Cini NewsMovie ReviewSandalwood

ದರೋಡೆ ಹಿಂದಿರುವ ಜೇಮ್ಸ್ ಬಾಂಡ್ ಪಯಣ ‘ರಾಜು ಜೇಮ್ಸ್ ಬಾಂಡ್’ (ಚಿತ್ರವಿಮರ್ಶೆ- ರೇಟಿಂಗ್ : 3.5/5)

ರೇಟಿಂಗ್ : 3.5/5

ಚಿತ್ರ : ರಾಜು ಜೇಮ್ಸ್ ಬಾಂಡ್
ನಿರ್ದೇಶಕ : ದೀಪಕ್ ಮಧುವನಹಳ್ಳಿ
ನಿರ್ಮಾಪಕರು : ಮಂಜುನಾಥ್ ವಿಶ್ವಕರ್ಮ, ಕಿರಣ್ ಭರ್ತೂರ್
ಸಂಗೀತ : ಅನೂಪ್ ಸೀಳಿನ್ ಛಾಯಾಗ್ರಹಣ : ಮನೋಹರ್ ಜೋಶಿ
ತಾರಾಗಣ : ಗುರುನಂದನ್, ಮೃದುಲಾ, ಚಿಕ್ಕಣ್ಣ , ಅಚ್ಯುತ್ ಕುಮಾರ್, ರವಿಶಂಕರ್, ತಬಲಾ ನಾಣಿ , ಜೈ ಜಗದೀಶ್ ಹಾಗೂ ಮುಂತಾದವರು…

ನೆಮ್ಮದಿಯ ಬದುಕು ನಡೆಸಲು ಇರುವುದಕ್ಕೊಂದು ಮನೆ , ಒಳ್ಳೆಯ ಕೆಲಸ , ತಂದೆ ತಾಯಿಯ ಆಸರೆ , ಸಂಗಾತಿಯ ಪ್ರೀತಿ , ಹೀಗೆ ಒಂದಷ್ಟು ಅಗತ್ಯವಾದದ್ದು ಇದ್ದರೆ ಜೀವನವೇ ಸುಗಮ. ಏನಾದರೂ ಎಡವಟ್ಟಾದರೆ ಬದುಕಲ್ಲಿ ಒಂದಕ್ಕೊಂದು ಸಮಸ್ಯೆ ಕಾಡುತ್ತಾ ಇರುತ್ತದೆ. ಇಂಥದ್ದೇ ಒಂದು ಸಂಕಷ್ಟಕ್ಕೆ ಸಿಕ್ಕ ಒಬ್ಬ ಮುಗ್ಧ ಹುಡುಗನ ತಂದೆ ತಾಯಿ ಸಾಲ ಮಾಡಿ ಕಟ್ಟಿರುವ ಮನೆಯನ್ನು ಉಳಿಸಿಕೊಳ್ಳಲು ಪರದಾಡುವ ಹಾದಿಯಲ್ಲಿ ಪ್ರೀತಿಯ ಕೊಂಡಿ ಸಿಕ್ಕಾಗ ಏನ್ನೆಲ್ಲಾ ಅವಾಂತರವಾಗುತ್ತದೆ ಎಂಬುದನ್ನು ಹಾಸ್ಯ ಮಿಶ್ರಣದ ಜೊತೆಗೆ ಕುತೂಹಲಕಾರಿಯಾಗಿ ತೆರೆಯ ಮೇಲೆ ಈ ವಾರ ತಂದಿರುವಂತಹ ಚಿತ್ರ ಚಿತ್ರವೇ “ರಾಜು ಜೇಮ್ಸ್ ಬಾಂಡ್”.

ತಂದೆ ತಾಯಿಯನ್ನು ಕಳೆದುಕೊಂಡ ರಾಜು (ಗುರುನಂದನ್) ತನ್ನ ಮಾಮ ರಾಮಕೃಷ್ಣ (ಅಚ್ಯುತ್‌ ಕುಮಾರ್) ನ ಜೊತೆ ಎಲೆಕ್ಟ್ರಿಕ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿರುತ್ತಾನೆ, ಇದರ ನಡುವೆ ತನ್ನ ಪ್ರೀತಿಯ ಗೆಳತಿ ವಿದ್ಯಾ (ಮೃದುಲಾ) ಳನ್ನ ಮದುವೆ ಆಗಲು ನಿರ್ಧರಿಸುತ್ತಾನೆ. ಇನ್ನು ಟಿ ಆರ್ ಪಿ ಟಿವಿ ಚಾನೆಲ್ ನಡೆಸುತ್ತಿರುವ ಪರಮೇಶ್ (ಚಿಕ್ಕಣ್ಣ) ಸದಾ ಬ್ರೇಕಿಂಗ್ ನ್ಯೂಸ್ ಗಾಗಿ ಪರದಾಡುತ್ತಾನೆ.

