ಅದ್ಧೂರಿಯಾಗಿ “TPL ಸೀಸನ್ 4” ರ ಕಪ್ ಗೆ ಚಾಲನೆ.
ಕಡಲ ದೇಶ ಶ್ರೀಲಂಕಾದಲ್ಲಿ ವರ್ಣ ರಂಜಿತವಾಗಿ ಭರ್ಜರಿ ಮನೋರಂಜನೆ ಮೂಲಕ CCC ಕ್ರಿಕೆಟ್ ಗ್ರೌಂಡ್ ನಲ್ಲಿ ಚಂದನವನದ ಕಲಾವಿದರು , ತಂತ್ರಜ್ಞರು ಹಾಗೂ ಮಾಧ್ಯಮದವರ ಸೇರಿದಂತೆ ಟೀಮ್ ಓನರ್ ಗಳ ಒಗ್ಗಟ್ಟಿನೊಂದಿಗೆ , ಎ ವಿ ಆರ್ ಸಂಸ್ಥೆಯ ಸಹಕಾರದ ಜೊತೆ N1 ಕ್ರಿಕೆಟ್ ಅಕಾಡೆಮಿಯ ಸಂಸ್ಥಾಪಕ ಬಿ.ಆರ್. ಸುನಿಲ್ ಕುಮಾರ್ ಟೆಲಿವಿಷನ್ ಪ್ರೀಮಿಯರ್ ಲೀಗ್ 4ನೇ ಸೀಸನ್ ಜೆರ್ಸ್ಸಿ, ಲೋಗೋ, ವಿನ್ನರ್ ಕಪ್ ವನ್ನು ಶ್ರೀಲಂಕಾ ಲಾಯಾರ್ ಅಸೋಸಿಯೇಷನ್ ರೂವಾರಿಗಳು ಮನೀಶ್ ವಾಲ್ವೆಟಾ ಹಾಗೂ ಸ್ನೇಹಿತರು , ಸ್ಪಾನ್ಸರ್ಸ್, ಗೆಸ್ಟ್ , ಟೀಮ್ ಓನರ್ ಸಮುಖದಲ್ಲಿ ಬಿಡುಗಡೆ ಮಾಡಲಾಯಿತು. ವೇದಿಕೆಯ ಮೇಲೆ ಶ್ರೀಲಂಕಾ ಸಂಸ್ಕೃತಿ ನೃತ್ಯ , ರಾಂಪ್ ವಾಕ್, ಡಾನ್ಸ್, ಸಾಂಗ್ಸ್ ಸ್ಟೆಪ್ ಹಾಕುವ ಮೂಲಕ ಇನಾಗೂರೇಷನ್ ಗೆ ಕಲರ್ಫುಲ್ ಸದ್ದು ಮಾಡಿತ್ತು. ಕಾರ್ಯಕ್ರಮಕ್ಕೆ ಬೆಂಬಲವಾಗಿ ಪಿ.ಆರ್.ಓ ಹರೀಶ್ ಹಾಗೂ ತಂಡದವರು ಸಾಥ್ ನೀಡುವುದರ ಜೊತೆಗೆ ಶಮೀರಾ ಬೆಳುವಾಯಿ ನಿರೂಪಣೆ ಗಮನ ಸೆಳೆಯುತ್ತು.
ಸರಿ ಸುಮಾರು ಆರು ದಿನಗಳ ನಡೆಯುವ ಈ ಕ್ರಿಕೆಟ್ ಪಂದ್ಯಗಳು ಭರ್ಜರಿಯಾಗಿ ಆರಂಭಗೊಂಡಿದೆ. ನೂರ ಇವತ್ತು ಹೆಚ್ಚು ಮೆಂಬರ್ಸ್ ಹಾಗೂ ಗೆಸ್ಟ್ ಗಳನ್ನ ಸಮುದ್ರ ಆಚೆ ಶ್ರೀಲಂಕಾದ ಪ್ರಮುಖ ತಾಣ ಕೊಲೊಂಬೊದಲ್ಲಿರುವ ಸಿ ಸಿ ಸಿ ಗ್ರೌಂಡ್ ಹಾಗೂ ಬ್ಲೂಮ್ ಗ್ರೌಂಡ್ ನಲ್ಲಿ ಪಂದ್ಯಗಳು ನಡೆಯಲ್ಲಿದೆ. ಪ್ರತಿ ಒಂದು ತಂಡಗಳು ಮ್ಯಾಚ್ ಗೆಲಲು ಬಾರಿ ಕಸರತ್ತು ನಡೆಸುತ್ತಿದ್ದಾರೆ, ಹಾಗೆಯೇ ಮ್ಯಾಚ್ ಗಳು ಆರಂಭಗೊಂಡಿದ್ದು ಪಾಯಿಂಟ್ಸ್ ಟೇಬಲ್ ಸದ್ದು ಮಾಡುತ್ತಿದೆ.
