Cini NewsMovie ReviewSandalwood

ಡ್ರಗ್ಸ್ ಜಾಲದ ಎಡವಟ್ಟಿನಲ್ಲಿ ಹುಡುಕಾ, ಪರದಾಟದ ಪೌಡರ್ (ಚಿತ್ರವಿಮರ್ಶೆ – ರೇಟಿಂಗ್ : 3.5/5)

ರೇಟಿಂಗ್ : 3.5/5
ಚಿತ್ರ : ಪೌಡರ್
ನಿರ್ದೇಶಕ : ಜನಾರ್ಧನ್‍ ಚಿಕ್ಕಣ್ಣ
ನಿರ್ಮಾಪಕರು : ಕಾರ್ತಿಕ್‍ ಗೌಡ, ಯೋಗಿ.ಜಿ.ರಾಜ್‍ , ವಿಜಯ್‍ ಸುಬ್ರಹ್ಮಣ್ಯಂ ಹಾಗೂ ಅರುನಭ್‍ ಕುಮಾರ್‍
ಸಂಗೀತ : ವಾಸುಕಿ ವೈಭವ್
ಛಾಯಾಗ್ರಹಕ : ಅದ್ವೈತ ಗುರುಮೂರ್ತಿ
ತಾರಾಗಣ: ದಿಗಂತ್, ಧನ್ಯ ರಾಮ್ ಕುಮಾರ್, ಶರ್ಮಿಳಾ ಮಾಂಡ್ರೆ , ಅನಿರುದ್ಧ ಆಚಾರ್ಯ, ರಂಗಾಯಣ ರಘು, ಗೋಪಾಲಕೃಷ್ಣ ದೇಶಪಾಂಡೆ, ನಾಗಭೂಷಣ, ರವಿಶಂಕರ್ ಗೌಡ ಹಾಗೂ ಮುಂತಾದವರು…

ಜೀವನದಲ್ಲಿ ಕನಸು , ಆಸೆ , ಆಕಾಂಕ್ಷೆ , ಗುರಿ ಇದ್ದಿದ್ದೆ. ಅದನ್ನ ಈಡೇರಿಸಿಕೊಳ್ಳಬೇಕಾದರೆ ಬಹಳ ಶ್ರಮ , ಶ್ರದ್ಧೆ ಅಗತ್ಯ. ಇದನ್ನು ಹೊರತಾಗಿಯೂ ಇನ್ನೊಂದು ದಾರಿ ಕೆಲವರಿಗೆ ಸಿಗುತ್ತದೆ. ಅಂತಹದ್ದೇ ಹಾದಿಯಲ್ಲಿ ಸಾಗುವವರ ಬದುಕಿನಲ್ಲಿ ಡ್ರಗ್ಸ್ ಮಾಫಿಯಾದ ವೈವಾಟಿನ ಸುಳಿಯಲ್ಲಿ ಸಿಲುಕಿ ಪರದಾಡುವವರ ಸ್ಥಿತಿ ಗತಿಯ ಸುತ್ತ ಹಾಸ್ಯ ಮಿಶ್ರಣದೊಂದಿಗೆ ಗ್ರಾಫಿಕ್ಸ್ , ಫ್ಯಾಂಟಸಿ ಟಚ್ ನೊಂದಿಗೆ ಈ ವಾರ ತೆರೆ ಮೇಲೆ ಬಂದಿರುವಂತಹ ಚಿತ್ರ “ಪೌಡರ್”.

ತಾನಾಯಿತು ತನ್ನ ಸೂಪರ್ ಮಾರ್ಕೆಟ್ ಕೆಲಸವಾಯಿತು ಎನ್ನುತ್ತಾ ಬದುಕುವ ಸೂರ್ಯ (ದಿಗಂತ್). ಇನ್ನು ಈತನ ಗೆಳೆಯ ಕರಣ್ (ಅನಿರುದ್ಧ ಆಚಾರ್ಯ) ಬಾರ್ ಒಂದರಲ್ಲಿ ಕೆಲಸ ಮಾಡುತ್ತಾ ತರ್ಲೆ , ತುಂಟಾಟವೇ ಜೀವನ ಮಾಡಿಕೊಂಡಿರುತ್ತಾನೆ. ಬೆಟ್ಟದಷ್ಟು ಆಸೆಯ ನಡುವೆಯೂ ನರ್ಸ್ ಕೆಲಸ ಮಾಡುವ ನಿತ್ಯ (ಧನ್ಯ ರಾಮ್ ಕುಮಾರ್). ವರ್ಷಗಟ್ಟಲೆಯ ಪ್ರೀತಿ ಇರುವ ಸೂರ್ಯ ಹಾಗೂ ನಿತ್ಯಾಳ ಮಧ್ಯ ಮನಸ್ಸು , ಕೋಪ ಇದ್ದಿದ್ದೆ.

