Cini NewsSandalwood

ಶಿವಣ್ಣ ಮೆಚ್ಚಿದ ನ್ಯಾಚುರಲ್ ಸಿನಿಮಾ “ನಿಂಬಿಯಾ ಬನಾದ ಮ್ಯಾಗ”

ಒಂದು ಉತ್ತಮ ನ್ಯಾಚುರಲ್ ಚಿತ್ರವನ್ನ ನೋಡಿದಂತಹ ಅನುಭವವಾಯಿತು ಎಂದರು ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್. ವರನಟ ಡಾ. ರಾಜ್ ಕುಮಾರ್ ರವರ ಮಗಳು ಲಕ್ಷ್ಮಿ ಗೋವಿಂದರಾಜ್ ರವರ ಸುಪುತ್ರ ಷಣ್ಮುಖ ಗೋವಿಂದರಾಜ್ ನಟನೆಯ
“ನಿಂಬಿಯಾ ಬನಾದ ಮ್ಯಾಗ (ಪೇಜ್ ೧)” ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಿ ಉತ್ತಮ ಪ್ರಶಂಸೆಯನ್ನು ಪಡೆದು ಮುನ್ನುಗುತಿದೆ.

ಇದರ ನಡುವೆ ಅಣ್ಣಾವ್ರ ಕುಟುಂಬದ ಸದಸ್ಯರು ಕೂಡ ಚಿತ್ರವನ್ನು ನೋಡಿ ಷಣ್ಮುಖನ ಹಾಗೂ ಚಿತ್ರ ತಂಡದ ಕೆಲಸವನ್ನ ಮೆಚ್ಚಿಕೊಂಡಿದ್ದಾರೆ. ತನ್ನ ಸೋದರಳಿಯನ ಚಿತ್ರವನ್ನು ನೋಡಿದ ಶಿವರಾಜ್ ಕುಮಾರ್ ಮಾತನಾಡುತ್ತಾ ಚಿತ್ರ ಬಹಳ ಸೊಗಸಾಗಿ ಬಂದಿದೆ.

ಎಲ್ಲಿಯೂ ಆಡಂಬರ , ಆರ್ಭಟವಿಲ್ಲದೆ ಬಹಳ ನ್ಯಾಚುರಲ್ ಆಗಿ ಮನಸ್ಸನ್ನ ಸೆಳೆಯುತ್ತದೆ. ನಮ್ಮ ಷಣ್ಮುಖ ಆಕ್ಟ್ ಮಾಡ್ತಾನ ಎಂಬ ಅನುಮಾನವಿತ್ತು. ಪರದೆಯ ಮೇಲೆ ನೋಡಿದಾಗ ಬಹಳ ಖುಷಿಯಾಯಿತು , ಸೊಗಸಾಗಿ ಅಭಿನಯಿಸಿದ್ದಾನೆ. ಮಾತಿನ ಸ್ಪಷ್ಟತೆ , ನಟನೆ ಎಲ್ಲವೂ ಇಷ್ಟವಾಗುತ್ತದೆ ಎಂದರು.

ಇನ್ನು ನಾಯಕಿಯಾಗಿ ಅಭಿನಯಿಸಿರುವ ಯುವ ನಟಿ ತನುಶ್ರೀ ಕೂಡ ಒಂದು ಹಳ್ಳಿ ಹುಡುಗಿ ಹೇಗೆ ಇರಬೇಕೋ, ಅಷ್ಟೇ ಮುದ್ದು ಮುದ್ದಾಗಿ ಚೆನ್ನಾಗಿ ಅಭಿನಯಿಸಿದ್ದಾರೆ. ಹಾಗೆಯೇ ನಮ್ಮ ಸಂಬಂಧಿ ಮೇಘಮಾಲೆ ಚಿತ್ರದ ನಟ ಸುನಾದ್ ರಾಜ್ ಈ ಚಿತ್ರದ ಮೂಲಕ ಮತ್ತೆ ಬಂದಿದ್ದಾರೆ, ಬಹಳ ಸಹಜ ಅಭಿನಯ ನೀಡಿದ್ದು, ಊರ ಮುಖಂಡನ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.

