ಅಂಗಾಂಗ ಮಾಫಿಯಾ ಸುಳಿಯಲ್ಲಿ ಅಪ್ಪ ಮಗಳ ಕಥೆ ‘ಸಿ’ (ಚಿತ್ರವಿಮರ್ಶೆ-ರೇಟಿಂಗ್ : 3/5)
ರೇಟಿಂಗ್ : 3/5
ಚಿತ್ರ : ಸಿ
ನಿರ್ದೇಶಕ : ಕಿರಣ್ ಸುಬ್ರಮಣಿ
ನಿರ್ಮಾಪಕ: ಎ.ಜಿ.ಸುಬ್ರಮಣಿ
ಸಂಗೀತ : ಎ ಬಿ. ಎಂ
ಛಾಯಾಗ್ರಹಕ : ನವೀನ್
ತಾರಾಗಣ : ಕಿರಣ್ ಸುಬ್ರಮಣಿ, ಪ್ರಶಾಂತ್ ನಟನ, ಶ್ರೀಧರ್ ರಾಮ್, ರೂಪೇಶ್ ಆರ್ಯ, ಬಾಲನಟಿ ಸಾನ್ವಿತಾ ಹಾಗೂ ಮುಂತಾದವರು…
ಸಮಾಜದಲ್ಲಿ ಬದುಕು ನಡೆಸಲು ನಾನಾ ದಾರಿಗಳಿವೆ. ಅದರಲ್ಲಿ ಕೆಲವರು ದುಡಿದು ನೆಮ್ಮದಿ ಬದುಕು ಸಾಗಿಸಲು ಇಚ್ಛಿಸಿದರೆ ಮತ್ತೆ ಕೆಲವರು ಸಮಾಜ ಸೇವೆ, ಜೀವ ರಕ್ಷಣೆಗಾಗಿ ಪ್ರಯೋಗಾತ್ಮಕ ಕೆಲಸ , ಮೆಡಿಕಲ್ ಮಾಫಿಯಾ ಹೀಗೆ ಹಲವು ಹೆಸರುಗಳ ಮೇಲೆ ದಂದೆ ಮಾಡುವ ದುಷ್ಟರು ಕೂಡ ಇರುತ್ತಾರೆ.
ಇಂತಹದ್ದೇ ಒಂದು ಸೂಕ್ಷ್ಮ ವಿಚಾರವನ್ನು ಇಟ್ಟುಕೊಂಡು ಕಷ್ಟದಲ್ಲಿದ್ದವರನ್ನು ಸಿಲುಕಿಸುವುದರ ಜೊತೆಗೆ ಮಗಳ ದೃಷ್ಟಿಗಾಗಿ ಪರದಾಡುವ ಅಪ್ಪನ ಮಗಳ ಬದುಕಿನಲ್ಲಿ ಎದುರಾಗುವ ಸಂಕಷ್ಟಗಳನ್ನು ತೆರೆದಿಡುವ ಪ್ರಯತ್ನವಾಗಿ ಬಂದಿರುವಂತಹ ಚಿತ್ರ “ಸಿ”.
ಮೆಡಿಕಲ್ ದಂಧೆಯ ಕರಾಳ ಮುಖವಾಡದಲ್ಲಿ ಮನುಷ್ಯನ ಅಂಗಾಂಗ ಕದ್ದು ಮಾರುವುದು ಒಂದು ದೊಡ್ಡ ಜಾಲ. ಆದರೆ ಅದಕ್ಕೊಂದು ರಿಸರ್ಚ್ ಹೆಸರಿನಲ್ಲಿ ಮನುಷ್ಯರ ಮೇಲೆ ಪ್ರಯೋಗಾತ್ಮಕ ಮೆಡಿಸನ್ ಬಳಕೆಗೆ ದಾರಿ. ಬದುಕಿನಲ್ಲಿ ಒಬ್ಬೊಬ್ಬರದು ಒಂದೊಂದು ರೀತಿಯ ನೋವಿನ ಕಥೆ ಉಳ್ಳ ಆರು ಜನರನ್ನ ಹಣದ ಆಸೆ ತೋರಿಸಿ ಪ್ರಯೋಗಾತ್ಮಕ್ಕೆ ಬಳಸಿಕೊಳ್ಳುತ್ತಾರೆ.
