Cini NewsMovie ReviewSandalwood

ಧರ್ಮ ಅಧರ್ಮಗಳ ನಡುವಿನ ಸಮರ ಸಂಭವಾಮಿ ಯುಗೇ ಯುಗೇ (ಚಿತ್ರವಿಮರ್ಶೆ-ರೇಟಿಂಗ್ : 3/5)

ರೇಟಿಂಗ್ : 3/5
ಚಿತ್ರ : ಸಂಭವಾಮಿ ಯುಗೇ ಯುಗೇ
ನಿರ್ದೇಶಕ : ಚೇತನ್‍ ಚಂದ್ರಶೇಖರ್ ಶೆಟ್ಟಿ
ನಿರ್ಮಾಪಕಿ : ಪ್ರತಿಭಾ ನರೇಶ್
ಸಂಗೀತ : ಪೂರಣ್‍ ಶೆಟ್ಟಿಗಾರ್
ಛಾಯಾಗ್ರಹಕ : ರಾಜು ಹೆಮ್ಮಿಗೆಪುರ
ತಾರಾಗಣ : ಜಯರಾಮ್ ಶೆಟ್ಟಿ , ನಿಶಾ ರಜಪೂತ್‍ , ಪ್ರಮೋದ್ ಶೆಟ್ಟಿ, ಸುಧಾರಾಣಿ , ಭವ್ಯ, ಅಶೋಕ್ ಕುಮಾರ್, ಮಧುರ ಗೌಡ, ಅಭಯ್ ಪುನೀತ್, ಬಲ ರಾಜವಾಡಿ, ಅಶ್ವಿನ್ ಹಾಸನ್ ಹಾಗೂ ಮುಂತಾದವರು…

ಇದೊಂದು ಗ್ರಾಮೀಣ ಬದುಕು ಬಾವಣೆಯ ಕಥೆಯಾಗಿದ್ದು , ಮಾದರಿ ಗ್ರಾಮಕ್ಕಾಗಿ ಊರಿನ ಅಧ್ಯಕ್ಷನ ಮುಂದಾಳತ್ವ, ಇದರ ವಿರುದ್ಧ ಒಂದಷ್ಟು ಷೆಡ್ಯಂತರ , ರಾಜಕೀಯ ನಾಯಕನ ತಂತ್ರಗಾರಿಕೆ , ಜಿಲ್ಲಾಧಿಕಾರಿಯ ಅಬ್ಬರದ ನಡುವೆ ಪ್ರೀತಿ , ಸ್ನೇಹ , ಸಂಬಂಧ, ಪೋಲಿಸ್ , ಕೋರ್ಟ್ ಹೀಗೆ ಹಲವು ವಿಚಾರಗಳ ಸುತ್ತ ಬೆಸೆದುಕೊಂಡಿರುವ ಚಿತ್ರ “ಸಂಭವಾಮಿ ಯುಗೇ ಯುಗೇ”.

ತನ್ನ ಗಂಡನಿಂದ ಮೋಸ ಹೋಗಿರುವ ಕಣ್ಣಿಲ್ಲದ ತಾಯಿ (ಸುಧಾರಣೆ) ಇಬ್ಬರ ಮಕ್ಕಳೊಂದಿಗೆ ಬದುಕು ಕಟ್ಟಿಕೊಳ್ಳಲು ದಿಕ್ಕು ದೆಸೆ ಇಲ್ಲದ ಊರಿನಲ್ಲಿ ನೆಲೆ ಕಾಣುತ್ತಾಳೆ. ಊರ ಮುಖಂಡ ಹಾಗೂ ತನ್ನ ಸ್ನೇಹಿತೆ ಸಹಾಯದೊಂದಿಗೆ ದೇವಸ್ಥಾನದ ಬಳಿ ಹೂ ಮಾರಿಕೊಂಡು ತನ್ನ ಮಗ ಹಾಗೂ ಮಗಳನ್ನು ಬೆಳೆಸುತ್ತಾಳೆ.

ಮುಂದೆ ಮಗ ಅರ್ಜುನ (ಜಯರಾಂ ಶೆಟ್ಟಿ) ವಿದ್ಯಾವಂತರಾದರೂ ತನಗೆ ಸೂಕ್ತ ಕೆಲಸ ಸಿಗದಿದ್ರು , ತನ್ನ ತಾಯಿಯ ಮಾತಿನಂತೆ ಊರಲ್ಲಿ ಇದ್ದುಕೊಂಡು ಜನರ ಸೇವೆ ಮಾಡುತ್ತಾ ಪ್ರೀತಿ , ವಿಶ್ವಾಸ ಗಳಿಸಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಆಗುತ್ತಾನೆ.