ಇನ್ನು ರಾಜು ತಾಯಿ ಬ್ಯಾಂಕಿನಲ್ಲಿ ಸಾಲ ಮಾಡಿ ಇಷ್ಟಪಟ್ಟು ಒಂದು ಮನೆ ಕಟ್ಟಿದ್ದು , ಅವರು ಸತ್ತ ನಂತರ ಸಾಲ ತೀರಿಸಲು ಪರಿತಪಿಸುವ ರಾಜವಿಗೆ ಬ್ಯಾಂಕ್ನಿಂದ ನೋಟಿಸ್ ಕಳುಹಿಸಿ ಮನೆ ಹರಾಜಿಗೆ ಬಂದಿರುತ್ತದೆ. ಹೇಗಾದರೂ ಮಾಡಿ ಹಿರಿಯರು ಕಟ್ಟಿಸಿದ್ದ ಮನೆ ಉಳಿಸಿಕೊಳ್ಳಬೇಕು ಎಂದು ರಾಜು ಬಹಳಷ್ಟು ಮನವಿ ಮಾಡಿದರು ಪ್ರಯೋಜನವಾಗುವುದಿಲ್ಲ.

ಈ ಬೇಸರದಲ್ಲಿ ಗೆಳೆಯರೊಟ್ಟಿಗೆ ಎಣ್ಣೆ ಹೊಡೆಯುವಾಗ ಹೊಳೆಯುವ ಒಂದು ಪ್ಲಾನ್ , ಅದೇ ಊರಲ್ಲಿದ್ದ ಬ್ಯಾಂಕನ್ನೇ ದರೋಡೆ ಮಾಡುವ ಖತರ್ನಾಕ್ ಐಡಿಯಾ. ದುಡ್ಡಿಗಾಗಿ ಈ ಪ್ಲಾನ್ ಡೇಂಜರ್ ಎನ್ನುವ ಗೆಳೆಯರು ಹಣದ ಅವಶ್ಯಕತೆಗಾಗಿ ರಾಜು ಹೇಳಿದ ಈ ರಿಸ್ಕ್ ಗೆ ಒಪ್ಪಿ ಹೇಗಾದರೂ ಹಣ ಹೊಂದಿಸಿ ಮನೆಯನ್ನು ಉಳಿಸಿಕೊಳ್ಳಲೇಬೇಕು ಎಂದು ಭಂಡ ಧೈರ್ಯ ಮಾಡಿದ ಸ್ನೇಹಿತನಿಗೆ ಸಾಥ್ ನೀಡಲು ಮುಂದಾಗುತ್ತಾರೆ. ಬ್ಯಾಂಕ್‌ನಲ್ಲಿರುವ ವ್ಯವಸ್ಥೆ , ಸಿಸಿಟಿವಿ ಕ್ಯಾಮೆರಾ , ಲಾಕರ್ , ಸ್ಟ್ರಾಂಗ್ ರೂಮ್ ಎಲ್ಲಿದೆ ಎಂಬುದರ ಬಗ್ಗೆ ಪೂರ್ತಿ ಮಾಹಿತಿ ಪಡೆದು , ಒಂದು ರಾತ್ರಿ ವಿದ್ಯುತ್ ಕಂಬದಲ್ಲಿ ಕರೆಂಟ್ ತೆಗೆದು , ಬ್ಯಾಂಕ್‌ ಲಾಕರ್ ನಲ್ಲಿದ್ದ 25 ಕೋಟಿ ದೊಡ್ಡ ಮೊತ್ತವನ್ನೇ ಹೊತ್ತು ಹೊರಬರುರುತ್ತಾರೆ.