ಮತ್ತೊಂದೆಡೆ ಚೀನಾದಿಂದ ಬ್ರೂಸ್ ಲೀ ಎಂಬ ಬಾಸ್ ಟಲ್ಕಮ್ ಪೌಡರ್ ಡಬ್ಬದಲ್ಲಿ ಡ್ರಗ್ಸ್ ಸಪ್ಲೈ ಮಾಡಲು ಜೆವ್ಸ್ ಎಂಬ ಆಪರೇಟರ್ ಬಳಸಿಕೊಳ್ಳುತ್ತಾನೆ. ಈ ಡೀಲಿಂಗ್ ವಿಚಾರದಲ್ಲಿ ಏನೇ ಸಮಸ್ಯೆ ಬಂದರು ಬಗೆಹರಿಸಲು ಬರುವವಳೇ ಮದುವೆಯಿಂದ ವಂಚಿತಳಾದ ಮೇಕಪ್ ಮಲ್ಲಿಕಾ (ಶರ್ಮಿಳಾ ಮಾಂಡ್ರೆ). ಇನ್ನು ಈ ಡ್ರಗ್ಸ್ ಅನ್ನ ಭಾರತದ ಮುಂಬೈನಿಂದ ಕರ್ನಾಟಕಕ್ಕೆ ತರಿಸಿಕೊಳ್ಳುವ ಲೀಡರ್ ಅಣ್ಣಾಚಿ (ರಂಗಾಯಣ ರಘು). ತನ್ನ ಶಿಷ್ಯ ಹಾಗೂ ಪಟಲಮ್ ಜೊತೆ ಮಾಫಿಯಾ ಕೆಲಸ. ಮತ್ತೊಬ್ಬ ಡ್ರಗ್ ಡೀಲರ್ ಸುಲೇಮಾನ್ (ಗೋಪಾಲಕೃಷ್ಣ ದೇಶಪಾಂಡೆ) ಇಬ್ಬರಿಗೂ ವೈಶಮ್ಯ. 99ಹುಡುಗಿಯರಿಂದ ರಿಜೆಕ್ಟ್ ಆದರೂ ಮರಳಿ ಪ್ರಯತ್ನ ಮಾಡು ಎನ್ನುವ ವರ ಪವನ್ (ರವಿಶಂಕರ್ ಗೌಡ). ಒಬ್ಬೊಬ್ಬರದು ಒಂದೊಂದು ಕನಸು , ಆಸೆ, ಆಕಾಂಕ್ಷೆ.

ಏನೋ ಮಾಡಲು ಹೋಗಿ… ಏನೋ ಆಯಿತು ಎಂಬಂತೆ. ಚೀನಾದಿಂದ ಟಾಲ್ಕಮ್ ಪೌಡರ್ ಡಬ್ಬದಲ್ಲಿ ಬಂದ ಡ್ರಗ್ಸ್ ಬಾಕ್ಸ್ ಅದಲು ಬದಲಾಗಿ ಸೂಪರ್ ಮಾರ್ಕೆಟ್ ಪ್ರವೇಶ ಮಾಡಿ ಕೆಲವರ ಕೈ ಸೇರುತ್ತದೆ. ಚೈನಾ ಬಾಸ್ ಬ್ರೂಸ್ ಲೀ ಹಾಗೂ ಅಣ್ಣಾಚಿ ಕಂಗಾಲಾಗುತ್ತಾರೆ. ಈ ವಿಚಾರ ಸೂರ್ಯ , ನಿತ್ಯ , ಕರಣ್ ಗೆ ತಿಳಿಯುತ್ತದೆ. ಇದರಿಂದ ಹಣ ಸಂಪಾದನೆ ಮಾಡಲು ಪ್ಲಾನ್ ಮಾಡುತ್ತಾರೆ. ಈ ಬಾಕ್ಸ್ ಹುಡುಕಲು ಮೇಕಪ್ ಮಲ್ಲಿಕಾ ಎಂಟ್ರಿ. ಸುಲೇಮಾನ್ ಕೊಡ ಸಿಲ್ಕುತ್ತಾನೆ. ಮುಂದೆ ಎದುರಾಗುವ ರೋಚಕ ತಿರುವುಗಳು ಕೊನೆಯ ಹಂತಕ್ಕೆ ತಂದು ನಿಲ್ಲಿಸುತ್ತದೆ.

ಮೂವರ ಪ್ಲಾನ್ ಏನಾಗುತ್ತೆ…
ಪೌಡರ್ ಬಾಕ್ಸ್ ಸಿಗುತ್ತಾ…
ಪವನ್ ಗೆ ಹುಡುಗಿ ಸಿಕ್ತಾಳ…
ಬ್ರೂಸ್ ಲೀ ಯಾರು…
ಕ್ಲೈಮಾಕ್ಸ್ ಏನು…
ಈ ಎಲ್ಲಾ ಪ್ರಶ್ನೆಗೆ ಉತ್ತರಕ್ಕಾಗಿ ನೀವು ಈ ಚಿತ್ರವನ್ನು ನೋಡಲೇಬೇಕು.