ಇದು ಅವನ ವಿರುದ್ಧ ಗ್ಯಾಂಗು ದೊಡ್ಡ ತಲೆ ನೋವು ಆಗುತ್ತದೆ. ಇದರ ನಡುವೆ ಅರ್ಜುನನ ಗೆಳೆಯ ಲಾಯರ್ ಕೃಷ್ಣ (ಅಶೋಕ್ ಕುಮಾರ್) ತನ್ನ ತಂಗಿ ಅಂಜಲಿ (ಮಧುರ) ಳನ್ನ ಪ್ರೀತಿಸುತ್ತಾನೆ. ಅವನಿಗೆ ಬಿಕ್ಕಳಿಕೆ ಇದ್ದರು ಒಂದು ಕೇಸ್ ಗೆದ್ದರೆ ತನ್ನ ತಂಗಿಯನ್ನು ಮದುವೆ ಮಾಡಿಕೊಡುತ್ತೇನೆ ಎಂದು ಹೇಳಿರುತ್ತಾನೆ. ಇನ್ನು ಗ್ರಾಮೀಣ ಜನರಿಗೆ ಸರ್ಕಾರ ನೀಡುವ ಸವಲತ್ತುಗಳ ಬಗ್ಗೆ ಜನರಿಗೆ ತಿಳಿಸುವುದರ ಜೊತೆಗೆ ಅನುಕೂಲ ಮಾಡಿಕೊಡುತ್ತಾ ಊರಿನವರ ಮೆಚ್ಚಿನ ನಾಯಕನಾಗಿರುತ್ತಾನೆ.

ಹಳ್ಳಿಯಲ್ಲಿ ವಾಸಮಾಡಬೇಕೆಂಬ ಆಸೆಯೊಂದಿಗೆ ಬರುವ ಡಿಸಿ ಸೂರ್ಯ ಪ್ರತಾಪ್ (ಪ್ರಮೋದ್ ಶೆಟ್ಟಿ) ತನ್ನ ಕುಟುಂಬ ಹಾಗೂ ತಂಗಿಯೊಡನೆ ವಾಸ ಮಾಡುತ್ತಾನೆ. ಊರಿನ ಅಭಿವೃದ್ಧಿ ಬಗ್ಗೆ ತಿಳಿದುಕೊಳ್ಳುವ ಸ್ವಾತಿ (ನಿಶಾ ರಾಜಪೂತ್) ಅಧ್ಯಕ್ಷ ಅರ್ಜುನ ಸ್ನೇಹ ಬೆಳೆಸಿ ಪ್ರೀತಿಸುತ್ತಾಳೆ. ಇನ್ನು ಊರಿನಲ್ಲಿ ನಡೆಯುವ ದಂದೆ , ಅದಕ್ಕೆ ಸಹಕಾರಿಯಾಗಿ ನಿಲ್ಲುವ ಎಂಎಲ್ಎ , ಅದರ ಹಿಂದೆ ಇರುವ ಒಂದಷ್ಟು ಅಧಿಕಾರಿಗಳ ಗುಂಪು , ಪುಡಿ ರೌಡಿಗಳ ಕಣ್ಣು ಅಧ್ಯಕ್ಷ ಅರ್ಜುನನ ಮೇಲಿರುತ್ತದೆ. ಇನ್ನು ತಂಗಿಯ ಪ್ರೀತಿ ವಿಚಾರ ತಿಳಿದು ಅರ್ಜುನನಿಗೆ ಎಚ್ಚರಿಕೆ ನೀಡುವ ಡಿಸಿ ನಾಪತ್ತೆ ಆಗುತ್ತಾನೆ. ಪೊಲೀಸ್ ಸ್ಟೇಷನ್ , ಕೋರ್ಟ್ ಮೆಟ್ಟಿಲು ಹತ್ತುವ ಅರ್ಜುನಗೆ ಸಂಕಷ್ಟಗಳು ಎದುರಾಗುತ್ತದೆ.
ಡಿಸಿ ಕಿಡ್ನಾಪ್ ಮಾಡಿದ್ದು ಯಾರು…
ಅರ್ಜುನ ಭೇದಿಸುವ ಷಡ್ಯಂತರ ಏನು…
ಕೃಷ್ಣನ ಸಹಕಾರ ಸಿಗುತ್ತಾ…
ಕ್ಲೈಮಾಕ್ಸ್ ಉತ್ತರ ಏನು…
ಇದಕ್ಕಾಗಿ ನೀವು ಈ ಚಿತ್ರವನ್ನು ನೋಡಬೇಕು.

