Cini NewsSandalwood

“ತಾಜ್” ಚಿತ್ರದ ಟ್ರೇಲರ್ ರಿಲೀಸ್

ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ನೈಜ ಘಟನೆಗಳ ಆಧಾರಿತ “ತಾಜ್” ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ನೆರವೇರಿದೆ. ಈಗಾಗಲೇ ಈ ಚಿತ್ರದ ಟೀಸರ್ ಹಾಗೂ ಹಾಡುಗಳು ಗಮನ ಸೆಳೆದಿದ್ದು, ಟ್ರೈಲರ್ ಮತ್ತಷ್ಟು ಕುತೂಹಲವನ್ನು ಮೂಡಿಸಿದೆ. ಇದೊಂದು ಹಿಂದೂ ಹಾಗೂ ಮುಸ್ಲಿಂ ಪ್ರೇಮಕಥೆಯಲ್ಲಿ ಮಾನವೀಯತೆಯ ನೆಲೆಗಟ್ಟಿನೊಂದಿಗೆ ಒಂದೊಳ್ಳೆ ಸಂದೇಶವನ್ನ ಹೇಳುವ ಪ್ರಯತ್ನ ಮಾಡಿದೆಯಂತೆ. ತಮ್ಮ ಚಿತ್ರದ ಕುರಿತು ಹಾಗೂ ಬಿಡುಗಡೆ ವಿಚಾರವಾಗಿ ಪತ್ರಿಕಾಗೋಷ್ಠಿಯನ್ನು ಆಯೋಜನೆ ಮಾಡಿತು ಚಿತ್ರತಂಡ.

ಇನ್ನು ಮೊದಲಿಗೆ ನಿರ್ದೇಶಕ ಬಿ. ರಾಜರತ್ನ ಮಾತನಾಡುತ್ತ ಇದೊಂದು ನೈಜ ಘಟನೆಗಳ ಆಧಾರಿತ ಚಿತ್ರವಾಗಿದ್ದು, ಬಹುತೇಕ ನಾನು ಕಂಡು ಕೇಳಿದಂತ ವಿಷಯಗಳನ್ನು ಈ ಚಿತ್ರದಲ್ಲಿ ಬಳಸಿಕೊಂಡಿದ್ದೇನೆ.

ಇದು ನನ್ನ ಪ್ರಥಮ ನಿರ್ದೇಶನದ ಚಿತ್ರ. ಸುಮಾರು ವರ್ಷಗಳಿಂದ ಚಿತ್ರರಂಗದಲ್ಲಿ ಸಹಾಯಕ ಸಹ ನಿರ್ದೇಶಕನಾಗಿ, ಸಾಹಿತಿಯಾಗಿ ಕೆಲಸ ಮಾಡಿದ್ದು , ಒಂದು ವಿಭಿನ್ನ ಪ್ರೇಮಕಥೆಯ ಜೊತೆಗೆ ಮಾನವೀಯತೆಯ ಮೌಲ್ಯಗಳನ್ನ ಬೆಸೆದುಕೊಂಡು.

ಒಂದಷ್ಟು ಸಿನಿಮೀಯ ಅಂಶಗಳನ್ನು ಇಟ್ಟುಕೊಂಡು ‘ತಾಜ್’ ಸಿನಿಮಾ ಮಾಡಲಾಗಿದೆ. ಹಿಂದೂ ಮುಸ್ಲಿಂ ಜೋಡಿಯ ಪ್ರೇಮಕಥೆಯಲ್ಲಿ ಸಾಮಾಜಿಕ ಸಂದೇಶದ ಹೇಳುವ ಪ್ರಯತ್ನ ಮಾಡಿದ್ದೇನೆ. ಈಗಾಗಲೇ ಚಿತ್ರದ ಸೆನ್ಸರ್ ಮುಗ್ದಿದ್ದು , ಮುಂದಿನ ತಿಂಗಳಲ್ಲಿ ಚಿತ್ರಮಂದಿರಕ್ಕೆ ಬರಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ. ನಿಮ್ಮೆಲ್ಲರ ಪ್ರೀತಿ ಪ್ರೋತ್ಸಾಹವಿರಲಿ ಎಂದು ಕೇಳಿಕೊಂಡರು.