ಇಲ್ಲಿ ಯಾವುದೇ ಲಾಜಿಕ್ ಹುಡುಕದೆ ಮ್ಯಾಜಿಕ್ ರೂಪದಲ್ಲಿ ನೋಡುವಂತ ಹಾಸ್ಯ ಮಿಶ್ರಿತ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು. ಒಂದು ಡ್ರಗ್ಸ್ ದಂದೆಯ ಎಡವಟ್ಟಿನಲ್ಲಿ ಸುಳಿಯಲ್ಲಿ ಸಿಕ್ಕಿ ಹಾಕಿಕೊಳ್ಳುವರ ಪರಿಸ್ಥಿತಿಯ ಜೊತೆಗೆ ಆಸೆ , ವ್ಯಾಮೋಹ , ಪ್ರೀತಿ , ವಂಚನೆ , ಇಕ್ಕಟ್ಟಿನ ನಡುವೆ ಬದುಕು ಕಾಣಲು ಬಯಸುವ ಜೀವಗಳ ಸುತ್ತ ಮನೋರಂಜನತ್ಮಕವಾಗಿ ಗ್ರಾಫಿಕ್ , ಎಫೆಕ್ಟ್ ಮೂಲಕ ಪರದೆ ಮೇಲೆ ತೆರೆದಿಟ್ಟಿದ್ದಾರೆ.

ನಿರ್ದೇಶಕ ಹೇಳಿರುವ ವಿಚಾರ ಅರ್ಥೈಸಿಕೊಳ್ಳುವುದೇ ಕಷ್ಟಕರ ಎನಿಸಿದರು ತಾಳ್ಮೆಯಿಂದ ನೋಡುವ ಬುದ್ಧಿವಂತರಿಗೆ ಇಷ್ಟವಾಗಬಹುದು. ಇಂತಹ ಚಿತ್ರವನ್ನು ನಿರ್ಮಿಸಿರುವಂತ ನಿರ್ಮಾಪಕರ ಧೈರ್ಯವನ್ನ ಮೆಚ್ಚಲೇಬೇಕು. ಇನ್ನು ಈ ಚಿತ್ರದ ಸಂಗೀತ , ಹಿನ್ನೆಲೆ ಸಂಗೀತ , ಛಾಯಾಗ್ರಹಣ, ಸಂಕಲನ , ಕಲಾ ನಿರ್ದೇಶನ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ವಿಎಫ್‍ಎಕ್ಸ್ ಕೆಲಸ ಚಿತ್ರದ ಹೈಲೈಟ್ ಗಳಾಗಿ ಕಾಣುತ್ತದೆ.

ಇನ್ನೂ ನಟ ದಿಗಂತ್ ಮುಗ್ಧ , ಭಯಭೀತನಾಗಿ ಪಾತ್ರವನ್ನು ನಿರ್ವಹಿಸಿದ್ದು, ಧನ್ಯ ರಾಮ್ ಕುಮಾರ್ ಗಮನ ಸೆಳೆಯುವ ರೀತಿ ಅಭಿನಯಿಸಿದ್ದಾರೆ. ಮತ್ತೊಬ್ಬ ಪ್ರತಿಭೆ ಅನಿರುದ್ಧ ಆಚಾರ್ಯ ಸಿಕ್ಕ ಅವಕಾಶಕ್ಕೆ ನ್ಯಾಯ ಒದಗಿಸಿದ್ದಾರೆ. ಇನ್ನು ನಟಿ ಶರ್ಮಿಳಾ ಮಾಂಡ್ರೆ ಸೈಲೆಂಟ್ ಆಕ್ಷನ್ ಕ್ವೀನ್ ಯಾಗಿ ಮಿಂಚಿದ್ದಾರೆ. ರವಿಶಂಕರ್ ಗೌಡ ಪಾತ್ರ ಹೈಲೈಟ್ ಆಗಿದ್ದು , ಅಣ್ಣಾವ್ರ ಹಾಡು ಅಥವಾ ದೃಶ್ಯ ಅವರ ನಟನೆ ಸುತ್ತ ಇದ್ದೇ ಇರುತ್ತದೆ.

ರಂಗಾಯಣ ರಘು ನಡೆ-ನುಡಿ ಎಂದಿನಂತಿದೆ. ಗೋಪಾಲಕೃಷ್ಣ ದೇಶಪಾಂಡೆ ವಿಭಿನ್ನವಾಗಿ ಕಾಣುತ್ತಾರೆ. ಇನ್ನು ಚಿತ್ರದ ಪ್ರಮುಖ ತಿರುವಿನ ಪಾತ್ರದಲ್ಲಿ ಕಾಣುವ ನಾಗಭೂಷಣ್ ಗಮನ ಸೆಳೆಯುತ್ತಾರೆ. ಉಳಿದಂತೆ ಬರುವ ಎಲ್ಲಾ ಪಾತ್ರದಾರಿಗಳು ಚಿತ್ರದ ಓಟಕ್ಕೆ ಸಾಥ್ ನೀಡಿದ್ದು, ಫ್ಯಾಂಟಸಿ ರೂಪದಲ್ಲಿ ಮನೋರಂಜನೆ ನೀಡುವ ಈ ಚಿತ್ರವನ್ನು ಒಮ್ಮೆ ಎಲ್ಲರೂ ನೋಡಬಹುದು.

error: Content is protected !!