ಇನ್ನು ನಿರ್ದೇಶಕ ಚೇತನ್ ಚಂದ್ರಶೇಖರ್ ಶೆಟ್ಟಿ ಪ್ರಥಮ ಪ್ರಯತ್ನದಲ್ಲೇ ಗ್ರಾಮೀಣ ಭಾಗದಲ್ಲಿ ನಡೆಯುವಂತಹ ಒಂದಷ್ಟು ಘಟನೆಗಳನ್ನ ಸೇರಿಸಿಕೊಂಡು ಹಳ್ಳಿ ಪರಿಸರದ ಬದುಕು , ಬವಣೆ, ಸರ್ಕಾರದ ಸವಲತ್ತುಗಳ ಬಗ್ಗೆ ಜಾಗೃತಿ, ಗ್ರಾಮ ಅಧ್ಯಕ್ಷನ ವಿರುದ್ಧ ನಡೆಯುವ ಷಡ್ಯಂತ್ರ , ಪ್ರೀತಿಯ ಸೆಳೆತ, ಗೆಳೆಯರ ಒಡನಾಟ , ಮಮಕಾರದ ಪ್ರೀತಿಯ ಸುತ್ತ ನಡೆಯುವ ಅಧರ್ಮದ ವಿರುದ್ಧ ಧರ್ಮ ಸಿಡಿದೆಳುವ ವಿಚಾರವನ್ನು ಶ್ರಮಪಟ್ಟು ಕಟ್ಟಿಕೊಡುವ ಪ್ರಯತ್ನವನ್ನು ಮಾಡಿದ್ದಾರೆ.

ಚಿತ್ರದ ಓಟ ನಿಧಾನ ಗತಿಯಲ್ಲಿ ಸಾಗಿದ್ದು, ನೋಡಲು ಆಯಾಸವಾದಂತಿದೆ. ಆದರೆ ಕೋರ್ಟ್ ಸನ್ನಿವೇಶ ಗಮನ ಸೆಳೆಯುವಂತೆ ಮೂಡಿ ಬಂದಿದೆ. ಇನ್ನು ಧೈರ್ಯ ಮಾಡಿ ಹಣವನ್ನು ಹೂಡಿರುವ ನಿರ್ಮಾಪಕರ ಧೈರ್ಯ ಮೆಚ್ಚಲೇಬೇಕು. ಸಂಗೀತ ಇನ್ನು ಉತ್ತಮ ಮಾಡಬಹುದಿತ್ತು. ಛಾಯಾಗ್ರಾಹಕರ ಕೈಚಳಕ ತಕ್ಕಮಟ್ಟಿಗಿದೆ. ತಾಂತ್ರಿಕವಾಗಿ ತಂಡ ಶ್ರಮ ಪಟ್ಟಿದೆ.

ಇನ್ನು ನಾಯಕನಾಗಿ ಜಯರಾಮ್ ಶೆಟ್ಟಿ ಬಹಳ ಕಷ್ಟ ಪಟ್ಟು ಅಭಿನಯಿಸಿದಂತಿದೆ. ಇನ್ನಷ್ಟು ಪರಿಪಕ್ವತೆ ಮಾಡಿಕೊಂಡು ಬರಬೇಕಿತ್ತು ಅನಿಸುತ್ತದೆ. ಇನ್ನು ನಾಯಕಿಯಾಗಿ ಅಭಿನಯಿಸಿರುವ ನಿಶಾ ರಾಜಪೂತ್ ಸಿಕ್ಕ ಅವಕಾಶಕ್ಕೆ ಜೀವ ತುಂಬಿದರೆ. ಅದೇ ರೀತಿ ತಂಗಿಯಾಗಿ ಅಭಿನಯಿಸಿರುವ ಮಧುರ ಗೌಡ ಹಾಗೂ ಲಾಯರ್ ರಾಗಿ ಬಿಕ್ಕಳಿಸುಸುತ್ತಾ ಅಭಿನಯಿಸಿರುವ ಅಶೋಕ್ ಕುಮಾರ್ ತಮ್ಮ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

ಇನ್ನು ನಾಯಕನ ತಾಯಿ ಕಣ್ಣು ಕಾಣದ ಪಾತ್ರದಲ್ಲಿ ಸುಧಾರಾಣಿ , ಡಿಸಿ ಪಾತ್ರದಲ್ಲಿ ಪ್ರಮೋದ್ ಶೆಟ್ಟಿ , ಇನ್ಸ್ಪೆಕ್ಟರ್ ಪಾತ್ರಧಾರಿ ವೆಂಕಟೇಶ್ ಪ್ರಸಾದ್, ಎಂಎಲ್ಎ ಪಾತ್ರದಲ್ಲಿ ವಿಕ್ಟರಿ ವಾಸು, ಜಡ್ಜ್ ಪಾತ್ರದಲ್ಲಿ ಭವ್ಯ , ಅಭಯ್ ಪುನೀತ್ , ಬಾಲ ರಾಜವಾಡಿ ಸೇರಿದಂತೆ ಎಲ್ಲಾ ಪಾತ್ರಧಾರಿಗಳು ಚಿತ್ರದ ಓಟಕ್ಕೆ ಸಾತ್ ನೀಡಿದ್ದಾರೆ. ಇದೊಂದು ಗ್ರಾಮೀಣ ಚಿತ್ರವಾಗಿದ್ದು , ಎಲ್ಲರೂ ಒಮ್ಮೆ ನೋಡುವಂತಿದೆ

error: Content is protected !!