ಬ್ಯಾಂಕಿನಲ್ಲಿ ವೈವಾಟಕ್ಕೂ ಮೀರಿದಂತ ಬೇರೆ ಹಣ ರಾಜಕಾರಣಿ ಭೂತಯ್ಯ (ರವಿಶಂಕರ್) ನ ಬ್ಲಾಕ್ ಮನಿ ಆಗಿದ್ದು, ತನ್ನ ಹಣವನ್ನು ಯಾರೋ ಟಚ್ ಮಾಡ್ತಿರುವ ವಿಷಯ ಸೈರನ್ ಮೂಲಕ‌ ಗೊತ್ತಾಗಿ ಬ್ಯಾಂಕ್ ಮ್ಯಾನೇಜರ್‌ಗೆ ಕಾಲ್ ಮಾಡಿ ಹೇಳುತ್ತಾನೆ. ಆದರೆ ಅಷ್ಟೊತ್ತಿಗಾಗಲೇ ಈ ಮೂವರೂ ಎಸ್ಕೇಪ್ ಮಾಡಿರುತ್ತಾರೆ.

ಮುಂದೆ ಬ್ಯಾಂಕ್ ರಾಬರಿ ಆದ ವಿಷಯ ಊರಲ್ಲೆಲ್ಲ ಸುದ್ದಿಯಾಗುತ್ತದೆ. 25 ಕೋಟಿ ಹಣ ಕಳೆದುಕೊಂಡ ಶಾಸಕ ಭೂತಯ್ಯ ಬ್ಯಾಂಕ್ ಮ್ಯಾನೇಜರ್ ಮೇಲೆ ಹರಿಹಾಯುತ್ತಾನೆ, ಅದು ಕಪ್ಪು ಹಣವಾದ್ದರಿಂದ ಕದ್ದವರನ್ನು ಪತ್ತೆ ಹಚ್ಚೋ ಜವಾಬ್ದಾರಿಯನ್ನು ಇನ್ಸ್ ಪೆಕ್ಟರ್ ಗಂಗಾಧರ್ ಗೋಡ್ಸೆ (ಜೈಜಗದೀಶ್) ಗೆ ವಹಿಸುತ್ತಾನೆ. ಕೊನೆಗೆ ರಾಜು ಮತ್ತವನ ಗೆಳೆಯರೇ ಹಣವನ್ನು ಲಪಟಾಯಿಸಿರುವುದು ಭೂತಯ್ಯನಿಗೆ ಗೊತ್ತಾಗುತ್ತದೆ. ಹೇಗಾದರೂ ಮಾಡಿ ಹಣ ಪಡೆದು ಅವರನ್ನು ಸಾಯಿಸಲು ನಿರ್ಧಾರ ಮಾಡುತ್ತಾನೆ. ಇಲ್ಲಿಂದ ಮತ್ತೊಂದು ರೋಚಕ ತಿರುವು ಪಡೆದು ಕೊನೆಯ ಹಂತಕ್ಕೆ ಬಂದು ನಿಲ್ಲುತ್ತದೆ.
ರಾಜು ಸಾಲ ತಿರುತ್ತಾ…
ದರೋಡೆ ಹಣ ಏನಾಗುತ್ತೆ…
ಎಂಎಲ್ಎ ಪ್ಲಾನ್ ಏನು…
ರಾಜುಗೆ ಪ್ರೀತಿ ಸಿಗುತ್ತಾ…
ಇದಕ್ಕೆಲ್ಲ ಉತ್ತರ ಒಮ್ಮೆ ಈ ಚಿತ್ರ ನೋಡಬೇಕು.

ಈ ಚಿತ್ರದ ನಿರ್ದೇಶಕ ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ಮನೋರಂಜನಾತ್ಮಕ ಜೊತೆ ಭಾವನಾತ್ಮಕ ಸಂಬಂಧ ಎಳೆಯ ಮೂಲಕ ಪ್ರೀತಿಯ ಸೆಳೆತವನ್ನು ಅಚ್ಚುಕಟ್ಟಾಗಿ ತೆರೆಯ ಮೇಲೆ ತರುವ ಪ್ರಯತ್ನ ಮಾಡಿದ್ದಾರೆ. ತನ್ನ ತಾಯಿಯ ನೆನಪಾಗಿ ಉಳಿದಿದ್ದ ಮನೆಯನ್ನು ಬ್ಯಾಂಕ್ ನಿಂದ ಉಳಿಸಿಕೊಳ್ಳಲು ಹೋಗಿ ಏನೇನೆಲ್ಲ ಅವಾಂತರ ಮಾಡಿಕೊಳ್ಳುತ್ತಾನೆ, ಇತ್ತ ಮನೆ , ಪ್ರೀತಿಸಿದ ಹುಡುಗಿ , ಸಮಸ್ಯೆಯ ಸುಳಿಯಿಂದ ಹೇಗೆ ಬರುತ್ತಾನೆ ಎಂಬುದನ್ನ ಕುತೂಹಲಕಾರಿಯಾಗಿ ಹೇಳಿದ್ದು , ಚಿತ್ರಕಥೆಯಲ್ಲಿ ಇನ್ನಷ್ಟು ಏರಿಳಿತ ಮಾಡಬಹುದಿತ್ತು. ಮೆಚ್ಯರ‍್ಡ್ ರಾಜುವಿನ ಕಣ್ಣಾ ಮುಚ್ಚಾಲೆ ಆಟಗಳು ಮನರಂಜನೆ ನೀಡುತ್ತವೆ, ಇನ್ನು ನಿರ್ಮಾಪಕರು ಒಂದು ಎಂಟರ್‌ಟೈನಿಂಗ್ ಚಿತ್ರವನ್ನು ಅಚ್ಚುಕಟ್ಟಾಗಿ ನಿರ್ಮಿಸಿದ್ದಾರೆ.