ಇನ್ನು ಈ ಚಿತ್ರವನ್ನು ಶ್ರೀಪಾವನಿ ಲಕ್ಷ್ಮೀ ಕಂಬೈನ್ಸ್ ಲಾಂಛನದಲ್ಲಿ ಶ್ರೀಮತಿ ಲಕ್ಷ್ಮೀ ಷಣ್ಮುಖ ‘ತಾಜ್’ ಚಿತ್ರವನ್ನು ನಿರ್ಮಾಣದ ಜೊತೆಗೆ ಷಣ್ಮುಖ ನಾಯಕನಾಗಿ ಬೆಳ್ಳಿ ಪರದೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಯುವ ನಟ ಷಣ್ಮುಖ ಮಾತನಾಡುತ್ತಾ ನಾನು ಸಿನಿಮಾಗಳನ್ನ ನೋಡುತ್ತಾ ಬೆಳೆದವನು , ನಾನು ಕೂಡ ನಟನಾಗಬೇಕೆಂಬ ಆಸೆಯಿಂದ ಬಹಳಷ್ಟು ಪೂರ್ವ ತಯಾರಿಯೊಂದಿಗೆ ದೇಹವನ್ನ ದಂಡಿಸಿ ಒಂದಷ್ಟು ತರಬೇತಿಯನ್ನ ಪಡೆದುಕೊಂಡು ನಾಯಕನಾಗಿ ಬರುತ್ತಿದ್ದೇನೆ.

ನಿರ್ದೇಶಕರು ಹಾಗೂ ನನ್ನ ಸಹ ಕಲಾವಿದರು ಬಹಳಷ್ಟು ಹೇಳಿಕೊಟ್ಟಿದ್ದಾರೆ. ಇನ್ನೂ ಕಲಿಯುವುದು ತುಂಬಾ ಇದೆ. ನನ್ನ ಪ್ರಥಮ ಚಿತ್ರ ನೀವೆಲ್ಲರೂ ಬಂದು ನೋಡಿ ಹರಸಿ ಎಂದು ಕೇಳಿಕೊಂಡರು. ಈ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿರುವ ಅಪ್ಸರಾ ಚಿತ್ರ ಬಿಡುಗಡೆಗೆ ಮುನ್ನವೇ ಇಹಲೋಕವನ್ನು ತ್ಯಜಿಸಿದ್ದಾರೆ.

ಇನ್ನು ಮಗಳನ್ನು ಕಳೆದುಕೊಂಡ ತಂದೆ ರಾಮಕೃಷ್ಣ ಮಗಳ ಪ್ರತಿಭೆಯನ್ನ ನೆನೆಯುತ್ತಾ ನನ್ನ ಮಗಳ ಅಭಿನಯದ ಈ ಚಿತ್ರವನ್ನು ನೀವೆಲ್ಲರೂ ನೋಡಿ ಎಂದು ಕೇಳಿಕೊಂಡರು. ಇನ್ನು ಮುಸ್ಲಿಂ ಪಾತ್ರದಲ್ಲಿ ಕಾಣಿಸಿಕೊಂಡಿರುವ ವರ್ಧನ್ , ಮತ್ತೊಂದು ವಿಶೇಷ ಪಾತ್ರದಲ್ಲಿ ಅಭಿನಯಿಸಿರುವ ಕಡ್ಡಿ ವಿಶ್ವ ತಮ್ಮ ತಮ್ಮ ಪಾತ್ರಗಳ ಬಗ್ಗೆ ಮಾತನಾಡಿದರು. ಉಳಿದಂತೆ ಬಲರಾಜವಾಡಿ, ಶೋಭರಾಜ್, ಪದ್ಮಾವಾಸಂತಿ, ಪಟ್ರೆ ನಾಗರಾಜ್, ಸೂರಜ್ ಮೊದಲಾದ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಈ ಚಿತ್ರಕ್ಕೆ ಜೆಸ್ಸಿಗಿಫ್ಟ್ ಸಂಗೀತ ಸಂಯೋಜಿಸಿದ್ದು, ದೀಪಕ್ ಕುಮಾರ್ ಕ್ಯಾಮರಾ ಕೈಚಳಕ ಈ ಚಿತ್ರಕ್ಕಿದೆ. ಸದ್ಯ ಚಿತ್ರ ಬಿಡುಗಡೆ ಮಾಡಲು ಇಡೀ ತಂಡ ಸಿದ್ಧವಾಗಿದ್ದು , ಬೆಳ್ಳಿ ಪರದೆ ಮೇಲೆ ಅತಿ ಶೀಘ್ರದಲ್ಲಿ ರಾರಾಜಿಸಲಿದೆ.

error: Content is protected !!