಲಿ ಬಂದ ಇಂಟರ್‌ವಲ್ ಆತನ ಲೈಫಲ್ಲಿ ಏನೇನೆಲ್ಲ ತಿರುವುಗಳಿಗೆ ಕಾರಣವಾಯಿತು ಅನ್ನೋದನ್ನು ಕುತೂಹಲಕರವಾಗಿ ನಿರ್ದೇಶಕರು ಈ ಚಿತ್ರದಲ್ಲಿ ಹೇಳಿದ್ದಾರೆ.

ಈಚೆಗೆ ನಡೆದ ಇಂಟರ್ ವಲ್ ಚಿತ್ರದ 25ರ ಸಂಭ್ರಮದ ಕ್ಷಣಗಳಿಗೆ ನಿರ್ದೇಶಕ ಪವನ್ ಒಡೆಯರ್ ಅವರು ಸಾಕ್ಷಿಯಾದರು. ಅವರು ಚಿತ್ರತಂಡಕ್ಕೆ ಸ್ಮರಣ ಫಲಕ ವಿತರಿಸಿ ಮಾತನಾಡುತ್ತ ಈ ಸಿನಿಮಾ ಬಗ್ಗೆ ನಾನು ತುಂಬಾ ಕೇಳಿದ್ದೇನೆ. ಎಂಜಿನಿಯರ್ ಗಳೇ ಸೇರಿ ಮಾಡಿರುವ ಚಿತ್ರ.

ಮಾರ್ಕೆಟಿಂಗ್ ಮಾಡುವಲ್ಲಿ ಈ ತಂಡ ಗೆದ್ದಿದೆ. ಈಗಿನ ದಿನಗಳಲ್ಲಿ 25 ದಿನ ಪೂರೈಸೋದು ಒಂದು ಮೈಲಿಗಲ್ಲಿದ್ದ ಹಾಗೆ. ಅದನ್ನು ಈ ತಂಡ ಸಾಧಿಸಿದೆ. ಕಾಲೇಜ್ ಬ್ಯಾಕ್ ಡ್ರಾಪ್ ಇಟ್ಟುಕೊಂಡು ಸಾಕಷ್ಟು ಸಿನಿಮಾಗಳು ಬಂದಿವೆ. ನನ್ನ ಗೂಗ್ಲಿ ಕೂಡ ಅದೇ ಥರದ್ದು. ಅಂಥಾ ಪ್ರಯತ್ನ ಮಾಡಿ ಈ ತಂಡ ಗೆದ್ದಿದೆ. ನಿಮ್ಮ ಮುಂದಿನ ಪ್ರಾಜೆಕ್ಟ್ ಇನ್ನೂ ಪೀಕ್ ನಲ್ಲಿರಲಿ ಎಂದು ಹಾರೈಸಿ, ನಮ್ಮಲ್ಲಿ ತುಂಬಾ ಜನ ಪ್ರತಿಭಾವಂತರಿದ್ದಾರೆ.

ಪ್ರೇಕ್ಷಕರು ಹೊಸಬರ ಸಿನಿಮಾಗಳಿಗೆ ಹೆಚ್ಚು ಆದ್ಯತೆ ಕೊಡಬೇಕು ಎಂದು ಸಲಹೆ ನೀಡಿದರು. ನಿರ್ದೇಶಕ ಭರತ್ ವರ್ಷ ಮಾತನಾಡಿ ನಮಗೆ ಪುನೀತ್ ರಾಜ್ ಕುಮಾರ್ ಅವರ ಬ್ಲೆಸಿಂಗ್ಸ್ ಸಿಕ್ಕಿದೆ. ಅಲ್ಲದೆ ಅಶ್ವಿನಿ ಮೇಡಂ, ಶ್ರೀಮುರಳಿ, ದ್ರುವ ಸರ್ಜಾ ಅವರೂ ನಮಗೆ ಸಪೋರ್ಟ್ ಮಾಡಿದ್ದು ಚಿತ್ರದ ಗೆಲುವಿಗೆ ಸಹಕಾರಿಯಾಯ್ತು ಎಂದರು.

ನಾಯಕ ನಟ ಸಖೀ ಮಾತನಾಡುತ್ತ ಫೈನಾನ್ಷಿಯಲಿ ಅನ್ನೋದಕ್ಕಿಂತ, ಮೆಂಟಲಿ ಈ ಚಿತ್ರ ನಮಗೆ ತೃಪ್ತಿ ತಂದುಕೊಟ್ಟಿದೆ. 22 ಸಾವಿರ ಜನ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಮಾಧ್ಯಮಗಳ ಸಹಕಾರವೂ ತುಂಬಾ ದೊಡ್ಡದು. ಒಂದು ಸಿನಿಮಾ ಮಾಡೋವಾಗ ಮೊದಲು ಸ್ಕ್ರಿಪ್ಟ್ ಮಾಡೋದು, ನಂತರ ಜನರನ್ನು ಥೇಟರಿಗೆ ಕರೆತರೋದು ಈ ಎರಡು ಸ್ಟೆಪ್ಸ್ ಕಷ್ಟ. ಅದನ್ನುಬಿಟ್ಟು ಉಳಿದೆಲ್ಲವನ್ನೂ ಸುಲಭವಾಗಿ ಮಾಡಬಹುದು ಎಂದು ತನ್ನ ಅನುಭವಗಳನ್ನು ಬಿಚ್ಚಿಟ್ಟರು.

ಉಳಿದಂತೆ ಶಶಿರಾಜ್, ಪ್ರಜ್ವಲ್ ಕುಮಾರ್ ಗೌಡ, ನಾಯಕಿಯರಾದ ಸಹನಾ ಆರಾಧ್ಯ, ಚರಿತ್ರಾರಾವ್ ಎಲ್ಲರೂ ಚಿತ್ರದ ಗೆಲುವಿನ ಸಂತಸ ಹಂಚಿಕೊಂಡರು.
ಚಿತ್ರದಲ್ಲಿ ವಿಕಾಸ್ ವಸಿಷ್ಠ ಅವರ ಸಂಗೀತ ಸಂಯೋಜನೆಯ ಹಾಡುಗಳಿಗೆ ವಿಜಯ್ ಪ್ರಕಾಶ್, ಚಂದನ್ ಶಟ್ಟಿ, ಆಲ್ ಓಕೆ ಅಲೋಕ್, ಸುನಿಧಿ ಗಣೇಶ್, ವಾಣಿ ಹರಿಕೃಷ್ಣ ದನಿಯಾಗಿದ್ದಾರೆ. ರಾಜ್‌ಕಾಂತ್ ಅವರ ಛಾಯಾಗ್ರಹಣ, ಚಂದ್ರು ಬಂಡೆ ಅವರ ಸಾಹಸ ನಿರ್ದೇಶನ, ಶಶಿಧರ್ ಅವರ ಸಂಕಲನ ಈ ಚಿತ್ರಕ್ಕಿದೆ.

error: Content is protected !!