ಇನ್ನು ಸಂಗೀತ ಹಾಗೂ ಹಿನ್ನೆಲೆ ಸಂಗೀತ ಗಮನ ಸೆಳೆದಿದ್ದು , ಛಾಯಾಗ್ರಹಕರ ಕೈಚಳಕ ಅದ್ಭುತವಾಗಿ ಮೂಡಿ ಬಂದಿದೆ. ತನ್ನ ಮುಗ್ಧ ನೋಟದಲ್ಲಿ ಬುದ್ದಿವಂತೆಗೆ ಆಟ ಆಡಿರುವ ನಟ ಗುರು ನಂದನ್ ಫಸ್ಟ್ ರ‍್ಯಾಂಕ್ ರಾಜು ನಿಂದ ‘ಜೇಮ್ಸ್ ಬಾಂಡ್ ರಾಜು’ ಆಗಿ ಪ್ರೊಮೋಷನ್ ಪಡೆದಿದ್ದಾರೆ.

 

ಸಾಲದ ಬಾದೆ ಎಂಥವರನ್ನಾದರೂ ಇಕ್ಕಟ್ಟಿಗೆ ಸಿಲುಕಿಸುತ್ತದೆ ಎಂಬ ಸತ್ಯವನ್ನ ತನ್ನ ಪಾತ್ರದ ಮೂಲಕ ಹೇಳಿರುವ ರೀತಿ ಗಮನ ಸೆಳೆಯುತ್ತದೆ. ಒಂದಷ್ಟು ಗಡಿಬಿಡಿ , ಗೇಮ್ ಪ್ಲಾನ್ ಚಿತ್ರದ ಓಟಕ್ಕೆ ಪೂರಕವಾಗಿ ಕಂಡಿದೆ. ಅದೇ ರೀತಿ ನಟಿ ಮೃದುಲ ಕೂಡ ಸಿಕ್ಕ ಅವಕಾಶವನ್ನ ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ಮುದ್ದಾಗಿ ಪರದೆಯ ಮೇಲೆ ಕಾಣುತ್ತಾರೆ.

ಇನ್ನು ಎಂದಿನಂತೆ ಅಚ್ಚುತ್ ಕುಮಾರ್ , ಚಿಕ್ಕಣ್ಣ , ಸಾಧುಕೋಕಿಲ , ತಬಲಾ ನಾಣಿ ಪಾತ್ರಗಳು ಸೊಗಸಾಗಿ ಮೂಡಿಬಂದಿದ್ದು , ಖಡಕ್ ವಿಲ್ಲನ್ ಪಾತ್ರದಲ್ಲೂ ಹಾಸ್ಯ ಪ್ರಜ್ಞೆಯ ಜೊತೆ ರವಿಶಂಕರ್ ಪಾತ್ರದಲ್ಲಿ ಜೀವಿಸಿದ್ದಾರೆ. ಬಹಳ ಸಮಯದ ನಂತರ ಪೊಲೀಸ್ ಇನ್ಸ್ಪೆಕ್ಟರ್ ಪಾತ್ರದಲ್ಲಿ ಹಿರಿಯ ನಟ ಜೈ ಜಗದೀಶ್ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಬರುವ ಎಲ್ಲಾ ಪಾತ್ರಗಳು ಚಿತ್ರದ ಓಟಕ್ಕೆ ಸಾತ್ ನೀಡಿದ್ದು , ಮನೋರಂಜನೆಯ ದೃಷ್ಟಿಯಿಂದ ಒಮ್ಮೆ ಈ ಚಿತ್ರವನ್ನು ನೋಡಬಹುದು.

error: Content is protected !!