ಇದೇ ಮೊದಲ ಬಾರಿಗೆ ಹೊರದೇಶ ಕೊಲಂಬಿಯಾದಲ್ಲಿ ಮಾರ್ಚ್ 20 ರಿಂದ 27ರವರೆಗೆ ಕ್ರಿಕೆಟ್ ಮ್ಯಾಚ್ ಗಳು ನಡೆಯುತ್ತಿದ್ದು , ಈ ಬಾರಿಯ ಟಿಪಿಎಲ್ ಸೀಸನ್ 4ರಲ್ಲಿ ಒಟ್ಟು 12 ತಂಡಗಳು ಭಾಗಿಯಾಗುತ್ತಿದೆ.
*12 ತಂಡಗಳು*
1.ಕ್ರಿಕೆಟ್ ನಕ್ಷತ್ರ (ನಕ್ಷತ್ರ ಮಂಜುನಾಥ್-ಓನರ್, ಆರ್ ಕೆ ರಾಹುಲ್- ನಾಯಕ)
2. MR ಪ್ಯಾಂಥರ್ಸ್ (ಮಿಥುನ್ ರೆಡ್ಡಿ-ಓನರ್, ಡಾರ್ಲಿಂಗ್ ಕೃಷ್ಣ-ನಾಯಕ)
3. GLR ವಾರಿಯರ್ಸ್ ( ರಾಜೇಶ್ ಎಲ್-ಓನರ್-ರಾಜೇಶ್ ಬಿಜಿ-ಕೋಓನರ್-ಲೂಸ್ ಮಾದ ಯೋಗಿ-ನಾಯಕ)
4. ಲಿಯೋ ಲೈಫ್ ಸೇವಿಯರ್ ಪ್ರ(ಸನ್ನ.ವಿ-ಓನರ್-ವಿನೋ ಜೋಸ್-ಕೋಓನರ್-ಜೆ.ಕೆ-ನಾಯಕ)
5. MM ವೆಂಚರ್ಸ್ (ಮಂಜುನಾಥ್ ನಾಗಯ್ಯ-ಓನರ್, ಅಭಿ-ನಾಯಕ)
6. RR ವಾರಿಯರ್ಸ್ (ಮಹೇಶ್ ಕೆ ಗೌಡ-ಓನರ್, ರಘು ಭಟ್-ಕೋ ಓನರ್, ಪ್ರತಾಪ್ ನಾರಾಯಣ್-ನಾಯಕ)
7. AVR ಟಸ್ಕರ್ (ಅರವಿಂದ್ ವೆಂಕಟೇಶ್ ರೆಡ್ಡಿ-ಓನರ್- ದಿಗಂತ್- ಕೋಓನರ್-ಅಲೋಕ್ ನಂದ ಶ್ರೀನಿವಾಸ್-ನಾಯಕ)
8. ದಿ ಬುಲ್ ಸ್ವಾಡ್ (ಮೋನಿಶ್-ಓನರ್, ಪ್ರಜ್ವಲ್ ಕೆ-ಕೋ ಓನರ್, ಶರತ್ ಪದ್ಮಾನಾಭನ್-ನಾಯಕ)
9. ಯುಮಿ ವೆಂಚರ್ಸ್ (ಕುಶಾಲ್ ಗೌಡ-ಓನರ್, ಅರ್ಜುನ್ ಯೋಗಿ-ನಾಯಕ)
10. ಅಶ್ವಸೂರ್ಯ ರೈಡರ್ಸ್ (ರಂಜಿತ್ ಕುಮಾರ್-ಓನರ್, ಜಗದೀಶ್ ಆರ್ ಚಂದ್ರ-ಕೋಓನರ್, ಹರ್ಷ ಸಿಎಂ ಗೌಡ-ನಾಯಕ)
11. DS ಮ್ಯಾಕ್ಸ್ ಲಯನ್ಸ್ (ರಾಜುಗೌಡ ಓನರ್- ಮಣಿಕಂಠ್ ನಾಯಕ್ ಕೋಓನರ್- ತರುಣ್ ಸುಧೀರ್-ನಾಯಕ)
12. ಪಿಂಕ್ ಗೋಲ್ಡ್ ಪೈಲ್ವಾನ್ಸ್ (ಭರತ್-ಓನರ್, ದೀಕ್ಷಿತ್ ಶೆಟ್ಟಿ-ನಾಯಕ)