ಅವರ ಮಡದಿ ಪಾತ್ರ ಮಾಡಿರುವ ಸಂಗೀತ ಕೂಡ ಬಹಳ ಸೊಗಸಾಗಿ ಅಭಿನಯಿಸಿದ್ದಾರೆ. ತಾಯಿ ಮಗನ ಬಾಂಧವ್ಯದ ದೃಶ್ಯಗಳು ಇಷ್ಟವಾಗುತ್ತದೆ. ಇನ್ನು ವೆಂಕಟಲಕ್ಷ್ಮಿ ಪಾತ್ರ ಮಾಡಿರುವ ಪ್ರತಿಭೆ ಕೂಡ ಸೈಲೆಂಟಾಗಿ ಕಂಡರೂ ವೈಲೆಂಟಾಗಿ ಮಿಂಚಿದ್ದಾರೆ. ಇನ್ನು ಮೂಗ್ ಸುರೇಶ್ , ಸಂದೀಪ್ ಮಲಾನಿ ಎಲ್ಲರೂ ಚೆನ್ನಾಗಿ ಆಕ್ಟ್ ಮಾಡಿದ್ದಾರೆ. ಇಂತಹ ಚಿತ್ರವನ್ನು ಎಲ್ಲರೂ ನೋಡಿ ಪ್ರೋತ್ಸಾಹಿಸಬೇಕು , ಕಮರ್ಷಿಯಲ್ ಚಿತ್ರಗಳ ನಡುವೆ ಒಂದು ನ್ಯಾಚುರಲ್ ಸಿನಿಮಾ ಗೆಲ್ಲಲಿ ಎಂದರು.

ಹಾಗೆಯೇ ಚಿತ್ರದ ನಿರ್ದೇಶಕ ಅಶೋಕ್ ಕಡಬ ಬಹಳ ಸೊಗಸಾದ ಚಿತ್ರವನ್ನು ನೀಡಿದ್ದಾರೆ. ನ್ಯಾಚುರಲ್ ಫೀಲ್ ಆಗುತ್ತದೆ. ಕತೆಗೆ ಏನು ಬೇಕೋ ಅದನ್ನ ಅಚ್ಚುಕಟ್ಟಾಗಿ ಪರಿಸರದ ನಡುವೆ ಚಿತ್ರೀಕರಿಸಿದ್ದಾರೆ. ಸಿನಿಮಾಗೆ ಏನು ಬಜೆಟ್ ಬೇಕೋ ಅದನ್ನ ಸಮರ್ಥವಾಗಿ ಬಳಸಿಕೊಂಡಿದ್ದಾರೆ.

ನಿರ್ಮಾಪಕರು ಒಂದು ಉತ್ತಮ ಚಿತ್ರವನ್ನು ನೀಡಿದ್ದಾರೆ. ಛಾಯಾಗ್ರಹಣ , ಸಂಗೀತ , ಹಿನ್ನೆಲೆ ಸಂಗೀತ ಸೇರಿದಂತೆ ಎಲ್ಲವು ಬಹಳ ಸೊಗಸಾಗಿ ಮೂಡಿಬಂದಿದೆ. ಚಿತ್ರದ ಕ್ಲೈಮಾಕ್ಸ್ ಸನ್ನಿವೇಶ ಬಹಳ ಇಂಟರೆಸ್ಟಿಂಗ್ ಆಗಿದ್ದು , ನಮ್ಮ ನಿರ್ದೇಶಕ ಎಸ್ .ನಾರಾಯಣ್ ಸುಪುತ್ರ ಪಂಕಜ್ ಎಂಟ್ರಿ ಪಾರ್ಟ್ 2 ನೋಡುವ ಕುತೂಹಲವನ್ನು ಹೆಚ್ಚಿಸಿದೆ. ನಾನು ಕೂಡ ಪಾರ್ಟ 2 ರಿಲೀಸ್ ಆದಾಗ ಖಂಡಿತ ನೋಡುತ್ತೇನೆ. ನ್ಯಾಚುರಲ್ ಆಗಿ ಸಿನಿಮಾ ಮೂಡಿ ಬಂದಿದೆ ಎಲ್ಲರೂ ಈ ಚಿತ್ರವನ್ನು ನೋಡಿ ಹರಸಿ ಪ್ರೋತ್ಸಾಹಿಸಿ ಎಂದರು.

error: Content is protected !!