“ತೂಫಾನ್” ಫಸ್ಟ್ ಗ್ಲಿಂಪ್ಸ್ ರೀಲಿಸ್, ಬಾಲಿವುಡ್‌ನಲ್ಲೂ ಹವಾ
ಮೊನ್ನೆಯಷ್ಟೇ ಹೊರಬಂದ ’ತೂಫಾನ್’ ಕನ್ನಡ ಮತ್ತು ಹಿಂದಿ ಚಿತ್ರದ ಫಸ್ಟ್ ಗ್ಲಿಂಪ್ಸ್‌ಗೆ ಚಿತ್ರರಂಗವು ಪ್ರಶಂಸೆ ವ್ಯಕ್ತಪಡಿಸಿದ್ದು ಅಲ್ಲದೆ, ದೂರದ ಬಾಲಿವುಡ್‌ನಲ್ಲೂ ಹವಾ ಕ್ರಿಯೇಟ್ ಮಾಡುತ್ತಿದೆ. ಕಲಾವಿದರ ಸಂಘದಲ್ಲಿ ತುಣುಕುಗಳ ಬಿಡುಗಡೆ ಸಮಾರಂಭವು ಅದ್ದೂರಿಯಾಗಿ ನಡೆಯಿತು. ಎಸ್.ಆರ್.ಮೂವೀಸ್ ಲಾಂಛನದಲ್ಲಿ ಬೆಳಗಾಂ ಮೂಲದ ಕನ್ನಡ ಅಭಿಮಾನಿ ಷರೀಫ ಬೇಗಂ ನಡಾಫ್ ಬಂಡವಾಳ ಹೂಡುತ್ತಿದ್ದಾರೆ. ಚಿತ್ರಕಥೆ,ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿರುವುದು ಆರ್.ಚಂದ್ರಕಾಂತ್. ಹೊಸ ಪ್ರತಿಭೆ ರೋಶನ್ ಕಥೆ ಬರೆದು ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಛಾಲೆಂಜಿಂಗ್ ಸ್ಟಾರ್ ದರ್ಶನ್ ಪರ ವಕೀಲ ನಾರಾಯಣಸ್ವಾಮಿ ಮತ್ತು ಮಿಲಿಟರಿ ನಿವೃತ್ತ ಅಧಿಕಾರಿಗಳು ಆಗಮಿಸಿ ತಂಡದ ಕೆಲಸವನ್ನು ಶ್ಲಾಘಿಸಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಾಹಿತಿ ಕವಿರಾಜ್, ಶಿಷ್ಯ ಆಕ್ಷನ್ ಕಟ್ ಹೇಳಿರುವುದು ಸಂತಸ ತಂದಿದೆ. ವಿಷುಯಲ್ಸ್, ಲೈಟಿಂಗ್, ಮೇಕಿಂಗ್ ಎಲ್ಲವನ್ನು ದೊಡ್ಡ ಪರದೆ ಮೇಲೆ ನೋಡುವುದೇ ಚೆಂದ. ಬೇರೆ ಲೋಕ ಸೃಷ್ಡಿಸುವಂತ ಮಾತು ಕೇಳಿ ಬರುತ್ತಿದೆ. ಯಾವುದೋ ಒಂದು ಸಿನಿಮಾ ಎಲ್ಲವನ್ನು ಧೂಳು ಎಬ್ಬಿಸುತ್ತೆ. ಅದೇ ರೀತಿ ಇದು ಆಗಲಿ. ನಿರ್ದೇಶಕರಿಗೆ ದೊಡ್ಡ ಮಟ್ಟದ ಯಶಸ್ಸು ಸಿಗಲೆಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಆರ್.ಚಂದ್ರಕಾಂತ್ ಸಿನಿಮಾವು ನಂದು ಅನ್ನುವುದಕ್ಕಿಂತ ರೋಷನ್ ಕನಸು ಎಂದು ಹೇಳಬೇಕು. ಅವರು ಕಥೆ ಹೇಳಿ ನಾನೇ ನಿರ್ದೇಶನ ಮಾಡಬೇಕೆಂದು ಕೋರಿಕೊಂಡರು. 1994ರಲ್ಲಿ ಮಗ ತಂದೆಗೋಸ್ಕರ ಸೇಡು ತೀರಿಸಿಕೊಳ್ಳುವ ಏಳೆಯನ್ನು ಹೊಂದಿದೆ. ಶೇಕಡ 50ರಷ್ಟು ಚಿತ್ರೀಕರಣ ಮುಗಿದಿದೆ. ನಿರ್ಮಾಪಕರ ಒತ್ತಾಯದ ಮೇರೆಗೆ ಗ್ಲಿಂಪ್ಸ್‌ನ್ನು ತೋರಿಸಲಾಗಿದೆ.