ಇನ್ನು ಫ್ಲಾಶ್ ಬ್ಯಾಕ್ ನಲ್ಲಿ ಇದ್ಯಾವುದನ್ನು ಅರಿಯದ ಪವನ್ ಎಂಬುವವನು ಐಷಾರಾಮಿ ಮೋಜು ಮಸ್ತಿ , ಮೊಹಮ್ಮದ್ ಹಾಗೂ ಚೈತ್ರ ಇಬ್ಬರು ಪ್ರೇಮಿಗಳ ಜೀವನ , ಜಯಶ್ರೀ ಎಂಬ ವೇಶ್ಯೆಯ ಬದುಕು, ಹೀಗೆ ತಮ್ಮ ತಮ್ಮ ನೋವು ಕಷ್ಟಗಳನ್ನ ಹಂಚಿಕೊಳ್ಳುತ್ತಾ ನಡುವೆ ವಿಕ್ರಂ ಎಂಬುವವನು ತನ್ನ ಮಗಳು ನೇತ್ರ ದೃಷ್ಟಿಗಾಗಿ ಈ ಸ್ಥಳಕ್ಕೆ ಬರಬೇಕಾದಂತ ಪರಿಸ್ಥಿತಿ ಎದುರಾಗಿರುತ್ತದೆ.
ಇದರ ರೂವಾರಿಯಾಗಿರುವ ಡೇವಿಡ್ ಹಾಗೂ ಮ್ಯಾಕ್ಸ್ ಗೆ ವೇದ ಸಪೋರ್ಟಾಗಿ ನಿಂತಿರ್ತಾಳೆ. ಈ ಇಡೀ ದಂದೆಗೆ ಬಾಸ್ ಮಾಸ್ಟರ್ ಮೈಂಡ್. ಈ ಜಾಲವನ್ನು ಭೇದಿಸುವ ವರದಿಗಾರ ಕೂಡ ಸಿಲುಕುತ್ತಾನೆ. ರಿಸರ್ಚ್ ನಲ್ಲಿ ಒಬ್ಬೊಬ್ಬರೇ ನಾಪತ್ತೆ ಆಗುತ್ತಿದ್ದಂತೆ ಪವನ್ ಮೂಲಕ ವಿಕ್ರಂ ಗೆ ವಿಚಾರ ತಿಳಿಯುತ್ತದೆ. ಮುಂದೆ ಒಂದಷ್ಟು ಫ್ಲಾಶ್ ಬ್ಯಾಕ್ , ರೋಚಕ ಘಟನೆಗಳು ಮೂಲಕ ಕ್ಲೈಮಾಕ್ಸ್ ಹಂತಕ್ಕೆ ಬಂದು ನಿಂತು ಭಾಗ-2ಕ್ಕೂ ದಾರಿ ಮಾಡಿರುತ್ತದೆ.
ಸಿ ಎಂದರೇನು…
ಅಪ್ಪ ಮಗಳು ಏನಾದರೂ…
ದುಷ್ಟರ ಜಾಲದ ಕೈವಾಡ ಯಾರದು…
ಕ್ಲೈಮಾಕ್ಸ್ ಹೇಳೋದು ಏನು…
ಇದೆಲ್ಲದಕ್ಕೂ ನೀವು ಈ ಚಿತ್ರವನ್ನು ನೋಡಬೇಕು.
ಸದ್ಯ ರಿಲೀಸ್ ಆಗಿರುವ ಟ್ರೈಲರ್ ನೋಡುತ್ತಿದ್ದರೆ ಇದು ಅಪ್ಪ-ಮಗಳ ಬಾಂಧವ್ಯದ ಸಿನಿಮಾ ಎನ್ನುವುದು ಗೊತ್ತಾಗುತ್ತಿದೆ. ಜೊತೆಗೆ ಮೆಡಿಕಲ್ ಮಾಫಿಯಾದ ಬಗ್ಗೆಯೂ ಸಿನಿಮಾದಲ್ಲಿ ತೋರಿಸಲಾಗಿದೆ. ಕಣ್ಣು ಕಾಣದ ಮಗಳ ಆಸೆಯನ್ನು ಈಡೇರಿಸಲು ಹೋರಾಡುವ ಅಪ್ಪನ ಪಾತ್ರದಲ್ಲಿ ಸುಬ್ರಮಣಿ ಕಾಣಿಸಿಕೊಂಡಿದ್ದಾರೆ. ಮಗಳ ಪಾತ್ರದಲ್ಲಿ ಬಾಲ ನಟಿ ಸಾನ್ವಿತಾ ಅಭಿನಯಿಸಿದ್ದಾರೆ. ಇನ್ನು ಉಳಿದಂತೆ ಸಿನಿಮಾದಲ್ಲಿ ಪ್ರಶಾಂತ್ ನಟನ, ಶ್ರೀಧರ್ ಸೇರಿದಂತೆ ಅನೇಕ ಕಲಾವಿದರು