ನೈಜ ಘಟನೆಗಳನ್ನು ಆಧರಿಸಿರುವ “ದ ರೂಲರ್ಸ್ ” ಚಿತ್ರದ ಟೀಸರ್ ರಿಲೀಸ್.
ಸ್ಯಾಂಡಲ್ ವುಡ್ ಅಂಗಳದಲ್ಲಿ ಸದ್ದಿಲ್ಲದೇ ಸಿದ್ದವಾಗಿರೋ ಹೊಸ ಸಿನ್ಮಾ. ಕಾಲಿವುಡ್ ನ ಖ್ಯಾತ ನಿರ್ದೇಶಕ ವೆಟ್ರಿಮಾರನ್ ಮಾರ್ಗದರ್ಶನದಲ್ಲಿ, ಅವರ ತಂಡದಲ್ಲಿ ಕೆಲಸ ಮಾಡಿದ್ದ ಹುಡುಗುರೆಲ್ಲಾ ಸೇರಿ ಚೊಚ್ಚಲ ಕನ್ನಡ ಸಿನಿಮಾ ಮಾಡಿದ್ದಾರೆ. ದ ರೂಲರ್ಸ್ ಟೈಟಲ್ ನಡಿಯಲ್ಲಿ Power of Constitution ಅನ್ನೋ ಅಡಿ ಬರಹವನ್ನಿಟ್ಟಿದ್ದಾರೆ. ಹೊಸ ವರ್ಷದ ಮೊದಲ ದಿನ ದ ರೂಲರ್ಸ್ ಚಿತ್ರದ ಟೀಸರ್ ರಿಲೀಸ್ ಮಾಡಿದ್ದಾರೆ.
ದ ರೂಲರ್ಸ್ ನೈಜ ಘಟನೆಗಳನ್ನಾಧರಿಸಿ ಮಾಡಿರೋ ಚಿತ್ರ. ಕೋಲಾರ ಜಿಲ್ಲೆಯಲ್ಲಿ ನಡೆದಿರೋ,ನಡೆಯುತ್ತಿರೋ ಘಟನಾವಳಿಗಳನ್ನಾಧರಿಸಿ ಮಾಡಿರೋ ಕಥೆ. ಸಂವಿಧಾನವೊಂದು ಆಸರೆ ಮತ್ತು ಶಕ್ತಿ ಎಂಥಹದ್ದು, ಅದು ಭಾರತೀಯ ಪ್ರಜ್ಞೆಗೆ ಕೊಟ್ಟಿರೋ ಶಕ್ತಿ ಎಂಥಹದ್ದು ಅನ್ನೋ ವಿಚಾರವನ್ನ ಮೂಲವಾಗಿಸಿಕೊಂಡು ದ ರೂಲರ್ಸ್ ಚಿತ್ರವನ್ನ ಮಾಡಲಾಗಿದೆ.
ಇಲ್ಲಿ ಮೇಲೂ ಕೀಳು ಅನ್ನೋ ಸಮುದಾಯಗಳ ಸಂಘರ್ಷದಿ ಮರೆಯಾದ ಮಾನವೀಯತೆಯನ್ನ ಒಂದು ಕಡೆ ಬಂಬಿಸಿದ್ರೆ, ಮತ್ತೊಂದು ಕಡೆ ಸಂವಿಧಾನ ಕೊಟ್ಟಿರೋ ಸಮಾನತೆಯ ಹಕ್ಕನ್ನ ಪ್ರತಿಪಾದಿಸೋ, ಅದ್ರ ಶಕ್ತಿಯನ್ನ ಪ್ರದರ್ಶಿಸೋ ಮತ್ತೊಂದು ಮಜಲನ್ನ ಅನಾವರಣಗೊಳಿಸಿದ್ದಾರಂತೆ.
