Cini NewsSandalwood

ಕುತೂಹಲ ಮೂಡಿಸಿದ “ರಾನಿ” ಚಿತ್ರದ ಟ್ರೇಲರ್

ಸ್ಯಾಂಡಲ್ ವುಡ್ ನಲ್ಲಿ ನಿರೀಕ್ಷೆ ಮೂಡಿಸಿರುವಂತಹ ಚಿತ್ರ “ರಾನಿ” . ಆರಂಭದಿಂದ ಬಿಡುಗಡೆ ಹಂತದವರೆಗೂ ಒಂದಲ್ಲ ಒಂದು ರೀತಿ ವಿಭಿನ್ನ ಪ್ರಚಾರದ ಮೂಲಕ ಬಹಳಷ್ಟು ಸದ್ದು ಮಾಡುತ್ತಿರುವ ಈ ರಾನಿ ಚಿತ್ರದ ಟ್ರೈಲರ್ ಬಿಡುಗಡೆಗೊಂಡು ಬಾರಿ ವೈರಲ್ ಆಗಿ , ಸದ್ದು ಮಾಡುತ್ತಿದೆ.

ನಟ ಕಿರಣ್ ರಾಜ್ ನಾಯಕರಾಗಿ ನಟಿಸಿರುವ “ರಾನಿ” ಟ್ರೇಲರ್ ಮಾಸ್ ಗೆ ಮಾಸ್, ಕ್ಲಾಸ್ ಗೆ ಕ್ಲಾಸ್ ಎನ್ನುವಂತಿದೆ. ಅದ್ದೂರಿ ಮೇಕಿಂಗ್ ಮೂಲಕ ನಿರ್ಮಾಣವಾಗಿರುವ ಕುತೂಹಲ ಭರಿತ ಈ ಚಿತ್ರವು ಇದೇ ಸೆಪ್ಟೆಂಬರ್ 12 ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.

ಈ “ರಾನಿ”ಸಿನಿಮಾ ಬಿಡುಗಡೆ ಮುನ್ನವೇ ಬಾರಿ ಸದ್ದು ಮಾಡುತ್ತಿದ್ದು , ಟ್ರೇಲರ್ ಪ್ರೇಕ್ಷಕರಲ್ಲಿ ಬಾರಿ ಕುತೂಹಲ ಮೂಡಿಸಿದೆ, ಕಿರಣ್ ರಾಜ್ ಆಕ್ಷನ್, ಲುಕ್, ಬಾಡಿ ಲಾಂಗ್ವೇಜ್, ಡೈಲಾಗ್ ಡೆಲಿವರಿ, ಗುರುತೇಜ್ ಶೆಟ್ಟಿ ಸಂಭಾಷಣೆ, ಮಣಿಕಾಂತ್ ಕದ್ರಿ ಸಂಗೀತ , ಸಚಿನ್ ಬಸ್ರೂರು ಹಿನ್ನೆಲೆ ಸಂಗೀತ ಹಾಗೂ ರಾಘವೇಂದ್ರ.

ಬಿ. ಕೋಲಾರ ಕ್ಯಾಮರಾ ವರ್ಕ್ , ಉಮೇಶ್ ಸಂಕಲನ ಎಲ್ಲವೂ ಚೆನ್ನಾಗಿದೆ. ಸಿನಿಮಾದ ಕ್ವಾಲಿಟಿ ಟ್ರೇಲರ್ ನಲ್ಲಿ ಕಾಣುತ್ತಿದೆ. ಪ್ರತಿ ಸಾರಿಯು ಚಿತ್ರತಂಡ ನಮ್ಮದು ಫ್ಯಾಮಿಲಿ ಆಕ್ಷನ್ ಜಾನರ್ ಸಿನಿಮಾ ಎಂದು ಹೇಳಿಕೊಂಡು ಬಂದಿದ್ದು, ಟ್ರೇಲರ್ ನಲ್ಲೂ ಆ ಅಂಶ ಕಾಣುತ್ತಿದೆ. “ರಾನಿ” ಚಿತ್ರಕ್ಕೆ ಗುರುತೇಜ್ ಶೆಟ್ಟಿ ಕಥೆ, ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.

ಸ್ಟಾರ್ ಕ್ರಿಯೇಷನ್ ಬ್ಯಾನರ್ ನಲ್ಲಿ ಚಂದ್ರಕಾಂತ್ ಪೂಜಾರಿ ಉಮೇಶ್ ಹೆಗ್ಡೆ ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ನಾಯಕನಾಗಿ ಕಿರಣ್ ರಾಜ್, ನಾಯಕಿಯಾಗಿ ರಾಧ್ಯಾ. ಆರ್ ಅಭಿನಯಿಸಿದ್ದು ಉಳಿದಂತೆ ರವಿಶಂಕರ್ , ಯಶ್ ಶೆಟ್ಟಿ , ಧರ್ಮಣ್ಣ ಕಡೂರು , ಅಪೂರ್ವ , ಸಮೀಕ್ಷಾ ಸೇರಿದಂತೆ ದೊಡ್ಡ ತಾರಾ ಬಳಗವೇ ಒಳಗೊಂಡಿದೆ. ಈಗಾಗಲೇ ತನ್ನ ಪ್ರಚಾರದ ಕಾರ್ಯವನ್ನು ಜೋರಾಗಿ ನಡೆಸಿದ್ದು , ರಾಜ್ಯಾದ್ಯಂತ ಬೆಳ್ಳಿ ಪರದೆ ಮೇಲೆ ರಾರಾಜಿಸಲು ಚಿತ್ರ ಸನ್ನದ್ಧವಾಗಿದೆ.

error: Content is protected !!