ಇದು ಟೀಸರ್, ಟ್ರೇಲರ್ ಅಲ್ಲ. ಇದೊಂದು ಪ್ಯಾನ್ ಇಂಡಿಯಾ ಸಿನಿಮಾದ ತೂಫಾನ್ ಸ್ಪಾರ್ಕ್ ಎನ್ನಬಹುದು. ನಮ್ಮ ಚಿತ್ರ ಹೇಗೆ ಬರುತ್ತಿದೆ, ಯಾವ ತರಹದಲ್ಲಿ ಇದೆ ಎಂಬುದನ್ನು ತೋರಿಸಲು ಇದನ್ನು ಸಿದ್ದಪಡಿಸಲಾಗಿದೆ. ಹಿಂದೆ ’ಭೈರ್ಯ-07’ ಹೆಸರು ಇತ್ತು. ಭೈರ್ಯ ನಾಯಕನ ಹೆಸರು ಆಗಿದ್ದು, ಬೇರೆ ತಿರುವು ಇರಲಿ ಅಂತ ತೂಫಾನ್ ಟೈಟಲ್ ಇಡಲಾಗಿದೆ. ಮುಖ್ಯ ಖಳನಾಯಕನಾಗಿ ಭೀಷ್ಮರಾಮಯ್ಯ ಉಳಿದಂತೆ ರಂಗಾಯಣರಘು, ಅಶ್ವಿನ್‌ಹಾಸನ್, ಸೂರ್ಯಪ್ರವೀಣ್, ಅಯ್ಯಪ್ಪಶರ್ಮ, ಬಿ.ಸುರೇಶ್, ಉಗ್ರಂ ರವಿ ರೋಲ್‌ನ್ನು ಗೌಪ್ಯವಾಗಿಡಲಾಗಿದೆ. ಮುಂದೆ ಎಲ್ಲವನ್ನು ತಿಳಿಸುತ್ತೇನೆಂದು ಹೇಳಿದರು.
ತುಣಕುಗಳು ಕೆಜಿಎಫ್ ತರಹ ಇರಲಿದೆ ಎಂದು ಮಾದ್ಯಮದ ಪ್ರಶ್ನೆಗೆ ಉತ್ತರವಾದ ನಾಯಕ ರೋಶನ್, ಅದಕ್ಕೂ ಇದಕ್ಕೂ ಸಂಬಂದವಿಲ್ಲ. ಕನ್ನಡ ಸಿನಿಮಾಗಳನ್ನು ನೋಡಲು ಜನರು ಚಿತ್ರಮಂದಿರಕ್ಕೆ ಬರುತ್ತಿಲ್ಲವೆಂಬ ಆಪಾದನೆ ಇದೆ. ಪ್ರತಿಭೆ ಇರುವ ಇಂತಹ ನಿರ್ದೇಶಕರಿಗೆ ಅವಕಾಶ ಕೊಡಬೇಕು.
ನಾನು ಯಶ್ ಗರಡಿಯಲ್ಲಿ ಪಳಗಿದವನು. ಅವರು ಸಿನಿಮಾದ ತುಣುಕುಗಳನ್ನು ನೋಡಿಲ್ಲ. ಖಂಡಿತವಾಗಿಯೂ ಅವರಿಗೆ ತೋರಿಸುತೇನೆ. ಒನ್ ಲೈನ್ ನನ್ನದು ಆದರೂ, ಅದಕ್ಕೆ ಸುಂದರವಾದ ಆಕಾರ ಕೊಡುತ್ತಿರುವುದು ನಿರ್ದೇಶಕರು. ವಿದ್ಯಾವಂತರ ಮಕ್ಕಳು ಮುಂದು ಬರುವಂತೆ, ಒಬ್ಬ ಆಟೋ ಚಾಲಕನ ಮಗನಾಗಿ ಪ್ರಮೋಟ್ ಮಾಡಲು ಚಿಕ್ಕ ಕನಸು ಕಂಡಿಲ್ಲ. ಭಾರತದಾದ್ಯಂತ ಸಾವಿರಕ್ಕೂ ಹೆಚ್ಚು ಕೇಂದ್ರಗಳಲ್ಲಿ ತೆರೆಗೆ ತರುವ ಛಲ ಬಂದಿದೆ. ಅದಕ್ಕೆ ಕೆಜಿಎಫ್‌ನ ಪ್ರಶಾಂತ್‌ನೀಲ್ ಆರ್ಶಿವಾದ ಸಿಕ್ಕಿದೆ. ಅವರ ಕ್ರಿಯೇಟೀವ್ ವರ್ಣೀಸಲಾಗದು. ಎರಡು ವರ್ಷದ ಶ್ರಮ ಇಲ್ಲಿಯವರೆಗೂ ತಂದು ನಿಲ್ಲಿಸಿದೆ ಎಂದರು.
ಮುಗ್ದ ಹುಡುಗಿ, ಯಾರಿಗೂ ಹೆದರದ ಹಾಗೂ ಮಹರಾಜ ಮಗಳು ಯುವರಾಣಿ ಹೀಗೆ ಮೂರು ಶೇಡ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆಂದು ನಾಯಕಿ ಅನುಷಾರೈ ಪಾತ್ರದ ಪರಿಚಯ ಮಾಡಿಕೊಂಡರು. ಸಂಗೀತ ಸಚ್ಚಿನ್‌ಬಸ್ರೂರು, ಛಾಯಾಗ್ರಹಣ ಗಂಗು, ಸಾಹಸ ನರಸಿಂಹ, ಸಂಕಲನ ಉಮೇಶ್.ಆರ್.ಬಿ ಅವರದಾಗಿದೆ.