ದ ರೂರಲ್ಸ್ ಹೆಸರೇ ಸೂಚಿಸುವಂತೆ ದ ಅಂದ್ರೆ ದಲಿತ ಇದಕ್ಕೆ ರೂಲರ್ಸ್ಸ್ ಅಂತ ಹೆಸರಿಟ್ಟಿರೋದ್ರ ಹಿಂದೆ ವಿಚಾರ ಇದೆಯಂತೆ. ಈ 5ಜಿ ಜಮಾನದಲ್ಲೂ ಇನ್ನೂ ಜಾಸಿ ಅನ್ನೋ ಪಿಡುಗು ಎಷ್ಟರ ಮಟ್ಟಿಗೆ ಶೀತಲವಾಗಿ ಸಮಾದೊಳಗಿದೆ. ಮತ್ತು ಅದರ ಪರಿಣಾಯ ಏನಾಗ್ತಿದೆ ಅನ್ನೋದನ್ನ ಈ ಚಿತ್ರದಲ್ಲಿ ಹೇಳಲಾಗಿದೆಯಂತೆ.
ದ ರೂಲರ್ಸ್ಸ್ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನ ಬರೆದಿರೋದು, ಕೋಲಾರದ ಡಾ. ಕೆ.ಎಮ್ ಸಂದೇಶ್. ಡಾ. ಬಿ.ಆರ್ ಅಂಬೇಡ್ಕರ್ ತತ್ವ ಸಿದ್ದಾಂತವನ್ನ ಮೈಗೂಡಿಸಿಕೊಂಡು, ವರ್ಷಗಳಿಂದ ಸಾಮಾಜಿಕ ಸಮಾನತೆಯಾಗಿ 350ಕ್ಕೂ ಹೆಚ್ಚು ಹೋರಾಟಗಳನ್ನ ಮಾಡಿ ಗೆದ್ದಿರೋ, 350ಕ್ಕೂ ಹೆಚ್ಚು ಅಂತರ್ಜಾತಿ ವಿವಾಹಗಳನ್ನ ಮಾಡಿರೋ ಇವ್ರು. ತಮ್ಮ ಬದುಕಿನಲ್ಲೇ ನಡೆದ ಘಟನೆಗಳನ್ನಿಟ್ಟುಕೊಂಡು ಕಮಮರ್ಷಿಯಲ್ಲಾಗಿ ಸಿನಿಮಾ ಮಾಡಿದ್ದಾರೆ.
ಎಂ.ಎನ್.ಎಂ ಮೂವೀಸ್ ಬ್ಯಾನರ್ ನಡಿಯಲ್ಲಿ ಅಶ್ವಥ್ ಬಳಗೆರೆ ನಿರ್ಮಾಣದಲ್ಲಿ, ಉದಯ್ ಭಾಸ್ಕರ್ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಕರುಣ್ ಕೆ.ಜಿ.ಎಫ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದಲ್ಲಿ ನವ ಪ್ರತಿಭೆ ವಿಶಾಲ್, ರಿತಿಕಾ ಗೌಡ, ಕೆ.ಜಿ.ಎಫ್ ನ ಪಠಾಣ್ ಖ್ಯಾತಿಯ ಪುನೀತ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಖುದ್ದು ಸಂದೇಶ್ ತಮ್ಮ ನೈಜ ಪಾತ್ರವನ್ನ ತಾವೇ ಮಾಡಿದ್ದಾರೆ.
ಸದ್ಯ ಎ2 ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಿರೋ ಟೀಸರ್ ಜೋರಾಗೇ ರೀಚ್ ಆಗ್ತಿದೆ. ಈ ಕಂಟೆಂಟ್ ನೋಡಿ.ಪರ ವಿರೋಧ ಎರಡೂ ಬಗೆಯ ಕಮೆಂಟ್ ಗಳು ಬರ್ತಿವೆ. ಸೂಕ್ಷ್ಮಾ ವಿಚಾರವನ್ನ ನೇರವಾಗಿ ಹೇಳೋ ಪ್ರಯತ್ನ ಮಾಡಿರೋ ದ ರೂಲರ್ಸ್ ಚಿತ್ರ ವಿಶಿಷ್ಠವಾಗಿ ಪ್ರೇಕ್ಷಕರನ್ನ ಸೆಳೆಯುತ್ತಿದ್ದು, ಸಾಮಾಜಿಕವಾಗಿಯೋ ಸದ್ದು ಮಾಡೋ ಸೂಚನೆ ಕೊಡ್ತಿದೆ.