“ಶುಗರ್ ಫ್ಯಾಕ್ಟರಿ” ಯಲ್ಲಿ ತಂತ್ರಜ್ಞಾನರ ಕಮಾಲ್… ನವಂಬರ್ 24ರಂದು ಬಿಡುಗಡೆ
ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಮನೋರಂಜನೆಯ ರಸದೌತಣ ನೀಡಲು ಸಿದ್ಧವಾಗಿರುವ ಚಿತ್ರ “ಶುಗರ್ ಫ್ಯಾಕ್ಟರಿ”. ಈ ಚಿತ್ರದಲ್ಲಿ ತಂತ್ರಜ್ಞಾನ ಕಾರ್ಯವೈಕರಿ ಬಹಳ ಚಾಲೆಂಜಿಂಗ್ ಆಗಿ ಮೂಡಿ ಬಂದಿದೆಯಂತೆ. ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ದೀಪಕ್ ಅರಸ್ ಒಂದು ಉತ್ತಮ ಬ್ರೇಕ್ ಸಿಗುವ ಸಾಧ್ಯತೆ ಇದ್ದು, ಇವತ್ತಿನ ಯುವ ಪೀಳಿಗೆಗೆ ಹೊಂದುವಂಥ ಕಥೆಯನ್ನು ಈ ಚಿತ್ರದಲ್ಲಿ ಚಿತ್ರಿಕರಿಸಲಾಗಿದೆಯಂತೆ. ಈ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿರುವ ಡಾರ್ಲಿಂಗ್ ಕೃಷ್ಣಗೆ ಜೋಡಿಯಾಗಿ ಅದ್ವಿತಿ ಶೆಟ್ಟಿ, ಸೋನಾಲ್ ಮಂಟೇರೋ, ರುಹಾನಿ ಶೆಟ್ಟಿ ನಾಯಕಿಯಾರಾಗಿ ಕಾಣಿಸಿಕೊಂಡಿದ್ದಾರೆ. ಇವತ್ತಿನ ಅಪ್ಪರ್ ಮಿಡ್ಲ್ ಕ್ಲಾಸ್ ಯುವಪೀಳಿಗೆಯ ಪಬ್ ಕಲ್ಚರ್ , ಡ್ರೆಸ್ ಕೋಡ್ ಮಾತಿನ ಶೈಲಿಯಗೆ ಕನೆಕ್ಟ್ ಆಗುವಂತ ಯೂತ್ ಓರಿಯೆಂಟೆಡ್ ಸಬ್ಜೆಕ್ಟ್ ಇದಾಗಿದ್ದು, ಕಾಸ್ಮೋ ಕಾಲಘಟ್ಟದ ಹಿನ್ನೆಲೆಯ ಕತೆಯನ್ನು ಒಳಗೊಂಡಿದೆಯಂತೆ.
ಈ ಚಿತ್ರಕ್ಕೆ ಕಬೀರ್ ರಫಿ ಸುಮಧುರವಾದ ಸಂಗೀತವನ್ನು ನೀಡಿದ್ದು , ಒಟ್ಟು ಆರು ಹಾಡುಗಳಿದ್ದು ಮೂರು ಮೆಲೋಡಿ ಹಾಗೂ ಒಂದು ಪೆಪ್ಪಿ , ಮತ್ತೊಂದು ಮಾಸ್ ಹಾಡು ಪ್ರೇಕ್ಷಕರನ್ನ ರಂಜಿಸಲಿದೆಯಂತೆ. ಒಂದಕ್ಕಿಂತ ಒಂದು ಹಾಡು ಅದ್ಭುತವಾಗಿ ಮೂಡಿ ಬಂದಿದ್ದು , ಎಲ್ಲವೂ ಹೊಸತದಿಂದ ಕೂಡಿದೆ. ಟ್ರೈಲರ್ ಹಾಗೂ ಹಾಡುಗಳು ಈಗಾಗಲೇ ವೈರಲ್ ಆಗಿದ್ದು , ಇನ್ನು ಈ ಚಿತ್ರದ ಹಾಡುಗಳನ್ನು ಪ್ರೇಕ್ಷಕರು ಯಾವ ರೀತಿ ಸ್ವೀಕರಿಸುತ್ತಾರೆ ಎಂಬುದನ್ನು ನೋಡಬೇಕಿದೆ. ಈಗಾಗಲೇ ಕನ್ನಡ , ತೆಲುಗು, ಹಿಂದಿ, ತಮಿಳು ಹಾಗೂ ಇಂಗ್ಲಿಷ್ ಸೇರಿದಂತೆ ಸುಮಾರು 200 ಹೆಚ್ಚು ಕಿರು ಚಿತ್ರಗಳಿಗೆ ಸಂಗೀತ ನೀಡಿದ್ದು, ಈಗ ಸಿನಿಮಾಗಳಿಗೂ ಹೆಚ್ಚು ಹೆಚ್ಚು ಅವಕಾಶ ಬಂದಿದ್ದು , ಈ ಶುಗರ್ ಫ್ಯಾಕ್ಟರಿ ಇವರ ಕೆರಿಯರ್ ಗ್ರಾಫ್ ಗೆ ಒಂದು ದೊಡ್ಡ ಬ್ರೇಕ್ ಸಿಗುವ ಸಾಧ್ಯತೆ ಇದೆ ಎನ್ನುವಂತಿದೆ.
ಇನ್ನು ಈ ಚಿತ್ರವನ್ನು ಅಷ್ಟೇ ವರ್ಣರಂಜಿತವಾಗಿ ತಮ್ಮ ಕ್ಯಾಮೆರಾ ಕೈಚಳಕ ಮೂಲಕ ಸೆರೆಹಿಡಿದಿದ್ದಾರಂತೆ ಛಾಯಾಗ್ರಾಹಕ ಸಂತೋಷ್ ರೈ ಪತಾಜೆ. ಯುವಕರನ್ನೇ ಮನದಲ್ಲಿಟ್ಟುಕೊಂಡು ಮಾಡಿರುವಂತಹ ಚಿತ್ರ ಇದಾಗಿದ್ದು , ಇವತ್ತಿನ ಪಬ್ ಕಲ್ಚರ್ ಬ್ಯಾಗ್ರೌಂಡ್ ನಲ್ಲಿ ಕಥೆಯನ್ನು ಕಲರ್ಫುಲ್ ಆಗಿ ತೋರಿಸಲಾಗಿದೆಯಂತೆ. ಈ ಚಿತ್ರದ ಚಿತ್ರೀಕರಣವನ್ನು ಬೆಂಗಳೂರು, ಗೋವಾ, ಕಜಾಕಿಸ್ತಾನ್ ನಲ್ಲಿ ದೃಶ್ಯಗಳನ್ನು ಸೆರೆ ಹಿಡಿಯಲಾಗಿದ್ದು, ವಿಜುಲ್ ಹಾಗೂ ಸೌಂಡ್ ತುಂಬಾನೇ ರಿಚ್ಚಾಗಿ ಮೂಡಿ ಬಂದಿದ್ದು , ಯಾರು ನೋಡಿರದ ಗೋವಾವನ್ನ ಈ ಚಿತ್ರದಲ್ಲಿ ಸೇರಿಹಿಡಿಯಲಾಗಿದೆಯಂತೆ. ಕಥೆಗೆ ತಕ್ಕಂತೆ ದೃಶ್ಯಗಳಿಗೆ ಅಷ್ಟೇ ವೈಭವಯುತವಾಗಿ ಸುಂದರ ಸ್ಥಳವನ್ನು ಹುಡುಕಿ ಚಿತ್ರೀಕರಣ ಮಾಡಲಾಗಿದೆಯಂತೆ.
ಈ ಚಿತ್ರದ ಸಂಕಲನ ಕಾರ್ಯ ಕೆಲಸವನ್ನು ಕೆ .ಎಂ. ಪ್ರಕಾಶ್ ಮಾಡಿದ್ದು, ಎಡಿಟಿಂಗ್ ಪ್ಯಾಟರ್ನ್ ಕೂಡ ಚಾಲೆಂಜಿಂಗ್ ಆಗಿ ಮೂಡಿ ಬಂದಿದೆ ಎಂಬ ಅಭಿಪ್ರಾಯ ಚಿತ್ರ ತಂಡದ್ದು, ಈ ಒಂದು ಚಿತ್ರವನ್ನು ಅಷ್ಟೇ ಅದ್ದೂರಿಯಾಗಿ ಯಾವುದೇ ಕೊರತೆ ಬರದಂತೆ ಗಿರೀಶ್. ಆರ್ ನಿರ್ಮಾಣ ಮಾಡಿದ್ದು , ಈ ಚಿತ್ರದ ಬಗ್ಗೆ ಬಹಳಷ್ಟು ನಿರೀಕ್ಷೆ ಹುಟ್ಟಿಕೊಂಡಿದೆ. ಈಗಾಗಲೇ ಬಿಡುಗಡೆಗೊಂಡಿರುವ ಟ್ರೈಲರ್ ಹಾಗೂ ಹಾಡುಗಳು ಭಾರಿ ಸದನ್ನ ಮಾಡಿದ್ದು , ಈಗಾಗಲೇ ಎಲ್ಲಾ ಅಂದುಕೊಂಡಂತೆ ರಾಜ್ಯಾದ್ಯಂತ ಇದೇ ನವಂಬರ್ 24ರಂದು “ಶುಗರ್ ಫ್ಯಾಕ್ಟರಿ” ಚಿತ್ರ ಅಬ್ಬರಿಸಲಿದೆ.